ಪಂಪ್‌ವೆಲ್‌ನಲ್ಲಿ ಬಸ್‌ ಟರ್ಮಿನಲ್‌

Team Udayavani, Nov 29, 2017, 10:09 AM IST

29-Nov-2.jpg

ಲಾಲ್‌ಬಾಗ್‌: ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಪಂಪ್‌ವೆಲ್‌ ಬಳಿ 7.23 ಎಕರೆ ಪ್ರದೇಶದಲ್ಲಿ ಬಸ್‌ ಟರ್ಮಿನಲ್‌ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ಸ್ಮಾರ್ಟ್‌ ಸಿಟಿಯ ಎಸ್‌ಪಿವಿಗೆ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ಕಳುಹಿಸಲು ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಸೂಚಿ ಸಂಬಂಧಿಸಿ ಮೇಯರ್‌ ನೀಡಿದ ಪೂರ್ವಭಾವಿ ಮಂಜೂರಾತಿಯನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.

ಬುಧವಾರ ಎಸ್‌ವಿಪಿ ಸಭೆ
ಉದ್ದೇಶಿತ ಬಸ್‌ ನಿಲ್ದಾಣವನ್ನು ಪಿಪಿಪಿ ಮಾದರಿಯ ವಿನ್ಯಾಸ – ನಿರ್ಮಾಣ – ಹಣಕಾಸು – ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ಎಸ್‌ವಿಪಿ ಮಂಡಳಿ ಸಭೆ ನಡೆಯಲಿದ್ದು, ಬಸ್‌ ನಿಲ್ದಾಣ ಸಂಬಂಧಿಸಿದ ಪ್ರಸ್ತಾವನೆಯನ್ನು ಆ ಸಭೆಯ ಮುಂದಿಡಲಾಗುವುದು. ಉದ್ದೇಶಿತ ಬಸ್‌ ನಿಲ್ದಾಣದ ಪ್ರಥಮ ಹಾಗೂ ದ್ವಿತೀಯ ಮಹಡಿಗಳಲ್ಲಿ ಖಾಸಗಿ ಹಾಗೂ ಸರಕಾರಿ ಬಸ್‌ಗಳ ನಿಲುಗಡೆ ಮತ್ತು ನಿರ್ವಹಣೆ, ಅನಂತರದ ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳು, ಥಿಯೇಟರ್‌, ಮಲ್ಟಿ ಲೆವೆಲ್‌ ಕಾರು ಪಾರ್ಕಿಂಗ್‌ ಮುಂತಾದ ವ್ಯವಸ್ಥೆಗಳು ಲಭ್ಯವಾಗಲಿವೆ ಎಂದು ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ವಿವರಿಸಿದರು.

ಈ ಬಸ್‌ ಟರ್ಮಿನಲ್‌ಗೆ ಪಂಪ್‌ ವೆಲ್‌ ಜಂಕ್ಷನ್‌ನಿಂದ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣ ಸಹಿತ ಸುಸಜ್ಜಿತ ಬಸ್ಸು ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಪ್ರಸ್ತಾಪವಿದೆ. 33 ವರ್ಷಗಳಲ್ಲಿ ಸಂಪೂರ್ಣ ವಾಣಿಜ್ಯ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಯೋಜನೆ ಹೊಂದಿರುವುದನ್ನು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು. 

ಎಸ್‌ಪಿವಿ ಅನುಮೋದನೆ ಪಡೆದ ಬಳಿಕ ಪ್ರಕ್ರಿಯೆ ಶೀಘ್ರಗೊಳ್ಳುವುದು ಕಷ್ಟವೇನಲ್ಲ. ನಗರಾಭಿವೃದ್ಧಿ ಇಲಾಖೆ, ಸಚಿವ ಸಂಪುಟದ ಒಪ್ಪಿಗೆ ಪಡೆಯುವುದೂ ಶೀಘ್ರವಾಗುತ್ತದೆ ಎಂದು ಮುಖ್ಯ ಸಚೇತಕ ಶಶಿಧರ ಹೆಗ್ಡೆ ತಿಳಿಸಿದರು.

49.50 ಕೋ.ರೂ. ವೆಚ್ಚದಲ್ಲಿ ಕಂಕನಾಡಿ ಬಸ್‌ ನಿಲ್ದಾಣ
ಕಂಕನಾಡಿಯಲ್ಲಿ 49.50 ಕೋ. ರೂ. ವೆಚ್ಚದಲ್ಲಿ ಮಾರುಕಟ್ಟೆ/ ವಾಣಿಜ್ಯ ಸಂಕೀರ್ಣ ನಿರ್ಮಾಣ ಸಲುವಾಗಿ ಮೇಯರ್‌ ನೀಡಿದ ಪೂರ್ವಭಾವಿ ಮಂಜೂರಾತಿಯನ್ನು ಈ ವೇಳೆ ಅಂಗೀಕರಿಸಲಾಯಿತು.

ಕೆಯುಡಿಐಫ್ ಸಿ ವತಿಯಿಂದ 22.50 ಕೋ.ರೂ. ಹಾಗೂ ರಾಷ್ಟ್ರೀಕೃತ ಬ್ಯಾಂಕಿನಿಂದ 17 ಕೋ.ರೂ. ಸಾಲಪಡೆಯಲಾಗುತ್ತಿದೆ. ಹೆಚ್ಚುವರಿ 10 ಕೋ. ರೂ. ಬೇಕಾಗಿದ್ದು, ನಗರೋತ್ಥಾನದಿಂದ 3 ಕೋ. ರೂ. ಮೀಸಲಿಡಲಾಗಿದ್ದು, 7 ಕೋ. ರೂ.ಗಳನ್ನು ಪಾಲಿಕೆಯ ಉದ್ಯಮ ನಿಧಿಯಿಂದ ಭರಿಸಿ ಯೋಜನೆ ಅನುಷ್ಠಾನಕ್ಕೆ ಎಸ್‌ಪಿವಿಗೆ ಕಳುಹಿಸಲು ನಿರ್ಧರಿಸಲಾಯಿತು.

ಅಕ್ಟೋಬರ್‌ ಬಿಲ್‌ ಪಾವತಿ ಬಾಕಿ
ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯು ಕಸ ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಲ್‌ ಪಾವತಿ ಬಾಕಿ ಇರಿಸಿರುವುದರಿಂದ ಕಸ ವಿಲೇವಾರಿ ನಿಲ್ಲಿಸಲಾಗಿದೆ ಎಂದು ಕಂಪೆನಿ ಹೇಳುತ್ತಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈಗಾಗಲೇ ಸೆಪ್ಟಂಬರ್‌ ತಿಂಗಳವರೆಗಿನ ಬಿಲ್‌ ಪಾವತಿಸಲಾಗಿದ್ದು, ಅಕ್ಟೋಬರ್‌ನ ಮೊತ್ತ ಬಾಕಿ ಇದೆ. ಕೆಲವು ಸಂಧಾನ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದು ಸರಿಯಾದ ಬಳಿಕವೇ ಬಾಕಿ ಮೊತ್ತ ಪಾವತಿಸಲಾಗುವುದು ಎಂದರು.

ಕಪ್ಪು ಪಟ್ಟಿಗೆ ಸೇರಿಸಿ
ಸದಸ್ಯ ದಯಾನಂದ ಶೆಟ್ಟಿ ಮಾತನಾಡಿ, ಕಸ ವಿಲೇವಾರಿಯಲ್ಲಿ ಎಡವಿದ ಆ್ಯಂಟನಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಸಂಸ್ಥೆ ನಾಲ್ಕು ವರ್ಷಗಳಿಂದ ಕಸ ಸಂಗ್ರಹಿಸುತ್ತಿದ್ದು, ಅದರ ನಿರ್ವಹಣ ಜವಾಬ್ದಾರಿ ತೀರಾ ಕಳಪೆಯಾಗಿದೆ. ಸಂಗ್ರ ಹಿಸಿದ ಕಸ ಆಗಾಗ ರಸ್ತೆ ಮಧ್ಯೆಯೇ ಬೀಳುತ್ತಿರುವುದು ಕಂಡು ಬರುತ್ತಿದೆ ಎಂದರು. ಸ್ವಚ್ಛ ಭಾರತ್‌ ಮಿಷನ್‌ ಅಭಿಯಾನದ ಅಂಗವಾಗಿ ದೇಶದ 4041 ನಗರ/ ಪಟ್ಟಣಗಳಲ್ಲಿ ಸ್ವಚ್ಛ ಸರ್ವೇಕ್ಷಣ್‌ ಕೈಗೊ ಳ್ಳಲು ನಿರ್ಧರಿಸಲಾಗಿದೆ. ಪಾಲಿಕೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ವತಿಯಿಂದ ಸಮೀಕ್ಷಾ ತಂಡ ಜ.4ರಿಂದ ಫೆ. 4ರ ನಡುವೆ ಭೇಟಿ ನೀಡಲಿದೆ. ಸ್ಥಳ ಪರಿಶೀಲನೆ ನಡೆಸಿ, ಮನಪಾ ಅಧಿಕಾರಿಗಳು, ಸಾರ್ವಜನಿಕರು, ಇತರ ಸಂಸ್ಥೆ ಜತೆ ಈ ವೇಳೆ ಚರ್ಚೆ ನಡೆಸಲಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಸ್ವಚ್ಛತಾ ರಾಯಭಾರಿ ನೇಮಕಕ್ಕೆ ಸೂಚಿಸಿದೆ ಎಂದರು.  ಉಪ ಮೇಯರ್‌ ರಜನೀಶ್‌ ಕಾಪಿಕಾಡ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ನಾಗವೇಣಿ, ಅಬ್ದುಲ್‌ ರವೂಫ್‌, ಸಬಿತಾ ಮಿಸ್ಕಿತ್‌, ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.

ನವೀನ್‌ ಸ್ವಚ್ಛತಾ ರಾಯಭಾರಿ 
ಸ್ವಚ್ಛ ಭಾರತ್‌ ಮಿಶನ್‌ ಅಭಿಯಾನದಡಿ ಸ್ವತ್ಛ ಸರ್ವೇಕ್ಷಣ್‌ ಕುರಿತು ಮನಪಾ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸ್ವಚ್ಛತಾ ರಾಯಭಾರಿಯಾಗಿ ನಟ ನವೀನ್‌ ಡಿ. ಪಡೀಲ್‌ ಅವರನ್ನು ನೇಮಿಸಲಾಗಿದೆ. 

ಡಿ. 6ರಂದು ಕಸ ವಿಲೇವಾರಿ ಸಭೆ
ಕಸ ಸಂಗ್ರಹ ವಿಲೇವಾರಿಯಿಂದ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆ ಮುಂತಾದವುಗಳ ಕುರಿತು ಸಮಗ್ರವಾಗಿ ಚರ್ಚಿಸುವ ಸಲುವಾಗಿ ಡಿ. 6ರಂದು ಸಂಜೆ 5 ಗಂಟೆಗೆ ಸಭೆ ಕರೆಯಲಾಗುವುದು. 
ಕವಿತಾ ಸನಿಲ್‌, ಮೇಯರ್‌

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.