ಸುರತ್ಕ ಲ್ ಸಂತೆಯಲ್ಲಿ ಒಂದೇ ದಿನ 10 ಮೊಬೈಲ್ ಕಳವು!
Team Udayavani, Nov 29, 2017, 10:52 AM IST
ಸುರತ್ಕಲ್ : ಇಲ್ಲಿನ ವಾರದ ಸಂತೆಯಲ್ಲಿ ಮೊಬೈಲ್ ಕಳ್ಳರ ಹಾವಳಿ ಅತಿಯಾಗಿದ್ದು, ಕಳೆದ ರವಿವಾರ ಒಂದೇ ದಿನ ಸುಮಾರು 10 ಮಂದಿಯ ಮೊಬೈಲ್ಗಳು ಕಳವಿಗೀಡಾಗಿವೆ.
ದುಬಾರಿ ಬೆಲೆಯ ಐಫೋನ್, ಸ್ಮಾರ್ಟ್ ಫೋನ್ಗಳೇ ಕಳ್ಳರ ಟಾರ್ಗೆಟ್ ಆಗುತ್ತಿವೆ. ಕಿಸೆಗಿಂತ ದೊಡ್ಡ ಗ್ರಾತ್ರದ ಮೊಬೈಲ್ಗಳನ್ನು ಎಗರಿಸುವುದು ಕೂಡ ಸುಲಭವಾಗಿರುವುದೇ ಕಳವು ಹೆಚ್ಚಾಗಲು ಒಂದು ಕಾರಣ. ಸುರತ್ಕಲ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡ ದೂರಿನ ಸಂಖ್ಯೆಯೂ ಏರುತ್ತಿದೆ. ಒಂದೆರಡು ಮೊಬೈಲ್ಗಳಾದರೆ ಸೈಬರ್ ಕ್ರೈಂ ಮೂಲಕ ಪತ್ತೆ ಹಚ್ಚಬಹುದಾದರೂ, ನೂರಾರು ದೂರು ದಾಖಲಾಗುತ್ತಿರುವುದರಿಂದ ಪತ್ತೆಹಚ್ಚುವುದು ಕಷ್ಟ ಎನ್ನುತ್ತಾರೆ ಪೊಲೀಸರು.
ಸಂತೆಯಲ್ಲಿ ದೀಪದ ವ್ಯವಸ್ಥೆಯಿಲ್ಲ
ಈ ಹಿಂದೆ ಬುಧವಾರ ಮಾತ್ರ ಸಂತೆ ನಡೆಯುತ್ತಿದ್ದು, ಬೇಡಿಕೆ ಹೆಚ್ಚಾದ ಕಾರಣ ಈಗ ರವಿವಾರವೂ ಸಂತೆಯಿದೆ. ಬೆಳಗ್ಗೆ 8ರಿಂದ ಆರಂಭವಾಗುವ ಸಂತೆ ರಾತ್ರಿ 8 ಗಂಟೆಯವರೆಗೆ ಇರುವುದರಿಂದ ಬೆಳಕಿನ ವ್ಯವಸ್ಥೆ ಅಗತ್ಯವಾಗಿದೆ. ವ್ಯವಹಾರಸ್ಥರು ಸೋಲಾರ್ ಲೈಟ್ ಬಳಸಿ ವ್ಯಾಪಾರ ಮಾಡುತ್ತಾರೆ. ಬರುವ ಗ್ರಾಹಕರು ಜನ ಸಂದಣಿ ನಡುವೆ ಕತ್ತಲೆಯಲ್ಲಿ ನಿಂತೇ ಖರೀದಿ ನಡೆಸುತ್ತಿರುವುದು ಕಳ್ಳರಿಗೆ ವರದಾನವಾಗಿದೆ. ಒಂದೆರಡು ಬಾರಿ ಪೊಲೀಸರ ವಾಹನ ಸುತ್ತಾಡಿದರೂ ಕಳ್ಳರ ಮೇಲೆ ಪರಿಣಾಮ ಬೀರಿಲ್ಲ. ಸಂತೆಗೆ ಬರುವಾಗ ದುಬಾರಿ ಮೊಬೈಲ್ ತಾರದಿರುವುದೇ ಒಳಿತು. ಮೊಬೈಲ್ ಕಳಕೊಂಡ ಬಳಿಕ ಪರದಾಡು ವುದರಿಂದ ಮೊದಲೇ ಒಂದಿಷ್ಟು ಜಾಗರೂಕರಾಗಿರುವುದು ಅಗತ್ಯ ಎಂಬ ಸಲಹೆ ಪೊಲೀಸರಿಂದಲೂ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.