ರಣಜಿ: ಮತ್ತೆ ಗುಡುಗಿದ ಮಾಯಾಂಕ್‌


Team Udayavani, Nov 28, 2017, 6:50 AM IST

mayank-agarwal-ranji-trophy.jpg

ಹೊಸದಿಲ್ಲಿ: ರೈಲ್ವೇಸ್‌ ವಿರುದ್ಧ ನಡೆಯುತ್ತಿರುವ ರಣಜಿ ಕ್ರಿಕೆಟ್‌ ಲೀಗ್‌ ಹಂತದ ಅಂತಿಮ ಪಂದ್ಯದ ಮೂರನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 1 ವಿಕೆಟಿಗೆ 208 ರನ್‌ ಪೇರಿಸಿರುವ ಕರ್ನಾಟಕ ತಂಡವು ಒಟ್ಟಾರೆ 309 ರನ್ನುಗಳ ಬೃಹತ್‌ ಮುನ್ನಡೆ ಪಡೆದಿದೆ.

ಪಂದ್ಯ ಡ್ರಾದತ್ತ ಸಾಗುವ ಮುನ್ಸೂಚನೆ ದೊರೆತಿದ್ದರೂ ಕರ್ನಾಟಕದ ಮನದಲ್ಲಿ ಈಗ ಸಣ್ಣ ಗೆಲುವಿನ ಕನಸು ಕೂಡ ಚಿಗುರಿದೆ. ಮಂಗಳವಾರ ಅಂತಿಮ ದಿನವಾಗಿದ್ದು ಕರ್ನಾಟಕ ಬೆಳಗ್ಗೆ ಸ್ವಲ್ಪ ಹೊತ್ತು ಆಡಿ ರೈಲ್ವೇಸ್‌ಗೆ ಗೆಲುವಿನ ಗುರಿಯನ್ನು ನೀಡುವ ಸಾಧ್ಯತೆಯಿದೆ. ಕರ್ನಾಟಕ ತನ್ನ ಬೌಲರ್‌ಗಳ ಮೇಲೆ ಭರವಸೆ ಇರಿಸಿ ಯಶ ಸಾಧಿಸಿದ್ದೇ ಆದರೆ ಜಯ ಗಳಿಸುವ ಸಾಧ್ಯತೆಯೂ ಇದೆ. ರಾಜ್ಯ ತಂಡದಲ್ಲಿ ಅನುಭವಿ ಬೌಲರ್‌ಗಳಿದ್ದು ಯಾವುದೇ ಕ್ಷಣದಲ್ಲೂ ಪಂದ್ಯಕ್ಕೆ ತಿರುವು ಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ವಿನಯ್‌ ಕುಮಾರ್‌ಗೆ ವಿಶ್ವಾಸವಿಟ್ಟು ಪ್ರಯತ್ನಕ್ಕೆ ಇಳಿಯುವ ಅವಕಾಶ ಇದೆ.

ಬೃಹತ್‌ ಮುನ್ನಡೆ ಪಡೆದಿರುವ ಕರ್ನಾಟಕ: ಕರ್ನಾಟಕದ 434 ರನ್ನಿಗೆ ಉತ್ತರವಾಗಿ ರೈಲ್ವೇಸ್‌ ಮೊದಲ ಇನ್ನಿಂಗ್ಸ್‌ನಲ್ಲಿ 333 ರನ್‌ಗೆ ಆಲೌಟಾಯಿತು. 101 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದ ಕರ್ನಾಟಕ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭರ್ಜರಿ ಆಟವಾಡಿತು. ಆರಂಭಿಕರಾದ ರವಿಕುಮಾರ್‌ ಸಮರ್ಥ್ (56 ರನ್‌), ಮಾಯಾಂಕ್‌ ಅಗರ್ವಾಲ್‌ (ಅಜೇಯ 104 ರನ್‌) ಮೊದಲ ವಿಕೆಟಿಗೆ 117 ರನ್‌ ಜತೆಯಾಟ ನಿರ್ವಹಿಸಿದರು.  ಉತ್ತಮ ಆರಂಭ ನೀಡಿದ್ದ ಇವರಿಬ್ಬರನ್ನು ಬೇರ್ಪಡಿಸಿದ್ದು ಅಮಿತ್‌ ಮಿಶ್ರಾ. ಅವರು ಅರ್ಧಶತಕ ಗಳಿಸಿದ್ದ ಸಮರ್ಥ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ಆ ಬಳಿಕ 2ನೇ ವಿಕೆಟಿಗೆ ಬಂದ ಡಿ ನಿಶ್ಚಲ್‌ (ಅಜೇಯ 41 ರನ್‌) ಅವರ ಜತೆ ಮಾಯಾಂಕ್‌ ಅಗರ್ವಾಲ್‌ ತಾಳ್ಮೆಯ ಬ್ಯಾಟಿಂಗ್‌ ಮುಂದುವರಿಸಿದರು. ಒಟ್ಟು 157  ಎಸೆತ ಎದುರಿಸಿದ ಅವರು 9 ಬೌಂಡರಿ , 3 ಸಿಕ್ಸರ್‌ನಿಂದ ಶತಕ ಗಡಿ ದಾಟಿದರು. ಅವರಿಗೆ ನಿಶ್ಚಲ್‌  ಭರ್ಜರಿಯಾಗಿ ಸಾಥ್‌ ನೀಡಿದರು. ಸದ್ಯ ಇವರಿಬ್ಬರು ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಮತ್ತೂಮ್ಮೆ ಸಿಡಿದ ಮಾಯಾಂಕ್‌: ಮಾಯಾಂಕ್‌ ಅಗರ್ವಾಲ್‌ ಮೊದಲನೇ ಇನ್ನಿಂಗ್ಸ್‌ನಲ್ಲಿ 173 ರನ್‌ ಸಿಡಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲೂ ಇವರು ಆರಂಭಿಕರಾಗಿ ಶತಕ ಸಿಡಿಸಿ ಮಿಂಚಿದರು. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ರನ್‌ ಕಲೆ ಹಾಕಿದ್ದು 104 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಸ್ಪಿನ್‌ ದಾಳಕ್ಕೆ ಉರುಳಿದ ರೈಲ್ವೇಸ್‌: ಇದಕ್ಕೂ ಮೊದಲು ರಾಜ್ಯ ತಂಡದ ಬೌಲರ್‌ಗಳಾದ ಕೆ.ಗೌತಮ್‌ (70ಕ್ಕೆ3) ಹಾಗೂ ಶ್ರೇಯಸ್‌ ಗೋಪಾಲ್‌ (102ಕ್ಕೆ 4) ಅವರ ದಾಳಿಯನ್ನು ಎದುರಿಸಲು ರೈಲ್ವೇಸ್‌ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವೇ ಆಗಲಿಲ್ಲ. ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಲೇ ರೈಲ್ವೇಸ್‌ ಸಾಗಿತು. ರೈಲ್ವೇಸ್‌ ತಂಡದ ಪರ ಮಹೇಶ್‌ ರಾವತ್‌ (124 ರನ್‌) ಹಾಗೂ ಘೋಷ್‌ (91 ರನ್‌) ಶತಕ ಸಿಡಿಸಿದದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮೆನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ವೇಗಿ ಅಭಿಮನ್ಯು ಮಿಥುನ್‌ ಕೂಡ 2 ವಿಕೆಟ್‌ ಕಬಳಿಸಿ ಹೊಡೆತ ನೀಡಿದ್ದರಿಂದ ರೈಲ್ವೇಸ್‌ಗೆ ಎಲ್ಲೂ ಚಿಗುರಿಕೊಂಡು ಆಡಲು ಅವಕಾಶ ಸಿಗಲೇ ಇಲ್ಲ.

ಸಂಕ್ಷಿಪ್ತ ಸ್ಕೋರ್‌
ರೈಲ್ವೇಸ್‌ 1ನೇ ಇನಿಂಗ್ಸ್‌ 333 ಆಲೌಟ್‌ (ರಾವತ್‌ 124, ಘೋಷ್‌ 91, ಶ್ರೇಯಸ್‌ ಗೋಪಾಲ್‌ 102ಕ್ಕೆ4), ಕರ್ನಾಟಕ 2ನೇ ಇನಿಂಗ್ಸ್‌ (ಮಾಯಾಂಕ್‌ ಅಗರ್ವಾಲ್‌ ಅಜೇಯ 104, ರವಿ ಕುಮಾರ್‌ ಸಮರ್ಥ್ 56, ಮಿಶ್ರಾ 56ಕ್ಕೆ1)

ಟಾಪ್ ನ್ಯೂಸ್

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.