ಮಣಿಪಾಲದಲ್ಲಿ ಅಯ್ಯಂಗಾರ್‌ ಯೋಗ ಕಾರ್ಯಾಗಾರ


Team Udayavani, Dec 1, 2017, 9:19 AM IST

01-10.jpg

ಉಡುಪಿ: ವಿಶ್ವವಿಖ್ಯಾತ ಯೋಗಾಚಾರ್ಯ ಬಿಕೆಎಸ್‌ ಅಯ್ಯಂಗಾರ್‌ ಅವರ ಜನ್ಮ ಶತಮಾನೋತ್ಸವವನ್ನು ಈ ವರ್ಷ ಆಚರಿಸಲಾಗುತ್ತಿದ್ದು, ಇದರ ಮೊದಲ ಕಾರ್ಯಕ್ರಮವಾಗಿ ಮಣಿಪಾಲ-ಪೆರಂಪಳ್ಳಿಯ “ಅಥ ಇತಿ ಯೋಗ ಕೇಂದ್ರ’ ವು ಡಿಸೆಂಬರ್‌ 9 ಮತ್ತು 10ರಂದು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಎರಡು ದಿನಗಳ “ಅಯ್ಯಂಗಾರ್‌ ಯೋಗ’ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಬಿಕೆಎಸ್‌ ಅಯ್ಯಂಗಾರ್‌ ಅವರ ಶಿಷ್ಯೆ ಶೋಭಾ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಾಗಾರದಲ್ಲಿ ಚಿಕ್ಕಮಗಳೂರು, ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸಕ್ತರು ಭಾಗವಹಿಸಬಹುದಾಗಿದೆ.
ಯೋಗಾಭ್ಯಾಸದ ಕುರಿತು ಆರಂಭಿಕ ಜ್ಞಾನವುಳ್ಳವರು, ಈಗಾಗಲೇ ಯೋಗಾಭ್ಯಾಸದಲ್ಲಿ ನಿರತರಾಗಿರುವ ಅನುಭವಿಗಳು ಇದರಲ್ಲಿ  ಪಾಲ್ಗೊಳ್ಳಬಹುದಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಮುಕ್ತ ಅವಕಾಶವಿದೆ. “ಕರೆಕ್ಟ್ ಎಲೈನ್‌ಮೆಂಟ್‌’ನೊಂದಿಗೆ ಯೋಗಾಸನಗಳ ಪರಿಚಯ, ನಿಖರ ಭಂಗಿ ಮತ್ತು ಉಸಿರಾಟದ ತಂತ್ರಗಳೊಂದಿಗೆ ಪ್ರಾಣಾಯಾಮದ ಮೂಲಪಾಠ, ದೇಹವನ್ನು ಕಾಡುವ ಸಾಮಾನ್ಯ ನೋವುಗಳ ನಿವಾರಣೆಗೆ ಮುಂಜಾಗರೂಕತೆ, ಯೋಗಾಭ್ಯಾಸದ ಸಮಸ್ಯೆಗಳ ಕುರಿತ ಪ್ರಶ್ನೋತ್ತರ- ಹೀಗೆ ಹಲವು ಕಲಾಪಗಳನ್ನು ಎರಡು ದಿನಗಳ ಕಾರ್ಯಾಗಾರಗಳಲ್ಲಿ ಅಳವಡಿಸಲಾಗಿದೆ.

ಮಣಿಪಾಲ ಟೈಗರ್‌ ಸರ್ಕಲ್‌ನಿಂದ ವಾಹನ ವ್ಯವಸ್ಥೆ, ಸಸ್ಯಾಹಾರಿ ಸರಳ ಭೋಜನ, ಚಹಾ ವ್ಯವಸ್ಥೆ, ಅಯ್ಯಂಗಾರ್‌ ಯೋಗ ಪರಿಚಯ ಪುಸ್ತಕ, ಯೋಗ ಬೆಲ್ಟ್- ಇವುಗಳೆಲ್ಲ ಸೇರಿ ಪ್ರವೇಶ ಶುಲ್ಕ ರೂ. 2000 ಆಗಿರುತ್ತದೆ. ಭಾಗವಹಿಸಲಿಚ್ಛಿಸುವವರು ಡಿಸೆಂಬರ್‌ 5ರ ಮೊದಲು ತಮ್ಮ ಹೆಸರನ್ನು  ನೋಂದಾಯಿಸಬೇಕೆಂದು ಸಂಯೋಜಕರು ತಿಳಿಸಿದ್ದಾರೆ. 

ಸಂಪರ್ಕ:  98447 16452 (ಬೆಳಗ್ಗೆ 10 ಮತ್ತು ಸಂಜೆ 5ರ ನಡುವೆ).

ಅಯ್ಯಂಗಾರ್‌ ಯೋಗಾನುಭವ !
ಬಿಕೆಎಸ್‌ ಅಯ್ಯಂಗಾರ್‌ ಅವರ ಶಿಷ್ಯೆ ಶೋಭಾ ಶೆಟ್ಟಿಯವರ ಯೋಗ ತರಗತಿಗೆ ನಾನು ಸೇರಿದ್ದು ಎಂಟು ವರ್ಷಗಳ ಹಿಂದೆ. ಆಗ ನನಗೆ ಬೆನ್ನುನೋವು ಕಾಡುತ್ತಿತ್ತು. ಯೋಗ ತರಗತಿಗೆ ಸೇರಿದ ಆರಂಭದಲ್ಲಿ ಕೆಲವು ಆಸನಗಳನ್ನು ಮಾಡಲು ಕಷ್ಟವಾಗುತ್ತಿತ್ತು. ಗುರುಗಳ ಸೂಚನೆಯಂತೆ ಕಷ್ಟಪಟ್ಟು ಆಸನಗಳನ್ನು ಮಾಡಿದೆ. ಈಗ ಬೆನ್ನುನೋವು ತುಂಬ ಕಡಿಮೆಯಾಗಿ ಆರೋಗ್ಯದಲ್ಲಿ ತುಂಬಾ ಸುಧಾರಣೆಯಾಗಿದೆ. ಯೋಗಾಸನಗಳನ್ನು ಆತ್ಮವಿಶ್ವಾಸದಿಂದ ಮಾಡಲು ಕೂಡಾ ಸಾಧ್ಯವಾಗಿದೆ.
ಮೀರಾ ರಾಜೇಶ್‌, ಚಿಟಾ³ಡಿ, ಉಡುಪಿ

ಎರಡು ವರ್ಷಗಳಿಂದ ನನ್ನ ಭುಜಗಳಲ್ಲಿ ನೋವು ಕಾಡುತ್ತಿತ್ತು. ನಾನು ಪ್ರತಿದಿನವೆಂಬಂತೆ ನೋವುನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅಯ್ಯಂಗಾರ್‌ ಯೋಗವನ್ನು ಅಭ್ಯಾಸ ಮಾಡಿದ ಮೇಲೆ ನೋವು ಕಡಿಮೆಯಾಯಿತು. ನಿಜವಾಗಿ ನಾನು ನನ್ನ ಯೋಗ  ಗುರುಗಳಾದ ಶೋಭಾ, ವನಿತಾ,  ಸುಚಿತ್ರಾ ಅವರಿಗೆ ಕೃತಜ್ಞತೆ ಹೇಳಬೇಕು!
ಸೋನಿಯಾ ರಾಜೇಶ್‌, ಮಣಿಪಾಲ್‌

ನಾಲ್ಕು ವರ್ಷಗಳ ಹಿಂದೆ ಬೆನ್ನುನೋವಿನಿಂದ ಬಳಲುವುದನ್ನು ಕಂಡ ಪರಿಚಿತರೊಬ್ಬರು ಉಡುಪಿಯ “ಅಯ್ಯಂಗಾರ್‌ ಯೋಗಶಿಕ್ಷಕಿ’ ಶೋಭಾ ಶೆಟ್ಟಿಯವರನ್ನು ಪರಿಚಯಿಸಿದರು. ಅಂದಿನಿಂದ ನಿಯತವಾಗಿ ನಾನು ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಸುತ್ತಿದ್ದು ನನ್ನ ಬೆನ್ನುನೋವಿನ ತೊಂದರೆಯಿಂದ ಮುಕ್ತಳಾಗಿದ್ದೇನೆ. ಯೋಗಾಭ್ಯಾಸ ನನ್ನ ದೈಹಿಕ, ಮಾನಸಿಕ ಆರೋಗ್ಯದ ಸುಧಾರಣೆಗೆ ಕಾರಣವಾಗಿದೆ. ಯೋಗಾಸನದ ಸೂಕ್ಷ್ಮ ವಿವರಗಳಿಗೂ ಒತ್ತು ನೀಡಿ ತರಬೇತಿ ನೀಡುವ ಶೋಭಾ ಶೆಟ್ಟಿಯವರು ಯೋಗದ ಹೊಸ ಆಯಾಮವನ್ನು ನನಗೆ ಪರಿಚಯಿಸಿದ್ದಾರೆ.
 ಪದ್ಮಾವತಿ ತಲ್ಲೂರು

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.