ಮಕ್ಕಳನ್ನು ಬೆಳೆಸುವುದು ಹೀಗೆ…..
Team Udayavani, Nov 29, 2017, 6:00 AM IST
ಪ್ರತಿ ಮಗುವಿನ ಬುದ್ಧಿಶಕ್ತಿ, ಗ್ರಹಿಕಾ ಶಕ್ತಿ ಇನ್ನೊಂದು ಮಗುವಿಗಿಂತ ಭಿನ್ನವಾಗಿರುತ್ತದೆ. ಮೆದುಳಿನ ಸಾಮರ್ಥ್ಯದ ವೃದ್ಧಿ ಒಂದೇ ದಿನದಲ್ಲಿ ಆಗುವಂಥ ಕೆಲಸವಲ್ಲ. ಪಾಲಕರು ಮಕ್ಕಳ ಮೆದುಳಿನ ಬೆಳವಣಿಗೆಗೆ ಕೆಲವು ವ್ಯಾಯಾಮಗಳನ್ನು ಮಾಡಿಸಬೇಕು. ಆಗಮಾತ್ರ ಹಂತ ಹಂತವಾಗಿ ಬದಲಾವಣೆ ತರಲು ಸಾಧ್ಯ.
1.ದೀರ್ಘ ಉಸಿರಾಟ
ಉಸಿರಾಟ ಕೂಡ ವ್ಯಾಯಾಮವೇ. ಅದನ್ನು ಪಾಲಕರು ಮಕ್ಕಳಿಗೆ ಕಲಿಸಿಕೊಡಬೇಕು. ಅಂದರೆ ಮೂಗಿನಿಂದ ನಿಧಾನವಾಗಿ ಉಸಿರನ್ನು ಒಳಗೆಳೆದುಕೊಂಡು ನಂತರ ಮೆಲ್ಲನೆ ಉಸಿರನ್ನು ಹೊರಬಿಡಲು ಹೇಳಿಕೊಡಬೇಕು. ಇದು ಮಕ್ಕಳ ಮಾನಸಿಕ ಆಯಾಸವನ್ನು ಕಡಿಮೆಗೊಳಿಸುತ್ತದೆ. ಇಂಥ ಸರಳ ಅಭ್ಯಾಸದಿಂದ ಮಕ್ಕಳ ಏಕಾಗ್ರತೆಯೂ ಹೆಚ್ಚುತ್ತದೆ.
2. ಆಟ ಆಡುವುದು
ಬರೀ ಓದು, ಓದು ಎಂದು ಮಕ್ಕಳನ್ನು ಪೀಡಿಸುತ್ತಿರಬೇಡಿ. ಮಗು ಶೈಕ್ಷಣಿಕವಾಗಿ ಬೆಳೆಯಲು ಪಠ್ಯೇತರ ಚಟುವಟಿಕೆಗಳೂ ಸಹಕಾರಿ ಎಂಬುದು ನೆನಪಿರಲಿ. ಮಗುವನ್ನು ಹೊರಾಂಗಣ ಆಟಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಸಮಯವಿದ್ದರೆ ಮಕ್ಕಳ ಜೊತೆ ನೀವೂ ಮಗುವಾಗಿ ಆಟವಾಡಿ. ಅದರಿಂದ ಬಾಂಧವ್ಯ ವೃದ್ಧಿಯಾಗುವುದಷ್ಟೇ ಅಲ್ಲದೆ, ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೂ ಆಗುತ್ತದೆ.
3. ಮೆದುಳಿನ ವ್ಯಾಯಾಮ
ಮಕ್ಕಳು ಚಿಕ್ಕವರಿದ್ದಾಗಲೇ ತಮ್ಮ ಹೆಸರಿನ ಕಾಗುಣಿತ ಹೇಳುವುದು, ಮನೆಯ ಎಲ್ಲ ಸದಸ್ಯರ ಹೆಸರುಗಳನ್ನು ಹೇಳಿಸುವುದು, ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಎಣಿಸಲು ಹೇಳುವುದು, ಮನೆಯ ವಿಳಾಸವನ್ನು ಹೇಳಿಕೊಡುವುದು, ಮೊಬೈಲ್ ಸಂಖ್ಯೆಗಳನ್ನು ನೆನಪಿಡುವಂತೆ ಮಾಡುವುದು…ಹೀಗೆ ಮೆದುಳಿಗೆ ವ್ಯಾಯಾಮವಾಗುವಂಥ ಚಟುವಟಿಕೆಗಳನ್ನು ಮಾಡಿಸಬೇಕು. ಮಕ್ಕಳ ಕಲ್ಪನಾಶಕ್ತಿ ವೃದ್ಧಿಸುವ, ಕುತೂಹಲ ಮೂಡಿಸುವ ಕಥೆಗಳನ್ನೂ ಹೇಳಿಕೊಟ್ಟರೆ ಇನ್ನೂ ಒಳ್ಳೆಯದು.
4. ದೈಹಿಕ ವ್ಯಾಯಾಮ
ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ವ್ಯಾಯಾಮದ ಮಹತ್ವವನ್ನು ತಿಳಿಸಬೇಕು. ಮುಂಜಾನೆ ಸರಳವಾದ ದೈಹಿಕ ವ್ಯಾಯಾಮಗಳನ್ನು ಮಾಡಿಸಬೇಕು. ಉದಾ: ಬಲಗೈಯನ್ನು ಎಡ ಮೊಣಕಾಲಿಗೆ, ಎಡಕೈಯನ್ನು ಬಲ ಮೊಣಕಾಲಿಗೆ ಬಗ್ಗಿ ಮುಟ್ಟುವುದು ಮತ್ತೆ ಮೇಲೇಳುವುದು..ಈ ರೀತಿ ಕನಿಷ್ಠ 5-10 ನಿಮಿಷದವರೆಗೆ ಮಾಡುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ವಾರದಲ್ಲಿ ಕನಿಷ್ಠ ಎರಡು ದಿನವಾದರೂ ಮಕ್ಕಳನ್ನು ಹತ್ತಿರದ ಪಾರ್ಕ್‌ಗೆ ಕರೆದೊಯ್ಯಿರಿ. ಇಂತಹ ಚಟುವಟಿಕೆಗಳಿಂದ ಮೆದುಳಿನ ಜೀವಕೋಶಗಳು ಗಣನೀಯವಾಗಿ ಬೆಳೆದು ರಕ್ತಸಂಚಲನ ಸರಾಗವಾಗಿ ಬುದ್ಧಿಶಕ್ತಿ ಬೆಳೆಯುತ್ತದೆ.
-ಬಿ.ಎಲ್.ಶಿವರಾಜ್ ದೇವದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.