ಮುಖ್ಯ ಕಾರ್ಯದರ್ಶಿಗೆ ಕರಾವಳಿ ನಂಟು!


Team Udayavani, Dec 2, 2017, 9:35 AM IST

02-17.jpg

ಕಾರ್ಕಳ: ಇತ್ತೀಚೆಗಷ್ಟೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಐಎಎಸ್‌ ಅಧಿಕಾರಿ ರತ್ಮಪ್ರಭಾ ಅವರಿಗೂ ಕಾರ್ಕಳಕ್ಕೂ ನಂಟಿದೆ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ !

ಹೌದು ಕಳೆದ ವಾರವಷ್ಟೇ ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿದ ಮಹಿಳಾಮಣಿ ರತ್ನಪ್ರಭಾ ಅವರ ತಾಯಿ ಕಾರ್ಕಳದವರು. ಕಾರ್ಕಳದಲ್ಲಿ ಉದ್ಯಮಿ, ರಾಜಕಾರಣಿಯಾಗಿ ಗುರುತಿಸಿ ಜನಪ್ರಿಯರಾಗಿದ್ದ ಹಳೆ ದ್ವಾರಕಾ ಹೊಟೇಲಿನ ಮಾಲಕ ಸದಾನಂದ ಕಾಮತ್‌ ಅವರ ಸೋದರಿಯಾಗಿದ್ದ ವಿಮಲಾ ಬಾೖ ಅವರ ಮೂವರು ಮಕ್ಕಳಲ್ಲಿ ರತ್ನಪ್ರಭಾ ಕೊನೆಯವರು. 

ಕಾರ್ಕಳದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ ದಿ|ವಿಮಲಾ ಬಾೖ ಅವರು ಆಂಧ್ರ ಮೂಲದ ಅಧಿಕಾರಿ ಚಂದ್ರಯ್ಯ ಅವರನ್ನು ವಿವಾಹವಾಗಿದ್ದರು.  ತಮ್ಮ ಬಾಲ್ಯ ಹಾಗೂ ಶಿಕ್ಷಣವನ್ನು ಆಂಧ್ರಪ್ರದೇಶದಲ್ಲಿಯೇ ಪೂರೈಸಿದ ರತ್ನಪ್ರಭಾ ಅವರು ತಾಯಿ ವಿಮಲಾ ಅವರ ಜತೆಗೆ ರಜಾದಿನಗಳಲ್ಲಿ ಕಾರ್ಕಳದತ್ತ ಬಂದು ಕುಟುಂಬದ ಸದಸ್ಯರ ಜತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದರು.
ಈಗಲೂ ವರ್ಷಕ್ಕೊಂದು ಬಾರಿ ಕಾರ್ಕಳಕ್ಕೆ ಬರುವ ಅವರು, ಕುಟುಂಬದ ಕಾರ್ಯಕ್ರಮಗಳಲ್ಲಿ, ತಮ್ಮ ಕುಟುಂಬದ ದೇವಸ್ಥಾನದ ಪೂಜಾ ಮಹೋತ್ಸವಗಳಲ್ಲಿ  ಪಾಲ್ಗೊಳ್ಳುತ್ತಾರೆ.

ಕರಾವಳಿಯ ನಿಕಟ ಸಂಪರ್ಕ
ತಾಯಿ ವಿಮಲಾ ಅವರು ಮಂಗಳೂರು, ಪುತ್ತೂರು, ಕಾರ್ಕಳ ಮೊದಲಾದ ಕಡೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರಿಂದ ಆ ಊರುಗಳ ಸಂಪರ್ಕವೂ ರತ್ನಪ್ರಭಾ  ಅವರಿಗಿದೆ.  ವಿಮಲಾ ಅವರು ಮಂಗಳೂರಿನ ಲೇಡಿ ಗೋಶನ್‌ನಲ್ಲಿಯೂ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದು ಸ್ಕಿನ್‌ ಸ್ಪೆಷಲಿಸ್ಟ್‌ ಆಗಿದ್ದರು. 2016ರಲ್ಲಿ ತಾಯಿ ನಿಧನ ಹೊಂದಿದಾಗ ಕೊನೆಯ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದ್ದ ರತ್ನಪ್ರಭಾ ಅವರಿಗೆ ಕಾರ್ಕಳ ಇಷ್ಟವಾದ ತಾಣವಂತೆ. ಕಾರ್ಕಳದಲ್ಲಿರುವ ಪೂರ್ವಜರ ಮನೆ, ವಾತಾವರಣ ಎಲ್ಲವೂ ಅವರಿಗೆ ಮೆಚ್ಚುಗೆ ಎನ್ನುವ ಮಾಹಿತಿಯನ್ನು ಪ್ರಸ್ತುತ ಬೆಂಗಳೂರಿನಲ್ಲಿರುವ ಕಾರ್ಕಳದ ದಿ| ಸದಾನಂದ ಕಾಮತ್‌ ಅವರ ಮಕ್ಕಳು ನೀಡುತ್ತಾರೆ.

ಸಂಸ್ಕೃತಿ ಪ್ರಿಯೆ; ಕೊಂಕಣಿ ಮೋಹ
ರತ್ನಪ್ರಭಾ ಅವರಿಗೆ ಕೊಂಕಣಿ ಎಂದರೆ ಇಷ್ಟ . ಮನೆ ಭಾಷೆ ಕೊಂಕಣಿಯಾದ್ದರಿಂದ ಭಾಷೆಯ ಮೇಲೆ ಅಭಿಮಾನ ಜಾಸ್ತಿ. ಆಂಧ್ರ ಮೂಲದ ಹುಡುಗನನ್ನು ವರಿಸಿದ್ದರೂ, ಕೊಂಕಣಿ ಭಾಷೆ ಹಾಗೂ ಊರಿನ ವ್ಯಾಮೋಹದಿಂದ ತಮ್ಮ ಮಗ, ಮಗಳಿಗೂ ಕೊಂಕಣಿ ಕಲಿಸಿದ್ದಾರೆ. ಭಾಷಾ ಪ್ರೇಮವನ್ನೂ ಉಳಿಸಿಕೊಂಡಿದ್ದಾರೆ. ಅಲ್ಲದೇ ಟೆನ್ನಿಸ್‌ನಲ್ಲಿಯೂ ಅವರು ಪ್ರವೀಣೆಯಾಗಿದ್ದರು ಎನ್ನುವ ಮಾಹಿತಿಯನ್ನು ಸದಾನಂದ ಕಾಮತ್‌ ಮಕ್ಕಳು ನೀಡುತ್ತಾರೆ.

ಪ್ರಸಾದ್‌ ಶೆಣೈ ಕಾರ್ಕಳ

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(7

Udupi; ಎಂಜಿಎಂ ಅಮೃತೋತ್ಸವ: ಕಣ್ಮನ ಸೆಳೆದ ವಸ್ತು ಪ್ರದರ್ಶನ

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

3(1

Sullia: ಬಸ್‌ ತಂಗುದಾಣ ನಿರ್ವಹಣೆಗೆ ನಿರಾಸಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.