ಕೊಹ್ಲಿ ಪಡೆಗೆ ಕೋಟ್ಲಾದಲ್ಲೂ ಗೆಲ್ಲುವ ಕನಸು
Team Udayavani, Dec 2, 2017, 6:00 AM IST
ಹೊಸದಿಲ್ಲಿ: ಬಲಿಷ್ಠ ಭಾರತ ಕ್ರಿಕೆಟ್ ತಂಡವೀಗ ಹೊಸದಿಲ್ಲಿಯ “ಫಿರೋಜ್ ಷಾ ಕೋಟ್ಲಾ’ ಅಂಗಳದಲ್ಲಿ ಮತ್ತೂಂದು ದೊಡ್ಡ ಗೆಲುವಿಗೆ ಸ್ಕೆಚ್ ಹಾಕಿಕೊಂಡು ಕುಳಿತಿದೆ. ಎದುರಾಳಿ ಶ್ರೀಲಂಕಾ ಮತ್ತೂಂದು ಸರಣಿ ಸೋಲಿನ ಭೀತಿಗೆ ಸಿಲುಕಿದೆ. ಶನಿವಾರದಿಂದ ಇಲ್ಲಿ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಟೀಮ್ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಇದೊಂದು ಮಹತ್ವದ ಅಭ್ಯಾಸವಾಗಲಿದೆ.
ಕೋಲ್ಕತಾದಲ್ಲಿ ಸ್ವಲ್ಪದರಲ್ಲೇ ಗೆಲುವಿನಿಂದ ದೂರ ಉಳಿದಿದ್ದ ಭಾರತ, ಬಳಿಕ ನಾಗ್ಪುರದಲ್ಲಿ ಭಾರೀ ದೊಡ್ಡ ಅಂತರದಿಂದ ಜಯಿಸಿ 1-0 ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದ ಈ ಫಾರ್ಮ್ ಕಾಣುವಾಗ 2-0 ಜಯಭೇರಿ ಅಸಾಧ್ಯವಲ್ಲ ಎಂದೇ ಭಾವಿಸಬೇಕಾಗುತ್ತದೆ.
ಆದರೆ ಸರಣಿ ಸಮಬಲದ ಒತ್ತಡದಲ್ಲಿರುವ ಶ್ರೀಲಂಕಾದ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಇದನ್ನು ನಿಭಾಯಿಸುವುದು ಚಂಡಿಮಾಲ್ ಪಡೆಗೆ ಖಂಡಿತ ಸುಲಭವಲ್ಲ.
ಓಪನಿಂಗ್: ತ್ರಿಕೋನ ಸ್ಪರ್ಧೆ
ಕಳೆದ 30 ವರ್ಷಗಳಿಂದಲೂ ಭಾರತದ ಪಾಲಿಗೆ ಅದೃಷ್ಟದ ತಾಣವಾಗಿಯೇ ಕಾಣಿಸಿಕೊಂಡಿರುವ “ಫಿರೋಜ್ ಷಾ ಕೋಟ್ಲಾ’ದಲ್ಲಿ ಲೋಕಲ್ ಹೀರೋ ವಿರಾಟ್ ಕೊಹ್ಲಿ 2ನೇ ಸಲ ಟೀಮ್ ಇಂಡಿಯಾವನ್ನು ಟೆಸ್ಟ್‌ನಲ್ಲಿ ಮುನ್ನಡೆಸುತ್ತಿದ್ದಾರೆ. ನಾಗ್ಪುರದದಲ್ಲಿ ಸಾಧಿಸಿದ ಪ್ರಚಂಡ ಗೆಲುವು, ಅಲ್ಲಿ ಬಾರಿಸಿದ ಅಮೋಘ ದ್ವಿಶತಕವೆಲ್ಲ ಕೊಹ್ಲಿ ಗರಿಮೆಗೆ ಸಾಕ್ಷಿ. ಆದರೆ ದಿಲ್ಲಿಯಲ್ಲಿ ಕಣಕ್ಕಿಳಿಯುವಾಗ ಒಂದು ಸಮಸ್ಯೆ ಕಾಡಲಾರಂಭಿಸಿದೆ. ಅದೆಂದರೆ, ಆರಂಭಿಕರದು.
ಕೆ.ಎಲ್. ರಾಹುಲ್, ಶಿಖರ್ ಧವನ್ ಮತ್ತು ಮುರಳಿ ವಿಜಯ್-ಈ ಮೂರು ಮಂದಿ ಇನ್‌ಫಾರ್ಮ್ ಓಪನರ್‌ಗಳಲ್ಲಿ ಯಾರನ್ನು ಕಣಕ್ಕಿಳಿಸುವುದೆಂಬುದು ತಲೆ ತಿನ್ನುವ ಪ್ರಶ್ನೆಯಾಗಿದೆ!
ನಾಗ್ಪುರ ಪಂದ್ಯದಿಂದ ಹೊರಗುಳಿದಿದ್ದ ಶಿಖರ್ ಧವನ್ ತಂಡಕ್ಕೆ ವಾಪಸಾಗಿದ್ದಾರೆ. ಅಲ್ಲಿ ಧವನ್ ಬದಲು ಆಡಿದ ಪಡೆದ ಮುರಳಿ ವಿಜಯ್ ಶತಕ ಬಾರಿಸಿ (128) ಅವಕಾಸವನ್ನು ಬಾಚಿಕೊಂಡಿದ್ದಾರೆ. ನಾಗ್ಪುರದ ರನ್ ಪ್ರವಾಹದಲ್ಲಿ ರಾಹುಲ್ ಕೊಡುಗೆ ಅಲ್ಪ (7). ಕೋಲ್ಕತಾದಲ್ಲಿ ಮೊದಲ ಎಸೆತಕ್ಕೇ ಔಟಾದ ರಾಹುಲ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 79 ರನ್ ಹೊಡೆದಿದ್ದಾರೆ. ಧವನ್ ಕೂಡ ಕೋಲ್ಕತಾದ 2ನೇ ಸರದಿಯಲ್ಲಿ 94 ರನ್ ಬಾರಿಸಿ ಮಿಂಚಿದ್ದಾರೆ. ಅವರಿಗೂ ಇದು ತವರು ಪಂದ್ಯ. ಹೀಗಾಗಿ ಆಯ್ಕೆ ಜಟಿಲಗೊಂಡಿದೆ.
ಧವನ್-ರಾಹುಲ್ ಮೊದಲ ಆಯ್ಕೆಯ ಆರಂಭಿಕರಾಗುವುದರಲ್ಲಿ ಅನುಮಾನವಿಲ್ಲ. ರಹಾನೆ ಒಳಬರುವಾಗ ತ್ರಿಶತಕವೀರ ಕರುಣ್ ನಾಯರ್ ಅವರನ್ನೇ ಹೊರಗಿರಿಸಿದ ದೃಷ್ಟಾಂತ ನಮ್ಮ ಕಣ್ಮುಂದೆಯೇ ಇದೆ. ಹೀಗಿರುವಾಗ ವಿಜಯ್ ಶತಕ ಬಾರಿಸಿದರೂ ಧವನ್‌ಗೆ ಜಾಗ ಬಿಡುವುದು ಅನಿವಾರ್ಯವಾಗಬಹುದು. ಅಥವಾ ಧವನ್-ವಿಜಯ್ ಆವರನ್ನು ಆರಂಭಿಕರನ್ನಾಗಿ ಇಳಿಸಿ ರಾಹುಲ್ ಅವರನ್ನು ಫಾರ್ಮ್ನಲ್ಲಿಲ್ಲದ ರಹಾನೆ ಜಾಗದಲ್ಲಿ ಆಡಿಸುವ ಸಾಧ್ಯತೆಯೂ ಇದೆ. ಆದರೆ, ಇದರಿಂದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗಬೇಕಿರುವ ರಹಾನೆ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ಆದೀತೆಂಬ ಆತಂಕ ಮೂಡುವುದು ಸಹಜ. ಅಲ್ಲದೇ, ರಾಹುಲ್ ಈವರೆಗೆ ಓಪನಿಂಗ್ ಬಿಟ್ಟು ಬೇರೆ ಕ್ರಮಾಂಕದಲ್ಲಿ ಮಿಂಚಿದ ಉದಾಹರಣೆ ಇಲ್ಲ.
ಬೌಲಿಂಗ್ ಬದಲಾವಣೆ ಇಲ್ಲ?
ಈ “ಓಪನಿಂಗ್ ಗೊಂದಲ’ ಹೊರತುಪಡಿಸಿದರೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ. ಮೊಹಮ್ಮದ್ ಶಮಿ ಬದಲು ನಾಗ್ಪುರದಲ್ಲಿ ಆಡಲಿಳಿದ ಇಶಾಂತ್ ಶರ್ಮ ಸ್ಥಾನ ಉಳಿಸಿಕೊಳ್ಳುವುದು ಖಚಿತ. ಅಂದಹಾಗೆ, ಇದು ಇಶಾಂತ್ ಅವರಿಗೂ ತವರು ಪಂದ್ಯ!
ಕೋಟ್ಲಾ ಟ್ರ್ಯಾಕ್ ಹೇಗೆ ವರ್ತಿಸೀತೆಂಬ ಸ್ಪಷ್ಟ ಚಿತ್ರಣ ಲಭಿಸಿಲ್ಲ. ಆದರೆ ನಾಗ್ಪುರದಂತೆ 600 ರನ್ ಹರಿದು ಬರುವಷ್ಟು ಫ್ಲ್ಯಾಟ್ ಆಗಿರಲಿಕ್ಕಿಲ್ಲ. ನಾಗ್ಪುರದಲ್ಲಿ ಫಾಸ್ಟ್ ಟ್ರ್ಯಾಕ್ ನಿರ್ಮಿಸಲಾಗಿದೆ ಎಂಬ ಸುದ್ದಿ ವ್ಯಾಪಕ ಪ್ರಚಾರ ಪಡೆದದ್ದು, ಬಳಿಕ ಇಲ್ಲಿ ಸ್ಪಿನ್ನರ್‌ಗಳು ಮಿಂಚಿದ್ದು ಗೊತ್ತೇ ಇದೆ! ಹೀಗಾಗಿ ಇಲ್ಲಿ ಅಶ್ವಿನ್-ಜಡೇಜ ಜೋಡಿ ಮುಂದುವರಿಯುವುದರಲ್ಲಿ ಅನುಮಾನವಿಲ್ಲ.
ವಾಂಡರ್ಸೆ, ಸಂದಕನ್?
ಶ್ರೀಲಂಕಾದ ಪ್ರಧಾನ ಸ್ಪಿನ್ನರ್ ರಂಗನ ಹೆರಾತ್ ಗಾಯಾಳಾಗಿ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆದರೆ ಇದರಿಂದ ತಂಡಕ್ಕೆ ನಷ್ಟವೇನಿಲ್ಲ. ಕಾರಣ, ಹೆರಾತ್ ಈ ಸರಣಿಯಲ್ಲಿ ಸಾಧಿಸಿದ್ದೇನೂ ಇಲ್ಲ. ಅವರ ಬದಲು ವಾಂಡರ್ಸೆ ಆಥವಾ ಸಂದಕನ್ ಆಡಬಹುದು. ಉಳಿದಂತೆ ಲಂಕಾ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಸಂಭವ ಇಲ್ಲ. ಯಾರೇ ಬಂದರೂ ಪರಿಸ್ಥಿತಿ ಬದಲಾಗದಲ್ಲ ಎಂಬ ಚಿಂತೆ ಸಿಂಹಳೀಯರದು!
“ಕೋಟ್ಲಾ’ದಲ್ಲಿ ಭಾರತ
ಟೆಸ್ಟ್: 33
ಜಯ: 13
ಸೋಲು: 06
ಡ್ರಾ: 14
ಲಂಕಾ ವಿರುದ್ಧ ಒಂದೇ ಟೆಸ್ಟ್
ಹೊಸದಿಲ್ಲಿಯ ಐತಿಹಾಸಿಕ “ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ’ ಭಾರತದ ಅತ್ಯಂತ ಪುರಾತನ ಕ್ರಿಕೆಟ್ ಕ್ರೀಡಾಂಗಣ. 69 ವರ್ಷಗಳಷ್ಟು ಹಿಂದೆ, ಅಂದರೆ 1948ರಲ್ಲಿ ಈ ಅಂಗಳದಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಎದುರಾಳಿ ಜಾನ್ ಗೊಡಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್. ಭಾರತವನ್ನು ಲಾಲಾ ಅಮರನಾಥ್ ಮುನ್ನಡೆಸಿದ್ದರು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಇದರೊಂದಿಗೆ 5 ಪಂದ್ಯಗಳ ಸರಣಿ ಕೂಡ ಡ್ರಾ (0-0) ಆಗಿತ್ತು.
ಭಾರತವಿಲ್ಲಿ 2015ರ ಬಳಿಕ ಮೊದಲ ಸಲ ಟೆಸ್ಟ್ ಆಡಲಿಳಿಯಲಿದೆ. ಅಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯವನ್ನು ಕೊಹ್ಲಿ ನೇತೃತ್ವದ ಭಾರತ 337 ರನ್ನುಗಳ ದಾಖಲೆ ಅಂತರದಿಂದ ಗೆದ್ದಿತ್ತು.
ಕಳೆದ 3 ದಶಕಗಳ ಅವಧಿಯಲ್ಲಿ ಭಾರತ “ಕೋಟ್ಲಾ’ದಲ್ಲಿ ಅಜೇಯ ಸಾಧನೆ ದಾಖಲಿಸಿದೆ. 1987ರಲ್ಲಿ ವೆಸ್ಟ್ ಇಂಡೀಸಿಗೆ 5 ವಿಕೆಟ್‌ಗಳಿಂದ ಸೋತ ಬಳಿಕ ಭಾರತ ದಿಲ್ಲಿ ಟೆಸ್ಟ್‌ನಲ್ಲಿ ಎಡವಿದ್ದಿಲ್ಲ. ಈ ಅವಧಿಯಲ್ಲಿ ಆಡಿದ 11 ಟೆಸ್ಟ್‌ಗಳಲ್ಲಿ ಹತ್ತನ್ನು ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ.
“ಕೋಟ್ಲಾ’ದಲ್ಲಿ ಈವರೆಗೆ ಭಾರತ-ಶ್ರೀಲಂಕಾ ನಡುವೆ ನಡೆದದ್ದು ಒಂದೇ ಟೆಸ್ಟ್. ಅದು 2005ರ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯವಾಗಿತ್ತು. ರಾಹುಲ್ ದ್ರಾವಿಡ್ ನೇತೃತ್ವದ ಭಾರತ ಇದನ್ನು 188 ರನ್ನುಗಳ ಅಂತರದಿಂದ ಗೆದ್ದಿತ್ತು. ಒಟ್ಟು 10 ವಿಕೆಟ್ ಉರುಳಿಸಿದ ಅನಿಲ್ ಕುಂಬ್ಳೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಭಾರತ ಈ ಪಂದ್ಯದಲ್ಲಿ ಕೇವಲ ಒಬ್ಬ ಸ್ಪೆಷಲಿಸ್ಟ್ ಆರಂಭಿಕನನ್ನು ಹೊಂದಿತ್ತು. ಅದು ದಿಲ್ಲಿಯವರೇ ಆದ ಗೌತಮ್ ಗಂಭೀರ್. ಅವರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ದ್ರಾವಿಡ್ (24), ದ್ವಿತೀಯ ಇನ್ನಿಂಗ್ಸಿನಲ್ಲಿ ಇರ್ಫಾನ್ ಪಠಾಣ್ (93) ಇನ್ನಿಂಗ್ಸ್ ಆರಂಭಿಸಿದ್ದು ವಿಶೇಷ. ಸಚಿನ್ ತೆಂಡುಲ್ಕರ್ ಅವರ ಶತಕ (ಮೊದಲ ಇನ್ನಿಂಗ್ಸಿನಲ್ಲಿ 109 ರನ್), ಮುರಳೀಧರನ್ ಅವರ ಸ್ಪಿನ್ ಮಿಂಚು (ಮೊದಲ ಇನ್ನಿಂಗ್ಸ್‌ನಲ್ಲಿ 100ಕ್ಕೆ 7), ನಾಯಕ ಮರ್ವನ್ ಅತ್ತಪಟ್ಟು ಅವರ ಬ್ಯಾಟಿಂಗ್ ಹೋರಾಟವೆಲ್ಲ (88 ಮತ್ತು 67 ರನ್) ಈ ಪಂದ್ಯದ ಆಕರ್ಷಣೆಯಾಗಿದ್ದವು.
ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ಕೆ.ಎಲ್. ರಾಹುಲ್/ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಉಮೇಶ್ ಯಾದವ್.
ಶ್ರೀಲಂಕಾ: ದಿಮುತ್ ಕರುಣರತ್ನೆ, ಸದೀರ ಸಮರವಿಕ್ರಮ, ಲಹಿರು ತಿರಿಮನ್ನೆ, ದಿನೇಶ್ ಚಂಡಿಮಾಲ್ (ನಾಯಕ), ಏಂಜೆಲೊ ಮ್ಯಾಥ್ಯೂಸ್, ನಿರೋಷನ್ ಡಿಕ್ವೆಲ್ಲ, ದಸುನ್ ಶಣಕ, ದಿಲುÅವಾನ್ ಪೆರೆರ, ಸುರಂಗ ಲಕ್ಮಲ್, ಲಹಿರು ಗಾಮಗೆ, ಲಕ್ಷಣ ಸಂದಕನ್/ಜೆಫ್ರಿ ವಾಂಡರ್ಸೆ.
ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.