ಅಂಧ ಯುವತಿ ಹಚ್ಚಿದ ಯುವ ಜನೋತ್ಸವ ದೀಪ
Team Udayavani, Dec 1, 2017, 9:42 AM IST
ಉಡುಪಿ: ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಇಲಾಖೆ, ರಾಜ್ಯ ಮತ್ತು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಇಲಾಖಾ ಸಚಿವ ಪ್ರಮೋದ್ ಮಧ್ವರಾಜ್ ದೀಪ ಬೆಳಗಿಸಿ ಉದ್ಘಾಟಿಸಿದ ಸಂದರ್ಭ ವಿಜಯಪುರದ ಅಂಧ ಯುವತಿ ಕೃತ್ತಿಕಾ ಜಂಗಿನಮಠ ಅವರು ಡಿ.ಎಸ್. ಕರ್ಕಿ ಅವರ “ಹಚ್ಚುವೆವು ಕನ್ನಡದ ದೀಪ…’ ಭಾವಗೀತೆಯನ್ನು ವೇಣುವಾದನದಲ್ಲಿ ನುಡಿಸಿ ಸಚಿವರೂ ಸೇರಿದಂತೆ ಸರ್ವರ ಮೆಚ್ಚುಗೆಗೆ ಪಾತ್ರರಾದರು.
ಕೌಶಲಾಭಿವೃದ್ಧಿಗೂ ಒತ್ತು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಜನೋತ್ಸವ, ಯುವ ಜನ ಮೇಳವಲ್ಲದೆ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡುತ್ತಿದೆ. ಯುವ ಸಬಲೀಕರಣ ಇಲಾಖೆಗೆ ಪ್ರತ್ಯೇಕವಾಗಿ 15 ಕೋ.ರೂ. ಅನುದಾನವನ್ನು ಮುಖ್ಯಮಂತ್ರಿಗಳು ಕೌಶಲಾಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆಂದು ಸಚಿವರು ತಿಳಿಸಿದರು.
ಪ್ರತಿಭಾ ಪ್ರದರ್ಶನ ಅಗತ್ಯ
ಹಿಂದೆ ಯುವ ಜನ ಮೇಳ, ಯುವಜನೋತ್ಸವವೆಂದರೆ ಊರಿನಲ್ಲಿ ಹಬ್ಬದ ವಾತಾವರಣವಿತ್ತು. ಈಗ ಯುವಕರು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಮುಳುಗುತ್ತಿದ್ದಾರೆ. ವೇದಿಕೆ ಮೇಲೇರಿ ಪ್ರತಿಭೆಯನ್ನು ಪ್ರದರ್ಶಿಸುವ ಬದಲು ಕೋಣೆಯೊಳಗೆ ಸೇರುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಸ್ಥಿತಿಯಿಂದ ಮತ್ತೆ ಹಿಂದಕ್ಕೆ ಬರಬೇಕು. ಜನರೊಂದಿಗೆ ಬೆರೆಯುವ ಮನೋಭಾವನೆಯನ್ನು ಬೆಳೆಸಿ ಭಾÅತೃತ್ವ, ಮಿತ್ರತ್ವ, ಒಗ್ಗಟ್ಟಿನ ಜೀವನಕ್ಕೆ ನಾಂದಿ ಹಾಡಬೇಕು ಎಂದು ಸಚಿವರು ಕರೆ ನೀಡಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹಮೂರ್ತಿ, ರಾಜ್ಯ ಒಕ್ಕೂಟದ ಅಧ್ಯಕ್ಷ ಬಾಲಾಜಿ, ಜಿಲ್ಲಾ ಸಂಘದ ಮನೋಹರ ಕುಂದರ್, ಎಸ್‌ಪಿ ಡಾ| ಸಂಜೀವ ಪಾಟೀಲ್, ಅಪರ ಜಿಲ್ಲಾಧಿಕಾರಿ ಅನುರಾಧಾ, ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್, ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಯುವಜನ ಸಬಲೀಕರಣ ಇಲಾಖೆ ಜಂಟಿ ನಿರ್ದೇಶಕ ಅಭಿಜಿನ್, ಉಪನಿರ್ದೇಶಕ ರಂಗಯ್ಯ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ ಪ್ರಕಾಶ್ ಕ್ರಮಧಾರಿ ವಂದಿಸಿದರು.
ಚೌರಾಶಿಯಾ ಶಿಷ್ಯೆಗೆ ಶಹಬ್ಟಾಸ್‌ಗಿರಿ
ಮೂಲತಃ ವಿಜಯಪುರದವರಾದ ಕೃತ್ತಿಕಾ ಅವರು ಪ್ರಸ್ತುತ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಮ್ಯೂಸಿಕ್ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಹಿಂದೂಸ್ತಾನೀ ಗಾಯನ ಮತ್ತು ವೇಣುವಾದನದಲ್ಲಿ ಪ್ರಾವೀಣ್ಯ ಪಡೆದಿರುವ ಕೃತ್ತಿಕಾ 2016ರಲ್ಲಿ ಆಕಾಶವಾಣಿ ಏರ್ಪಡಿಸಿದ ಅ.ಭಾ. ಮಟ್ಟದ ಸ್ಪರ್ಧೆಯಲ್ಲಿ ದೇಶಕ್ಕೆ ಪ್ರಥಮ, 2010ರಲ್ಲಿ ರಾಜ್ಯದ ಬಾಲಕಲಾಶ್ರೀ ಪ್ರಶಸ್ತಿ ಪಡೆದಿದ್ದಾರೆ. ಪ್ರಸಿದ್ಧ ವೇಣುವಾದಕ ಪಂ| ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯೆ. ವಿಜಯಪುರದ ಭಾರತೀಯ ಆಹಾರ ನಿಗಮದ ಉದ್ಯೋಗಿ ವೀರೇಶ್ವರ, ತಾಯಿ ಪದ್ಮಾವತಿಯವರ ಪುತ್ರಿ ಕೃತ್ತಿಕಾ ಸೋದರ, ಕಾರ್ತಿಕೇಯ ತಬ್ಲಾ ಕಲಾವಿದ, ಕಂಪ್ಯೂಟರ್ ವಿಜ್ಞಾನ ಡಿಪ್ಲೊಮಾ ವಿದ್ಯಾರ್ಥಿ. ವೇಣು ವಾದನಕ್ಕೆ ಸಚಿವರು ಮೆಚ್ಚಿ ಸ್ಮರಣಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.