“ಸಣ್ಣ ಕೈಗಾರಿಕೆಗಳಿಂದ ಆರ್ಥಿಕಾಭಿವೃದ್ಧಿ’
Team Udayavani, Dec 2, 2017, 9:12 AM IST
ಉಡುಪಿ: ಸಣ್ಣ ಕೈಗಾರಿಕೆಗಳಿಂದ ದುಡಿಯುವ ಕೈಗಳಿಗೆ ಕೆಲಸ ದೊರೆತು ಆರ್ಥಿಕಾಭಿವೃದ್ಧಿ ಸಾಧ್ಯ. ಪ್ರತಿ ಊರಿನಲ್ಲಿಯೂ ಒಂದು ಸಣ್ಣ ದಾದರೂ ಕೈಗಾರಿಕೆ ಇರುವುದು ಅವಶ್ಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ರಜತ ಮಹೋತ್ಸವ ಅಂಗ ವಾಗಿ ಉಡುಪಿ ಬೀಡಿನಗುಡ್ಡೆಯ ಮಹಾತ್ಮಾಗಾಂಧಿ ಬಯಲು ರಂಗ ಮಂದಿರ ದಲ್ಲಿ ಡಿ.1ರಿಂದ 3ರವರೆಗೆ ಆಯೋಜಿಸಲಾಗಿರುವ ಕೈಗಾರಿಕಾ ವಸ್ತು ಪ್ರದರ್ಶನ “ಎಕ್ಸ್‌ಪೋ- 2017′ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ಸೌಲಭ್ಯಗಳನ್ನು ಅವಲಂಬಿಸುವುದಕ್ಕಿಂತಲೂ ಹೆಚ್ಚಾಗಿ ಉದ್ಯಮಿ ಗಳ ಸ್ವಂತ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆದು ನಿಂತಿವೆ. ಸರಕಾರ ಕೈಗಾರಿಕಾಭಿವೃದ್ಧಿ ಗಾಗಿ ಯೋಜನೆ ಜಾರಿಗೆ ತಂದಿದೆ ಯಾದರೂ ಅವುಗಳ ನಿಯಮಗಳು ಕಠಿನವಾಗಿವೆ ಎಂದು ಅವರು ಹೇಳಿದರು.
ವಿರೋಧದಿಂದ ಹಿನ್ನಡೆ
ಎಲ್ಲಾ ಕೈಗಾರಿಕೆಗಳಿಗೂ ಪರಿಸರ ನಾಶದ ಕಾರಣವೊಡ್ಡಿ ವಿರೋಧ ವ್ಯಕ್ತಪಡಿಸುವ ಮನೋಭಾವವನ್ನು ಜನರು ಬದಲಿಸಿಕೊಳ್ಳಬೇಕು. ಅಂತೆಯೇ ಕೈಗಾರಿಕೆಗಳು ಕೂಡ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕೈಗಾರಿಕೆಗಳನ್ನು ಪ್ರೋತ್ಸಾಹಿಸದಿದ್ದರೆ ಉದ್ಯೋಗ ಸೃಷ್ಟಿ ಅಸಾಧ್ಯ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ಪವರ್ ಕಾರ್ಪೊರೇಷನ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಅವರು ಮಾತನಾಡಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘವು ಜಿಲ್ಲೆಯ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸಹಕರಿಸುತ್ತಿರುವುದು ಶ್ಲಾಘನೀಯ. ಅದಾನಿ ಸಂಸ್ಥೆ ಕೂಡ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, “ಎಕ್ಸ್‌ಪೋ 2017’ರ ಚೇರ್‌ವೆುನ್ ಶಂಕರ ಸುವರ್ಣ, ಕೋ ಚೇರ್‌ವೆುನ್ ಜಗದೀಶ್ ರಾವ್, ಸಂಘದ ಮಾಜಿ ಅಧ್ಯಕ್ಷ ಮಟ್ಟಾರ್ ಗಣೇಶ್ ಕಿಣಿ, ಖಜಾಂಚಿ ಹೃಷಿಕೇಶ್ ಹೆಗ್ಡೆ ಉಪಸ್ಥಿತರಿದ್ದರು. ಅಧ್ಯಕ್ಷ ಎಚ್.ಸುಧೀರ್ ನಾಯಕ್ ಸ್ವಾಗತಿಸಿದರು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಂ.ವಸಂತ ಕಿಣಿ ವಂದಿಸಿದರು. ಮಂಜುಳಾ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಅದಾನಿ, ಉದಯವಾಣಿ ಮತ್ತು ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಈ ವಸ್ತುಪ್ರದ ರ್ಶನವನ್ನು ಆಯೋಜಿಸಲಾಗಿದ್ದು ಕೈಗಾರಿಕೆ, ಕೃಷಿಗೆ ಸಂಬಂಧಿಸಿದ ಯಂತ್ರಗಳು, ಸಣ್ಣ ಗುಡಿಕೈಗಾರಿಕೆ, ವಾಹನ, ಎಲೆಕ್ಟ್ರಿಕಲ್, ಸೋಲಾರ್, ಗೋಡಂಬಿ, ರೂಫಿಂಗ್, ಕಟ್ಟಡಗಳಿಗೆ ಸಂಬಂಧಿಸಿದ ಮಳಿಗೆ ಗಳು, ಆಹಾರ, ಕ್ರಿಯಾತ್ಮಕ ವಸ್ತುಗಳು, ಕರ ಕೌಶಲ ಮಳಿಗೆಗಳು ಸೇರಿದಂತೆ 102 ಮಳಿಗೆಗಳಿವೆ.
ಲಕ್ಷ ಲೈಸನ್ಸ್ ; ಶೇ. 5 ಪ್ರಗತಿ !
ರಾಜ್ಯದಲ್ಲಿ ಕೈಗಾರಿಕಾ ಪ್ರಗತಿಯ ಬಗ್ಗೆ ಕೈಗಾರಿಕಾ ಸಚಿವರನ್ನು ಪ್ರಶ್ನಿಸಿದೆ. ಆಗ ಅವರು “ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 1 ಲಕ್ಷದಷ್ಟು ಕೈಗಾರಿಕೆಗಳಿಗೆ ಪರವಾನಿಗೆ ನೀಡಿದ್ದೇವೆ’ ಎಂದಿದ್ದರು. ಆದರೆ ಅವುಗಳಿಗೆ ಮೂಲಸೌಕರ್ಯ ಒದಗಿಸಿಲ್ಲ. ಪರಿಣಾಮವಾಗಿ ಶೇ.5ರಷ್ಟು ಮಾತ್ರ ಕೈಗಾರಿಕಾ ಪ್ರಗತಿ ಆಗಿದೆ.
ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.