ಹೋರಾಟದ ತಾರ್ಕಿಕ ಅಂತ್ಯಕ್ಕೆ ಡಾ| ಸ್ವಾಮಿ ಬೆಂಬಲ: ನಾಚಪ್ಪ ವಿಶ್ವಾಸ
Team Udayavani, Nov 30, 2017, 3:44 PM IST
ಮಡಿಕೇರಿ: ರಾಜ್ಯಸಭಾ ಸದಸ್ಯರಾದ ಡಾ| ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ನ್ಯಾಷನಲ್ ಕೌನ್ಸಿಲ್‌ನ ನಿರಂತರ ಹೋರಾಟವನ್ನು ಅಧ್ಯಯನ ಮಾಡಿ ನಮ್ಮ ಬೇಡಿಕೆಗೆ ಬೆಂಬಲ ಸೂಚಿಸಿದ್ದು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 26ರಂದು ನಡೆದ ಕೊಡವ ನ್ಯಾಷನಲ್ ಕೌನ್ಸಿಲ್‌ನ ಕೊಡವ ನ್ಯಾಷನಲ್ ಡೇ ಯಶಸ್ವಿಯಾಗಲು ಕಾರಣಕರ್ತರಾದ ಡಾ| ಸುಬ್ರಮಣಿಯನ್ ಸ್ವಾಮಿ, ವಿರಾಟ್ ಹಿಂದೂ ಸಂಗಮದ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಸಹಿತ ಸರ್ವರಿಗೆ ವಂದನೆ ಅರ್ಪಿಸುವುದಾಗಿ ತಿಳಿಸಿದರು.
ಸಿಎನ್‌ಸಿ ಬೇಡಿಕೆಗಳ ಈಡೇರಿಕೆಗೆ ನೂರು ದಿನ, ನೂರು ವರ್ಷಗಳ ಹೋರಾಟವಾದರೂ ಅದನ್ನು ಕೈಬಿಡುವುದಿಲ್ಲವೆಂದು ಸ್ಪಷ್ಟಪಡಿಸಿದ ನಾಚಪ್ಪ, ಇಸ್ರೇಲ್‌ನ ಯಹೂದಿ ಜನಾಂಗ 2000 ವರ್ಷಗಳಿಂದ ತಮ್ಮ ಜನ್ಮ ಭೂಮಿಯನ್ನು ಮರಳಿ ಪಡೆಯಲು ಸಹನೆಯಿಂದ ಕಾಯಬೇಕಾಯಿತು. ಗೂರ್ಖಾ ಸಮುದಾಯದ ಹೋರಾಟ ಇಂದಿಗೂ ತಾರ್ಕಿಕ ಅಂತ್ಯವನ್ನು ಕಾಣದೆ ಮುಂದುವರಿಯುತ್ತಿದೆ ಎಂದು ಉಲ್ಲೇಖೀಸಿದರು. ಸಿಎನ್‌ಸಿ ಕೂಡ ತನ್ನ ಹೋರಾಟದ ಗುರಿ ಮುಟ್ಟಲು ಶಾಂತಿ, ಸಹನೆ, ದೃಢ ಸಂಕಲ್ಪ ಮತ್ತು ಏಕಾಗ್ರತೆಯಿಂದ ಮುನ್ನಡೆಯುತ್ತಿದೆ. ಮುಂದೊಂದು ದಿನ ಜಯ ನಮ್ಮದಾಗಲಿದೆ ಎನ್ನುವ ಆಶಾಭಾವನೆ ನಮಗಿದ್ದು, ಇದಕ್ಕೆ ಡಾ| ಸುಬ್ರಮಣಿಯನ್ ಸ್ವಾಮಿ ಇಂಬು ನೀಡಿದ್ದಾರೆ ಎಂದರು.
ನಮ್ಮ ಹೋರಾಟದ ಫಲದಿಂದ ಜಿಲ್ಲೆಯಲ್ಲಿರುವ ಎಲ್ಲರೂ ಲಾಭ ಪಡೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟ ಎನ್.ಯು. ನಾಚಪ್ಪ, ಸಿಎನ್‌ಸಿಯದ್ದು ಜೋಕರ್ ಹೋರಾಟವಲ್ಲವೆಂದು ಸ್ಪಷ್ಟಪಡಿಸಿದರು. ನೆಮ್ಮದಿಯ ಬದುಕೆಂದರೆ ಗಡಿಯಲ್ಲಿ ದೇಶವನ್ನು ಕಾಯ್ದು ಬಂದ ಸೈನಿಕರು, ನಿವೃತ್ತಿ ಸಂದರ್ಭ ನಿವೃತ್ತಿ ವೇತನ ಪಡೆಯುವುದು ಅಲ್ಲವೆಂದ ಅಭಿಪ್ರಾಯಪಟ್ಟ ಅವರು, ಪ್ರತಿಯೊಬ್ಬರಿಗೂ ನೆಮ್ಮದಿಯ ಬದುಕನ್ನು ದೊರಕಿಸಿಕೊಡುವ ಉದ್ದೇಶದಿಂದ ಸಿಎನ್‌ಸಿ ನಿರಂತರ ಹೋರಾಟ ನಡೆಸುತ್ತಿದೆ ಎಂದರು.
ಕೊಡವಲ್ಯಾಂಡ್‌ಗೆ ಆದ್ಯತೆ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎನ್.ಯು. ನಾಚಪ್ಪ, ಕೊಡವ ಲ್ಯಾಂಡ್ ಬೇಡಿಕೆ ಸಿಎನ್‌ಸಿಯ ಮೊದಲ ಆದ್ಯತೆಯಾಗಿದ್ದು, ಜಾತಿ, ಜನಾಂಗ, ಧರ್ಮವನ್ನು ಮೀರಿ ಎಲ್ಲ ಸಮುದಾಯದವರ ಒತ್ತಾಸೆ ಯಿದ್ದರೆ ಕೇಂದ್ರಾಡಳಿತ ಪ್ರದೇಶದ ಬೇಡಿಕೆಗೆ ಒತ್ತಾಯಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಟುಮಣಿ ಯಂಡ ಉಮೇಶ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.