ಧೋನಿ ಸೈನಿಕ ದೇಶಪ್ರೇಮ
Team Udayavani, Dec 2, 2017, 12:20 PM IST
ಭಾರತ ತಂಡ ಅಪ್ರತಿಮ ಕ್ರಿಕೆಟಿಗರೊಬ್ಬರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಆ ಹೆಸರಿನಲ್ಲೇ ಪವರ್ ಇದೆ, ಜತೆಗೆ ಕೂಲ್ ಕ್ಯಾಪ್ಟನ್ ಖ್ಯಾತಿ. ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಧೀರ. ವಿಕೆಟ್ ಹಿಂದೆ ನಿಂತು ಪಕ್ಕಾ ಲೆಕ್ಕಾಚಾರ ಹಾಕಬಲ್ಲ ಚಾಣಾಕ್ಷ ವಿಕೆಟ್ ಕೀಪರ್. ಹೆಲಿಕಾಪ್ಟರ್ ಹೊಡೆತದಿಂದ ಎದುರಾಳಿ ಹೆಡೆಮುರಿ ಕಟ್ಟಬಲ್ಲ ನಿಷ್ಣಾತ. ಎಂತಹ ಸಮಯದಲ್ಲೂ ಧೈರ್ಯಕಳೆದುಕೊಳ್ಳದ ಸಾಹಸಿ… ಹೀಗೆ ಧೋನಿ ಗುಣಗಾನ ಮಾಡಲು ಅನೇಕ ಉದಾಹರಣೆಗಳಿವೆ. ಹೌದು, ಧೋನಿಗೆ ಧೋನಿಯೇ ಸಾಟಿ. ಕ್ರಿಕೆಟ್ ಹೊರತಾಗಿ ಧೋನಿಯನ್ನೊಮ್ಮೆ ಗಮನಿಸುವುದಾದರೆ ಆತನೊಬ್ಬ ಅಪ್ಪಟ ದೇಶಪ್ರೇಮಿ. ಭಾರತ ಸೈನ್ಯದ ಹೆಮ್ಮೆಯ ಲೆಫ್ಟಿನೆಂಟ್ ಕರ್ನಲ್. 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿ ಕೊಟ್ಟದ್ದಕ್ಕೆ ಪ್ಯಾರಚೂಟ್ ರೆಜಿಮೆಂಟ್‌ನಿಂದ ಧೋನಿಗೆ ಲೆಫ್ಟಿನೆಂಟ್ ಕರ್ನಲ್ ಗೌರವಾರ್ಥ ಹುದ್ದೆ ನೀಡಲಾಗಿತ್ತು.
ಸೈನಿಕರ ಸಮವಸ್ತ್ರದಲ್ಲಿ ಧೋನಿ ಪ್ರತ್ಯಕ್ಷ
ಒಂದು ಕಡೆ ಭಾರತ-ಶ್ರೀಲಂಕಾ ನಡುವೆಭಾರತ ಆತಿಥ್ಯದಲ್ಲಿ ಟೆಸ್ಟ್ ಸರಣಿ ನಡೆಯು ತ್ತಿದೆ. ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ವಿಶ್ರಾಂತಿಯಲ್ಲಿದ್ದಾರೆ. ಹಾಗಂತ ನೋಡಿದರೆ ಧೋನಿ ವಿಶ್ರಾಂತಿ ತೆಗೆದು ಕೊಂಡಿಲ್ಲ!, ಶ್ರೀನಗರ, ಜಮ್ಮು-ಕಾಶ್ಮೀರದಲ್ಲಿ ಸೈನಿಕ ಸಮವಸ್ತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸೈನಿಕ ಶಾಲೆ ಹಾಗೂ ಸೈನಿಕರಲ್ಲಿಗೆ ತೆರಳಿದ್ದಾರೆ. ಮುಕ್ತವಾಗಿ ಮಾತನಾಡಿದ್ದಾರೆ. ಕೆಲ ಹೊತ್ತು ಕಳೆದಿದ್ದಾರೆ.
ಸೈನಿಕ ಶಾಲೆಗೆ ಹಠಾತ್ ಭೇಟಿ
ಧೋನಿ ಶ್ರೀನಗರದ ಚಿನ್ನಾರ್‌ನಲ್ಲಿರುವ ಸೈನಿಕ ಶಾಲೆಗೆ ಎರಡು ವಾರಗಳ ಹಿಂದೆ ಹಠಾತ್ ಬೇಟಿ ನೀಡಿದ್ದಾರೆ. ಧೋನಿ ಆ ಶಾಲೆಗೆ ಆಗಮಿಸುತ್ತಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಧೋನಿಯನ್ನು ಕಂಡ ಮಕ್ಕಳು ಫುಲ್ ಖುಷಿಗೊಂಡರು. ಎಲ್ಲರೊಂದಿಗೂ ಧೋನಿ ಬೆರೆತರು. ತಾಳ್ಮೆಯಿಂದ ಆಟೋಗ್ರಾಫ್ ನೀಡಿದರು. ಸೆಲ್ಫಿà ತೆಗೆದುಕೊಂಡರು. ಇದೇ ವೇಳೆ ಧೋನಿ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಪಾಠ ಮಾಡಿದರು. ದೇಶಕ್ಕಾಗಿ ಸಾಧನೆ ಮಾಡಬೇಕು. ಎಲ್ಲರೂ ಗುರುತಿಸುವಂತಹ ಕೆಲಸವನ್ನು ಮಾಡಿ ತಂದೆ-ತಾಯಿಗೆ, ದೇಶಕ್ಕೆ ಒಳ್ಳೆ ಹೆಸರು ಬರುವಂತಹ ಕಾರ್ಯವನ್ನು ಮಾಡಿ ಎಂದು ಕಿವಿಮಾತು ಹೇಳಿದರು.
ಅಫ್ರಿದಿಗೆ ಜೈಕಾರ: ತಾಳ್ಮೆ ಕಳೆದುಕೊಳ್ಳದ ಧೋನಿ
ಧೋನಿ ಸದಾ ಕೂಲ್. ಎಲ್ಲಿಯೂ ತಾಳ್ಮೆ ಕಳೆದು ಕೊಳ್ಳುವುದಿಲ್ಲ. ಜಮ್ಮು-ಕಾಶ್ಮೀರಕ್ಕೆ ಭೇಟಿ ಕೊಟ್ಟಾಗ ಇವರು ತಾಳ್ಮೆ ಪ್ರದರ್ಶಿಸಿ ಮತ್ತೂಮ್ಮ ತಾನು ಕೂಲ್ ಕ್ಯಾಪ್ಟನ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಧೋನಿ ಆಗಮಿಸಿದ ವೇಳೆ ಕೆಲ ಕಿಡಿಗೇಡಿಗಳು “ಅಫ್ರಿದಿ…ಅಫ್ರಿದಿ’ ಎಂದು ಕೂಗಿದರು. ಭಾರತ ಸೈನಿಕರು ಈ ವೇಳೆ ಅವರನ್ನೆಲ್ಲ ತಡೆದು ಧೋನಿ ಆಗಮನಕ್ಕೆ ದಾರಿ ಮಾಡಿಕೊಟ್ಟರು. ಕೆಲವರು “ಬೂಮ್….ಬೂಮ್ ಅಫ್ರಿದಿ’ ಎಂದರು, ಆಗ ಕೂಡ ಧೋನಿ ತಾಳ್ಮೆಯಿಂದಲೇ ಇದ್ದರು.
ಸೈನಿಕರ ಜತೆ ಕ್ರಿಕೆಟ್ ಆಡಿದ ಧೋನಿ
36 ವರ್ಷದ ಧೋನಿ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯದ ಫೈನಲ್ ವೀಕ್ಷಿ$ಸಿದರು. ಇದೇ ವೇಳೆ ಅವರು ಸೈನಿಕರ ಜತೆ ಸಮಾಲೋಚನೆ ನಡೆಸಿದರು. ಸೈನಿಕರ ಕಾರ್ಯವೈಖರಿ ಬಗ್ಗೆ ಖುದ್ದಾಗಿ ಅನುಭವ ಪಡೆದುಕೊಂಡರು.
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.