ಸನ್ನಿ ಬ್ರಾಂಡ್
Team Udayavani, Dec 1, 2017, 1:25 PM IST
ಇನ್ನು ನೀವು ಸನ್ನಿ ಲಿಯೋನ್‌ಳನ್ನು ನಿಮ್ಮ ಜತೆಗೆ ಇಟ್ಟುಕೊಳ್ಳಬಹುದು, ಬೇಕಾದಲ್ಲಿಗೆ ಎತ್ತಿಕೊಂಡು ಹೋಗಬಹುದು, ಎಷ್ಟು ಬೇಕಾದರೂ ಮಾತನಾಡಬಹುದು. ಇದು ನಟಿ ಸನ್ನಿ ಲಿಯೋನ್ ಅಲ್ಲ, ಬದಲಾಗಿ ಅವಳ ಮೊಬೈಲ್ ಫೋನ್. ಬಾಲಿವುಡ್‌ನ ಉಳಿದ ನಟನಟಿಯರಂತೆ ಸನ್ನಿ ಲಿಯೋನ್ ಕೂಡ ಬೇಡಿಕೆ ತುಸು ಕಡಿಮೆಯಾಗುತ್ತಿದ್ದಂತೆ ವ್ಯಾಪಾರದತ್ತ ಹೊರಳಿದ್ದಾಳೆ.
ಮೊದಲ ಪ್ರಯತ್ನವಾಗಿ ಸನ್ನಿ ಲಿಯೋನ್ ಬ್ರಾಂಡ್‌ನಡಿಯಲ್ಲಿ ರೆಡಿಮೇಡ್ ಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾಳೆ. ಇದು ಸಖತ್ ಹಿಟ್ ಆದ ಸ್ಫೂರ್ತಿಯಲ್ಲೇ ಇದೀಗ ಮೊಬೈಲ್ ಫೋನ್ ಬಿಡುಗಡೆ ಮಾಡಲು ಹೊರಟಿದ್ದಾಳೆ. ಸನ್ನಿ ಲಿಯೋನ್ ಬ್ರಾಂಡ್ ಮೊಬೈಲ್ ಕೂಡ ಹಿಟ್ ಆಗುವುದರಲ್ಲಿ ಅವಳಿಗೆ ಯಾವುದೇ ಅನುಮಾನವಿಲ್ಲ. ಏಕೆಂದರೆ ಅವಳನ್ನು ಹಗಲಿರುಳು ಆರಾಧಿಸುವ ದೊಡ್ಡ ಅಭಿಮಾನಿ ಬಳಗವೇ ಇದೆ. ಅಂದ ಹಾಗೆ ಮೊಬೈಲ್ ಫೋನ್ ವ್ಯಾಪಾರದಲ್ಲಿ ಸಲ್ಮಾನ್ ಖಾನ್‌ಗೆ ಸ್ಪರ್ಧೆ ನೀಡಲು ಸನ್ನಿ ಲಿಯೋನ್ ಮುಂದಾಗಿದ್ದಾಳೆ. ಏಕೆಂದರೆ ತನ್ನ ಬ್ರಾಂಡ್‌ನ ಮೊಬೈಲ್ ಮಾರುಕಟ್ಟೆಗೆ ತರುವ ಪರಿಕಲ್ಪನೆ ಮೊದಲು ಮೂಡಿದ್ದು ಸಲ್ಮಾನ್ ಖಾನ್‌ಗೆ. ಬೀಯಿಂಗ್ ಸ್ಮಾರ್ಟ್ ಎಂಬ ಸಲ್ಮಾನ್ ಖಾನ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲು ತಯಾರಿ ನಡೆದಿರುವಂತೆ, ಸನ್ನಿ ಲಿಯೋನ್ ಸಹ ಸನ್ನಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಬಾಂಬ್ ಸಿಡಿಸಿದ್ದಾಳೆ. ಗಂಡ ವೆಬೆರ್ ಜತೆಗೆ ಸೇರಿಕೊಂಡು ಸನ್ನಿ ಲಿಯೋನ್ ಸ್ಮಾರ್ಟ್ ಫೋನ್ ರೇಂಜ್ ಕುರಿತು ಉದ್ಯಮಿಗಳ ಜತೆಗೆ ಕುಳಿತು ಚರ್ಚಿಸುತ್ತಿದ್ದಾಳೆ. ಚೀನಾದ ಒಂದು ಕಂಪೆನಿಯ ಜತೆಗೆ ಈ ಕುರಿತು ಮಾತುಕತೆಯೂ ಆಗಿದೆಯಂತೆ. ಮೊಬೈಲ್ ಉತ್ಪಾದನೆಯಾಗುವುದು ಚೀನಾದಲ್ಲಿ. ಹೆಸರು ಮಾತ್ರ ಸನ್ನಿಯದ್ದು. ಹಾಗೆಂದು, ಇದು ಅಗ್ಗದ ಬೆಲೆಯ ಅಲ್ಪಾಯುಷಿ ಸ್ಮಾರ್ಟ್‌ಫೋನ್ ಅಲ್ಲ. ಉತ್ತಮ ಗುಣಮಟ್ಟದ ಫೋನನ್ನೇ ಕೊಡುತ್ತೇನೆ ಎನ್ನುವುದು ಸನ್ನಿ ನೀಡುವ ಭರವಸೆ.
ಸನ್ನಿಯ ಅಭಿನಯ ಪ್ರತಿಭೆಯ ಬಗ್ಗೆ ಯಾರಿಗಾದರೂ ತಕರಾರು ಇರಬಹುದು. ಎಲ್ಲೋ ನೀಲಿಚಿತ್ರಗಳಲ್ಲಿ ನಟಿಸುತ್ತಿದ್ದವಳಿಗೆ ಬಾಲಿವುಡ್‌ನ ಬಾಗಿಲು ತೆರೆದದ್ದು ಅವಳ ಅಭಿನಯ ನೋಡಿ ಅಲ್ಲ , ಬದಲಾಗಿ ಮಾದಕ ಮೈಮಾಟ ನೋಡಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವಳ ವ್ಯವಹಾರ ಕೌಶಲವನ್ನು ಮಾತ್ರ ಯಾರೂ ಅನುಮಾನಿಸುವಂತಿಲ್ಲ. ಈ ವಿಚಾರದಲ್ಲಿ ಉಳಿದ ನಟನಟಿಯರಿಗಿಂತ ಸನ್ನಿ ಲಿಯೋನ್ ಬಹಳ ಮುಂದಿದ್ದಾಳೆ. ಉಳಿದವರೆಲ್ಲ ಹೊಟೇಲ್, ಜಿಮ್, ರೆಡಿಮೇಡ್ ಅಂಗಡಿ ಎಂದು ತಲೆಕೆಡಿಸಿಕೊಂಡಿರುವಾಗ ಸನ್ನಿ ಲಿಯೋನ್ ಸ್ಮಾರ್ಟ್‌ಫೋನ್, ಆನ್‌ಲೈನ್ ಪೋರ್ಟಲ್ ಎಂದೆಲ್ಲ ಹೊಸ ರೀತಿಯ ಉದ್ಯಮದ ಕನಸು ಕಾಣುತ್ತಿದ್ದಾಳೆ. ನಟಿಯಾಗಿ ಗೆದ್ದ ಸನ್ನಿ ಇದೀಗ ಉದ್ಯಮಿ ಯಾಗಿಯೂ ಗೆಲ್ಲುವ ಸನ್ನಾಹ ದಲ್ಲಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.