ಸಾಹಿತ್ಯ ಹೋರಾಟದ ಧ್ವನಿಯಾಗಲಿ


Team Udayavani, Dec 1, 2017, 10:36 AM IST

gul-2.jpg

ವಾಡಿ: ಹೂ, ಹಣ್ಣು , ಪ್ರಕೃತಿ ಸೌಂದರ್ಯದ ಅಂದ-ಚೆಂದ ಕುರಿತು ಬರೆಯುವುದು ಸಾಹಿತ್ಯವೇ. ಅದು ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ನಮಗೆ ಬೇಕಿರುವುದು ಹೋರಾಟಕ್ಕೆ ಧ್ವನಿಯಾಗಬಲ್ಲ ಗಟ್ಟಿ ಸಾಹಿತ್ಯ ಎಂದು ಯುವ ಸಾಹಿತಿ ರೇಣುಕಾ ಹೆಳವರ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ವಲಯ ಘಟಕದ ವತಿಯಿಂದ ಪಟ್ಟಣದ ಅಂಬೇಡ್ಕರ್‌ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಕವಿ-ಕಾವ್ಯಧಾರೆ ವಿಶೇಷ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತ್ಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಶ್ರಮಿಕರ ಹಸಿವು ಮತ್ತು ಶೋಷಿತ ಹೆಣ್ಣಿನ ನೋವುಗಳನ್ನು ಅನಾವರಣಗೊಳಿಸಬಲ್ಲ ಆಕ್ರೋಶದ ಕವನಗಳು ಕಿವಿಗಪ್ಪಳಿಸಬೇಕಿದೆ. ಆ ಮೂಲಕ ಜಿಡ್ಡುಗಟ್ಟಿದ ಸಮಾಜವನ್ನು ಬಡಿದೆಚ್ಚರಿಸಬೇಕಿದೆ ಎಂದರು.

ಹಿಂಸೆಯೇ ಪ್ರಧಾನವಾಗಿರುವ ಈ ವ್ಯವಸ್ಥೆಯಲ್ಲಿ ಸತ್ಯ ಸಾರುವ ಕಾರ್ಯದಲ್ಲಿ ನಿರತರಾಗಿದ್ದ ಎಂ.ಎಂ.ಕಲಬುರಗಿ,
ಲಿಂಗಣ್ಣ ಸತ್ಯಂಪೇಟೆ, ದಾಬೊಲ್ಕರ್‌, ಗೌರಿ ಲಂಕೇಶ ಅವರಂತಹ ಪ್ರಗತಿಪರ ಬರಹಗಾರರನ್ನು ಕೊಲ್ಲಲಾಗುತ್ತಿದೆ.
ಹೆದರಿ-ಬೆದರಿ ಬರೆಯಬೇಕಾದ ಪ್ರಸಂಗ ಎದುರಾಗಿದ್ದು, ಎದೆಗುಂದದೆ ಜನರ ಅಂತರಾಳ ತಟ್ಟಬಲ್ಲ ಸಾಹಿತ್ಯ ರಚನೆಗೆ
ನಾವು ಮುಂದಾಗಬೇಕಿದೆ ಎಂದರು.

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬ ಕವಿ ಡಾ| ಸಿದ್ದಲಿಂಗಯ್ಯನವರ ಕಾವ್ಯ ಇಂದಿಗೂ ನಮ್ಮ ಎದೆ ತಟ್ಟುತ್ತಿದೆ. ಸಮಾಜದಲ್ಲಿ ಕ್ರೌರ್ಯ, ಹಿಂಸೆ ಜೀವಂತವಿರುವ ವರೆಗೆ ಈ ಕಾವ್ಯ ಪ್ರತಿಧ್ವನಿಸುತ್ತದೆ. ಯುವ ಕವಿಗಳಿಂದ ಇಂತಹ ಅಮರ ಸಾಹಿತ್ಯ ಹುಟ್ಟಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಕಾಶೀನಾಥ ಗುತ್ತೇದಾರ ಮಾತನಾಡಿ, ತಾಲೂಕಿನ ಬರಹಗಾರರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವನ್ನು ಕಸಾಪ ಮಾಡುತ್ತಿದೆ. ಡಿಸೆಂಬರ್‌ ಎರಡನೇ ವಾರದಲ್ಲಿ ಚಿತ್ತಾಪುರದಲ್ಲಿ ತಾಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಕ್ಷರ ಜಾಗೃತಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಉದ್ಘಾಟಿಸಿದರು. ಸದಾಶಿವ ಕಟ್ಟಿಮನಿ ಅತಿಥಿಯಾಗಿದ್ದರು.
ಕಸಾಪ ವಲಯ ಅಧ್ಯಕ್ಷ ಖೇಮಲಿಂಗ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಶಿಕ್ಷಕ ಸಿದ್ದಲಿಂಗ ಬಾಳಿ, ಶಕುಂತಲಾ ಪೋದ್ದಾರ, ವಿಜಯಕುಮಾರ ಸಿಂಗೆ, ಶ್ರವಣಕುಮಾರ ಮೌಸಲಗಿ, ಶರಣು ಹೇರೂರ, ನಾಗೇಂದ್ರ ಜೈಗಂಗಾ, ಶೇಖಪ್ಪ ಹೇರೂರ, ವೀರಣ್ಣ ಯಾರಿ ಪಾಲ್ಗೊಂಡಿದ್ದರು.

ಕವಿಗಳಾದ ಹಣಮಂತ ಘಂಟೇಕರ, ಯಶವಂತ ಧನ್ನೇಕರ, ಬಸವರಾಜ ಹೊಸಮನಿ, ಮಲ್ಲೇಶ ನಾಟೀಕಾರ,
ರಾಜಶೇಖರ ಕಡಗನ, ಶಿವುಕುಮಾರ ಕೊಳ್ಳಿ, ಹಣಮಂತ ಶಹಾಬಾದ, ವಿಕ್ರಮ ನಿಂಬರ್ಗಾ ಮತ್ತಿತರರು ಸ್ವರಚಿತ ಕವನ ವಾಚಿಸಿದರು. 

ಮಾತೋಶ್ರೀ ರಮಾಬಾಯಿ ಕನ್ಯಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಭಾವಗೀತೆ ಹಾಡಿದರು. ಕಸಾಪ ಕೋಶಾಧ್ಯಕ್ಷ ದೇವಿಂದ್ರ ಕರದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಚಂದ್ರು ಕರಣಿಕ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು, ಭೀಮಾಶಂಕರ ಸಿಂಧೆ ವಂದಿಸಿದರು.

ಟಾಪ್ ನ್ಯೂಸ್

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.