ಲಷ್ಕರ್ ಉಗ್ರರನ್ನು ಬೆಳೆಸಿದ್ದು ನಾನೇ ಎಂದ ಮುಷರ್ರಫ್!
Team Udayavani, Nov 30, 2017, 6:00 AM IST
ಕರಾಚಿ: ಜಗತ್ತನ್ನೇ ಕಾಡುತ್ತಿರುವ ಉಗ್ರಗಾಮಿಗಳಿಗೆ ಪಾಕಿಸ್ಥಾನವೇ ನೀರು, ಆಹಾರ, ನೆಲೆ ನೀಡಿ ಪೋಷಿಸುತ್ತಿದೆ ಎಂಬ ವಾದಕ್ಕೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಪಾಕ್‌ನ ಉಗ್ರ ಸಂಘಟನೆಗಳಾದ ಲಷ್ಕರ್ -ಎ-ತಯ್ಯಬಾ ಮತ್ತು ಜಮಾತ್-ಉದ್ -ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ನಾನೇ ನನ್ನ ಕೈಯಾರೆ ಪೋಷಿಸಿ, ಬೆಳೆಸಿದೆ ಎಂದು ಮಾಜಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರ್ರಫ್ ಘಂಟಾ ಘೋಷವಾಗಿ ಒಪ್ಪಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಭಾರತದ ಸೇನೆಯನ್ನು ಹತ್ತಿಕ್ಕಲು ಈ ಉಗ್ರರಿಗೆ ನಾನು ಬೆಂಬಲ ನೀಡಿದ್ದೆ, ಈಗಲೂ ನೀಡುತ್ತೇನೆ ಎಂದು
ಟಿವಿ ಸಂದರ್ಶನವೊಂದರಲ್ಲಿ ಮುಷರ್ರಫ್ ಹೇಳಿಕೊಂಡಿದ್ದಾರೆ. ಕಾಶ್ಮೀರದ ಉಗ್ರ ಕೃತ್ಯಗಳಲ್ಲಿ ಸಯೀದ್ ತೊಡಗಿಸಿಕೊಂಡಿ ದ್ದಾರೆ. ಅದಕ್ಕೆ ನನ್ನ ಬೆಂಬಲವಿದೆ. ಲಷ್ಕರ್ ಹಾಗೂ ಜಮಾತ್-ಉದ್-ದಾವಾ ಉಗ್ರರು ನಮ್ಮ ಅತಿದೊಡ್ಡ ಬಲ. ಅಮೆರಿಕದ ಜತೆ ಸೇರಿ ಭಾರತವು ಅವರನ್ನು ಉಗ್ರರು ಎಂದು ಘೋಷಿಸಿದೆ ಎಂದಿದ್ದಾರೆ. ಆದರೆ ನಿಮ್ಮದೇ ಅವಧಿಯಲ್ಲಿ ಲಷ್ಕರ್ ಸಂಘಟನೆಯನ್ನು ನಿಷೇಧಿಸಲಾಗಿತ್ತು ಎಂದಿದ್ದಕ್ಕೆ, ವಿಭಿನ್ನ ಸನ್ನಿವೇಶದಲ್ಲಿ ಈ ಕ್ರಮ ಕೈಗೊಳ್ಳಬೇಕಾಯಿತು ಎಂದಿದ್ದಾರೆ.
ನನಗೆ ಲಷ್ಕರ್ ಮತ್ತು ಹಫೀಜ್ ಇಷ್ಟ ಎಂಬುದು ಅವರಿಗೆ ಗೊತ್ತಿದೆ. ಅವರ ಅತಿದೊಡ್ಡ ಬೆಂಬಲಿಗ ನಾನು. ಹಫೀಜ್ ಸಯೀದ್‌ನನ್ನು ನಾನು ಭೇಟಿಯಾಗಿದ್ದೇನೆ. ಕಾಶ್ಮೀರಕ್ಕಾಗಿ ಸಯೀದ್ ನಡೆಸುತ್ತಿರುವ ಹೋರಾಟವನ್ನು ಮತ್ತು ಭಾರತೀಯ ಸೇನೆಯನ್ನು ಕುಗ್ಗಿಸುವ ಕೆಲಸವನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ ಮುಷ್.
ಸಯೀದ್ ವಿಚಾರಣೆ ವಿಳಂಬ: ಉಗ್ರರ ಪಟ್ಟಿಯಿಂದ ಕೈಬಿಡುವಂತೆ ಹಫೀಜ್ ಸಯೀದ್ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದ್ದು, ಸಯೀದ್ ಅರ್ಜಿ ವಿಚಾರಣೆ ವಿಳಂಬ ವಾಗಲಿದೆ. ಈ ಸಂಬಂಧ ವಿಚಾರಣೆ ನಡೆಸಬೇಕಿರುವ ಒಂಬಡ್ಸ್ ಪರ್ಸನ್ ಹುದ್ದೆ ಖಾಲಿ ಇರುವುದರಿಂದ, ಈ ಹುದ್ದೆ ಭರ್ತಿಯಾಗುವವರೆಗೂ ಅರ್ಜಿ ಪರಿಶೀಲನೆ ನಡೆಯಲಾರದು. ಮುಂದಿನ ಕೆಲವು ತಿಂಗಳುಗಳಲ್ಲಿ ನೇಮಕಾತಿ ನಡೆದ ನಂತರ ಸಯೀದ್ ಅರ್ಜಿ ವಿಚಾರಣೆಗೆ ಕೈಗೊಳ್ಳಬಹುದಾಗಿದೆ ಎಂದು ವಿಶ್ವಸಂಸ್ಥೆಯೇ
ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.