ಬಿಸ್ಲೇರಿ ನೀರಿನ ಬಾಟಲ್‌ಗಳ ಮೇಲೆ ಕನ್ನಡ ಲೇಬಲ್
Team Udayavani, Dec 2, 2017, 3:01 PM IST
ಬೆಂಗಳೂರು: ಪ್ರದೇಶವಾರು ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಬಿಸ್ಲೇರಿ ಮಿನರಲ್ ವಾಟರ್‌ಗಳ ಬಾಟಲಿಗಳ ಮೇಲೆ ಕನ್ನಡ ಲೇಬಲ್‌ಗಳನ್ನು ಅಳವಡಿಸಲು ನಿರ್ಧರಿಸಿರುವುದಾಗಿ ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈ, ಲಿನ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿರುವ ಅಂಜನಾ ಘೋಷ್ ತಿಳಿಸಿದ್ದಾರೆ.
ಸ್ಥಳೀಯ ಗ್ರಾಹಕರೊಂದಿಗೆ ನಿಕಟ ಸಂಪರ್ಕ ಹೊಂದುವುದು ಈ ಬದಲಾವಣೆಯ ಉದ್ದೇಶವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ “ಬಿಸ್ಲೇರಿ’ ಎಂದು ಬರೆದಿರುವ ಲೇಬಲ್‌ಗಳು ನೀರಿನ ಬಾಟಲಿಗಳ ಮೇಲೆ ಇರಲಿವೆ. ಈ ಮೂಲಕ ಗ್ರಾಹಕರು ನಿಜವಾದ ಬಿಸ್ಲೇರಿ ಬ್ರಾಂಡ್‌ನ ನೀರಿನ ಬಾಟಲ್‌ಗಳನ್ನು ಸುಲಭವಾಗಿ ಗುರುತಿಸಲು ಮತ್ತು ನಕಲಿ ಬ್ರಾಂಡ್‌ಗಳಿಂದ ದೂರ ಉಳಿಯಲು ಕನ್ನಡ ಲೇಬಲ್‌ಗಳು ನೆರವಾಗಲಿದೆ ಎಂದರು.
ಇದೇ ಮೊದಲ ಬಾರಿ ಬಿಸ್ಲೇರಿ ಭಾರತದಾದ್ಯಂತ ಆಯಾ ರಾಜ್ಯಗಳಲ್ಲಿ ಮಾತನಾಡುವ ಭಾಷೆಯಲ್ಲೇ ಲೇಬಲ್ ಮುದ್ರಿಸಲು ಮುಂದಾಗಿದೆ. ಅದರಂತೆ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ, ತುಳುನಾಡಿನಲ್ಲಿ ತಮಿಳು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತೆಲುಗು ಭಾಷೆಯ ಲೇಬಲ್‌ಗಳು ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.