ದಿರಿಸಿನ ಅಂದ ಹೆಚ್ಚಿಸುವ ಶ್ರಗ್‌ಗಳು
Team Udayavani, Dec 1, 2017, 1:15 PM IST
ಇಂದಿನ ಸಂಚಿಕೆಯಲ್ಲಿ ಹೇಳಲಿರುವ ವಿಷಯವೆಂದರೆ ವಿವಿಧ ಬಗೆಯ ಶ್ರಗ್ಗುಗಳು. ಈ ಶ್ರಗ್ಗುಗಳು ಇಂದಿನ ಹೊಸ ಫ್ಯಾಷನ್ ಎನಿಸದಿದ್ದರೂ ಕೆಲ ಸಮಯದ ಹಿಂದೆ ಬಂದು ಎವರ್‌ಗ್ರೀನ್ ಎನಿಸಿರುವ ತನ್ನ ಇರುವಿಕೆಯನ್ನು ಸತತ ಬಳಕೆಯ ಮೂಲಕ ನಿರೂಪಿಸುತ್ತಿರುವ ಬಟ್ಟೆಗಳಾಗಿವೆ. ವಿವಿಧ ಸಂದರ್ಭಗಳಲ್ಲಿ ಮತ್ತು ವಿವಿಧ ಮಾದರಿಯ ದಿರಿಸುಗಳೊಂದಿಗೆ ಹೊಂದುವಂತಹ ಹೊಸ ಹೊಸ ಬಗೆಯ ಶ್ರಗ್ಗುಗಳ ಮಾದರಿಗಳು ಮಾರುಕಟ್ಟೆಗೆ ಬರುತ್ತಿವೆ. ಅಂತಹ ಕೆಲವು ವಿನೂತನವಾದ ಬಗೆಗಳ ಶ್ರಗ್ಗುಗಳ ಲೋಕದಲ್ಲೊಮ್ಮೆ ವಿಹರಿಸಿ ಬರೋಣ. ಅದರೊಂದಿಗೆ ಸ್ಟೈಲ್ ಟ್ರೆಂಡಿಗೆ ಅಪ್ಡೆಟ್ ಆಗುವ ಪ್ರಯತ್ನವನ್ನು ಮಾಡಬಹುದಾಗಿದೆ.
1ಫ್ರಿಂಜ್ ಶ್ರಗ್ಸ್: ತುದಿಗಳಲ್ಲಿ ಫ್ರಿಂಜಸ್ ಇರುವಂತಹ ಬಗೆಯ ಶ್ರಗ್ಗುಗಳಾಗಿವೆ. ಫ್ರಿಂಜ್ ಟಾಪುಗಳಂತೆಯೇ ಫ್ರಿಂಜ್ ಶ್ರಗ್ಗುಗಳು ನೋಡಲು ಬಹಳ ಸುಂದರವಾಗಿರುತ್ತವೆ. ಎಲ್ಲಾ ಬಗೆಯ ಮಾಡರ್ನ್ ದಿರಿಸುಗಳಿಗೆ ಬಹಳ ಒಪ್ಪವಾಗಿ ಕಾಣುತ್ತವೆ. ಇವುಗಳಲ್ಲಿ ಕಾಟನ್, ಶಿಫಾನ್, ಜಾರ್ಜೆಟ್ ಅಲ್ಲದೆ ಎಂಬ್ರಾಯಿಡರಿ ಅಥವಾ ಸಿಂಪಲ… ಡಿಸೈನಿನಲ್ಲಿಯೂ ದೊರೆಯುತ್ತವೆ. ಬೇಕಾದ ಬಣ್ಣಗಳಲ್ಲಿ ದೊರೆಯುವುದರಿಂದ ಕಾಂಟ್ರಾಸ್ಟ್ ಬಣ್ಣಗಳ ಟಾಪ್ ಮತ್ತು ಬಾಟಮ…ವೇರುಗಳೊಂದಿಗೆ ಧರಿಸಿದಾಗ ಬಹಳ ಸ್ಟೈಲಿಶ್ ಆಗಿ ಕಾಣುತ್ತವೆ.
2ಸೈಡ್ ಸ್ಲಿಟ್ ಮ್ಯಾಕ್ಸಿ ಶ್ರಗ್ಸ್: ಉದ್ದವಾದ ಶ್ರಗ್ಗುಗಳಿವಾಗಿದ್ದು ಸೈಡ್ ಸ್ಲಿಟ್ ಅನ್ನು ಹೊಂದಿರುತ್ತವೆ. ಚಳಿಗಾಲಕ್ಕೆ ಸ್ಟೈಲಿಶ್ ಆಗಿ ಕಾಣಬಯಸುವವರು ಈ ಬಗೆಯ ಶ್ರಗ್ಗುಗಳನ್ನೊಮ್ಮೆ ಪ್ರಯೋಗಿಸಿ ನೋಡಬಹುದು. ಇವುಗಳನ್ನು ಮಾಡರ್ನ್ ದಿರಿಸುಗಳೊಂದಿಗಷ್ಟೇ ಅಲ್ಲದೆ ಕ್ಯಾಷುವಲ… ಕ್ರಾಪ್‌ಟಾಪ್ ಸ್ಕರ್ಟುಗಳೊಂದಿಗೂ ಧರಿಸಬಹುದಾಗಿದೆ. ಇವುಗಳು ಹಲವು ವಿಧದ ಬಟ್ಟೆಗಳಲ್ಲಿ ದೊರೆಯುವುದರಿಂದ ಚಳಿ ಅಥವಾ ಬೇಸಿಗೆ ಆಯಾಯ ಕಾಲಕ್ಕೆ ತಕ್ಕಂತಹ ವಿಧದ ಬಟ್ಟೆಯ ಶ್ರಗ್ಗುಗಳನ್ನು ಆಯ್ಕೆಮಾಡಿಕೊಳ್ಳುವುದು ಸೂಕ್ತವಾದುದು.
3ವಾಟರ್ ಫಾಲ್ ಶ್ರಗ್ಸ್: ಶ್ರಗ್ಗುಗಳ ತುದಿಗಳು ಸಮವಾಗಿರದೆ ಓರೆಕೋರೆಯಾದ ರೂಪಲ್ಲಿರುತ್ತವೆ. ಹೆಸರಿಗೆ ತಕ್ಕಂತೆ ವಾಟರ್‌ಫಾಲ…ನಂತಹ ಡಿಸೈನಿರುತ್ತದೆ. ಇವುಗಳು ಹೆಚ್ಚಾಗಿ ಸಿಂಥೆಟಿಕ್ ಅಥವಾ ಜಾರ್ಜೆಟ್ ಅಥವಾ ನೆಟ… ಬಟ್ಟೆಗಳಲ್ಲಿ ಲಭಿಸುತ್ತವೆ. ಜೀನ್ಸ್ ಪ್ಯಾಂಟುಗಳು ಅಥವಾ ಜೆಗ್ಗಿಂಗುಗಳೊಂದಿಗೆ ಧರಿಸಲು ಬಹಳ ಚೆನ್ನಾಗಿರುತ್ತದೆ. ಕ್ಯಾಷುವಲ…ವೇರಾಗಿ ಬಳಸಲು ಈ ಶ್ರಗ್ಗುಗಳು ಸೂಕ್ತವೆನಿಸುತ್ತವೆ. ಇವುಗಳನ್ನು ಧರಿಸಲು ಯಾವುದೇ ವಯೋಮಾನದ ಮಿತಿಯಿರುವುದಿಲ್ಲ.
4ಡಾಲ್ಮನ್ ಸ್ಲಿವ್ ಶ್ರಗ್ಸ್: ತೋಳುಗಳ ತುದಿಗಳಲ್ಲಿ ಇಲಾಸ್ಟಿಕ್ ಇದ್ದು ತೋಳುಗಳು ಪಫ್ ಇರುವಂತಹ ಬಗೆಯ ಶ್ರಗ್ಗುಗಳು ಇವುಗಳಾಗಿವೆ. ಬಬ್ಲಿಯಾಗಿರುವ ಲುಕ್ಕನ್ನು ನೀಡುವುದರೊಂದಿಗೆ ದಿರಿಸುಗಳಿಗೆ ಆಕರ್ಷಕವಾದ ಲುಕ್ಕನ್ನು ನೀಡುತ್ತವೆ. ಟೀಶರ್ಟುಗಳ ಮೇಲೆ ಧರಿಸಲು ಸೂಕ್ತವಾದುದು. ಎಲ್ಲಾ ಬಗೆಯ ಬಟ್ಟೆಗಳಲ್ಲಿಯೂ ದೊರೆಯುವುದರಿಂದ ವಿಫುಲವಾದ ಆಯ್ಕೆಗಳಿರುತ್ತವೆ. ಎಲ್ಲಾ ಬಗೆಯ ಮಾಡರ್ನ್ ದಿರಿಸುಗಳಿಗೂ ಮ್ಯಾಚ್ ಆಗುತ್ತವೆ.
5ಲೇಸ್ ಶ್ರಗ್ಸ್: ಲೇಸ್ ಬಟ್ಟೆಗಳಿಂದ ತಯಾರಿಸಲಾದ ಶ್ರಗ್ಗುಗಳು ಇವಾಗಿವೆ. ಲೇಸ್ ಬಟ್ಟೆಯೂ ಒಂದು ಬಗೆಯ ನೆಟ್ ಬಟ್ಟೆಯಾಗಿರುವುದರಿಂದ ಟಾಪ್‌ವೇರುಗಳಿಗೆ ಕಾಂಟ್ರಾಸ್ಟ್ ಇರುವ ಬಣ್ಣದ ಶ್ರಗ್ಗನ್ನು ಆಯ್ಕೆ ಮಾಡುವುದು ಸೂಕ್ತವಾದುದಾಗಿದೆ. ಇವುಗಳ ವಿಶೇಷತೆಯೆಂದರೆ ಇವುಗಳನ್ನು ಕೇವಲ ಮಾಡರ್ನ್ ಬಟ್ಟೆಗಳಷ್ಟೇ ಅಲ್ಲದೆ ಕುರ್ತಾಗಳಿಗೂ ಕೂಡ ಧರಿಸಬಹುದಾಗಿದೆ. ಆಕರ್ಷಕವಾದ ಶೈಲಿಗಳಲ್ಲಿ ದೊರೆಯುತ್ತವೆ.
6ಶಾಲ್ ಕಾಲರ್ ಶ್ರಗ್ಸ್: ಹೆಸರೇ ಹೇಳುವಂತೆ ಶಾಲಿನಂತೆ ಕಾಣುವಂತಹ ಕಾಲರನ್ನು ಹೊಂದಿರುವ ಶ್ರಗ್ಗುಗಳಿವಾಗಿವೆ. ಇವುಗಳು ಸಾಮಾನ್ಯವಾಗಿ ದಪ್ಪವಾದ ಬಟ್ಟೆಗಳಿಂದ ತಯಾರಿಸಲ್ಪಟ್ಟಿರುತ್ತವೆ. ಚಳಿಗಾಲಕ್ಕೆ ಹೆಚ್ಚು ಸೂಕ್ತವೆನಿಸುತ್ತವೆ. ಇವುಗಳು ಮೂರು ಲೆನ್¤ಗಳಲ್ಲಿ ದೊರೆಯುತ್ತವೆ. ಶಾರ್ಟ್, ಮೀಡಿಯಮ… ಮತ್ತು ನೀ ಲೆನ್¤ ಎಂಬುದಾಗಿ. ಕಾಲಮಾನಕ್ಕೆ ತಕ್ಕಂತಹ ಬಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
7ಓಪನ್ ಫ್ರಂಟ್ ಪಾಯಿಂಟ್ ಶ್ರಗ್ಸ್: ಇವುಗಳು ಶಾರ್ಟ್ ಶ್ರಗ್ಗುಗಳಾಗಿವೆ. ಎದುರಿನಲ್ಲಿ ಇಳಿಬಿಟ್ಟಂತಿರುವ ಮಾದರಿಯಿದಾಗಿದೆ. ಇವುಗಳು ಮತ್ತೆ ವಿವಿಧ ಬಗೆಯ ಬಟ್ಟೆಗಳಿಂದ ತಯಾರಿಸಲಾಗಿರುತ್ತದೆ. ಸಲ್ವಾರ್, ಕುರ್ತಾಗಳೊಂದಿಗೆ ಧರಿಸಬಹುದಾಗಿದೆ.
8ಫ್ರಂಟ್ ಸ್ಲಿಟ್ ಮ್ಯಾಕ್ಸಿ ಶ್ರಗ್ಸ್: ಉದ್ದವಾದ ಲೆನ್¤ನ್ನು ಹೊಂದಿದ್ದು ಎದುರಿನಲ್ಲಿ ಸ್ಲಿಟ… ಇರುವಂತಹ ಬಗೆಯ ಶ್ರಗ್ಗುಗಳಿವಾಗಿವೆ. ಜೀನ್ಸ್ಗಳ ಮೇಲೆ ಬಹಳ ಚೆನ್ನಾಗಿ ಒಪ್ಪುತ್ತವೆ. ಮತ್ತು ಬಹಳ ಸ್ಟೈಲಿಶ್ ಆದ ಲುಕ್ಕನ್ನು ನೀಡುತ್ತವೆ. ಕ್ಯಾಷುವಲ… ಔಟಿಂಗುಗಳಿಗೆ ಸೂಕ್ತವೆನಿಸುತ್ತವೆ. ಹೆಚ್ಚಾಗಿ ಜಾರ್ಜೆಟ್ ಅಥವ ಶಿಫಾನ್ ಬಟ್ಟೆಗಳಲ್ಲಿ ದೊರೆಯುತ್ತವೆ. ಬಹಳ ಟ್ರೆಂಡಿಯಾದ ಬಗೆಯಾಗಿದ್ದು ಟೀಶರ್ಟುಗಳ ಮೇಲೆ ಧರಿಸಬಹುದು. ಜೀನ್ಸ್ ಪ್ಯಾಂಟುಗಳಿಗೆ ಚೆನ್ನಾಗಿ ಹೊಂದುವಂತಹ ಶ್ರಗ್ಗುಗಳಿವಾಗಿವೆ.
9ಉಲ್ಲನ್ ಶ್ರಗ್ಗುಗಳು: ಉಲ್ಲನ್ ಶ್ರಗ್ಗುಗಳು ಚಳಗಾಲಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ಬಹಳ ಸ್ಟೈಲಿಶ್ ಆಗಿಯೂ ಕಾಣುತ್ತವೆ. ಉಲ್ಲನ್ ಶ್ರಗ್ಗುಗಳು ದೇಹವನ್ನು ಚಳಿಗೆ ಬೆಚ್ಚಗಿಡುವುದಷ್ಟೇ ಅಲ್ಲದೆ ಟ್ರೆಂಡಿ ಲುಕ್ಕನ್ನು ಕೊಡುವಲ್ಲಿಯೂ ಮುಂಚೂಣಿಯಲ್ಲಿವೆ.
10ಟ್ರೈಬಲ್ ಡಿಸೈನ್ ಶ್ರಗ್ಗುಗಳು: ಇವುಗಳು ಹೆಚ್ಚಾಗಿ ದಪ್ಪಕಾಟನ್ ಬಟ್ಟೆಗಳಿಂದ ತಯಾರಿಸಲಾಗಿದ್ದು ಟ್ರೈಬಲ್ ಪ್ರಿಂಟನ್ನು ಒಳಗೊಂಡಿರುತ್ತವೆ. ನೋಡಲು ಬಹಳ ಆಕರ್ಷಕವಾಗಿರುತ್ತವೆ ಮತ್ತು ಸಧ್ಯದ ರನ್ನಿಂಗ್ ಟ್ರೆಂಡ್ ಎನ್ನಬಹುದಾಗಿದೆ.
11ಕೇಪ್ ಮಾದರಿಯ ಶ್ರಗ್ಗುಗಳು: ಕೇಪುಗಳಂತೆಯೇ ಕೇಪ್ ಮಾದರಿಯ ಶ್ರಗ್ಗುಗಳೂ ಕೂಡ ದೊರೆಯುತ್ತವೆ. ಯಾವುದೇ ವೆಸ್ಟರ್ನ್ ಅಥವಾ ಇಂಡೋ-ವೆಸ್ಟರ್ನ್ ಮಾದರಿಯ ದಿರಿಸುಗಳಿಗೆ ಒಪ್ಪವಾಗಿ ಕಾಣುತ್ತವೆ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.