“ಡವ್’ ಸಂತು ಚಿತ್ರಕ್ಕೆ ರಾಜವರ್ಧನ್ ಹೀರೋ
Team Udayavani, Nov 29, 2017, 11:00 PM IST
ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ “ನೂರೊಂದು ನೆನಪು’ ಚಿತ್ರದ ಬಳಿಕ ಕೇಳಿದ ಕಥೆಗಳೆಷ್ಟು ಗೊತ್ತಾ? ಬರೋಬ್ಬರಿ ಹದಿನೈದಕ್ಕೂ ಹೆಚ್ಚು. ಆದರೆ, ಆ ಪೈಕಿ ಅವರು ಯಾವ ಕಥೆಯನ್ನೂ ಒಪ್ಪಿ ಅಪ್ಪಿಕೊಳ್ಳಲಿಲ್ಲ. ಕಾರಣ, ಮತ್ತದೇ ಬಂದ ಕಥೆ ಹಾಗು ಪಾತ್ರಗಳು. ಈಗ ರಾಜವರ್ಧನ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ.
ಹೌದು, “ಅಲೆಮಾರಿ’, “ಡವ್’, “ಕಾಲೇಜ್ ಕುಮಾರ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸಂತು, ರಾಜವರ್ಧನ್‌ಗೊಂದು ಸಿನಿಮಾ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಹರಿ ಸಂತೋಷ್ ಮತ್ತು ರಾಜವರ್ಧನ್ ಜತೆಗಿದ್ದಾರೆ. ಮೂರು ವರ್ಷಗಳಿಂದಲೂ ಕಥೆ ಕೆತ್ತನೆಯಲ್ಲಿದ್ದ ಸಂತು, ವಿಕ್ಕಿ ಮತ್ತು ರಾಜವರ್ಧನ್ ಇಬ್ಬರಿಗೂ ಒಂದೊಂದು ಕಥೆ ಮಾಡಿದ್ದರು. ಆ ಪೈಕಿ ವಿಕ್ಕಿಗೆ “ಕಾಲೇಜ್ ಕುಮಾರ್’ ಮಾಡಿದ್ದಾರೆ.
ಆ ಚಿತ್ರದ ಬಳಿಕ ರಾಜವರ್ಧನ್‌ಗೆ ಮಾಡುವುದಾಗಿ ನಿರ್ಧರಿಸಿದ್ದರು ಸಂತು. ಈಗ ಆ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ರಾಜವರ್ಧನ್‌ಗಾಗಿಯೇ ಸಂತು ಎರಡು ಆ್ಯಕ್ಷನ್ ಕಥೆಗಳನ್ನು ರೆಡಿ ಮಾಡಿದ್ದಾರಂತೆ. “ಎರಡು ಕಥೆಗಳೂ ಚೆನ್ನಾಗಿವೆ. ಒಳ್ಳೆಯ ತಂಡವೂ ಇದೆ. ಸದ್ಯಕ್ಕೆ ಚಿತ್ರದ ಬಜೆಟ್ ಜಾಸ್ತಿ ಕೇಳುತ್ತಿದೆ. ಅದಕ್ಕಾಗಿ ಪ್ಲಾನಿಂಗ್ ನಡೆಯುತ್ತಿದೆ.
ಆ ಚಿತ್ರದ ಕಥೆ ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಹೆಚ್ಚು ಬಿಸಿಲಿನಲ್ಲೇ ಚಿತ್ರೀಕರಣ ನಡೆಯಬೇಕು. ಹಾಗಾಗಿ ಅದಕ್ಕೂ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನಾನು ಸಂತು ಅವರನ್ನು ಮೂರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಒಳ್ಳೆಯ ಬರಹಗಾರರು. ವಿಕ್ಕಿ ಮತ್ತು ನನಗೆ ಕಥೆ ಮಾಡಿ, ಈ ಕಥೆ ನಿಮಗೇ ಮಾಡ್ತೀನಿ ಅಂತ ಹೇಳಿದ್ದರು.
ಅದರ ಪ್ರಕಾರ, ವಿಕ್ಕಿಗೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗ ನನ್ನ ಸರದಿ. ಸದ್ಯಕ್ಕೆ ಚಿತ್ರದ ಬಗ್ಗೆ ಬೇರೇನೂ ಮಾಹಿತಿ ಇಲ್ಲ. ಇಷ್ಟರಲ್ಲೇ ಸಂತು ಜತೆ ಒಂದು ಸಿನಿಮಾ ಆಗುತ್ತೆ ಅನ್ನೋದಷ್ಟೇ ಪಕ್ಕಾ ಆಗಿದೆ. ಅದಕ್ಕಾಗಿ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕಥೆ ಪಕ್ಕಾ ಕಮರ್ಷಿಯಲ್ ಆಗಿರುವುದರಿಂದ ಫೈಟ್ಸ್ ಅಭ್ಯಾಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ರಾಜವರ್ಧನ್.
ಅಂದಹಾಗೆ, ಚಿತ್ರಕ್ಕೆ ಹೆಸರಿಟ್ಟಿಲ್ಲ. ನಿರ್ದೇಶಕರು ಒಂದಷ್ಟು ಹೆಸರು ಬರೆದಿಟ್ಟುಕೊಂಡಿದ್ದಾರೆ. ಕಥೆಗೆ ಹೊಂದುವ ಒಂದು ಶೀರ್ಷಿಕೆ ಅಂತಿಮವಾಗಬೇಕಷ್ಟೇ. ಇನ್ನು, “ಅಲೆಮಾರಿ’ ಚಿತ್ರದಿಂದಲೂ ಸಂತು ಒಂದು ತಂಡ ಕಟ್ಟಿಕೊಂಡು ಕೆಲಸ ಮಾಡಿದವರು. “ಕಾಲೇಜ್ ಕುಮಾರ್’ ಚಿತ್ರಕ್ಕೂ ಅದೇ ತಂಡ ಕೆಲಸ ಮಾಡಿತ್ತು. ಈ ಚಿತ್ರಕ್ಕೂ ಶೇ.90 ರಷ್ಟು ಅದೇ ತಂಡ ಕೆಲಸ ಮಾಡಲಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.