ಸ್ಪರ್ಧಾ ಆಯೋಗದಿಂದ ಬಿಸಿಸಿಐಗೆ 54 ಕೋಟಿ ರೂ. ದಂಡ!
Team Udayavani, Nov 30, 2017, 6:25 AM IST
ನವದೆಹಲಿ: ಐಪಿಎಲ್ನ ಮಾಧ್ಯಮ ಹಕ್ಕು ಹಂಚಿಕೆ ಸಂದರ್ಭದಲ್ಲಿ ಬಿಸಿಸಿಐ ಸ್ಪರ್ಧಾತ್ಮಕವಾಗಿ ನಡೆದುಕೊಂಡಿಲ್ಲ ಎಂದು ತೀರ್ಪು ನೀಡಿರುವ ಭಾರತ ಸ್ಪರ್ಧಾ ಆಯೋಗ (ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ) 52.24 ಕೋಟಿ ರೂ. ದಂಡ ಹೇರಿದೆ. ಗಮನಾರ್ಹ ಸಂಗತಿಯೆಂದರೆ 2013, 2015ರಲ್ಲೂ ಸಿಸಿಐ ಹೀಗೆ ದಂಡ ಹೇರಿದ್ದರೂ ಅದನ್ನು ಸ್ವತಃ ಸ್ಪರ್ಧಾ ಆಯೋಗದ ನ್ಯಾಯ ಮಂಡಳಿ ರದ್ದು ಪಡಿಸಿತ್ತು.
ಐಪಿಎಲ್ನ ಮಾಧ್ಯಮ ಹಕ್ಕುಗಳನ್ನು ಹಂಚುವಾಗ ಬಿಸಿಸಿಐ ಸ್ಪರ್ಧಾತ್ಮಕವಾಗಿ ನಡೆದುಕೊಂಡಿಲ್ಲ ಎನ್ನುವುದು ಸ್ಪರ್ಧಾ ಆಯೋಗದ 44 ಪುಟಗಳ ತೀರ್ಪಿನ ಸಾರಾಂಶ. ಬಿಸಿಸಿಐ ತನ್ನ ಮಾಧ್ಯಮ ಹಕ್ಕು ನಿಯಮದ ವಿಧಿಯಲ್ಲಿ ಬಿಡ್ ಸಲ್ಲಿಕೆದಾರರನ್ನು ರಕ್ಷಿಸಲೆಂದೇ ಕೆಲವು ನೀತಿ ಮಾಡಿಕೊಂಡಿದೆ. ಅಲ್ಲದೇ ದೇಶೀಯ ಕ್ರಿಕೆಟ್ನಲ್ಲಿ ಐಪಿಎಲ್ನಂತೆ ಮತ್ತೂಂದು ಕೂಟವನ್ನು ಶುರು ಮಾಡಲೂ ಬಿಸಿಸಿಐ ಅವಕಾಶ ನೀಡಿಲ್ಲ ಎಂದು ಸ್ಪರ್ಧಾ ಆಯೋಗ ಅಭಿಪ್ರಾಯಪಟ್ಟಿದೆ.
ಕಳೆದ ಮೂರು ವರ್ಷಗಳಲ್ಲಿನ ಬಿಸಿಸಿಐ ಸರಾಸರಿ ಆದಾಯ 1164.7 ಕೋಟಿ ರೂ.ಗಳಿವೆ. ಇದರ ಶೇ.4.4ರಷ್ಟನ್ನು ಮಾತ್ರ ದಂಡವಾಗಿ ಹೇರಲಾಗಿದೆ. ಆ ಮೊತ್ತ 54 ಕೋಟಿ ರೂ.ಗಳಾಗಿದೆ. ಈ ಹಿಂದೆ ಎರಡು ಬಾರಿ ಈ ಆದೇಶ ರದ್ದಾಗಿರುವುದರಿಂದ ಈ ಬಾರಿ ಹೆಚ್ಚಿನ ಮುತುವರ್ಜಿಯಿಂದ ಸಿಸಿಐ ತನಿಖೆ ಮಾಡಿ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.