ಚಿಕ್ಕಮಾದು ನಿಧನ ನೋವು ತಂದಿದೆ
Team Udayavani, Nov 29, 2017, 12:37 PM IST
ಎಚ್.ಡಿ.ಕೋಟೆ: ಜನಪ್ರಿಯ ಶಾಸಕರಾಗಿ ತಾಲೂಕನ್ನು ಅಭಿವೃದ್ಧಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದ ಶಾಸಕ ಎಸ್.ಚಿಕ್ಕಮಾದು ಅವರು ಇಂದು ನಮ್ಮ ಮುಂದೆ ಇಲ್ಲದಿರುವುದನ್ನು ಕಲ್ಪನೆ ಮಾಡಿಕೊಳ್ಳಲು ಆಗಲ್ಲ. ಅವರ ನಿಧನ ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕರಾದರು.
ಅನಾರೋಗ್ಯದ ಕಾರಣ ಇತ್ತೀಚಿಗೆ ನಿಧನರಾದ ಶಾಸಕ ಎಸ್.ಚಿಕ್ಕಮಾದು ಅವರ ಸ್ಮರಣೆಗಾಗಿ ತಾಲೂಕು ದಿವಂಗತ ಎಸ್.ಚಿಕ್ಕಮಾದು ಅವರ ಅಭಿಮಾನಿಗಳ ಬಳಗದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ವರ್ಗದ ಜನರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರ ಜೊತೆ ಅವಿನಾಭವ ಸಂಬಂಧ ಇಟ್ಟಿಕೊಂಡಿದ್ದರು. ಸಂಸದ ಆರ್.ಧೃವನಾರಾಯಣ್ ಅವರ ನಡುವೆ ಇದ್ದ ಬಾಂಧವ್ಯದಿಂದ ಇಬ್ಬರು ಸೇರಿ ಡಾ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎನಿಸಿಕೊಂಡಿರುವ ಎಚ್.ಡಿ.ಕೋಟೆ ತಾಲೂಕನ್ನು ಮುಂದುವರಿದ ತಾಲೂಕಾಗಿಸಲು ಕೈ ಜೊಡಿಸಿ ಸದಾ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಎಂದು ಹೇಳಿದರು.
ಸದಾ ಬೆಂಬಲ ನೀಡಿರುವ ಪುಣ್ಯಾತ್ಮರು ನೀವು: ದಿವಂಗತ ಶಾಸಕರಾದ ಎಂ.ಪಿ.ವೆಂಕಟೇಶ್, ಶಾಸಕ ಎಸ್.ಚಿಕ್ಕಮಾದು ಸೇರಿದಂತೆ ಜಾ.ದಳ ಸಂಕಷ್ಟ ಕಾಲದಲ್ಲೆಲ್ಲ ಬೆಂಬಲಕ್ಕೆ ಎಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಜನರಾದ ನೀವು ನಿಂತಿದ್ದೀರಿ. ಅದ್ದರಿಂದಲೇ ಮಾಜಿ ಪ್ರಧಾನಿ ದೇವೆಗೌಡರಿಗೆ ಈ ಕ್ಷೇತ್ರದ ಮೇಲೆ ಇನ್ನಿಲ್ಲದ ಪ್ರೀತಿ ಇದೆ. ನಮಗೆ ಬೆಂಬಲ ನೀಡಿದ ಕ್ಷೇತ್ರಗಳಲ್ಲಿಯೇ ಈ ಕ್ಷೇತ್ರ ಮೊದಲ ಸ್ಥಾನದಲ್ಲಿದೆ.
ನಿಮ್ಮಂತ ಪುಣ್ಯಾತ್ಮರ ಆಶೀರ್ವಾದದಿಂದಲೇ ನನಗೂ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತ್ತು ಎಂದರು. ಸಂಸದ ಆರ್.ಧೃವನಾರಾಯಣ್ ಮಾತನಾಡಿ, ಈ ಕ್ಷೇತ್ರದ ಶಾಸಕರಾಗಿ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಎಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ ಚಿಕ್ಕಮಾದು ಅವರ ಜೊತೆ ನಾಲ್ಕುವರೆ ವರ್ಷ ನಾನು ಕೆಲಸ ಮಾಡಲು ಅವಕಾಶ ಸಿಕ್ಕಿತ್ತು.
ಬೇರೆ ಬೇರೆ ಪಕ್ಷಗಳ ಮುಖಂಡರ ಜೊತೆ ಒಂದು ದಿನವೂ ಭಿನ್ನಾಭಿಪ್ರಾಯ ಮಾಡಿಕೊಳ್ಳದ ಶಾಸಕ ಚಿಕ್ಕಮಾದು ನಾನು ಚುನಾವಣೆ ಬಂದಾಗ ನಮ್ಮ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿದರೂ ನಂತರ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಒಂದಾಗುತ್ತಿದ್ದವು. ಅವರ ನಿಧನ ನೋವು ತಂದಿದೆ. ರಾಜ್ಯಕ್ಕೆ ತಾಲೂಕಿಗೆ ಆಪಾರ ನಷ್ಟವಾಗಿದೆ ಎಂದು ನುಡಿದರು.
ಮಾಜಿ ಸಚಿವ ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿ.ಟಿ.ದೇವೆಗೌಡ, ಮೈಸೂರು-ಚಾಮರಾಜನಗರ ನಾಯಕ ಒಕ್ಕೂಟದ ಅಧ್ಯಕ್ಷ ಎಂ.ಸಿ.ದೊಡ್ಡ ನಾಯಕ ಮಾತನಾಡಿದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ದಡದಹಳ್ಳಿ ಪಟ್ಟದ ಮಠದ ಚನ್ನಬಸವಸ್ವಾಮೀಜಿ ಮಾತನಾಡಿದರು. ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಎಲ್.ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.
ಶಾಸಕರಾದ ಸತೀಶ್ ಜಾರಕಿಹೊಳಿ, ಜಿ.ಟಿ.ದೇವೆಗೌಡ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಸಂಸದ ಎಚ್.ವಿಶ್ವನಾಥ್, ವಿಶ್ರಾಂತ ಕುಲಪತಿ ರಂಗಪ್ಪ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಬಾಲರಾಜು, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಸದಸ್ಯರಾದ ಎಂ.ಪಿ.ವೆಂಕಟೇಶ್, ಶ್ರೀಕೃಷ್ಣ, ಪರಿಮಳ ಶ್ಯಾಂ, ವೆಂಕಟಸ್ವಾಮಿ ಮುಂತಾದವರಿದ್ದರು.
ಜಿಟಿಡಿ ನೇರವಾಗಿದ್ದರು: ರಾಜಕೀಯ ವಿದ್ಯಮಾನಗಳಿಂದ ದೂರಾಗಿ ಮನೆಯಲ್ಲಿದ್ದ ದಿವಂಗತ ಶಾಸಕ ಎಸ್.ಚಿಕ್ಕಮಾದು ಅವರಿಗೆ ನಿಮ್ಮಂತ ನಾಯಕರೇ ಮನೆಯಲ್ಲಿ ಕೂತರೇ ಹೇಗೆ ಚಿಕ್ಕಮಾದು ಎಂದು ಹೇಳಿ ಜಾ.ದಳಕ್ಕೆ ಚಿಕ್ಕಮಾದು ಅವರನ್ನು ಕರೆತರುವ ಮೂಲಕ ಅವರ ರಾಜಕೀಯ ಜೀವನದ 2ನೇ ಅಧ್ಯಾಯಕ್ಕೆ ನೆರವಾಗುವಲ್ಲಿ ಶಾಸಕ ಜಿ.ಟಿ.ದೇವೆಗೌಡ ಪ್ರಮುಖ ಕಾರಣಕರ್ತರಾಗಿದ್ದರು ಎಂದು ಕುಮಾರಸ್ವಾಮಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.