ಪ್ರಧಾನಿ ಮೋದಿಯಿಂದ ಹೈದರಾಬಾದ್ ಮೆಟ್ರೋ ಉದ್ಘಾಟನೆ
Team Udayavani, Nov 28, 2017, 3:58 PM IST
ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಹೈದರಾಬಾದ್ ಮೆಟ್ರೋ ಉದ್ಘಾಟಿಸಿದರು. ಮುಖ್ಯಮಂತ್ರಿ ಕೆ ಸಿ ರಾವ್, ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರ ಮೋದಿ ಜತೆಗಿದ್ದು ಮೊದಲ ಮೆಟ್ರೋ ಯಾನದಲ್ಲಿ ಪಾಲ್ಗೊಂಡರು.
ಪ್ರಧಾನಿ ಮೋದಿ ಅವರಿಂದ ಉದ್ಘಾಟಿತವಾದ ಈ ಮೆಟ್ರೋ ರೈಲು, ಹೈದರಾಬಾದ್ ನಗರದ ಬಹು ವರ್ಷಗಳ ನಿರೀಕ್ಷೆಯಾಗಿದೆ. ನ.29ರಿಂದ, ಅಂದರೆ ನಾಳೆ ಬುಧವಾರದಿಂದ ಮೆಟ್ರೋ ರೈಲು ತನ್ನ ವಾಣಿಜ್ಯ ಓಡಾಟವನ್ನು ಆರಂಭಿಸುತ್ತದೆ.
#WATCH PM Modi, along with Telangana CM KC Rao & Guv ESL Narasimhan, takes a ride in the newly inaugurated #HyderabadMetro pic.twitter.com/xLMtrTkGYO
— ANI (@ANI) November 28, 2017
ಈಗ ಉದ್ಘಾಟಿತವಾಗಿರುವ ಹೈದರಾಬಾದ್‌ನ ಮೊದಲ ಹಂತವು 30 ಕಿ.ಮೀ. ದೂರವನ್ನು ಒಳಗೊಂಡಿದೆ. ಇದರಲ್ಲಿ 24 ಸ್ಟೇಶನ್‌ಗಳಿವೆ.
ಆರಂಭದಲ್ಲಿ ಹೈದರಾಬಾದ್ ಮೆಟ್ರೋ ಬೆಳಗ್ಗೆ 6ರಿಂದ ರಾತ್ರಿ 10ರ ತನಕ ಓಡಾಟ ನಡೆಸಲಿದೆ. ಕ್ರಮೇಣ ಸಾರಿಗೆ ಮತ್ತು ಜನರ ಆವಶ್ಯಕತೆಯನ್ನು ಪರಿಗಣಿಸಿ ಬೆಳಗ್ಗೆ 5.30ರಿಂದ ರಾತ್ರಿ 11ರ ವರೆಗೂ ಓಡಾಟ ನಡೆಸುವ ಪರಿಷ್ಕೃತ ವೇಳಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮ ರಾವ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.