ಪ್ರವಾಸೋದ್ಯಮ: ಇವರ ಬದ್ಧತೆ ನಮಗಿದ್ದಿದ್ದರೆ? 


Team Udayavani, Dec 2, 2017, 9:43 AM IST

02-19.jpg

7516 ಕಿ.ಮೀ ಕರಾವಳಿ, 1,08,000 ದೇವಸ್ಥಾನಗಳು, ನದಿಗಳು-ಸರೋವರಗಳು, ನೂರಾರು ಪರ್ವತ ಶ್ರೇಣಿಗಳು, ವೈವಿಧ್ಯಮಯ ಸಂಸ್ಕೃತಿ,  ಭಾಷೆಯಿಂದ ತುಂಬಿರುವ ನಮ್ಮ ದೇಶ ಜಗತ್ತನ್ನೇ ದಿಗ್ಭ್ರಮೆಗೊಳಿಸುವ ಪ್ರವಾಸೋದ್ಯಮ ದೇಶವಾಗಿ ಬೆಳೆಯಬಹುದಿತ್ತು. ದೇಶದ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡಬಹುದಿತ್ತು.

ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿಯೆಟ್ನಾಂ ಮತ್ತು ಕಾಂಬೋಡಿಯಾ ದೇಶಗಳು ಮುಂಚೂಣಿಯಲ್ಲಿವೆ. ಯುದ್ಧದಲ್ಲಿಯೇ ಹುಟ್ಟಿ, ಬದುಕಿ-ಬೆಳೆದಿರುವ ದೇಶ ವಿಯೆಟ್ನಾಂ. ಚೀನಾ, ಫ್ರಾನ್ಸ್‌ ಮತ್ತು ಅಮೆರಿಕದಂಥ ದೈತ್ಯ ರಾಷ್ಟ್ರಗಳನ್ನು ಎದುರಿಸಿ ಬದುಕುಳಿದ ದೇಶ ಇದು. 

ಸುಮಾರು 30 ವರ್ಷಗಳ ಕಾಲ ಹೋರಾಡಿ ದೊಡ್ಡಣ್ಣ ಅಮೆರಿಕವನ್ನು ಸೋಲಿಸಿದ ಕೀರ್ತಿ ವಿಯೆಟ್ನಾಂ ದೇಶದ್ದಾಗಿದೆ. ಇದರ ಅಧ್ಯಕ್ಷ ಹೋಚಿಮಿನ್‌ ನೇತೃತ್ವದಲ್ಲಿ ಆ ದೇಶ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಂಡಿತು. ಸುಮಾರು 96 ಮಿಲಿಯನ್‌ ಜನಸಂಖ್ಯೆ, ಅಂದರೆ ಜಗತ್ತಿನ ಜನಸಂಖ್ಯೆಯ 1.27% ಇರುವ ಈ ದೇಶದಲ್ಲಿ ಕೃಷಿ, ಜಿಡಿಪಿಗೆ ಸಾಕಷ್ಟು ಬಲಕೊಟ್ಟರೂ, ಪ್ರವಾಸೋದ್ಯಮ ದೇಶದ ಜಿಡಿಪಿಗೆ ಸುಮಾರು 12.57 ಬಿಲಿಯನ್‌ ಡಾಲರ್‌ ಕಾಣಿಕೆ ನೀಡುತ್ತಿದೆ. ಈ ದೇಶ 10 ಮಿಲಿಯನ್‌ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶದ ಜಿಡಿಪಿಯು 6.60%ರಷ್ಟನ್ನು ಗಳಿಸುತ್ತಿದೆ. ಪ್ರವಾಸೋದ್ಯಮದಲ್ಲಿ 184 ರಾಷ್ಟ್ರಗಳಲ್ಲಿ 40ನೇ ಸ್ಥಾನದಲ್ಲಿದೆ. 

ಇತ್ತೀಚೆಗಿನ ದಿನಗಳಲ್ಲಿ ವಿಯೆಟ್ನಾಂ ಮತ್ತು ಕಾಂಬೋಡಿಯಾ -ಈ ಎರಡೂ ದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದ್ದು, ಇದು ವ್ಯಾಪಕವಾಗಿ ಬೆಳೆಯುತ್ತಿದೆ. ಜಗತ್ತಿನ ಬಹುತೇಕ ದೇಶಗಳಿಂದ ಪ್ರವಾಸಿಗರು ದಂಡು ದಂಡಾಗಿ ಬರುತ್ತಿರುವುದು ಈ ದೇಶಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಈ ಸಣ್ಣ ರಾಷ್ಟ್ರಗಳಿಗೆ ಅಮೆರಿಕ, ಯುರೋಪ್‌, ಚೀನ ಮತ್ತು ಆಸ್ಟ್ರೇಲಿಯಾಗಳಿಂದಲೂ ಪ್ರವಾಸಿಗರು ಬರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ವಿಯೆಟ್ನಾಂ ದೇಶ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದರೆ, ಕಾಂಬೋಡಿಯಾ ದೇಶವು ಪ್ರಕೃತಿಯ ವಿಶೇಷದೊಂದಿಗೆ, ಚಾರಿತ್ರಿಕವಾಗಿಯೂ ಪ್ರವಾಸಿಗರನ್ನು ಸೆಳೆಯುತ್ತಿದೆ. ವಿಯೆಟ್ನಾಂ ರಾಜಧಾನಿ ಹನಾಯಿಯಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಟಾಮ್‌ಕೋಕ್‌ ಸ್ಥಳದ ವಿಶೇಷತೆ ಎಂದರೆ, ಇದು ಪ್ರಕೃತಿ ಸೌಂದರ್ಯದ ದೊಡ್ಡಣ್ಣ. ವಿಶಾಲವಾದ ನೆಗೋಡೊಂಗ್‌ ನದಿಯ ಮಧ್ಯದಲ್ಲಿ ದೊಡ್ಡ ಪರ್ವತಗಳು ಇದ್ದು, ದೋಣಿಯ ಮೂಲಕ ನದಿಯಲ್ಲಿ ಸಾಗುವಾಗ, ಗಗನಚುಂಬಿ ಪರ್ವತಗಳ ಮಧ್ಯದಲ್ಲಿ ಮತ್ತು ಪಕ್ಕದಲ್ಲಿ ಹಾದು ಹೋಗಬೇಕಾಗುತ್ತಿದ್ದು, ಆ ಸುಂದರ ದೃಶ್ಯಗಳು ಮನಸೂರೆಗೊಳ್ಳುತ್ತವೆ. ವಿಶೇಷತೆ ಎಂದರೆ ನದಿಯೇ ಪರ್ವತದೊಳಗಿಂದ ಹಾದು ಹೋಗುವುದರಿಂದ, ಈ ಪ್ರಕೃತಿ ನಿರ್ಮಿತ ಗವಿ ಪ್ರವಾಸಿಗರಲ್ಲಿ ಒಂದು ರೀತಿಯ ರೋಮಾಂಚನವನ್ನು ಹುಟ್ಟಿಸುತ್ತದೆ. ಗವಿಯ ಒಳಗಡೆ ಎಲ್ಲಾದರೂ ತಲೆಗೆ ಏಟು ಬೀಳಬಹುದೆನ್ನುವ ಭಯ ಒಂದಾದರೆ, ದೋಣಿಯ ನಾವಿಕ ನಮ್ಮನ್ನು ಯಾವ ದಿಕ್ಕಿಗೆ ಒಯ್ಯಬಹುದು ಎನ್ನುವ ಸಂಶಯ ಉಂಟಾಗುತ್ತದೆ. ಸುರಂಗದ ಕೊನೆಯಲ್ಲಿ ಆಶಾ ಕಿರಣ ಇದೆ ಎನ್ನುವಂತೆ ಕೊನೆಗೊಮ್ಮೆ ಸುರಂಗದಿಂದ ಹೊರಬಂದಾಗ ಹಲವಾರು ಮಹಿಳೆಯರು ಬೇರೆ ಬೇರೆ ದೋಣಿಗಳಿಂದ ಹೊರ ಬಂದು ಹಣ್ಣು-ಹಂಪಲು, ತಿಂಡಿ-ತಿನಿಸುಗಳು ಮತ್ತು ತಂಪು ಪಾನೀಯಗಳಿಂದ ಪ್ರವಾಸಿಗರನ್ನು ಸ್ವಾಗತಿಸುತ್ತಾರೆ. ನದಿಯಲ್ಲಿರುವ ದೋಣಿಯಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ಅಥವಾ ವಾಣಿಜ್ಯ ಕೇಂದ್ರಗಳಲ್ಲಾಗಲಿ 90% ಮಹಿಳೆಯರೇ ಕಾಣುತ್ತಾರೆ. ಇದೊಂದು ಅವಿಸ್ಮರಣೀಯ ಮತ್ತು ಅದ್ಭುತ ಅನುಭವ. 

ವಿಯೆಟ್ನಾಂ ಪ್ರವಾಸದಲ್ಲಿ ಇನ್ನೊಂದು ಅಚ್ಚರಿಯ, ಮನಮೋಹಕ ಮತ್ತು ಆಶ್ಚರ್ಯಕರ ದೃಶ್ಯಗಳು ಕಂಡುಬರುವುದು ಅಲ್ಲಿಯ ಹಲೊಂಗ್‌ ಬೇ ಎನ್ನುವ ಸಮುದ್ರ ತೀರದಲ್ಲಿ. ಹನಾಯಿಯಿಂದ ಸುಮಾರು ಮೂರು ತಾಸಿನ ಬಸ್ಸಿನ ಪ್ರವಾಸವಾಗಿದ್ದು, ಅನಂತರ ಹಡಗಿನಲ್ಲಿ ಕರೆದೊಯ್ಯುತ್ತಾರೆ. ಪ್ರವಾಸಿಗರಿಗೆ ಊಟ ಮತ್ತು ವಸತಿಯ ವ್ಯವಸ್ಥೆ ಹಡಗಿನಲ್ಲಿಯೇ ಆಗಿರುತ್ತದೆ. ಸಮುದ್ರ ಮಧ್ಯದಲ್ಲಿ ನೂರಾರು ದ್ವೀಪಗಳು ಮತ್ತು ಪರ್ವತಗಳು ಕಾಣುತ್ತಿದ್ದು, ಪ್ರಪಂಚದಲ್ಲಿ ಎಲ್ಲೂ ನೋಡಲು ಸಿಗದ ರಮಣೀಯ ಪ್ರಕೃತಿಯ ದೃಶ್ಯಗಳು ಗೋಚರವಾಗುತ್ತವೆ. ಅದರಲ್ಲೂ ಸಮುದ್ರದಲ್ಲಿರುವ ಪರ್ವತದ ಮಧ್ಯದಲ್ಲಿರುವ ದೊಡ್ಡ ಗುಹೆ ಒಳಗಿನ ಅವಿಸ್ಮರಣೀಯ ದೃಶ್ಯಗಳನ್ನು ನೋಡುವಾಗ ಬಹಳ ಆಶ್ಚರ್ಯವಾಗುತ್ತದೆ. 

ಈ ದೇಶದ ಜನತೆ ದಶಕಗಳಷ್ಟು ಕಾಲ ತಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದರೂ ದೇಶ ಅಭಿವೃದ್ಧಿಯ ಬಗೆಗೆ, ಜನರಿಗೆ ಬೇಕಾದ ಸಾರಿಗೆ, ಸಂಪರ್ಕ, ದೂರವಾಣಿ ಸಂಪರ್ಕ, ಜನರ ಆರೋಗ್ಯ ಕಾಪಾಡಲು ಬೇಕಾಗಿರುವ ಆಸ್ಪತ್ರೆಗಳು, ಕೃಷಿಕರಿಗೆ ಬೇಕಾಗಿರುವ ನೀರಾವರಿ, ಮಕ್ಕಳಿಗೆ ಯುವಕರಿಗೆ ಬೇಕಾದ ಶಿಕ್ಷಣ ಮತ್ತು ಜನತೆಗೆ ಬೇಕಾದ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಸರಕಾರ ಬಹಳಷ್ಟು ಮುತುವರ್ಜಿ ತೆಗೆದುಕೊಂಡಿರುವುದು ಗಮನಾರ್ಹ. ಇಲ್ಲಿ ಬಹಳಷ್ಟು ಮಳೆ ಬೀಳುತ್ತಿದ್ದರೂ, ರಸ್ತೆಗಳಲ್ಲಿ ನೀರು ನಿಂತಿರುವುದಾಗಲೀ ಅಥವಾ ರಸ್ತೆ ಗುಂಡಿಗಳಾಗಲೀ ಕಾಣಸಿಗುವುದಿಲ್ಲ. 

ವಿಯೆಟ್ನಾಂ ದೇಶ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದರೆ, ಕಾಂಬೋಡಿಯಾ ದೇಶ ಚಾರಿತ್ರಿಕವಾಗಿ ಹೆಸರುವಾಸಿಯಾಗಿದೆ. ಅಲ್ಲಿಯ ಸೀಮ್‌ ರೀಫ್ನಲ್ಲಿರುವ ಅಂಕುರ್‌ ದೇವಸ್ಥಾನಕ್ಕೆ ಜಗತ್ತಿನಲ್ಲಿಯೇ ಅತಿದೊಡ್ಡ ದೇವಸ್ಥಾನವೆನ್ನುವ ಹೆಗ್ಗಳಿಕೆ ಇದೆ. ಸುಮಾರು 12ನೇ ಶತಮಾನದಲ್ಲಿ ರಾಜವರ್ಮನೆನ್ನುವ ರಾಜನು ಈ ಹಿಂದು ದೇವಾಲಯವನ್ನು ಕಟ್ಟಿಸಿದ್ದನಂತೆ. ಸುಮಾರು 210 ಹೆಕ್ಟೇರ್‌ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಪ್ರವಾಸಿಗರಲ್ಲಿ ದಿಗಿಲುಂಟು ಮಾಡುತ್ತದೆ. ಯಂತ್ರಗಳ ಸಹಾಯವಿಲ್ಲದೇ, ಕೇವಲ ಆನೆ ಮತ್ತು ಕುದುರೆಗಳ ಸಹಾಯದಿಂದ ಬೃಹದಾಕಾರದ ಕಲ್ಲುಗಳನ್ನು ಅಷ್ಟೆತ್ತರಕ್ಕೆ ಒಯ್ದು ದೇವಾಲಯಗಳನ್ನು ನಿರ್ಮಾಣ ಮಾಡಿರುವುದು ಪ್ರವಾಸಿಗರು ಮೂಗಿನ ಮೇಲೆ ಬೆರಳು ಇಡುವಂತೆ ಮಾಡುತ್ತದೆ. ಹಾಗೆಯೇ ಅಂಕೋರೇಮ್‌ ಬುದ್ದ ದೇವಾಲಯದಲ್ಲಿ ನಗುಮುಖದ ಬುದ್ಧನ ಹಲವಾರು ಪ್ರತಿಮೆಗಳು ಅಂದಿನ ಶಿಲ್ಪಿಗಳ ವೈಶಿಷ್ಟ್ಯಕ್ಕೆ ಮಾದರಿಯಾಗಿವೆ. ಇಲ್ಲಿನ ಹಿಂದು ಮತ್ತು ಬುದ್ಧ ದೇವಾಲಯಗಳಲ್ಲಿರುವ ಭಾರತ ಮತ್ತು ಕಾಂಬೋಡಿಯಾದ ಸಮ್ಮಿಶ್ರಿತ ವಾಸ್ತುಶಿಲ್ಪ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ದೇಶದ ತುಂಬಾ ತುಂಬಿರುವ ವಿಶಾಲವಾದ ಸರೋವರಗಳು ನೂರಾರು ಮೈಲುಗಳಷ್ಟು ವಿಸ್ತಾರವನ್ನು ಆವರಿಸಿಕೊಂಡಿದ್ದು, ಅವುಗಳಲ್ಲಿ ಪ್ರಯಾಣ ಮಾಡುವಾಗ ಸಮುದ್ರಯಾನದ ಅನುಭವವಾಗುತ್ತದೆ. ಈ ಸರೋವರಗಳಲ್ಲಿ ಅಲ್ಲಿನ ಜನರ ದೈನಂದಿನ ಜೀವನ ಹಾಸುಹೊಕ್ಕಾಗಿರುವದು ಇನ್ನೊಂದು ವಿಶೇಷ. ಸಾವಿರಾರು ಜನರು ಅಲ್ಲಿಯೇ ಮನೆ ಕಟ್ಟಿಕೊಂಡು ಬೇರೆ ಬೇರೆ ರೀತಿಯ ಜೀವನ ಸಾಗಿಸುವುದು ಆಶ್ಚರ್ಯಕರವಾಗಿರುತ್ತದೆ. ಸರೋವರದ ಮೇಲೆ ಚರ್ಚ್‌ಗಳು, ಶಾಲೆಗಳು, ನೀರಿನ ಮೇಲೆ ಚಲಿಸುವ ದೊಡ್ಡ ದೊಡ್ಡ ಮಾರುಕಟ್ಟೆಗಳನ್ನು ನೋಡುವುದೇ ಒಂದು ಅವಿಸ್ಮರಣೀಯ ಅನುಭವ. ಸರೋವರಗಳಲ್ಲಿ ನೂರಾರು ಹೆಕ್ಟೇರ್‌ಗಳಷ್ಟು ತಾವರೆ ತೋಟಗಳನ್ನು ಬೆಳೆಸಿ ಮತ್ತು ಅದರ ಸಂಗಡ ಮೀನುಗಾರಿಕೆಯನ್ನು ನಡೆಸಿ ಅದನ್ನೇ ಜೀವನಕ್ಕೆ ಅವಲಂಬಿಸಿರುವ ನೂರಾರು ಕುಟುಂಬಗಳನ್ನು ಅಲ್ಲಿ ನೋಡಬಹುದು. 

ಕಾಂಬೋಡಿಯಾ ಒಂದು ಅಭಿವೃದ್ಧಿ ಹೊಂದುತ್ತಿರುವ ದೇಶವಾದರೂ ದೇಶದ ಅಭಿವೃದ್ಧಿ, ಜೀವನ ಮಟ್ಟವನ್ನು ಮತ್ತು ಜೀವನ ಪಥವನ್ನು ನೋಡಿದರೆ, ಅಭಿವೃದ್ಧಿ ಹೊಂದಿದ ದೇಶದಂತೆ ಕಾಣುತ್ತದೆ. ಅಲ್ಲಿಯೂ ನಮ್ಮ ದೇಶದಂತೆ ಮಳೆ ಸುರಿಯುತ್ತಿದ್ದರೂ ರಸ್ತೆ ಗುಂಡಿಗಳಾಗಲೀ, ರಸ್ತೆ ಅಪಘಾತವಾಗಲೀ ಕಾಣುತ್ತಿಲ್ಲ. ರಸ್ತೆಗಳಲ್ಲಿ ಹಂಪ್‌ಗ್ಳು, ಸ್ಪೀಡ್‌ ಬ್ರೇಕರ್‌ಗಳು ಕಾಣುವುದಿಲ್ಲ. ಪೊಲೀಸರು ಅಪರೂಪದ ಅತಿಥಿಗಳು ಮಾತ್ರ. ಅಲ್ಲಿ ಜನರ ನೀತಿ ನಿಯಮಾವಳಿಗಳು, ಶಿಸ್ತು ಹಾಗೂ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಮಹಿಳೆಯರಲ್ಲಿ ಕಾಣುವ ಕಾರ್ಯ ನಿಷ್ಠೆ ಸ್ತುತ್ಯರ್ಹ. ದಿನನಿತ್ಯದ ಜೀವನದಲ್ಲಿ ಭ್ರಷ್ಟಾಚಾರ ಅತಿ ಕಡಿಮೆ ಎನ್ನಬಹುದು. ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರಕಾರದ ಸದಾ ಎಚ್ಚರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಹಾಗೆಯೇ ಸುಖೀ ಜೀವನಕ್ಕೆ ಗುಣಾತ್ಮಕ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಈ ದೇಶ ಮುಂಚೂಣಿಯಲ್ಲಿದೆ. ಜಿಡಿಪಿ ನಿಟ್ಟಿನಲ್ಲಿ ಭಾರತವು ಜಗತ್ತಿನ 7ನೇ ಅತಿ ದೊಡ್ಡ ಪ್ರವಾಸಿ ಆರ್ಥಿಕ ದೇಶ. ಸುಮಾರು 40.03 ಮಿಲಿಯನ್‌ ಉದ್ಯೋಗ ಸೃಷ್ಟಿಸಿ ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. 2016ರಲ್ಲಿ ಭಾರತವು 9 ಮಿಲಿಯ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದ್ದು, ಜಾಗತಿಕವಾಗಿ 7ನೇ ಸ್ಥಾನದಲ್ಲಿದೆ. ದೇಶದ ಜಿ.ಡಿ.ಪಿ.ಗೆ 9.60% ನೀಡುವ ಈ ಉದ್ಯಮ ದೇಶದ ಆದಾರಕ್ಕೆ 14.10 ಟ್ರಿಲಿಯನ್‌ ರೂಪಾಯಿ ಅಥವಾ 2085.90 ಬಿಲಿಯನ್‌ ಡಾಲರ್‌ ನೀಡುತ್ತಿದೆ. 7516 ಕಿ.ಮೀ ಕರಾವಳಿ, 1,08,000 ದೇವಸ್ಥಾನಗಳು, ಸಾವಿರಾರು ನದಿಗಳು-ಸರೋವರಗಳು, ನೂರಾರು ಪರ್ವತ ಶ್ರೇಣಿಗಳು, ವೈವಿಧ್ಯಮಯ ಸಂಸ್ಕೃತಿ, ಜೀವನ ಪದ್ಧತಿ, ಭಾಷೆಯಿಂದ ತುಂಬಿರುವ ನಮ್ಮ ದೇಶ ಜಗತ್ತನ್ನೇ ದಿಗ್ಭ್ರಮೆಗೊಳಿಸುವ ಪ್ರವಾಸೋದ್ಯಮ ದೇಶವಾಗಿ ಬೆಳೆಯಬಹುದಿತ್ತು. ದೇಶದ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡಬಹುದಿತ್ತು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಒದಗಿಸಬಹುದಿತ್ತು. ಆದರೆ, ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನಾವು ಬಹಳ ಹಿಂದೆ ಉಳಿದಿದ್ದೇವೆ, 

ಎ.ಬಿ. ಶೆಟ್ಟಿ ಬೆಂಗಳೂರು

ಟಾಪ್ ನ್ಯೂಸ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.