ಹೊಟೇಲ್ ಮಾಲಕನಿಂದ ಹಲ್ಲೆಗೊಳಗಾದ ಕಾರ್ಮಿಕ ಸಾವು
Team Udayavani, Nov 28, 2017, 3:15 PM IST
ಉಪ್ಪಿನಂಗಡಿ: ಮಾಲಕ ಕಟ್ಟಿಗೆಯಿಂದ ಹೊಡೆದು ಗಂಭೀರ ಹಲ್ಲೆ ನಡೆಸಿದ ಪರಿಣಾಮ ಆಸ್ಪತ್ರೆಗೆ ದಾಖಲಿ ಸಲ್ಪಟ್ಟ ಹೊಟೇಲ್ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಲಾವತ್ತಡ್ಕ ನಿವಾಸಿ ಕೆ.ಜಿ. ವರ್ಗಿಸ್ ಅವರ ಪುತ್ರ, ಲಾವತ್ತಡ್ಕದಲ್ಲಿ ಹೊಟೇಲ್ ನಡೆಸುತ್ತಿರುವ ಕೆ.ವಿ. ಜಾರ್ಜ್ ಬಂಧಿತ ಆರೋಪಿ. ಆರೋಪಿಯನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಮತ್ತು ಎಸ್.ಐ. ನಂದ ಕುಮಾರ್ ನೇತೃತ್ವದ ತಂಡ ನ. 27ರ ನಸುಕಿನಲ್ಲಿ ಆತನ ಮನೆಯಲ್ಲಿ ಬಂಧಿಸಿದ್ದಾರೆ.
ಕೊಲೆಯಾಗಿರುವ ಕಾರ್ಮಿಕ ಶ್ರೀನಿವಾಸ್ ಹೊಟೇಲ್‌ಗೆ ಬಂದಿದ್ದ ಗಿರಾಕಿಯೊಂದಿಗೆ ಜಗಳವಾಡಿದ್ದಾನೆ ಎಂಬ ಕಾರಣಕ್ಕಾಗಿ ಆರೋಪಿ ಶ್ರೀನಿ ವಾಸ್ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದ. ಬಳಿಕ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದ ಅವರು ಮೃತಪಟ್ಟಿದ್ದರು.
ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಶ್ರೀಧರ್ ರೈ, ಸಿಬಂದಿ ದೇವಿದಾಸ, ಹರೀಶ್ಚಂದ್ರ, ಶೇಖರ್, ಇರ್ಷಾದ್, ಸಂಗಯ್ಯ ಭಾಗವಹಿಸಿದ್ದರು.
ಕಾರಿನ ಕಥೆ ಕಟ್ಟಿ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ!
ಶ್ರೀನಿವಾಸ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದಾಗ ಹೊಟೇಲ್‌ನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿ ಹೇಳಿಕೆ ನೀಡಿದ್ದ. ಬಳಿಕ ಪೊಲೀಸರಿಗೆ ನೀಡಿರುವ ಪ್ರಥಮ ಹೇಳಿಕೆಯಲ್ಲಿ ಅಪರಿಚಿತ ನಾಲ್ವರು ಹಳದಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದ. ಜತೆಗೆ ಕಾರಿನ ನಂಬರನ್ನೂ ನೀಡಿದ್ದ. ಈ ರೀತಿಯ ದ್ವಂದ ಹೇಳಿಕೆ ನೀಡಿ ಪೊಲೀಸರನ್ನು ಗೊಂದಲದಲ್ಲಿ ಸಿಲುಕಿಸಿದ್ದ.
ಆರೋಪಿ ಜಾರ್ಜ್ ಹೇಳಿಕೆಯಂತೆ ಪೊಲೀಸರು ಹಲ್ಲೆ ಮಾಡಿದವರು ಬಂದ ಕಾರು ಯಾವುದೆಂದು ತಿಳಿಯಲು ಮಂಗಳೂರು ಅಪರಾಧ ಪತ್ತೆ ದಳದ ನೆರವು ಪಡೆದುಕೊಂಡು ಮಂಗಳೂರಿನಲ್ಲಿ ಶೋಧ ನಡೆಸಿದ್ದರು.
ಆರೋಪಿ ಸೂಚಿಸಿದ ಕಾರು ಪತ್ತೆ ಆಯಿತು. ಆದರೆ ಆರೋಪಿ ಹೇಳಿದ ಕಾರಿನ ಸಂಖ್ಯೆ, ಬಣ್ಣ ಹಾಗೂ ಪತ್ತೆಯಾಗಿದ್ದ ಕಾರಿನ ಸಂಖ್ಯೆ, ಬಣ್ಣ ಬೇರೆಯಾಗಿತ್ತು. ಜತೆಗೆ ಕಾರು ಕನಿಷ್ಟ 2 ಕಿ.ಮೀ ಚಲಿಸುವ ಸಾಮರ್ಥ್ಯವನ್ನೂ ಹೊಂದಿರದಿರುವುದು ತಿಳಿದು ಬಂತು. ಹಾಗಾಗಿ ಜಾರ್ಜ್ ನೀಡಿದ ಕಾರಿನ ಮಾಹಿತಿ ಸುಳ್ಳು ಎಂಬುದು ಪೊಲೀಸರಿಗೆ ತಿಳಿದುಬಂತು.
ಅನುಮಾನ ಬಲವಾದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಜಾರ್ಜ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಶ್ರೀನಿವಾಸ್‌ಗೆ ತಾನೇ ಹೊಡೆದಿರುವುದಾಗಿ ಜಾರ್ಜ್ ಒಪ್ಪಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.