ಮುಕ್ವೆ ತೋಡಿನಲ್ಲಿ ಮಾಂಸ ತ್ಯಾಜ್ಯ: ಬಾವಿ ನೀರೂ ಮಲಿನ


Team Udayavani, Nov 30, 2017, 4:44 PM IST

30-Nov-16.jpg

ಮುಕ್ವೆ: ನೀರು ಹರಿವ ತೋಡು ಊರಿಗೇ ಶೋಭೆ ಎಂಬ ಕಾಲವೊಂದಿತ್ತು. ಆದರೆ ಹಳ್ಳಿಗಳು ಪಟ್ಟಣವಾಗುತ್ತಿದ್ದಂತೆ ತೋಡು ತನ್ನ ಜೀವಂತಿಕೆಯನ್ನು ಕಳೆದು ಕೊಳ್ಳಲು ಪ್ರಾರಂಭಿಸಿದೆ. ಕಾರಣ, ತ್ಯಾಜ್ಯ, ಕೊಳಚೆ ನೀರು ತೋಡು ಸೇರುತ್ತಿರುವುದು. ಮುಕ್ವೆಯ ಚಂದ್ರಮ್‌ಸಾಂಗ್‌ ನಿವಾಸಿಗಳು ಇಂತಹ ಸಮಸ್ಯೆಯಿಂದ ಪ್ರತಿನಿತ್ಯ ಹಿಂಸೆ ಅನುಭವಿಸುತ್ತಿದ್ದಾರೆ.

ತೋಡಿನ ನೀರು ಮಕ್ಕಳ ನೀರಾಟದ ಒಂದು ಪ್ರದೇಶ. ತೋಟಕ್ಕೆ ನೀರು ಒದಗಿಸಬಲ್ಲ ಕೆರೆ, ಬಾವಿಗಳನ್ನು ಭರ್ತಿ ಮಾಡಬಲ್ಲ ಒಂದು ಆಕರ. ತೋಡಿನಲ್ಲಿ ಹರಿಯುವ ನೀರನ್ನು ನಿಲ್ಲಿಸಿಕೊಂಡರೆ ಫೆಬ್ರವರಿವರೆಗೆ ನೀರಿಗೆ ಕೊರತೆಯಿಲ್ಲ. ಅದು ಸಣ್ಣ ಮೀನುಗಳ ಆಶ್ರಯ ತಾಣವೂ ಹೌದು. ಆದರೆ ಇಂದು ತೋಡು ಎಂದರೆ ಕಸದ ತೊಟ್ಟಿ ಎಂಬಂತಾಗಿದೆ. ಮನೆ, ಫ್ಲ್ಯಾಟ್‌ನ ಕಲುಷಿತ ನೀರು ಬಿಡುವ ಚರಂಡಿಯಾಗಿ ಮಾರ್ಪಟ್ಟಿದೆ. ಮಾಂಸದ ಅಂಗಡಿ, ಮನೆಗಳ ತ್ಯಾಜ್ಯವನ್ನು ಎಸೆದು ಹೋಗುವ ತ್ಯಾಜ್ಯದ ಕೊಂಪೆಯಾಗಿಯೂ ಬಳಕೆಯಾಗುತ್ತಿದೆ. ಇದರಿಂದ ಸಮಸ್ಯೆ ಅನುಭವಿಸುವುದು ಸ್ಥಳೀಯರು.

ನೀರು ಹೊತ್ತು ತರಬೇಕು
ಪುತ್ತೂರು- ಕಾಣಿಯೂರು ರಸ್ತೆಯ ಮುಕ್ವೆ ಸಮೀಪದ ಚಂದ್ರಮ್‌ಸಾಂಗ್‌ ಪ್ರದೇಶದಲ್ಲಿ ತೋಡು ಹರಿದು ಹೋಗುತ್ತಿದೆ. ಈ ತೋಡಿನ ಸ್ವಚ್ಛಂದ  ಹರಿವಿಗೆ ಕೆಲವರು ಅಡ್ಡಿ ಮಾಡುತ್ತಿರುವುದರಿಂದ ತೋಡಿನ ಬದಿಯ ಹಾದಿಯಲ್ಲಿ ಸಾಗುವಾಗ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ಇದನ್ನು ಸಹಿಸಿಕೊಂಡೇ ಸ್ಥಳೀಯರು ಜೀವನ ನಡೆಸಬೇಕು. ಆಸುಪಾಸಿನ ಬಾವಿ, ಕೆರೆಗಳು ಕಲುಷಿತಗೊಂಡಿವೆ. ಕುಡಿಯಲು ನೀರು ಸಿಗದೆ, ಎಷ್ಟೋ ದೂರದಿಂದ ಹೊತ್ತು ತರಬೇಕಾದ ಸ್ಥಿತಿಯಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್‌ ಹಾಗೂ ತಾಲೂಕು ಆರೋಗ್ಯಾಧಿಕಾರಿಯ ಗಮನ ಸೆಳೆಯಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ್ದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ ಎಂದು ಸ್ಥಳೀಯರಾದ ಸುಮಿತ್ರಾ ನಾಯಕ್‌ ಅಳಲು ತೋಡಿಕೊಂಡಿದ್ದಾರೆ.

ಮಾಂಸ ತ್ಯಾಜ್ಯ
ಚಂದ್ರಮ್‌ಸಾಂಗ್‌ ಬಳಿ ಹರಿಯುವ ತೋಡಿಗೆ ಮಾಂಸ ತುಂಬಿದ ಪ್ಲಾಸ್ಟಿಕ್‌ ತೊಟ್ಟೆಗಳನ್ನು ಎಸೆಯಲಾಗುತ್ತಿದೆ. ಇದು ಮಾಂಸದ ಅಂಗಡಿ ಗಳವರ ಕೆಲಸ ಎಂದು ಸ್ಥಳೀಯರು ದೂರಿದ್ದಾರೆ. ಈ ಮಾಂಸ ನಾಯಿ- ಕಾಗೆಗಳ ಆಹಾರವಾಗಿದೆ. ಅವು ತ್ಯಾಜ್ಯವನ್ನು ಸ್ಥಳೀಯ ಮನೆಗಳ ಬಾಗಿಲಿಗೆ ಎಳೆದು ತಂದು ಹಾಕುತ್ತಿವೆ. ಹರಿಯುವ ನೀರು ನಿರ್ಮಲ ಎಂಬ ಮಾತೇ ಇದೆ. ಆದರೆ ಇಲ್ಲಿ ಹರಿಯುವ ನೀರನ್ನು ಕಾಲಿನಿಂದ ಮುಟ್ಟುವುದಕ್ಕೂ ಭಯವಾಗುತ್ತಿದೆ. ಕಾರಣ, ಕೊಳಚೆ ನೀರು, ಪ್ಲಾಸ್ಟಿಕ್‌, ತ್ಯಾಜ್ಯ, ಮಾಂಸ ತ್ಯಾಜ್ಯ ತೋಡಿನ ಒಡಲನ್ನು ತುಂಬುತ್ತಿದೆ. ಇನ್ನೊಂದು ಡಂಪಿಂಗ್‌ ಯಾರ್ಡ್‌ ಆಗಿ ಪರಿಣಮಿಸಿದ್ದು, ರೋಗಭೀತಿ ಆವರಿಸಿದೆ.

ಪರಿಶೀಲಿಸಲಾಗುವುದು
ಸ್ಥಳೀಯರು ಮನವಿ ನೀಡಿದ ಬಳಿಕ, ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸಾಂಕ್ರಾಮಿಕ ರೋಗ ಹರಡುವ ಎಚ್ಚರಿಕೆಯನ್ನು ಸ್ಥಳೀಯರಿಗೆ ನೀಡಿದ್ದೇನೆ. ಸ್ಥಳೀಯ ಕೋಳಿ ಫಾರ್ಮ್ ಗೆ ಪರವಾನಿಗೆ ನೀಡದಂತೆ ಸ್ಥಳೀಯಾಡಳಿತಕ್ಕೆ ಸೂಚಿಸಿದ್ದೇನೆ. ಈಗಿನ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಲಾಗುವುದು.
ಡಾ| ಅಶೋಕ್‌ ಕುಮಾರ್‌ ರೈ,
   ತಾಲೂಕು ಆರೋಗ್ಯಾಧಿಕಾರಿ

ಉಲ್ಬಣಿಸಿದ ಸಮಸ್ಯೆ: ರೋಗಭೀತಿ
ಚಂದ್ರಮ್‌ಸಾಂಗ್‌ ಹಾಗೂ ತೋಡು ಹರಿದು ಹೋಗುವ ಹಾದಿಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಈ ಮನೆಗಳಿಗೆ ಕೆಟ್ಟ ವಾಸನೆ, ರೋಗಭೀತಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಳೆದ 2-3 ವರ್ಷಗಳಿಂದ ಸಮಸ್ಯೆ ಉಲ್ಬಣಿಸಿದೆ. ಮೊದಲು ಇದೇ ತೋಡಿನಲ್ಲಿ ಮಕ್ಕಳು ಆಟವಾಡುತ್ತಿದ್ದರು. ಇದೀಗ ನೀರಿಗೆ ಇಳಿಯಲು ಭಯವಾಗುತ್ತಿದೆ.
ಸಂತೋಷ್‌ ನಾಯಕ್‌,
   ಚಂದ್ರಮ್‌ಸಾಂಗ್‌

 ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ: ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅಮಾನತು

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ… ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಮಾನತು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(2)

Vitla ಸಂಪರ್ಕದ ರಾಜ್ಯ, ಅಂತಾರಾಜ್ಯ ರಸ್ತೆಗಳಲ್ಲೆಲ್ಲ ಹೊಂಡ

1(1)

Bantwala: ಹೆದ್ದಾರಿಯಂಚಿನ ನಿವಾಸಿಗಳ ನರಕ ಯಾತನೆ

6

Vitla: ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

mng-Rain

Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ

2

Puttur: ಐನ್ನೂರು ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲೀಗ ನಲ್ವತ್ತೇ ವಿದ್ಯಾರ್ಥಿಗಳು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

12

Chikkamagaluru: ಭಾರೀ ಮಳೆ; ರಸ್ತೆ ಕಾಣದೆ ಕಾರುಗಳು ಮುಖಾಮುಖಿ ಡಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.