ವಾಹನಗಳಲ್ಲಿ ನಾಮಫಲಕ ವಿರುದ್ಧ ವಿಶೇಷ ಅಭಿಯಾನ
Team Udayavani, Dec 1, 2017, 7:27 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಬ್ಯಾಂಕ್ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಖಾಸಗಿ ವಾಹನಗಳಲ್ಲಿ “ಭಾರತ ಸರಕಾರ’ ಎಂದು ನಾಮ ಫಲಕ ಅಳವಡಿಸಲಾಗಿದೆ. ಜತೆಗೆ ಖಾಸಗಿ ವಾಹನಗಳಲ್ಲಿ ಸಂಘಟನೆ, ಸಂಸ್ಥೆಗಳ ನಾಮಫಲಕ ಹಾಕಲಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ವಿಶೇಷ ಅಭಿಯಾನ ನಡೆಸುವ ಮೂಲಕ ಅದನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ಗುರು ವಾರ ನಡೆದ ಸಾರಿಗೆ ಅದಾಲತ್‌ನ ಅಧ್ಯಕ್ಷತೆ ವಹಿಸಿದ್ದ ಅವರು, ಅಹವಾಲು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದರು. ಕಾಯ್ದೆಯಂತೆ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ನಾಮಫಲಕ ಹಾಕುವಂತಿಲ್ಲ. ನಾಮ ಫಲಕ ತೆಗೆಸಲು ವಿಶೇಷ ಅಭಿಯಾನ ನಡೆಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಇನ್ಶೂರೆನ್ಸ್ ಇಲ್ಲದಿದ್ದರೆ ವಾಹನ ಆರ್‌ಟಿಒ ವಶಕ್ಕೆ
ಬಹುತೇಕ ದ್ವಿಚಕ್ರವಾಹನಗಳು ಇನ್ಶೂರೆನ್ಸ್ ಇಲ್ಲದೆ ಓಡಾಟ ನಡೆಸುತ್ತಿವೆ. ಈ ಬಗ್ಗೆ ಸೂಕ್ತ ತಪಾಸಣೆ ಹಾಗೂ ಕ್ರಮ ಅಗತ್ಯ ಎಂದು ಸಭೆಯಲ್ಲಿ ಜಿ.ಕೆ. ಭಟ್ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಪಾಟೀಲ್, ವಾಹನ ಗಳಿಗೆ ಇನ್ಶೂರೆನ್ಸ್ ಕಡ್ಡಾಯ ಇಲ್ಲವಾದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯುವ ಅಧಿಕಾರ ಆರ್‌ಟಿಒ ಅಧಿಕಾರಿಗಳಿಗೆ ಇದೆ ಎಂದರು. ಖಾಸಗಿ ಕಾರುಗಳು ಪಾಂಡಿಚೇರಿ ರಿಜಿಸ್ಟ್ರೇಶನ್ ಮೂಲಕ ನಕಲಿ ವಿಳಾಸ ನೀಡಿ ರಾಜ್ಯ ಸರಕಾರಕ್ಕೆ ತೆರಿಗೆ ವಂಚಿಸುತ್ತಿವೆ ಎಂದು ಆಕ್ಷೇಪ ಮನವಿ ಸಲ್ಲಿಸಿದ ಜಿ.ಕೆ. ಭಟ್, ಬಸ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿದ್ದರೂ ಪಾಲಿಸಲಾಗುತ್ತಿಲ್ಲ ಎಂದು ದೂರಿದರು. ಬಸ್‌ಗಳಲ್ಲಿ ಪ್ರಯಾಣದ ಸ್ಥಳಗಳ ಕುರಿತು ಕನ್ನಡದಲ್ಲಿಯೇ ಕಡ್ಡಾಯವಾಗಿ ಬೋರ್ಡ್ ಹಾಕಲು ಸೂಚಿಸಲಾಗಿದ್ದು, ಖಾಸಗಿ ಬಸ್‌ಗಳ ಮಾಲಕರು ಕೂಡ ಇದಕ್ಕೆ ಸಹ ಕರಿಸ ಬೇಕು ಎಂದು ಹೇಳಿದರು.
ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳ ಸುಗಮ ಪ್ರಯಾಣದ ದೃಷ್ಟಿಯಿಂದ ಬಸ್‌ಗಳ ಫುಟ್‌ಬೋರ್ಡ್‌ಗಳನ್ನು 52 ಸೆಂ.ಮೀ. ಎತ್ತರಕ್ಕೆ ಸೀಮಿತಗೊಳಿಸುವಂತೆ ಕೆಲವು ತಿಂಗಳ ಹಿಂದಿನ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಪಾಲನೆ ಯಾಗಿಲ್ಲ ಎಂಬ ದೂರಿಗೆ, ಎಸಿಪಿ (ಸಂಚಾರ) ಮಂಜುನಾಥ್ ಪ್ರತಿಕ್ರಿಯಿಸಿ, ಪ್ರತಿನಿತ್ಯ ಈ ಬಗ್ಗೆ ಬಸ್‌ಗಳ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಹಿರಿಯ ಪರಿಸರವಾದಿ, ಸಾಹಿತಿ ಬಿ.ಎಸ್. ಹಸನಬ್ಬ ಮನವಿ ಸಲ್ಲಿಸಿ, ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರುವುದನ್ನು ಕಡ್ಡಾಯ ಗೊಳಿಸ ಬೇಕು. 15 ವರ್ಷ ಮೇಲ್ಪಟ್ಟ ಬಸ್‌ಗಳ ಸಂಚಾರ ವನ್ನು ನಿಲ್ಲಿಸಬೇಕು. ಬಸ್‌ಗಳ ಹಳೆಯ ಟಯರ್‌ಗಳನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಗಳಲ್ಲಿ ಬಾಡಿಗೆ ನಡೆಸುತ್ತಿರುವುದರಿಂದ ತೊಂದರೆಯಾಗುತ್ತಿವೆ. ಮಾತ್ರವಲ್ಲದೆ, ಒಬ್ಬ ವ್ಯಕ್ತಿ ಎರಡೆರಡು ರಿಕ್ಷಾ ಪರ್ಮಿಟ್ ಪಡೆದಿರುವ ಕುರಿತು ದೂರು ಸಲ್ಲಿ ಸಿದ್ದರೂ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.