ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ ಮೀರಾಬಾೖ ಚಾನು ಬಂಗಾರದ ಮಿಂಚು


Team Udayavani, Dec 1, 2017, 6:45 AM IST

Saikhom-Mirabai-Chanu.jpg

ಅನಾಹೀಮ್‌ (ಯುಎಸ್‌ಎ): ಅಮೆರಿಕದ ಅನಾಹೀಮ್‌ನಲ್ಲಿ ನಡೆಯುತ್ತಿರುವ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೈಕೋಮ್‌ ಮೀರಾಬಾೖ ಚಾನು ಬಂಗಾರದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರ ಸಾಧನೆಗೆ ಪ್ರಧಾನಿ, ರಾಷ್ಟ್ರಪತಿ, ಕ್ರೀಡಾ ಸಚಿವರ ಸಹಿತ ದೇಶದ ಕ್ರೀಡಾಭಿಮಾನಿಗಳು ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

ವನಿತೆಯರ 48 ಕೆಜಿ ದೇಹತೂಕ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾೖ ಬಂಗಾರದಿಂದ ಸಿಂಗಾರಗೊಂಡರು. ಸ್ನ್ಯಾಚ್‌ನಲ್ಲಿ 85 ಕೆಜಿ, ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 109 ಕೆಜಿ ಸಹಿತ ಒಟ್ಟು 194 ಕೆಜಿ ಭಾರ ಎತ್ತುವ ಮೂಲಕ ಅವರು ಐತಿಹಾಸಿಕ ಸಾಧನೆಗೈದರು. ಇದು ನೂತನ ರಾಷ್ಟ್ರೀಯ ದಾಖಲೆಯಾಗಿದೆ. ಕಳೆದೆರಡು ದಶಕಗಳ ಅವಧಿಯಲ್ಲಿ ಭಾರತದ ವನಿತಾ ಸ್ಪರ್ಧಿಯೊಬ್ಬರು ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಮೊದಲ ಬಂಗಾರದ ಪದಕ ಇದೆಂಬುದು ವಿಶೇಷ. ಇದರೊಂದಿಗೆ ಕಳೆದ ರಿಯೋ ಒಲಿಂಪಿಕ್ಸ್‌ ವೈಫ‌ಲ್ಯವನ್ನು ಅವರು ಹೊಡೆದೋಡಿಸಿದರು. ಥಾಯ್ಲೆಂಡಿನ ಸುಖರೋನ್‌ ಥುನ್ಯಾ ಬೆಳ್ಳಿ (193 ಕೆಜಿ) ಮತ್ತು ಕೊಲಂಬಿಯಾದ ಸೆಗುರಾ ಅನಾ (182 ಕೆಜಿ) ಕಂಚಿನ ಪದಕ ಗೆದ್ದರು.

ಕೋಚ್‌ ಮಾರ್ಗದರ್ಶನ
“ಇದೊಂದು ಮಹಾನ್‌ ಸಾಧನೆ. ಕೋಚ್‌ ವಿಜಯ್‌ ಶರ್ಮ ಅವರ ಮಾರ್ಗದರ್ಶನ ಇಲ್ಲದೇ ಇರುತ್ತಿದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಉನ್ನತ ಯಶಸ್ಸು ಗಳಿಸುವ ಯತ್ನದಲ್ಲಿ ನಾನು ಮತ್ತು ನನ್ನ ಕೋಚ್‌ ತೆರೆದು ನೋಡದ ಬಾಗಿಲುಗಳೇ ಇರಲಿಲ್ಲ. ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದೇ ಹೋದಾಗ ನಾನು ಬಹಳ ನಿರಾಶಳಾಗಿದ್ದೆ. ಅಲ್ಲಿ ನಾನೆಸಗಿದ ಸಣ್ಣ ತಪ್ಪು ಕಾಡುತ್ತಲೇ ಇತ್ತು. ಈ ಪದಕ ರಿಯೋ ನೋವನ್ನು ಮರೆಸಲಿದೆ. ನನ್ನ ದೌರ್ಬಲ್ಯಗಳನ್ನೆಲ್ಲ ಹೋಗಲಾಡಿಸಿಕೊಂಡು ಮುಂಬರುವ ಕಾಮನ್ವೆಲ್ತ್‌ ಗೇಮ್ಸ್‌, ಏಶ್ಯನ್‌ ಗೇಮ್ಸ್‌ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಪ್ರಯತ್ನಿಸಲಿದ್ದೇನೆ’ ಎಂದು 2014ರ ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತೆ ಮೀರಾಭಾç ಸಂಭ್ರಮದಿಂದ ನುಡಿದರು.

ಮಣಿಪುರದ ಸಾಧಕಿ
ಮಣಿಪುರದವರಾದ, 23ರ ಹರೆಯದ ಮೀರಾಬಾೖ ಚಾನು ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. 2014 ಮತ್ತು 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾೖ ಕ್ರಮವಾಗಿ 11ನೇ ಹಾಗೂ 9ನೇ ಸ್ಥಾನ ಪಡೆದಿದ್ದರು. 2 ತಿಂಗಳ ಹಿಂದೆ ಆಸ್ಟ್ರೇಲಿಯದಲ್ಲಿ ನಡೆದ ಸೀನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮೀರಾಬಾೖ ಮುಂದಿನ ಕಾಮನ್ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಸಂಪಾದಿಸಿದ್ದರು.

“24 ವರ್ಷಗಳ ಕಾಯುವಿಕೆ ಬಳಿಕ ಭಾರತಕ್ಕೆ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಒಲಿದಿದೆ. ಇದೊಂದು ಮಹಾನ್‌ ಸಾಧನೆ. ಏಕೆಂದರೆ ಇದು ಒಲಿಂಪಿಕ್ಸ್‌ಗೂ ಕಠಿನವಾದ ಸ್ಪರ್ಧೆ’ ಎಂದು ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಶನ್‌ ಕಾರ್ಯದರ್ಶಿ ಸಹದೇವ್‌ ಯಾದವ್‌ ಪ್ರತಿಕ್ರಿಯಿಸಿದ್ದಾರೆ.

ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ 2 ಸಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರಕ್ಕೆ ಕೊರಳೊಡ್ಡಿದ್ದರು (1994, 1995). 1989-99ರ ಅವಧಿಯಲ್ಲಿ ಕುಂಜರಾಣಿ ದೇವಿ ಇದೇ ಕೂಟದಲ್ಲಿ 7 ಪದಕ ಗೆದ್ದಿದ್ದರೂ ಅವರಿಗೆ ಬಂಗಾರ ಒಲಿದಿರಲಿಲ್ಲ.

ಟಾಪ್ ನ್ಯೂಸ್

Rain: ಇಂದಿನಿಂದ 3 ದಿನ ರಾಜ್ಯದ ವಿವಿಧೆಡೆ ಮಳೆ ಬೀಳುವ ಸಾಧ್ಯತೆ

Rain: ಇಂದಿನಿಂದ 3 ದಿನ ರಾಜ್ಯದ ವಿವಿಧೆಡೆ ಮಳೆ ಬೀಳುವ ಸಾಧ್ಯತೆ

Kharge’s mother, sister victims of violence by Razakars: Yogi takes revenge

Maha Election: ರಜಾಕಾರರ ಹಿಂಸೆಗೆ ಖರ್ಗೆ ತಾಯಿ, ಸಹೋದರಿ ಬಲಿ: ಯೋಗಿ ತಿರುಗೇಟು

Saffron is the color of God: Rambhadracharya’s speech against Kharge

Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

Melkar-Tjam

Bantwala: ಮೆಲ್ಕಾರ್‌-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Waqf Board Eyeing 400 Acre Land in Ernakulam: Allegation

Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ

election

By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli on the cover of Aussie magazine

BGT 2024: ಆಸೀಸ್‌ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ

women asian hockey champions trophy; India demolished South Korea

Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ

ATP Rankings; Sinner won year-end No.1 rank trophy

ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್‌ ಟ್ರೋಫಿ

champions trophy 2025

ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್‌ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ

Mohammed Shami finally returned to professional cricket

Shami: ಕೊನೆಗೂ ವೃತ್ತಿಪರ ಕ್ರಿಕೆಟ್‌ ಗೆ ಮರಳಿದ ಮೊಹಮ್ಮದ್‌ ಶಮಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Rain: ಇಂದಿನಿಂದ 3 ದಿನ ರಾಜ್ಯದ ವಿವಿಧೆಡೆ ಮಳೆ ಬೀಳುವ ಸಾಧ್ಯತೆ

Rain: ಇಂದಿನಿಂದ 3 ದಿನ ರಾಜ್ಯದ ವಿವಿಧೆಡೆ ಮಳೆ ಬೀಳುವ ಸಾಧ್ಯತೆ

Kharge’s mother, sister victims of violence by Razakars: Yogi takes revenge

Maha Election: ರಜಾಕಾರರ ಹಿಂಸೆಗೆ ಖರ್ಗೆ ತಾಯಿ, ಸಹೋದರಿ ಬಲಿ: ಯೋಗಿ ತಿರುಗೇಟು

Saffron is the color of God: Rambhadracharya’s speech against Kharge

Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ

congress leader Nana Patole compared BJP to a dog: Criticism

Mumbai: ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.