ಗೋಲ್ಕೊಂಡಾ ಕೋಟೆಗೆ ಇವಾಂಕಾ ಟ್ರಂಪ್ ಭೇಟಿ
Team Udayavani, Nov 30, 2017, 7:05 AM IST
ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಭಾರತ ಭೇಟಿಯ ಎರಡನೇ ದಿನ ಜಾಗತಿಕ ಉದ್ಯಮಶೀಲತೆ ಶೃಂಗದಲ್ಲಿ ಭಾಗವಹಿಸಿದ ನಂತರ ಗೋಲ್ಕೊಂಡಾ ಕೋಟೆಗೆ ಭೇಟಿ ನೀಡಿದರು. ಆದರೆ ಭದ್ರತಾ ಕಾರಣಗಳಿಂದ ಚಾರ್‌ಮಿನಾರ್ ಮತ್ತು ಲಾಡ್ ಬಜಾರ್ ಭೇಟಿ ರದ್ದುಗೊಳಿಸಿದರು. ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಭೋಜನ ಸವಿದು ಮಧ್ಯಾಹ್ನ 3 ಗಂಟೆಗೆ ಗೋಲ್ಕೊಂಡಾ ಕೋಟೆಗೆ ಆಗಮಿಸಿದ ಇವಾಂಕಾ ಜತೆಗೆ, 17 ಬೆಂಗಾವಲು ಕಾರುಗಳಿದ್ದವು. ಸುಮಾರು 45 ನಿಮಿಷಗಳ ಕಾಲ ಇವಾಂಕಾ ಕೋಟೆ ವೀಕ್ಷಿಸಿದರು. ಈ ಭಾಗದಲ್ಲಿ ಬೆಳಗ್ಗಿನಿಂದಲೇ ಭದ್ರತೆ ಬಿಗಿಗೊಳಿಸಲಾಗಿತ್ತು. ಕೋಟೆಯ ಉದ್ಯಾನದಲ್ಲೇ ಇವಾಂಕಾ ಭೋಜನ ಕೂಟ ನಡೆಸುವ ಯೋಜನೆ ಇತ್ತಾ ದರೂ, ನಿಗದಿತ ಅವಧಿಗೂ ಮುನ್ನವೇ ತೆರಳ ಬೇಕಾಗಿದ್ದ ಕಾರಣ ರದ್ದುಗೊಳಿಸಲಾಯಿತು.
ಎರಡನೇ ದಿನವೂ ಉದ್ಯಮಶೀಲತೆ ಸಮ್ಮೇಳನದಲ್ಲಿ ಭಾಗವಹಿಸಿದ ಇವಾಂಕಾ, ಮಹಿಳಾ ಉದ್ಯಮಶೀಲತೆಯ ಮಹತ್ವದ ಬಗ್ಗೆ ಮಾತನಾಡಿದರು. ಮಹಿಳೆಯರ ಉದ್ಯಮಶೀಲತೆಗೆ ತಂತ್ರಜ್ಞಾನ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನವು ಹೊಸ ವಹಿವಾಟುಗಳನ್ನು ನಡೆಸಲು ಸಾಕಷ್ಟು ಅವ ಕಾಶಗಳನ್ನು ಒದಗಿಸಿದೆ ಎಂದು ಹೇಳಿದರು.
ತಂದೆಯ ಮೆಚ್ಚುಗೆ: ಸಮ್ಮೇಳನದಲ್ಲಿ ಭಾಗ ವಹಿಸಿ ಯಶಸ್ಸುಗೊಳಿಸಿದ್ದಕ್ಕೆ ಡೊನಾಲ್ಡ್ ಟ್ರಂಪ್ ಪುತ್ರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಟ್ರಂಪ್ ಮಹಿಳಾ, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತಿರು ವುದು ಉತ್ತಮ ಪ್ರಯತ್ನ ಎಂದಿದ್ದಾರೆ.
ಚಂದ್ರಬಾಬು ನಾಯ್ಡು ಗೈರು: ಜಾಗತಿಕ ಉದ್ಯಮಶೀಲತೆ ಶೃಂಗವನ್ನು ಆರಂಭಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗೈರು ಇಡೀ ಸಮ್ಮೇಳನದಲ್ಲಿ ಎದ್ದು ಕಾಣುತ್ತಿತ್ತು. ಆಂಧ್ರ ಪ್ರದೇಶ ವಿಭಜನೆ ನಂತರ ಹೊಸ ರಾಜಧಾನಿ ಅಮರಾವತಿ ನಿರ್ಮಾಣದಲ್ಲಿ ತೊಡಗಿಸಿ ಕೊಂಡಿರುವ ನಾಯ್ಡುರನ್ನು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಆಹ್ವಾನಿಸಿದ್ದ ರಾದರೂ ಅವರು ಹಾಜರಾಗಿಲ್ಲ.
ಟ್ರಂಪ್, ಟಿಲ್ಲರ್‌ಸನ್ ಶೀತಲ ಸಮರ
ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಹಾಗೂ ಟ್ರಂಪ್ ಮಧ್ಯೆ ನಡೆಯುತ್ತಿರುವ ತಿಕ್ಕಾಟ ಇದೀಗ ಇನ್ನೊಂದು ಹಂತ ತಲುಪಿದ್ದು, ಇವಾಂಕಾ ಜತೆಗೆ ವಿದೇಶಾಂಗ ಸಚಿವಾಲಯದ ಪ್ರಮುಖ ಅಧಿಕಾರಿಗಳು ಭೇಟಿ ನೀಡದೇ ಇರುವುದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಇವಾಂಕಾ ಜತೆಗೆ ಭಾರತಕ್ಕೂ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ. ಟ್ರಂಪ್ ನೀತಿಗಳು ಹಾಗೂ ನಿರ್ಧಾರಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟಿಲ್ಲರ್‌ಸನ್ ಉದ್ದೇಶಪೂರ್ವಕವಾಗಿ ಹಿರಿಯ ಅಧಿಕಾರಿಗಳಿಗೆ ಇವಾಂಕಾ ಜತೆ ತೆರಳದಂತೆ ನಿರ್ಬಂಧ ಹೇರಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.