ಬಿಜೆಪಿಯಿಂದ ಅಭಿವೃದ್ಧಿ ಕಾರ್ಯ
Team Udayavani, Nov 29, 2017, 12:37 PM IST
ಕೆ.ಆರ್.ನಗರ: ನನ್ನ ಭಾಗದ ರೈತರಿಗೆ ನೆಮ್ಮದಿಯ ಜೀವನ ನಡೆಸಲು ಏನಾದರೂ ಪ್ರಾಮಾಣಿಕ ಸೇವೆ ಮಾಡಬೇಕು ಎಂದಾಗ ಬತ್ತಿ ಹೋದ ನೂರಾರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಸಲು ಕಾರಣವಾದದ್ದು ಬಿಜೆಪಿ ಪಕ್ಷ. ನಮ್ಮ ಆಡಳಿತ ವ್ಯವಸ್ಥೆಯ ಎರಡು ಸರ್ಕಾರಗಳು ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ಪಕ್ಷ ಹೊಂದಿದಲ್ಲಿ ಹೆಚ್ಚು ಅಬಿವೃದ್ಧಿ ಸಾಧ್ಯ ಎಂದು ಶಾಸಕ ಸಿ.ಪಿಯೋಗೇಶ್ವರ್ ಹೇಳಿದರು.
ಅವರು ಕೆ.ಆರ್.ನಗರದಲ್ಲಿನ ತೋಪಮ್ಮ ದೇವಸ್ಥಾನದ ಎದುರು ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೂರದೃಷ್ಟ ಹೊಂದಿರುವ ಮೋದೀಜಿ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಭಾರತವನ್ನು ಬದಲಾವಣೆಯ ಹಾದಿಯಲ್ಲಿ ಕೊಂಡೊಯ್ಯುವ ಮೂಲಕ ಉನ್ನತ ಮಟ್ಟಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೋದಿಯವರ ಗಾಳಿಗೆ ಸಮಾಜವಾದಿ ಪಕ್ಷ ತರಗೆಲೆಯಂತೆ ಉದುರಿಹೋಯಿತು. ಉತ್ತರ ಭಾರತದಲ್ಲಿ ಸಂಪೂರ್ಣ ಬಿಜೆಪಿ ಆಡಳಿತ ಹೊಂದಿದೆ. ಯಡಿಯೂರಪ್ಪನವರು ಪರಿವರ್ತನಾ ರ್ಯಾಲಿ ಮೂಲಕ ರಾಜಾದ್ಯಂತ ಪ್ರವಾಸ ಕೈಗೊಂಡಿದ್ದು ಉತ್ತರ ಕನಾಟಕದಲ್ಲಿ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದೇವೆ ಎಂದರು.
ಇಲ್ಲಿ ಮೂರು ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಅದೂ ಬದಲಾವಣೆಯಾಗಬೇಕೆನ್ನುವ ನಿಟ್ಟಿನಲ್ಲಿ ಬಿಜೆಪಿಗೆ ಹೊಸ ನಾಯಕರನ್ನು ಸೃಷ್ಟಿಸುತ್ತಿದ್ದೇವೆ. ಈ ದಿಸೆಯಲ್ಲಿ ಕೆ.ಆರ್.ನಗರದಲ್ಲಿ ಹೊಸಹಳ್ಳಿ ವೆಂಕಟೇಶ್‌ರವರ ಬಿಜೆಪಿ ಕಟ್ಟುವ ಪ್ರಾಮಾಣಿಕ ಪ್ರಯತ್ನದಿಂದ ಭರವಸೆಯ ನಾಯಕರಾಗಿ ಕಾಣುತಿದ್ದಾರೆ. ನೀವೆಲ್ಲ ಮನಸ್ಸು ಮಾಡಿದರೆ ವೆಂಕಟೇಶ್ ಎಂಎಲ್‌ಎ ಆಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ಹರಿದು ಹಂಚಿ ಲೂಟಿ ಹೊಟೆಯುತ್ತಿದೆ. ರಾಜ್ಯದಲ್ಲಿ ರೈತರ ಮೊಗದಲ್ಲಿ ನೆಮ್ಮದಿಯ ಜೀವನ ಕಾಣಬೇಕಾದರೆ ಮತ್ತು ಯುವಕರಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ಭರವಸೆಯ ಬದುಕು ರೂಪಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಮುಂದಿನ ತಿಂಗಳು 20ರ ನಂತರ ಅನೇಕ ಸಮರ್ಥ ನಾಯಕರು ಬೇರೆ ಪಕ್ಷಗಳಿಂದ ಬಿಜೆಪಿಗೆ ವಲಸೆಬರುತ್ತಾರೆ. ಮುಂಬರುವ ಚುನಾವಣೆಯಲ್ಲಿ ವೆಂಕಟೇಶ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಣ್ಣ, ಮಾಜಿ ಶಾಸಕ ತೋಂಟದಾರ್ಯ, ಹೊಸಹಳ್ಳಿ ವೆಂಕಟೇಶ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್, ತಾ.ಬಿಜೆಪಿ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಮುಖಂಡರಾದ ಡಾ.ಬಾರತೀಶ್, ಬಿ.ಎಲ್.ರಘು, ಉಮಾಶಂಕರ್, ಬೋರೇಗೌಡ್ರು, ಜಾಬಗೆರೆ ರಮೇಶ್, ಯೋಗಾನಂದ, ನಳಿನಾಕ್ಷಿ ವೆಂಕಟೇಶ್, ಕುಪ್ಪೆ ಪ್ರಕಾಶ್, ಅರ್ಜುನಹಳ್ಳಿ ಸಂಪತ್, ಕುಮಾರ್, ಸಿ.ವಿ.ಗುಡಿ ಜಗದೀಶ್, ಸಾ.ರಾ.ರಮೇಶ್, ಮಹೇಶ್ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.