ಚುಮುಚುಮು ಚಳಿಗೆ ಬಿಸಿ ಬಿಸಿ ಸೂಪ್‌


Team Udayavani, Dec 1, 2017, 1:29 PM IST

01-39.jpg

ಚುಮು ಚುಮು ಚಳಿಗೆ ಬಿಸಿಬಿಸಿಯಾದ ಸೂಪ್‌ ಸೇವಿಸಿದರೆ ಪುಷ್ಟಿಕರ ಹಾಗೂ ಶಕ್ತಿದಾಯಕ. ಊಟದ ಮೊದಲು ಸೂಪ್‌ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಆರೋಗ್ಯ ವೃದ್ಧಿಯಾಗುತ್ತದೆ. ಇಲ್ಲಿವೆ ಬಾಯಿಗೆ ರುಚಿ ನೀಡುವ ಕೆಲವು ಆರೋಗ್ಯಕರ ಸೂಪ್‌ಗ್ಳು.

ಪಾಲಕ್‌ ಸೂಪ್‌
ಬೇಕಾಗುವ ಸಾಮಗ್ರಿ: ಪಾಲಕ್‌ ಸೊಪ್ಪು – 1 ಕಟ್ಟು , ನೀರುಳ್ಳಿ- 1, ಕಾರ್ನ್ಪ್ಲೋರ್‌- 2 ಚಮಚ, ಹಸಿಮೆಣಸಿನ ಕಾಯಿ- 2, ಲವಂಗ- 3, ಚಕ್ಕೆ – 2 ತುಂಡು,  ರುಚಿಗೆ ತಕ್ಕಷ್ಟು ಉಪ್ಪು , ತುಪ್ಪ- 2 ಚಮಚ, ಸಕ್ಕರೆ- 1 ಚಮಚ. 

ತಯಾರಿಸುವ ವಿಧಾನ: ಪಾಲಕ್‌ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ಬಾಣಲೆಗೆ ತುಪ್ಪಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ, ಹಸಿಮೆಣಸಿನ ಚೂರು ಹಾಕಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಬೇಯಿಸಿದ ಪಾಲಕ್‌ ಸೊಪ್ಪು ಹಾಗೂ ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಅರೆಯಿರಿ. ಈ ಮಿಶ್ರಣಕ್ಕೆ ಕಾರ್ನ್ಪ್ಲೋರ್‌ ಸೇರಿಸಿ, ಸ್ವಲ್ಪ  ನೀರು ಹಾಗೂ ಉಪ್ಪು$ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಕಿ ಒಲೆಯ ಮೇಲಿಟ್ಟು ಕುದಿಸಿರಿ. ಈಗ ಬಿಸಿ ಬಿಸಿ ಸೂಪ್‌ ಸವಿಯಲು ತಯಾರು. ಪಾಲಕ್‌ ಸೊಪ್ಪಿನಲ್ಲಿ ಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಷಿಯಂ ಅಂಶಗಳಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಪುದೀನ ಸೂಪ್‌
ಬೇಕಾಗುವ ಸಾಮಗ್ರಿ: ಪುದೀನ  ಎಲೆ- 10, ಕರಿಮೆಣಸಿನ ಪುಡಿ- 1/2 ಚಮಚ, ಬೆಳ್ಳುಳ್ಳಿ ಎಸಳು- 4, ಕೊತ್ತಂಬರಿ ಸೊಪ್ಪು ಕಡ್ಡಿ ಸಮೇತ- 10, ಬೆಣ್ಣೆ – 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಹಾಲಿನ ಕ್ರೀಮ್‌- 1 ಚಮಚ.

ತಯಾರಿಸುವ ವಿಧಾನ: ಪುದೀನ, ಕೊತ್ತಂಬರಿಸೊಪ್ಪು ಚೆನ್ನಾಗಿ ತೊಳೆದು, ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ರುಬ್ಬಿದ ಮಿಶ್ರಣ ಹಾಕಿ. ಬಳಿಕ ಬೇಕಾದಷ್ಟು ನೀರು ಸೇರಿಸಿಕೊಂಡು ಕರಿಮೆಣಸಿನ ಪುಡಿ, ಉಪ್ಪು ಹಾಕಿ ಕುದಿಸಿರಿ. ನಂತರ ಬೌಲ್‌ಗೆ ಹಾಕಿ ಅದರ ಮೇಲೆ ಕ್ರೀಮ್‌ನಿಂದ ಅಲಂಕರಿಸಿದರೆ ಬಿಸಿ ಬಿಸಿ ಸೂಪ್‌ ಸವಿಯಲು ಸಿದ್ಧ.

ಕ್ಯಾರೆಟ್‌ ಸೂಪ್‌
ಬೇಕಾಗುವ ಸಾಮಗ್ರಿ: ಕ್ಯಾರೆಟ್‌ (ಹೆಚ್ಚಿಕೊಂಡಿದ್ದು)- 1 ಕಪ್‌, ಶುಂಠಿ- 1 ತುಂಡು, ಈರುಳ್ಳಿ- 1, ಎಣ್ಣೆ- 1 ಚಮಚ, ಕರಿಮೆಣಸಿನ ಪುಡಿ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು. 

ತಯಾರಿಸುವ‌ ವಿಧಾನ: ಕ್ಯಾರೆಟ್‌ ಮತ್ತು ಶುಂಠಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಕುಕ್ಕರ್‌ನಲ್ಲಿ ಒಂದು ಸ್ಪೂನ್‌ ಎಣ್ಣೆ ಹಾಕಿ ಈರುಳ್ಳಿ ಹುರಿಯಿರಿ. ಇದಕ್ಕೆ ಹೆಚ್ಚಿ ಕೊಂಡ ಕ್ಯಾರೆಟ್‌ ಮತ್ತು ಶುಂಠಿಯನ್ನು ಹಾಕಿ ಉಪ್ಪು$ಬೆರೆಸಿ, ನಂತರ ಮುಚ್ಚಳ ಮುಚ್ಚಿ  ಎರಡು ವಿಷಲ್‌ ಕೂಗಿಸಿ. ಇದು ಆರಿದ ನಂತರ, ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಈ ಮಿಶ್ರಣಕ್ಕೆ ಅರ್ಧ ಕಪ್‌ ನೀರು ಸೇರಿಸಿ, ಕರಿಮೆಣಸಿನ ಪುಡಿ ಹಾಕಿ ಬಿಸಿ ಇರುವಾಗಲೇ ಕುಡಿಯಿರಿ.

ಟೊಮೆಟೋ ಸೂಪ್‌
ಬೇಕಾಗುವ ಸಾಮಗ್ರಿ: ಟೊಮೆಟೊ- 8, ಜೀರಿಗೆ- 2 ಚಮಚ, ಕರಿಮೆಣಸಿನ ಪುಡಿ- 1 ಚಮಚ, ಬೆಳ್ಳುಳ್ಳಿ ಎಸಳು- 4, ದಾಲಿcನಿ ಎಲೆ, ಸಕ್ಕರೆ- 1 ಚಮಚ, ಬೆಣ್ಣೆ- 1 ಚಮಚ, ಜೋಳದ ಪುಡಿ- 2 ಚಮಚ, ರುಚಿಗೆ ಬೇಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು  ಸ್ವಲ್ಪ.

ತಯಾರಿಸುವ ವಿಧಾನ: ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ತುಪ್ಪದೊಂದಿಗೆ ಬೇಯಿಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಜೀರಿಗೆಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿರಿ, ಬಳಿಕ ಸೋಸಿಕೊಳ್ಳಬೇಕು.ಇದಕ್ಕೆ ಸಕ್ಕರೆ, ಉಪ್ಪು$, ಕರಿಮೆಣಸಿನ ಪುಡಿ, ಜೋಳದ ಪುಡಿ, ದಾಲಿcàನಿ ಎಲೆ, ತುಪ್ಪಹಾಕಿ ಐದು ನಿಮಿಷ ಚೆನ್ನಾಗಿ ಕುದಿಸಿದರೆ ಸೂಪ್‌ ರೆಡಿ.

ರೈಸ್‌ ಸೂಪ್‌
ಬೇಕಾಗುವ ಸಾಮಗ್ರಿ:
ಚೆನ್ನಾಗಿ ಮಸೆದ ಬೆಳ್ತಿಗೆ ಅನ್ನ- 4 ಚಮಚ, ಕ್ಯಾರೆಟ್‌ತುರಿ- 2 ಚಮಚ, ನೀರುಳ್ಳಿ ಚೂರು- 3 ಚಮಚ, ಕಾರ್ನ್ಪ್ಲೋರ್‌- 1 ಚಮಚ, ಕಾಳುಮೆಣಿಸಿನ ಪುಡಿ- 1/2 ಚಮಚ, ನಿಂಬೆರಸ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ಕ್ಯಾರೆಟ್‌ ಮತ್ತು ಈರುಳ್ಳಿ ಚೂರು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸ್ವಲ್ಪ ನೀರಲ್ಲಿ ಕಾರ್ನ್ಪ್ಲೋರ್‌ ಹಾಕಿ ಕರಗಿಸಿ ಈ ಮಿಶ್ರಣಕ್ಕೆ ಸೇರಿಸಿ. ಇದನ್ನು ಒಲೆಯ ಮೇಲಿಟ್ಟು ಕುದಿಸಿ. ಕುದಿಯಲು ಪ್ರಾರಂಭವಾದಾಗ ಮಸೆದ ಬೆಳ್ತಿಗೆ ಅನ್ನ, ಕರಿಮೆಣಸು ಪುಡಿ, ಉಪ್ಪು, ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಕೆಳಗಿಳಿಸಿ. ನಂತರ ಬೌಲ್‌ಗೆ ಹಾಕಿ ಸವಿಯಿರಿ.

ಸ್ವಾತಿ

ಟಾಪ್ ನ್ಯೂಸ್

Hyderabad: Student dies after getting a puri stuck in his throat

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Hyderabad: Student dies after getting a puri stuck in his throat

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.