2 ದಶಕದಲ್ಲೇ ಮೊದಲ ಸಾಧನೆ:ಚಾನುಗೆ ವಿಶ್ವ ವೇಟ್ ಲಿಫ್ಟಿಂಗ್ ಕಿರೀಟ
Team Udayavani, Nov 30, 2017, 4:55 PM IST
ಹೊಸದಿಲ್ಲಿ : ಅಮೆರಿಕದ ಆ್ಯನ್‌ಹೀಮ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪ್ಯನ್‌ಶಿಪ್‌ನಲ್ಲಿ ಭಾರತದ ಮಿರಾಬಾಯಿ ಚಾನು ಅವರು ಕಳೆದ ಎರಡು ದಶಕಗಳಲ್ಲೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಮೊತ್ತ ಮೊದಲ ಭಾರತೀಯಳೆಂಬ ಅತ್ಯಪೂರ್ವ ಸಾಧನೆಯನ್ನು ಇಂದು ಗುರುವಾರ ಮಾಡಿದ್ದಾರೆ.
ಈ ಸಾಧನೆಯ ಮೂಲಕ ಮೀರಾಬಾಯಿ ಅವರು ರಯೋ ಒಲಿಂಪಿಕ್ಸ್‌ನಲ್ಲಿನ ತನ್ನ ವೈಫಲ್ಯವನ್ನು ಮರೆಯುವಂತೆಯೂ ಮಾಡಿದ್ದಾರೆ.
ಭಾರತೀಯ ರೈಲ್ವೇಸ್ ನಲ್ಲಿ ಉದ್ಯೋಗಿಯಾಗಿರುವ ಚಾನು, ಮಹಿಳೆಯರ 48 ಕೆಜಿ ವಿಭಾಗದಲ್ಲಿ ಸ್ನ್ಯಾಚ್ ನಲ್ಲಿ 85 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ ಒಟ್ಟು 194 ಕೆಜಿ ಭಾರ ಎತ್ತುವ ಸಾಧನೆ ಮಾಡಿ ಚಿನ್ನದ ಪದಕ ಗೆಲ್ಲುವ ಸಾಧನೆ ಮಾಡಿದರು. ಆ ಮೂಲಕ ಆಕೆ ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು.
ತ್ರಿವರ್ಣ ಧ್ವಜ ಹಾರುವುದನ್ನು ಪೋಡಿಯಂ ನಿಂದ ಕಂಡ ಚಾನು ಅವರ ಕಣ್ಣುಗಳು ತುಂಬಿ ಬಂದವು. ಮಾರ್ಕ್‌ವೀ ಈವೆಂಟ್‌ನಲ್ಲಿ ಭಾರತೀಯಳಾಗಿ ಅತ್ಯಪರೂಪದ ಗೌರವ ಪಡೆದ ಸಾಧನೆ ಚಾನು ಅವರದ್ದಾಗಿದೆ.
ಒಲಿಂಪಿಕ್ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ ಅವರು 1994 ಮತ್ತು 1995ರಲ್ಲಿ ಎರಡು ಬಾರಿ ವಿಶ್ವದ ಈ ಅತ್ಯುನ್ನತ ಬಹುಮಾನವನ್ನು ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.