ಭಾರತದ ಅತಿಯಾದ ಕ್ರಿಕೆಟಿಗೆ ಲಗಾಮು?
Team Udayavani, Nov 29, 2017, 2:38 PM IST
ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರು ವಿಪರೀತ ಹಾಗೂ ಬಿಡುವಿಲ್ಲದ ಪಂದ್ಯಗಳಿಂದ ದಣಿದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಮಾತ್ರವಲ್ಲ, ನಾಯಕ ವಿರಾಟ್ ಕೊಹ್ಲಿಯೂ ಕ್ರಿಕೆಟ್ ಅತಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಬಂದಿದೆ. ತಂಡದ ಕ್ರಿಕೆಟ್ ಆಡುವ ದಿನಗಳನ್ನು 140ರಿಂದ 80ಕ್ಕಿಳಿಸಲು ಬಿಸಿಸಿಐನ ಸುಪ್ರೀಂ ನಿಯೋಜಿತ ಆಡಳಿತಾಧಿಕಾರಿಗಳ ಸಮಿತಿ ಚಿಂತಿಸಿದೆ. ಈ ಬಗ್ಗೆ ಸ್ವತಃ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ಸುಳಿವು ನೀಡಿದ್ದಾರೆ.
“ನಾವೇ ಕೈಯಾರೆ ಚಿನ್ನದ ಬಾತುಕೋಳಿಗಳನ್ನು ಕೊಲ್ಲಬಾರದು. ಆದ್ದರಿಂದ ಕ್ರಿಕೆಟಿಗರು ಹೊಸದಿಲ್ಲಿ ಟೆಸ್ಟ್ ವೇಳೆ ತಮ್ಮ ಅಭಿಪ್ರಾಯವನ್ನು ವಿಸ್ತೃತವಾಗಿ ತಿಳಿಸಲಿದ್ದಾರೆ. ಅನಂತರ ಭವಿಷ್ಯದ ವೇಳಾಪಟ್ಟಿಯನ್ನು ನಿರ್ಧರಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಈಗ ಆಡುತ್ತಿರುವ 50ಕ್ಕೂ ಹೆಚ್ಚು ಪಂದ್ಯಗಳ ಬದಲು ಸರಾಸರಿ ವಾರ್ಷಿಕ 32 ಪಂದ್ಯಗಳನ್ನು ಆಡಿಸಲು ಯೋಚಿಸುತ್ತಿದ್ದೇವೆ’ ಎಂದು ವಿನೋದ್ ರಾಯ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟಿಗರಿಗೆ ನಿಗದಿತ ಕ್ರಿಕೆಟ್ ಪಂದ್ಯಗಳ ಜತೆಗೆ ಹತ್ತಿರ ಹತ್ತಿರ 2 ತಿಂಗಳ ವರೆಗೆ ನಡೆಯುವ ಐಪಿಎಲ್ನಲ್ಲೂ ಆಡುವ ಅನಿವಾರ್ಯತೆಯಿದೆ. ಇದು, ಆಟಗಾರರು ತೀವ್ರ ರೀತಿಯಲ್ಲಿ ದಣಿಯುವಂತೆ ಮಾಡುತ್ತದೆ. ಇದನ್ನೂ ಬಿಸಿಸಿಐ ಆಡಳಿತಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.