ಮಾತೃಪೂರ್ಣಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ


Team Udayavani, Nov 30, 2017, 1:07 PM IST

h3-mathrupoorna.jpg

ಧಾರವಾಡ: ಮಾತೃಪೂರ್ಣ ಯೋಜನೆ ಜಾರಿಗೊಳಿಸಲು ಮೂಲಸೌಕರ್ಯ ಒದಗಿಸುವಂತೆ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್‌ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ನಗರದ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. 

ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೊಳಿಸಿ ಎರಡು ತಿಂಗಳು ಕಳೆದರೂ ಜಾರಿಗೂ ಪೂರ್ವದಲ್ಲಿ ನೀಡಬೇಕಿದ್ದ ಮೂಲಸೌಕರ್ಯಗಳನ್ನು ನೀಡಿಲ್ಲ. ಜೊತೆಗೆ ಕಾರ್ಯಕರ್ತೆಗೆ 500 ರೂ. ಹಾಗೂ ಸಹಾಯಕಿಯರಿಗೆ 250 ರೂ. ಗೌರವಧನ ನೀಡುವುದು ಸರಿಯಲ್ಲ. ಬಹುತೇಕ ನಗರ ಹಾಗೂ ಗ್ರಾಮೀಣ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಇದಕ್ಕೆ ಸರ್ಕಾರ ನಿಗದಿಪಡಿಸಿದ 3000 ರೂ. ಬಾಡಿಗೆ ಸಾಲದು. ಯೋಜನೆಗೆ ಸುಸಜ್ಜಿತ ಕಟ್ಟಡ, ಅಡುಗೆ ತಯಾರಿಸಲು ಪಾತ್ರೆ, ಕುಕ್ಕರ್‌, ಗ್ಯಾಸ್‌ ಸ್ಟೋವ್‌, ಸಿಲಿಂಡರ್‌, ನೀರು ಸಂಗ್ರಹಿಸುವ ಬ್ಯಾರಲ್‌ ಇತ್ಯಾದಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. 

ಗರ್ಭಿಣಿ-ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಿಸುವ ವ್ಯವಸ್ಥೆ ಇದ್ದು, ಮೊಟ್ಟೆ ಖರೀದಿಗೆ ಕಾರ್ಯಕರ್ತೆಯರಿಗೆ ಮುಂಗಡ ಹಣ ನೀಡದೆ, ಖರೀದಿಯ ನಂತರ ಹಣ ನೀಡಿದರೆ ಕಾರ್ಯಕರ್ತೆಯರು ದಿನವೂ ಹಣ ಎಲ್ಲಿಂದ ಹೊಂದಿಸಬೇಕು? ಆದ್ದರಿಂದ ಮೊಟ್ಟೆಗೆ 7 ರೂ.ಗಳಂತೆ ಮುಂಗಡ ಹಣ ಹಾಕುವಂತೆ ಒತ್ತಾಯಿಸಿದರು. 

ಫೆಡರೇಶನ್‌ ಜಿಲ್ಲಾಧ್ಯಕ್ಷ ನೂರಜಾನ್‌ ಸಮುದ್ರಿ ಮಾತನಾಡಿ, ಗ್ಯಾಸ್‌ ಲಿಂಡರ್‌ ಗೆ ಹಳೆಯ ದರ 500 ರೂ. ನೀಡುತ್ತಿದೆ. ಈಗ ಗ್ಯಾಸ್‌ ಬೆಲೆ 800 ರೂ. ಆಗಿದೆ. ವರ್ಷಕ್ಕೆ ನಾಲ್ಕು ಸಿಲಿಂಡರ್‌ ಬದಲು ಎಂಟು ಸಿಲಿಂಡರ್‌ ಹೆಚ್ಚಿಸಬೇಕು. ಮೊಟ್ಟೆ ಬೆಲೆ 5 ರೂ. ನೀಡುತ್ತಿತ್ತು. ಈಗ ಏಳು ರೂಪಾಯಿಗೆ ಏರಿದೆ. ಇದೆಲ್ಲ ಕಾರ್ಯಕರ್ತೆಯರಿಗೆ ಹೊರೆಯಾಗಲಿದೆ. 

ತರಕಾರಿ ಕೊಳ್ಳುವಲ್ಲಿಯೂ ಸಮಸ್ಯೆ ಆಗಿದೆ ಎಂದರು. ಒಂದು ಕೇಂದ್ರದಲ್ಲಿ 15-20 ಜನ ಫಲಾನುಭವಿ ಯೋಜನೆಗೆ ಒಳಪಡುತ್ತಾರೆ. ಓರ್ವರಿಗೆ 21 ರೂ. ನಿಗದಿಪಡಿಸಿದೆ. ಒಬ್ಬರಿಗೆ ರೂ.2ರಂತೆ ತರಕಾರಿ ಖರೀದಿಸಬೇಕು. ಇದರಲ್ಲಿ ಏನು ತರಲು ಸಾಧ್ಯ? ಈ ಸಮಸ್ಯೆ ನಡುವೆ ಹಣಕಾಸಿನ ವ್ಯವಹಾರಕ್ಕೆ ಬಾಲವಿಕಾಸ ಅಕ್ಯಾಡೆಮಿ ಕಮಿಟಿ ಹೆಸರಲ್ಲಿ ಜಂಟಿಖಾತೆ ತೆರೆಯುವುದು ಇನ್ನಷ್ಟು ಸಮಸ್ಯೆಯಾಗಲಿದೆ ಎಂದರು. 

ಫೆಡರೇಶನ್‌ ಪದಾಧಿಕಾರಿಗಳಾದ ವೀರಮ್ಮ ತುರಕಾಣಿ, ಎನ್‌.ಎ.ಖಾಜಿ, ಲತಿಪಾ ಬಾಗಲಕೋಟಿ, ಅಕ್ಕಮ್ಮ ಬಡ್ನಿ, ಸಾವಕ್ಕ ಕಮ್ಮಾರ, ಸಾವಿತ್ರಿ ಜೀವನಗೌಡ್ರ, ಎಸ್‌. ಹಾರೋಗೇರಿ, ಚನ್ನಕ್ಕ ಅಂಗಡಿ, ಐ.ಡಿ. ಸುಂಕದ, ಶಿವಗಂಗಾ ಹೆಬ್ಬಳ್ಳಿ, ಶಂಕ್ರಮ್ಮ ಹಿರೇಮಠ, ಗಿರಿಜಾ ಬಡಿಗೇರ, ನಿರ್ಮಲಾ ಕಲಕರ್ಣಿ ಇತರರಿದ್ದರು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.