ಪಟೇಲರ ಮೂಗಿಗೆ ತುಪ್ಪ ಸವರುತ್ತಿರುವ ಕಾಂಗ್ರೆಸ್
Team Udayavani, Nov 29, 2017, 8:45 AM IST
ಅಹಮದಾಬಾದ್: ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ತಾನು ಗೆದ್ದರೆ ಪಟೇಲರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದಾಗಿ ಆಶ್ವಾಸನೆ ನೀಡಿರುವ ಕಾಂಗ್ರೆಸ್, ಯಾವ ರೀತಿ ಮೀಸಲಾತಿ ಕಲ್ಪಿಸಲಿದೆ ಎಂಬುದನ್ನು ಬಿಡಿಸಿ ಹೇಳಬೇಕೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸವಾಲೆಸೆದಿದ್ದಾರೆ.
ಮಂಗಳವಾರ ಮಾತನಾಡಿದ ಅವರು, “”ಮೀಸಲಾತಿ ಪ್ರಮಾ ಣ ಶೇ.50ರ ಗಡಿದಾಟಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ, ಪಟೇಲರಿಗೆ ಮೀಸಲಾತಿ ಹೇಗೆ ಕಲ್ಪಿಸಲು ಸಾಧ್ಯ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು” ಎಂದ ಅವರು, ಕಾಂಗ್ರೆಸ್‌ನ ಈ ಆಶ್ವಾಸನೆ ರಾಜಕೀಯ ಅವಕಾಶ ವಾದದ ಪರಮಾವಧಿ ಎಂದು ಟೀಕಿಸಿದರು.
ರಾಹುಲ್ ಉತ್ತರಿಸಲಿ: 2010ರಲ್ಲಿ ವೀಕಿಲೀಕ್ಸ್ ನಿಂದ ಬಹಿರಂಗಗೊಂಡಿದ್ದ ರಾಹುಲ್ ಗಾಂಧಿಯವರ “ಲಷ್ಕರ್ ಉಗ್ರ ಸಂಘಟನೆಗಿಂತ ಭಾರತದಲ್ಲಿನ ಹಿಂದೂ ಉಗ್ರವಾದ ಹೆಚ್ಚು ಅಪಾಯಕಾರಿ’ ಎಂಬ ಹೇಳಿಕೆಗೆ ರಾಹುಲ್ ಅವರೇ ಸಮರ್ಥನೆ ನೀಡಬೇಕೆಂದು ಸಚಿವ ಪ್ರಸಾದ್ ಆಗ್ರಹಿಸಿದರು.
ಮೋದಿಯದ್ದು ಪಲಾಯನ ಸೂತ್ರ: ಕಾಂಗ್ರೆಸ್ ಕಿಡಿ
ತಮ್ಮ ಆಡಳಿತ ವೈಫಲ್ಯ ಪ್ರಶ್ನಿಸುವವರಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಪ್ರಧಾನಿ ಮೋದಿ ಅವರು ಗುಜರಾತ್ ಜನತೆಯನ್ನು ತಮ್ಮ ಕಡೆಗೆ ಭಾವುಕವಾಗಿ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಬುಜ್‌ನ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ನನ್ನ ಬಡತನದ ಹಿನ್ನೆಲೆಯನ್ನು ಹೀಯಾಳಿಸದಿರಿ. ಗುಜರಾತ್ ಮಣ್ಣಿನ ಮಗನನ್ನು ಅವಮಾನಿಸಿದರೆ ಈ ರಾಜ್ಯದ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದರು. ಏತನ್ಮಧ್ಯೆ, ಗುಜರಾತ್ ಚುನಾವಣಾ ರ್ಯಾಲಿ ಗಳಲ್ಲಿ ತಮ್ಮ ವಿರುದ್ಧದ ಟೀಕೆಗಳಿಗಷ್ಟೇ ಉತ್ತರಿ ಸುತ್ತಿರುವ ಮೋದಿ ತಾವೊಬ್ಬ ಪ್ರಧಾನ ಮಂತ್ರಿ ಎಂದು ಮರೆತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ. ಮೋದಿ ಹೇಳಿದ “ಅಚ್ಛೇ ದಿನ್’ ಅವರು ಅಧಿಕಾರಕ್ಕೆ ಬಂದು 42 ತಿಂಗಳುಗಳಾದರೂ ಬಂದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.