ಒಂದು ಮಳೆಬಿಲ್ಲು…


Team Udayavani, Nov 29, 2017, 6:45 AM IST

fashion.jpg

ಈ ಟ್ರೆಂಡ್‌ನ‌ ವೈಶಿಷ್ಟ್ಯ ಎಂದರೆ ರೇನ್‌ಬೋ ಸ್ಟ್ರೈಪ್ಸ್ ಇರುವ ಉಡುಪಿನ ಜೊತೆ ಬಣ್ಣ-ಬಣ್ಣದ ಆಕ್ಸೆಸರೀಸ್‌ ತೊಡಬಹುದು. ಅಂದರೆ, ಕಿವಿಯೋಲೆ ಒಂದು ಬಣ್ಣ, ಬಳೆಗಳೊಂದು ಬಣ್ಣ, ಪಾದರಕ್ಷೆಗಳು ಮತ್ತೂಂದು ಬಣ್ಣ ಹಾಗೂ ಬ್ಯಾಗ್‌ಗೆ ಮಗದೊಂದು ಬಣ್ಣ! 

ಅಮೆರಿಕಾದ ಖ್ಯಾತ ಗಾಯಕಿ ಟೇಲರ್‌ ಸ್ವಿಫr… ತನ್ನ ಹೊಸ ಆಲ್ಬಮ್‌ “ರೆಪ್ಯೂಟೇಷನ್‌’ ಅನ್ನು ಬಿಡುಗಡೆ ಮಾಡಿದ್ದೇ ತಡ, ಅಭಿಮಾನಿಗಳಲ್ಲಿ ಹೊಸದೊಂದು ಹುಚ್ಚೆದ್ದಿದೆ. ಜನರನ್ನು ಮರುಳು ಮಾಡಿರುವುದು ಆ ಆಲ್ಬಮ್‌ನಲ್ಲಿರುವ ಹಾಡುಗಳಷ್ಟೇ ಅಲ್ಲ, ಆಲ್ಬಮ್‌ ಪೋಸ್ಟರ್‌ನಲ್ಲಿ ಗಾಯಕಿ ಸ್ವಿಫ್ಟ್ ಟೇಲರ್‌ ಸ್ವಿಫr… ತೊಟ್ಟ ಉಡುಪು ಕೂಡ. ಅದು ವಸ್ತ್ರ ವಿನ್ಯಾಸಕರ ಮೆಚ್ಚುಗೆಯನ್ನೂ ಪಡೆದಿದೆ. ಅದ್ಯಾವ ಉಡುಪು ಅಂತೀರಾ? ಅದುವೇ ರೇನ್‌ಬೋ ಡ್ರೆಸ್‌. 

ಇದೀಗ ಸುದ್ದಿಯಲ್ಲಿರೋ ಫ್ಯಾಷನ್‌ ಟ್ರೆಂಡ್‌ನ‌ಲ್ಲಿ ರೇನ್‌ಬೋ ಸ್ಟ್ರೈಪ್ಸ್ ಮುಂಚೂಣಿಯಲ್ಲಿದೆ. ಹೆಸರೇ ಹೇಳುವಂತೆ ಉಡುಪಿನ ಮೇಲೆ ಮಳೆಬಿಲ್ಲಿನ ಏಳು ಬಣ್ಣಗಳ ಪಟ್ಟಿಗಳ ಚಿತ್ತಾರವಿದ್ದು, ಅದು ರ್‍ಯಾಂಪ್‌ ಮೇಲೆ ರಂಗು ಮೂಡಿಸಿದೆ.  
  ಈ ಟ್ರೆಂಡ್‌ ಅನ್ನು ಡ್ರೆಸ್‌, ಅಂಗಿ, ಸ್ಕರ್ಟ್‌ (ಲಂಗ), ಪ್ಯಾಂಟ್‌, ಗೌನ್‌, ಶಾರ್ಟ್ಸ್ ಮುಂತಾದವುಗಳಲ್ಲಿ ಅಳವಡಿಸಲಾಗಿದೆ. ಈ ಶೈಲಿ ತುಂಬಾ ಸರಳ. ಇದರಲ್ಲಿ, ಚೌಕ, ವೃತ್ತ, ತ್ರಿಕೋನ ಅಥವಾ ಬೇರೆ ಯಾವುದೇ ಚಿಹ್ನೆ ಅಥವಾ ಆಕಾರ ಬಳಸಲಾಗುವುದಿಲ್ಲ. ಕೇವಲ ಏಳು ಬಣ್ಣಗಳನ್ನು ಉದ್ದ ಅಥವಾ ಅಗಲವಾಗಿ ಬಿಡಿಸಲಾಗುತ್ತದೆ. ಬೇರೆ ಯಾವುದೇ ರೀತಿಯ ಮಿಕÕ… ಆ್ಯಂಡ್‌ನ‌ ಕಾಂಬಿನೇಶನ್‌ ಇರುವುದಿಲ್ಲ.  

ಎರಡು ತಿಂಗಳು ಹಿಂದೆ ಇಂಗ್ಲಿಷ್‌ ಟಿವಿ ನಿರೂಪಕಿ ಹಾಲಿ ವಿÇÉೋಬೈ ಇದೇ ರೀತಿಯ ಉಡುಪು ತೊಟ್ಟು ಫ್ಯಾಷನ್‌ ಪ್ರಿಯರಿಂದ ಸೈ ಎನಿಸಿಕೊಂಡಿದ್ದರು. ವಿಶೇಷವೆಂದರೆ, ಗಾಯಕಿ ಟೇಲರ್‌ ಅವರ ಈ ಉಡುಪಿಗೆ ನಿರೂಪಕಿ ಹಾಲಿ ಅವರ ಉಡುಪೇ ಪ್ರೇರಣೆಯಂತೆ. ಆದರೆ ಈ ಶೈಲಿ ಟ್ರೆಂಡ್‌ ಆಗಿದ್ದು ಗಾಯಕಿ ಟೇಲರ್‌ ಸ್ವಿಫr… ರೇನ್‌ಬೋ ಉಡುಪು ತೊಟ್ಟಾಗ. 

ಸೋನಂ ರೇನ್‌ಬೋ
ಬಾಲಿವುಡ್‌ ನಟಿ ಸೋನಂ ಕಪೂರ್‌ ಕೂಡ ರೇನ್‌ಬೋ ಫ್ಯಾಷನ್‌ ಉಳ್ಳ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಾಕಿದ್ದು ಸುದ್ದಿಯಾಗಿತ್ತು. ಫ್ಯಾಷನ್‌ ಲೋಕದ ವಿಭಿನ್ನ ಶೈಲಿಯ ಉಡುಗೆಗಳನ್ನು ಅಭಿಮಾನಿಗಳಿಗೆ ಪರಿಚಯಿಸುವಲ್ಲಿ ಸೋನಂ ಕಪೂರ್‌ ಯಾವತ್ತಿಗೂ ಮುಂದು. ಆ ವಿಷಯದಲ್ಲಾಕೆ ಹಾಲಿವುಡ್‌ ನಟಿಯರಿಗಿಂತಲೂ ಒಂದು ಕೈ ಮೇಲು.

ವರ್ಷಗಳ ಹಿಂದೆ ಅಮೆರಿಕಾದ ಮಾಡೆಲ… ಹಾಗೂ ಉದ್ಯಮಿ ಪ್ಯಾರಿಸ್‌ ಹಿಲ್ಟನ್‌ ಇದೇ ರೇನ್‌ಬೋ ವಿನ್ಯಾಸದ ಉಡುಗೆ ತೊಟ್ಟಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ತನ್ನ ಫೋನ್‌ ಕಳೆದು ಹೋಗಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಹಾಕಿದ್ದ ಚಿತ್ರದಲ್ಲಿ ಫೋನ್‌ ಆಗಲಿ, ಕಳ್ಳತನವಾಗಲಿ ಸುದ್ದಿಯಾಗಲಿಲ್ಲ. ಬದಲಿಗೆ ಪ್ಯಾರಿಸ್‌ ಉಟ್ಟಿದ್ದ ಉಡುಗೆ ಚರ್ಚೆಯ ವಿಷಯವಾಗಿತ್ತು. ರೇನ್‌ಬೋ ಸ್ಟ್ರೈಪ್ಸ್ ಉಳ್ಳ ಸಮ್ಮರ್‌ ಜಂಪ್‌ ಸೂಟ್‌ ಫ್ಯಾಷನ್‌ ಪ್ರಿಯರು ಮತ್ತು ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮುಂತಾದ ಬಾಲಿವುಡ್‌ ನಟಿಯರಷ್ಟೇ ಅಲ್ಲದೆ ನಮ್ಮ ಕನ್ನಡದ ತಾರೆಯರೂ ರೇನ್‌ಬೋ ರಂಗಿಗೆ ಮೈಯೊಡ್ಡಿದ್ದಾರೆ. 

ದೇಸೀ ಕಾಮನಬಿಲ್ಲು
ಈ ಶೈಲಿ ವೆಸ್ಟರ್ನ್ (ಪಾಶ್ಚಾತ್ಯ) ಉಡುಗೆಗಳಿಗೆ ಸೀಮಿತವಾಗಬೇಕಿಲ್ಲ. ಕುರ್ತಾ, ಬಿಳಿ ಬಣ್ಣದ ಪಂಜಾಬಿ ಸೂಟ್‌ನ ದುಪಟ್ಟಾ, ಸೀರೆ, ರವಿಕೆ ಮತ್ತು ಚೂಡಿದಾರದ ಜಾಕೆಟ್‌, ಕ್ರಾಪ್‌ ಟಾಪ್‌ ಜೊತೆ ತೊಡುವ ಉದ್ದ ಲಂಗದಂಥ ಇಂಡಿಯನ್‌ ಉಡುಗೆಗಳಲ್ಲೂ ಕಾಣಿಸಿಕೊಂಡಿದೆ.ಈ ಟ್ರೆಂಡ್‌ನ‌ ವೈಶಿಷ್ಟ್ಯ ಎಂದರೆ ರೇನ್‌ಬೋ ಸ್ಟ್ರೈಪ್ಸ್ ಇರುವ ಉಡುಪಿನ ಜೊತೆ ಬಣ್ಣ-ಬಣ್ಣದ ಆಕ್ಸೆಸರೀಸ್‌ ತೊಡಬಹುದು. ಅಂದರೆ, ಕಿವಿಯೋಲೆ ಒಂದು ಬಣ್ಣ, ಬಳೆಗಳೊಂದು ಬಣ್ಣ, ಪಾದರಕ್ಷೆಗಳು ಮತ್ತೂಂದು ಬಣ್ಣ ಹಾಗೂ ಬ್ಯಾಗ್‌ಗೆ ಮಗದೊಂದು ಬಣ್ಣ! ಈ ಟ್ರೆಂಡ್‌ ಹೋಗಿ ಹೊಸ ಟ್ರೆಂಡ್‌ ಬರುವ ಮುನ್ನ ನಿಮ್ಮ ವಾರ್ಡ್‌ರೋಬ್‌ಗ ಬಣ್ಣ ಹಚ್ಚಿ. ನೀವೂ ಕಾಮನಬಿಲ್ಲಿನ ಬಣ್ಣಗಳನ್ನು ನಿಮ್ಮ ಬಟ್ಟೆಯ ಮೇಲೆ ಮೂಡಿಸಿ.

– ಅದಿತಿಮಾನಸ.ಟಿ.ಎಸ್‌

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.