ಎಲ್ಲರನ್ನೂ ಖುಷಿಯಾಗಿಡುವುದೇ ನನ್ನ ಗುರಿ
Team Udayavani, Dec 1, 2017, 1:31 PM IST
ಬೆಂಗಳೂರು: ಪ್ರಪಂಚದಲ್ಲಿ ಎಲ್ಲರನ್ನೂ ಖುಷಿಯಾಗಿಡಬೇಕು ಎನ್ನುವುದು ನನ್ನ ಗುರಿ. ಅದಕ್ಕಾಗಿ ಫೇಮಸ್ ಆಗಬೇಕು ಎಂದು ಸಿನಿಮಾ ರಂಗಕ್ಕೆ ಕಾಲಿಟ್ಟೆ. ಆದರೆ, ನನ್ನ ಬದುಕು ಉಪ್ಪಿಟ್ಟು ತರಹ ಆಗಿದೆ ಎಂದು “ಕೆಪಿಕೆಪಿ’ ಹೆಸರಲ್ಲಿ ಹೊಸ ರಾಜಕೀಯ ಪಕ್ಷ ಹುಟ್ಟಿಹಾಕಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.
ರಾಜ್ಯೋತ್ಸವದ ಅಂಗವಾಗಿ ಜಯನಗರ ಜೈನ್ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ನುಡಿ-ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ರಾಜಕೀಯ ಮತ್ತು ಪ್ರಜಾಕೀಯ ಅನ್ನೋದು ಇರಬಾರದು. ವಿಧಾನಸೌಧ, ವಿಕಾಸಸೌಧ, ಮಕ್ಕಳ ಶಾಲೆಯಾಗಬೇಕು ಎಂದರು.
ರಾಜರ ಆಳ್ವಿಕೆಯಿಂದ ಹೊರಬಂದು ದಶಕಗಳು ಕಳೆದಿವೆ. ಸತ್ ಪ್ರಜೆಗಳೇ ಏಳಿ, ಎದ್ದೇಳಿ, ಪ್ರಜಾಕೀಯ ಆ್ಯಪ್ ಬಿಡುಗಡೆ ಆಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿರಿ. ನಾಯಕರು, ನಾಯಕರಲ್ಲ. ಅವರು ಕಾರ್ಮಿಕರು. ರಾಜಕೀಯ ವ್ಯಾಪಾರ, ಕೆಸರೆರಚಾಟ ನಮಗೆ ಬೇಡ. ರಾಜಕೀಯ ಬದಲಾವಣೆ ಬರಬೇಕು, ಅದನ್ನು ತರವು ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಉಪೇಂದ್ರ ಕರೆ ನೀಡಿದರು.
ನಾನಂತೂ ಬದಲಾವಣೆ ತರಲು ಹೊರಟಿದ್ದೇನೆ. ನಾನೂ ಸತ್ತರೂ ಏನಾದರೊಂದು ಸಾಧಿಸಿದ್ದೇನೆ ಎಂಬ ತೃಪ್ತಿ ನನಗಿರುತ್ತದೆ ಎಂದು ಉಪೇಂದ್ರ ಇದೇ ವೇಳೆ ಮಾರ್ಮಿಕವಾಗಿ ನುಡಿದರು. ಯಾವುದೇ ಗುರಿ ಇಟ್ಟುಕೊಂಡರೆ ಅದು ನಮಗಾಗಿ ಅಲ್ಲ, ಸಮಾಜಕ್ಕಾಗಿ ಇಟ್ಟುಕೊಳ್ಳಬೇಕು.
ಇಡೀ ಪ್ರಪಂಚವನ್ನೇ ಸರಿ ಮಾಡುತ್ತೇವೆ ಎನ್ನುವಂತಹ ಗುರಿ ಇರಬೇಕು. ಪ್ರಪಂಚದಲ್ಲಿ ಎಲ್ಲರನ್ನೂ ಖುಷಿಪಡಿಸುವ ಗುರಿ ನನ್ನದು. ಅದಕ್ಕಾಗಿ ಹೆಸರು, ಖ್ಯಾತಿ ಗಳಿಸಲು ಸಿನಿಮಾಕ್ಕೆ ಬಂದೆ. ಆದರೆ, ನನ್ನ ಬದುಕು ಉಪ್ಪಿಟ್ಟು ಆಗಿದೆ ಎಂದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಎಸ್. ಭಗವಾನ್, ಸಾಹಿತಿ ಭೈರಮಂಗಲ ರಾಮೇಗೌಡ ಮತ್ತಿತರರು ಇದ್ದರು.
ಟ್ವೀಟ್…
ಜನಜಂಗುಳಿಯ ಬೆಂಗಳೂರು ವಿಧಾನಸೌಧದ ಆಡಳಿತವನ್ನು ಬೆಳಗಾವಿ ಸುವರ್ಣವಿಧಾನಸೌಧಕ್ಕೆ ಸಂಪೂರ್ಣ ವರ್ಗಾವಣೆ ಮಾಡಿದರೆ ಹೇಗೆ? ಹೇಗೂ ಜನಪ್ರತಿನಿಧಿಗಳು ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಬೇಕಲ್ಲವೇ? ನಿಮ್ಮ ಅಭಿಪ್ರಾಯ ತಿಳಿಸಿ.
-ಉಪೇಂದ್ರ, ಕೆಪಿಜೆಪಿ ಪಕ್ಷದ ಸಂಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್ ಕೃಷಿ
Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!
Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಫರ್ಹಾನ್ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.