ಸಾವಿರಾರು ಇರುವೆ ಕಚ್ಚಿದರಷ್ಟೇ ಸರ್ಕಾರವೆಂಬ ಆನೆಗೆ ನಾಟುವುದು
Team Udayavani, Nov 28, 2017, 12:19 PM IST
ಬೆಂಗಳೂರು: “ಅಕ್ರಮ ಗಣಿಗಾರಿಕೆ ಸೇರಿದಂತೆ ಕಳೆದ ಐದಾರು ವರ್ಷಗಳಲ್ಲಿ ಒಂದಿಲ್ಲೊಂದು ಅಕ್ರಮ ಸಂಗತಿಗಳು ಬೆಳಕಿಗೆಬರುತ್ತಲೇ ಇವೆ. ಆದರೆ, ಅವೆಲ್ಲವೂ ಸರ್ಕಾರ ಎಂಬ ಆನೆಗೆ ಇರುವೆ ಕಚ್ಚಿದಂತಾಗಿದೆ ಅಷ್ಟೇ ಎಂದು ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮ್ಮದ್ ಹೇಳಿದರು.
ನಗರದ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರ ಛಾಯಾಗ್ರಾಹಕ ಸುಧೀರ್ ಶೆಟ್ಟಿ ಅವರು ಹಮ್ಮಿಕೊಂಡಿದ್ದ “ಕುಮಾರಸ್ವಾಮಿ ದೇವಸ್ಥಾನದ 2 ಕಿ.ಮೀ ವ್ಯಾಪ್ತಿಯಲ್ಲಿ ಇದ್ದ ಗಣಿಗಾರಿಕೆ ನಿಷೇಧವನ್ನು 300 ಮೀ.ಗೆ ಇಳಿಸಿದ ಸರ್ಕಾರದ ಅಧಿಸೂಚನೆ ಮತ್ತು ಇದರಿಂದ ಆಗಬಹುದಾದ ಪರಿಣಾಮಗಳು’ ಕುರಿತ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ನಂತರ ಅವರು ಮಾತನಾಡಿದರು.
“ಸಂಡೂರಿನ ಕುಮಾರಸ್ವಾಮಿ ಬೆಟ್ಟದ ಸುತ್ತಲಿನ ಗಣಿಗಾರಿಕೆ ಕುರಿತ ಚಿತ್ರಗಳು ಮನಸ್ಸಿಗೆ ನಾಟುತ್ತವೆ. ಇಂತಹ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಎಷ್ಟೇ ಹೇಳಿದರೂ ಆನೆಗೆ ಒಂದು ಇರುವೆ ಕಚ್ಚಿದಂತಷ್ಟೇ. ಆದ್ದರಿಂದ ಸಾರ್ವಜನಿಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಸಹಸ್ರಾರು ಇರುವೆಗಳು ಸೇರಿ ಸರ್ಕಾರವೆಂಬ ಆನೆಗೆ ಕಚ್ಚಿದಾಗ ಸ್ವಲ್ಪಮಟ್ಟಿಗಾದರೂ ನೋವು ತಟ್ಟುತ್ತದೆ. ಆ ಮೂಲಕವಾದರೂ ಆಡಳಿತ ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ,’ ಎಂದು ಸೂಚ್ಯವಾಗಿ ಹೇಳಿದರು.
ಸುಧೀರ್ ಶೆಟ್ಟಿ ಅವರು ತೆಗೆದ ಚಿತ್ರಗಳು ಭೂಮಿತಾಯಿಯ ಮೇಲೆ ಮನುಷ್ಯ ನಡೆಸುತ್ತಿರುವ ಅತ್ಯಾಚಾರಕ್ಕೆ ಕನ್ನಡಿ ಹಿಡಿಯುತ್ತವೆ. “ಮನುಷ್ಯರಾಗಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸ್ವತಃ ಚಿತ್ರಗಳು ಸಾರುತ್ತಿವೆ. ಜನ ಮತ್ತು ಆಡಳಿತದಲ್ಲಿ ಪರಿಸರದ ಬಗ್ಗೆ ಜಾಗೃತರಾಗದಿದ್ದರೆ ಕರ್ನಾಟಕ ಕೂಡ ಮತ್ತೂಂದು ರಾಜಸ್ತಾನ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
“ಕುಮಾರಸ್ವಾಮಿ ಬೆಟ್ಟದ ಸುತ್ತಲಿನ ಜನರನ್ನು ಸರ್ಕಾರ “ಮತದಾರರು’ ಎಂದು ಪರಿಗಣಿಸುತ್ತದೆ. ಜನಗಣತಿ ವೇಳೆ ಅಲ್ಲಿನ ಜನರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಆದರೆ, ಆ ಜನರನ್ನು ಬದುಕಲು ಬಿಡುತ್ತಿಲ್ಲ. ಇದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ಮಾಡಿದ ದ್ರೋಹ: ಸಮಾಜ ಪರಿವರ್ತನಾ ವೇದಿಕೆ ಸಂಸ್ಥಾಪಕ ಎಸ್.ಆರ್. ಹಿರೇಮಠ ಮಾತನಾಡಿ, 2013-14ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಲ್ಲದೆ, ಪಾದಯಾತ್ರೆ ಕೂಡ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ 2 ಕಿ.ಮೀ. ಇದ್ದ ನಿರ್ಬಂಧವನ್ನು 300 ಮೀ.ಗೆ ಇಳಿಸಿರುವುದು ಪುರಾತನ ದೇವಸ್ಥಾನಕ್ಕೆ ಗಂಡಾಂತರ ಮಾತ್ರವಲ; ಜನರಿಗೆ ಮಾಡಿದ ದ್ರೋಹ ಕೂಡ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1978ರಲ್ಲಿ ದೇವರಾಜ ಅರಸು ಅವರು ಕುಮಾರಸ್ವಾಮಿ ದೇವಸ್ಥಾನ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದ್ದರು. ಆದರೆ, ಮತ್ತೂಬ್ಬ ದೇವರಾಜ ಅರಸು ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಆ ಅಧಿಸೂಚನೆ ವಾಪಸ್ ಪಡೆದು, 300 ಮೀ.ಗೆ ಇಳಿಸಿದ್ದಾರೆ. ಇದರಿಂದ ಪುರಾತನ ದೇವಾಲಯಗಳಿಗೆ ಗಂಡಾಂತರ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಛಾಯಾಗ್ರಹಕ ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.