ಪುತ್ತೂರು: ಪ್ರಮುಖ ರಸ್ತೆಗೆ ಜೀಬ್ರಾ ಕ್ರಾಸ್‌, ಸೂಚನ ಫಲಕ


Team Udayavani, Dec 1, 2017, 5:27 PM IST

30-Dec-16.jpg

ಪುತ್ತೂರು: ನಗರದ ಪ್ರಮುಖ ರಸ್ತೆಗಳಿಗೆ ಜೀಬ್ರಾ ಕ್ರಾಸಿಂಗ್‌, ಡಿವೈಡರ್‌, ಹಂಪ್‌ಗ್ಳಿಗೆ ಬಣ್ಣ ಬಳಿಯುವ, ಸೂಚನ ಫಲಕ ಅಳವಡಿಸುವ ಕಾಮಗಾರಿಗಳಿಗೆ ನಗರಸಭೆ ಆಡಳಿತ 10 ಲಕ್ಷ ರೂ. ಅನುದಾನ ಮೀಸಲಿಟ್ಟಿದೆ.

ಜಿಲ್ಲೆಯ 2ನೇ ಅತಿದೊಡ್ಡ ಪಟ್ಟಣ ಎಂಬ ಖ್ಯಾತಿ ಇದ್ದರೂ ಪುತ್ತೂರು ಪೇಟೆಯ ವ್ಯಾಪ್ತಿ ತೀರಾ ಸಣ್ಣದು. ಕೋರ್ಟ್‌ ರಸ್ತೆಯನ್ನು ಕೇಂದ್ರೀಕರಿಸಿಕೊಂಡು ಒಂದಷ್ಟು ದೂರದಲ್ಲಿ ಪೇಟೆ ಬೆಳೆದುಕೊಂಡಿದೆಯಷ್ಟೇ. ನಗರದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆದರೆ ಇದಕ್ಕೆ ಅಧಿಕಾರಿಗಳಿಂದ ಹಾಗೂ ಜನಪ್ರತಿ ನಿಧಿಗಳಿಂದ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ. ಇದರಿಂದ ನೊಂದ ಕೆಲ ಸಾರ್ವ ಜನಿಕರು, ಕನಿಷ್ಠ ಇರುವ ವ್ಯವಸ್ಥೆಯನ್ನಾದರೂ ಸುಧಾರಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದರು. ಸಾರ್ವಜನಿಕರ ಬೇಡಿ ಕೆಗೆ ನಗರಸಭೆ ಆಡಳಿತ ಹಸಿರು ನಿಶಾನೆ ತೋರಿಸಿದೆ. ನಗರವನ್ನು ಅಭಿವೃದ್ಧಿ ಪಡಿಸಲು ಹಲವಾರು ಸವಾಲುಗಳಿವೆ, ದೊಡ್ಡ ಮಟ್ಟಿನ ಅನುದಾನುಗಳ ಅಗತ್ಯವಿದೆ.  ಆದರೆ ಇರುವ ವ್ಯವಸ್ಥೆ ಸುಧಾರಿಸಲು ಸಣ್ಣ ಅನುದಾನ ಸಾಕಲ್ಲವೇ? ಎಂದು ಚಿಂತಿಸಿ ಸುಧಾರಣ ಕ್ರಮಗಳಿಗೆ 10 ಲಕ್ಷ ರೂ. ಮೀಸಲಿಟ್ಟಿದೆ.

ಪುತ್ತೂರು ಪೇಟೆಯಲ್ಲಿ ಸಂಚಾರ ದಟ್ಟಣೆಗೆ ಪ್ರಮುಖ ಸ್ಥಾನ. ಎಲ್ಲೂ ಪಾರ್ಕಿಂಗ್‌ಗೆ ಜಾಗವೇ ಇಲ್ಲ. ಇರುವ ಒಂದಷ್ಟು ಜಾಗವನ್ನು ಪಾರ್ಕಿಂಗ್‌ಗೆಂದು ಗೊತ್ತುಪಡಿಸಿದ್ದು, ಇನ್ನೊಂದಷ್ಟು ಕಾಮಗಾರಿ ನಡೆಸಲು ಮುಂದಾಗಿದೆ. ಇದರಲ್ಲಿ ಜೀಬ್ರಾ ಕ್ರಾಸಿಂಗ್‌, ಡಿವೈಡರ್‌, ಹಂಪ್‌ಗ್ಳಿಗೆ ಬಣ್ಣ ಬಳಿಯುವಿಕೆ, ಸೂಚನ ಫಲಕ ಅಳವಡಿಸುವುದು ಪ್ರಮುಖವಾದದ್ದು.

ಪಾರ್ಕಿಂಗ್‌ಗೆ 10 ಲಕ್ಷ ರೂ.
ಮೊಳಹಳ್ಳಿ ಶಿವರಾಯ ವೃತ್ತದ ಎದುರುಗಡೆಯ ಖಾಲಿ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ನಗರಸಭೆ ಮುಂದಾಗಿದೆ. ಇಲ್ಲಿ ಇಂಟರ್‌ಲಾಕ್‌ ಹಾಕಲು 10 ಲಕ್ಷ ರೂ. ಮಂಜೂರು ಮಾಡಿದೆ. ಸದ್ಯ ಈ ಪ್ರದೇಶದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕ್‌ ಮಾಡಲಾಗುತ್ತಿದೆ. ಇತ್ತೀಚೆಗೆ ಸಣ್ಣ ಅಂಗಡಿಯೊಂದು ಪ್ರತ್ಯಕ್ಷವಾಗಿದೆ. ಇದರ ಬಗ್ಗೆ ಸಹಾಯಕ ಆಯುಕ್ತರು, ನಗರಸಭೆಯಿಂದ ಲಿಖಿತ ಮಾಹಿತಿ ನೀಡುವಂತೆ ಕೇಳಿದ್ದಾರೆ. ಅದೇನೇ ಇದ್ದರೂ, ಪುತ್ತೂರು ಪೇಟೆಗೊಂದು ಪಾರ್ಕಿಂಗ್‌ ಜಾಗ ಸಿಗಲಿದೆ.

ಪಾರ್ಕಿಂಗ್‌ ಕಾಂಪ್ಲೆಕ್ಸ್‌!
ಸುಮಾರು 30-40 ಸೆಂಟ್ಸ್‌ ಜಾಗದಲ್ಲಿ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಲು ನಗರಸಭೆ ಯೋಜಿಸಿತ್ತು. ಆದರೆ ಇಷ್ಟು ಜಾಗ ಪೇಟೆಯಲ್ಲಿ ಇಲ್ಲ. ಆದ್ದರಿಂದ ಸದ್ಯಕ್ಕೆ ಇದರ ಪ್ರಸ್ತಾಪ ಕೇಳಿಬರುತ್ತಿಲ್ಲ.

ಏಕೆ ಸೂಚನ ಫಲಕ?
ಪುತ್ತೂರಿನಲ್ಲಿ 5 ಒನ್‌ ವೇ ರಸ್ತೆಗಳಿವೆ. ಕಲ್ಲಾರೆ ಪೇ ಪಾರ್ಕಿಂಗ್‌ ಇದೆ. ಹಲವು ನೋ ಪಾರ್ಕಿಂಗ್‌ ರಸ್ತೆ, ಪ್ರದೇಶಗಳಿವೆ. ಸಂಚಾರ ದಟ್ಟಣೆ ದೃಷ್ಟಿಯಿಂದ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಇವಾವುದರ ಸೂಚನೆಯೂ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಪರಿಣಾಮ, ಹೊರ ಜಿಲ್ಲೆಯಿಂದ ಆಗಮಿಸಿದವರು, ತಮ್ಮ ವಾಹನವನ್ನು ಆಯಕಟ್ಟಿನ ಪ್ರದೇಶದಲ್ಲಿ ಪಾರ್ಕ್‌ ಮಾಡಿ ಹೋದರೆ, ಬರುವ ಹೊತ್ತಿಗೆ ಪೊಲೀಸರ ಲಾಕ್‌ ಬಿದ್ದಿರುತ್ತದೆ. ತುರ್ತು ಸಂದರ್ಭವಾದರೆ ತಾವು ಹೋಗಬೇಕಾದ ಸ್ಥಳಕ್ಕೆ ತೆರಳುವುದೋ ಅಥವಾ ಠಾಣೆಗೆ ದೌಡಾಯಿಸುವುದೋ? ಇಂತಹ ಹಲವು ಸನ್ನಿವೇಶಗಳು ಪುತ್ತೂರು ಪೇಟೆಯಲ್ಲಿ ನಡೆದಿವೆ. ಅಮಾಯಕ ಸಾರ್ವಜನಿಕರ ಸಂಕಷ್ಟದ ಸ್ಥಿತಿಯನ್ನು ತಪ್ಪಿಸಲು ಸೂಚನ ಫಲಕ ತೀರಾ ಅಗತ್ಯ.

ಕಟ್ಟಡದ ಮಾಲಕರ ಜವಾಬ್ದಾರಿ
ಪಾರ್ಕಿಂಗ್‌ ಸೌಲಭ್ಯ ಕೊಡುವ ಪ್ರಾಥಮಿಕ ಜವಾಬ್ದಾರಿ ಆಯಾ ಕಟ್ಟಡದ ಮಾಲಕರದ್ದು. ಸರಕಾರಿ ಜಾಗದಲ್ಲಿ ಸರಕಾರ ಸೌಲಭ್ಯ ಒದಗಿಸಬಹುದು. ಸಂಚಾರಕ್ಕೆ ಅಡಚಣೆ ಉಂಟುಮಾಡುವ ವಾಹನಗಳಿಗೆ ಸೂಚನ ಫಲಕ ಇಲ್ಲದೇ ಇದ್ದರೂ ದಂಡ ವಿಧಿಸಬಹುದು. ಪಾರ್ಕಿಂಗ್‌ ಜಾಗದ ನಿಯಮ ಪಾಲನೆ ಆಗಿದ್ದರೆ, ಈ ಸಮಸ್ಯೆ ಕಾಡುತ್ತಿರಲಿಲ್ಲ. ಕಟ್ಟಡ ಮಾಲಕರ ನಿಯಮ ಉಲ್ಲಂಘನೆ, ಆಡಳಿತದ ಕರ್ತವ್ಯ ಲೋಪ, ಭ್ರಷ್ಟಾಚಾರಕ್ಕೆ ಸಹಕರಿಸಿದ ಕಾರಣ ಸಮಸ್ಯೆ ಉಲ್ಬಣಗೊಂಡಿದೆ.
ದಿನೇಶ್‌ ಭಟ್‌,
   ಸ್ಥಳೀಯ ಮುಖಂಡರು

10 ಲಕ್ಷ ರೂ. ಮಂಜೂರು
ಪುತ್ತೂರು ಪೇಟೆಯಲ್ಲಿ ಪಾರ್ಕಿಂಗ್‌ಗೆ ಜಾಗವೇ ಇಲ್ಲ. ಕಲ್ಲಾರೆಯಲ್ಲಿ ವಾಹನ ಪಾರ್ಕ್‌ ಮಾಡಿ, ರಿಕ್ಷಾದಲ್ಲಿ ಪೇಟೆಗೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲು 10 ಲಕ್ಷ ರೂ. ಮಂಜೂರು ಮಾಡಲಾಗಿದೆ. ಪ್ರಮುಖ ರಸ್ತೆಗಳಿಗೆ ಜೀಬ್ರಾ ಕ್ರಾಸಿಂಗ್‌, ಡಿವೈಡರ್‌, ಹಂಪ್‌ಗ್ಳಿಗೆ ಬಣ್ಣ ಬಳಿ ಯಲು, ಸೂಚನ ಫಲಕ ಅಳವಡಿಸಲು 10 ಲಕ್ಷ ರೂ. ನೀಡಲಾಗಿದೆ. ಸಂಚಾರಿ ಪೊಲೀಸರ ಸಲಹೆ ಪಡೆದುಕೊಂಡು, ನೋಟಿಫಿಕೇಶನ್‌ಗೆ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು.
ಜಯಂತಿ ಬಲ್ನಾಡ್‌,
   ಅಧ್ಯಕ್ಷೆ, ಪುತ್ತೂರು ನಗರಸಭೆ

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.