ಜ.1ರಿಂದ 6 ತಿಂಗಳು ಶಿರಾಡಿ ಸಂಚಾರ ಬಂದ್‌

Team Udayavani, Nov 29, 2017, 11:28 AM IST

29-21.jpg

ಮಂಗಳೂರು: ಮಂಗಳೂರು- ಬೆಂಗಳೂರು (ರಾ.ಹೆ. 75) ನಡುವಿನ ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಮಗಾರಿ 2018 ಜ.1 ರಿಂದ ಆರಂಭವಾಗಿ ಜೂನ್‌ವರೆಗೆ ನಡೆಯುವ ಸಾಧ್ಯತೆ ಇದೆ. ಈ ಸಂದರ್ಭ ಶಿರಾಡಿ ಸಂಚಾರ ಬಂದ್‌ ಆಗಲಿದೆ.  

ಎರಡನೇ ಹಂತದ ಕಾಮಗಾರಿಗೆ ಕರೆಯಲಾದ ಟೆಂಡರ್‌ ಅನ್ನು ಪಡೆ ದಿರುವ ಮಂಗಳೂರಿನ ಓಷಿಯನ್‌ ಕನ್‌ಸ್ಟ್ರಕ್ಷನ್ಸ್‌ಗೆ ಉದ್ದೇಶ ಪತ್ರ ನೀಡುವು ದಕ್ಕೆ ಅನುಮತಿ ಕೋರಿ ರಾಜ್ಯದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಈಗಾಗಲೇ  ಪತ್ರ ಬರೆದಿದ್ದು, ಅನು ಮೋದನೆ ನಿರೀಕ್ಷೆಯಲ್ಲಿದೆ. ಓಶಿಯನ್‌ ಸಂಸ್ಥೆಗೆ ಮೊದಲ ಹಂತದ ಕಾಮಗಾರಿ ನಿರ್ವಹಿಸಿದ ಅನುಭವ ಇರುವುದರಿಂದ ಕ್ಷಿಪ್ರವಾಗಿ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆಯೂ ಇದೆ. ಜತೆಗೆ ಈ ಬಾರಿ ಜರ್ಮನಿಯಿಂದ ಸುಮಾರು 10 ಕೋ.ರೂ. ಮೌಲ್ಯದ ನೂತನ ತಂತ್ರಜ್ಞಾನದ ಕಾಂಕ್ರೀಟ್‌ ಹಾಸುವ ಯಂತ್ರವನ್ನು ಗುತ್ತಿಗೆ ದಾರರು ತರಿಸಿಕೊಂಡಿದ್ದಾರೆ. ಅಗತ್ಯ ನಿರ್ಮಾಣ ವಸ್ತುಗಳನ್ನು ಸಂಗ್ರಹಿ ಸುವ ಕೆಲಸ ನಡೆಯುತ್ತಿದೆ. 

ಶಿರಾಡಿಯ ಪ್ರಥಮ ಹಂತದಲ್ಲಿ ಸುಮಾರು 80 ಕೋ.ರೂ. ವೆಚ್ಚ ದಲ್ಲಿ ಮಾರನಹಳ್ಳಿಯಿಂದ ಕೆಂಪು ಹೊಳೆಯ  ವರೆಗೆ ಸುಮಾರು 13 ಕಿ.ಮೀ. ವರೆಗೆ ಕಾಂಕ್ರೀಟ್‌ ರಸ್ತೆ ಮಾಡ ಲಾಗಿತ್ತು. 2ನೇ ಹಂತದಲ್ಲಿ ಕೆಂಪು ಹೊಳೆ ಅತಿಥಿಗೃಹದಿಂದ ಗುಂಡ್ಯ ಅಡ್ಡಹೊಳೆ ವರೆಗಿನ 13 ಕಿ.ಮೀ. ಭಾಗ  ವನ್ನು ಸುಮಾರು 74 ಕೋ.ರೂ.ವೆಚ್ಚ ದಲ್ಲಿ ಕಾಂಕ್ರೀಟೀಕರಣಗೊಳಿಸಲು ಉದ್ದೇಶಿಸಲಾಗಿದೆ. 
ಈ ಮಧ್ಯೆ ಶಿರಾಡಿಯ ಗುಳಗಳಲೆ ಯಿಂದ ಮಾರನಹಳ್ಳಿಯವರೆಗೆ ನಡೆ ಸಲು ಉದ್ದೇಶಿಸಿದ ಡಾಮರೀಕರಣ ವನ್ನು ರದ್ದುಪಡಿಸಲಾಗಿದೆ. ಈ ಭಾಗ ದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯಲಿರುವುದರಿಂದ ಅದರ ಹೊಣೆ ಯನ್ನು ರಾ.ಹೆ. ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. 

6 ತಿಂಗಳು ಶಿರಾಡಿ ಬಂದ್‌..!
ಶಿರಾಡಿಯ ಮೊದಲ ಹಂತದ ಕಾಮಗಾರಿ ನಡೆದಿದ್ದು 2015ರಲ್ಲಿ. ಈ ಕಾಮಗಾರಿಗಾಗಿ ಅದೇ ವರ್ಷ ಜ.2ರಿಂದ ವಾಹನ ಸಂಚಾರ ಸ್ಥಗಿತ ಗೊಳಿಸಲಾಗಿತ್ತು. ಆದರೆ ಕಾಂಕ್ರೀಟ್‌ ಕಾಮಗಾರಿ ಆರಂಭವಾಗಿದ್ದು ಮಾತ್ರ ಎ. 20ಕ್ಕೆ. ಬಳಿಕ ಆಗಸ್ಟ್‌  9ರಂದು ಶಿರಾಡಿ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಈ ಬಾರಿ ಜ.1ರಿಂದ ಜೂನ್‌ ವರೆಗೆ ಕಾಮಗಾರಿ ನಡೆದರೆ 6 ತಿಂಗಳು ಘಾಟಿ ರಸ್ತೆ ಬಂದ್‌ ಆಗಲಿದೆ. 

ಸೇತುವೆ ಕಾಮಗಾರಿ ಮಾಡುವವರು ಯಾರು?
ಕಳೆದ ಬಾರಿ ಶಿರಾಡಿ ರಸ್ತೆ ಕಾಮಗಾರಿ ಕೈಗೊಳ್ಳುವ ವೇಳೆಯಲ್ಲಿಯೇ ಆ ವ್ಯಾಪ್ತಿಯ ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಗುತ್ತಿಗೆ ದಾರರಿಗೆ ಇದರ ಜವಾ ಬ್ದಾರಿ ನೀಡ ಲಾಗಿಲ್ಲ. ಕೇವಲ ರಸ್ತೆ ಕಾಂಕ್ರೀಟ್‌ ಕಾಮಗಾರಿ ಮಾತ್ರ ಮಾಡಲು ಗುತ್ತಿಗೆ ದಾರರಿಗೆ ಸೂಚನೆ ರವಾ ನಿಸಲಾಗಿದೆ. ಹಾಗಾದರೆ, ಈ ವ್ಯಾಪ್ತಿ ಯಲ್ಲಿ ಬರುವ ಸುಮಾರು 10ರಷ್ಟು ಸೇತುವೆಯ ಕಾಮಗಾರಿ ಯಾರು ಮಾಡಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ. 

ಎರಡನೇ ಹಂತ ನಿಧಾನವೇಕೆ?
ಟೆಂಡರ್‌ ಪ್ರಕಾರ 2ನೇ ಹಂತ ದಲ್ಲಿ 85.28 ಕೋಟಿ ರೂ. ವೆಚ್ಚ ದಲ್ಲಿ 33.38 ಕಿ.ಮೀ. ಕಾಮಗಾರಿ ನಡೆಸಬೇಕಿತ್ತು. ಇದರಲ್ಲಿ ಗುಳಗಳಲೆ ಯಿಂದ ಮಾರನ ಹಳ್ಳಿ ವರೆಗೆ 21 ಕಿ.ಮೀ. ಡಾಮರೀ ಕರಣ ಮತ್ತು ಕೆಂಪು ಹೊಳೆ ಯಿಂದ ಅಡ್ಡಹೊಳೆವರೆಗೆ 63.104 ಕೋಟಿ ರೂ.ಗಳಲ್ಲಿ 12.38 ಕಿ.ಮೀ. ಕಾಂಕ್ರೀಟ್‌ ಕಾಮಗಾರಿ ಎಂದು ಹೇಳ ಲಾಗಿತ್ತು. 7 ಮೀ. ಅಗಲಕ್ಕೆ ಡಾಮರೀ ಕರಣ ಮತ್ತು 8.50 ಮೀ. ಅಗಲಕ್ಕೆ ಕಾಂಕ್ರೀಟ್‌ ಕಾಮಗಾರಿ ನಡೆಸಬೇಕಿತ್ತು. ಆದರೆ ಚೆನ್ನೈನ ಜಿವಿಆರ್‌ ಇನ್‌ಫ್ರಾ ಪ್ರಾಜೆಕ್ಟ್ ಗುತ್ತಿಗೆ ಸಂಸ್ಥೆಯು ನಿಗದಿತ ಅವಧಿ 2016 ಡಿಸೆಂಬರ್‌ ನಲ್ಲಿ ಕಾಮಗಾರಿ ಆರಂಭಿ ಸಿರಲಿಲ್ಲ. ಈ ಕಾರಣಕ್ಕೆ ಆ ಗುತ್ತಿಗೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ರದ್ದುಪಡಿಸಿತ್ತು. 

ವಾಹನ ಸಂಚಾರ ಮಾರ್ಗ ಬದಲು
(ಮೊದಲ ಹಂತ 2015ರ ಜ.2ರಿಂದ ಬಳಸಲಾದ ರಸ್ತೆಯ ಮಾದರಿ) 
ಮಂಗಳೂರು-ಹಾಸನ ಕಡೆಗೆ 
 ಲಘು ವಾಹನಗಳು, ಸಾಮಾನ್ಯ ಬಸ್ಸುಗಳು, ಕಾರು, ಜೀಪು, ವ್ಯಾನು, ಎಲ್‌.ಸಿ.ವಿ. (ಮಿನಿ ವ್ಯಾನ್‌) ದ್ವಿಚಕ್ರ ವಾಹನಗಳು.

    ಮಂಗಳೂರು- ಬಿ.ಸಿ.ರೋಡ್‌- ಉಜಿರೆ- ಬೆಳ್ತಂಗಡಿ- ಚಾರ್ಮಾಡಿ ಘಾಟ್‌-ಮೂಡಿಗೆರೆ- ಬೇಲೂರು- ಹಾಸನ.

    ಮಂಗಳೂರು- ಬಿ.ಸಿ.ರೋಡ್‌- ಉಜಿರೆ- ಬೆಳ್ತಂಗಡಿ- ಚಾರ್ಮಾಡಿ ಘಾಟ್‌- ಮೂಡಿಗೆರೆ- ಜೆನ್ನಾಪುರ- ಹಾನಬಾಲ್‌- ಆನೆಮಹಲ್‌- ಸಕಲೇಶಪುರ- ಹಾಸನ.

    ಮಂಗಳೂರು-  ಬಿ.ಸಿ. ರೋಡ್‌- ಉಜಿರೆ- ಬೆಳ್ತಂಗಡಿ- ಚಾರ್ಮಾಡಿ 
ಘಾಟ್‌- ಮೂಡಿಗೆರೆ- ಬೇಲೂರು- ಸಕಲೇಶಪುರ- ಹಾಸನ.

 ಭಾರೀ ವಾಹನಗಳು:
   ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಸುರಿ ಬಸ್ಸುಗಳು ಮತ್ತು ಲಘು ವಾಹನಗಳು

    ಮಂಗಳೂರು-  ಬಿ.ಸಿ. ರೋಡ್‌-  ಮಾಣಿ- ಪುತ್ತೂರು- ಮಡಿಕೇರಿ- ಹುಣಸೂರು- ಕೆ.ಆರ್‌.ನಗರ- ಹೊಳೆನರಸೀಪುರ- ಹಾಸನ.

 ಲಘು ಮತ್ತು ಭಾರೀ ವಾಹನಗಳು:
(ಬುಲೆಟ್‌ ಟ್ಯಾಂಕರ್, ಷಿಪ್‌ ಕಾರ್ಗೊ ಕಂಟೈನರ್, ಲಾಂಗ್‌ ಚಾಸೀಸ್‌ ವಾಹನಗಳು ಹೊರತುಪಡಿಸಿ)

    ಮಂಗಳೂರು- ಬಿ.ಸಿ. ರೋಡ್‌- ಮಾಣಿ- ಪುತ್ತೂರು- ಮಡಿಕೇರಿ- ಹುಣಸೂರು- ಮೈಸೂರು- ಮಂಡ್ಯ- ರಾಮನಗರ- ಬೆಂಗಳೂರು.

 ಭಾರೀ ವಾಹನಗಳು:
ಬುಲೆಟ್‌ ಟ್ಯಾಂಕರ್, ಷಿಪ್‌ ಕಾರ್ಗೊ ಕಂಟೈನರ್, ಲಾಂಗ್‌ ಚಾಸೀಸ್‌ ವಾಹನಗಳು ಒಳಗೊಂಡಂತೆ) 

    ಮಂಗಳೂರು- ಉಡುಪಿ- ಕುಂದಾಪುರ- ಮುರುಡೇಶ್ವರ- ಹೊನ್ನಾವರ- ಸಾಗರ- ಶಿವಮೊಗ್ಗ- ನೆಲಮಂಗಲ- ಬೆಂಗಳೂರು.

ಉಡುಪಿ-ಬೆಂಗಳೂರು ಕಡೆಗೆ
 ಲಘು ವಾಹನಗಳು:

   ಉಡುಪಿ- ಕಾರ್ಕಳ- ಮಾಳ ಘಾಟ್‌- ಕುದುರೆ ಮುಖ- ಕಳಸ- ಕೊಟ್ಟಿಗೆಹಾರ- ಮೂಡಿಗೆರೆ- ಹಾಸನ- ಬೆಂಗಳೂರು

 ಭಾರೀ ವಾಹನಗಳು:

    ಕುಂದಾಪುರ- ಸಿದ್ದಾಪುರ- ಹೊಸಂಗಡಿ- ಬಾಳೆ ಬಾರೆ ಘಾಟ್‌- ಮಾಸ್ತಿಕಟ್ಟೆ- ಹೊಸ ನಗರ- ಆಯನೂರು- ಶಿವಮೊಗ್ಗ- ಬೆಂಗಳೂರು.

ದಿನೇಶ್‌ ಇರಾ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ

ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.