ಹನುಮ ಜಯಂತಿಗೆ ಅಡ್ಡಿಯಾಗದ ಮಳೆ
Team Udayavani, Dec 2, 2017, 3:05 PM IST
ಬೆಂಗಳೂರು: ಹನುಮ ಜಯಂತಿ ಪ್ರಯುಕ್ತ, ನಗರದ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ, ಜಯನಗರದ ರಾಗಿ ಗುಡ್ಡದ ಪ್ರಸನ್ನ ಆಂಜನೇಯ, ಮಹಾಲಕ್ಷ್ಮಿ ಲೇಔಟ್‌ನ ವೀರಾಂಜನೇಯ ಸ್ವಾಮಿ ದೇವಾಲಯ ಹಾಗೂ ರಾಜಾಜಿನಗರದ ರಾಮಮಂದಿರ ಸೇರಿ ಎಲ್ಲ ಆಂಜನೇಯ ಸ್ವಾಮಿ ದೇವಾಲಯಗಳು ಶುಕ್ರವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದವು.
ಜಿಟಿ, ಜಿಟಿ ಮಳೆಯ ನಡುವೆಯೂ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ರೀತಿಯ ಪೂಜಾ ಕಾರ್ಯಕ್ರಗಳು ನಡೆದವು. ಮುಂಜಾನೆ ವೀರಾಂಜನೆಯನಿಗೆ ವಿಶೇಷ ಅಭಿಷೇಕ, ಶಾಖಾಂಬರಿ, ವೇದಪರಾಯಣ, ಹೋಮ-ಹವನ ಸೇರಿದಂತೆ ಹಲವು ದೈವಿಕ ಕಾರ್ಯಕ್ರಮಗಳು ಭಕ್ತರ ಚಿತ್ತಾಕರ್ಷಿಸಿದವು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಹಲವು ಸಂಖ್ಯೆಯಲ್ಲಿ ಆಂಜನೇಯ ಭಕ್ತರು ಪಾಲ್ಗೊಂಡಿದ್ದರು.
ವಿಜಯನಗರದ ಇತಿಹಾಸ ಪ್ರಸಿದ್ಧ ಮಾರುತಿ ದೇವಾಲಯದಲ್ಲೂ ಕೂಡ ಹನುಮ ಜಯಂತಿ ಪ್ರಯುಕ್ತ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 5 ಗಂಟೆಗೆ ಹನುಮಾಭಿಷೇಕ, ಶಾಖಾಂಬರಿ ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆದವು. ಸರದಿ ಸಾಲಿನಲ್ಲಿ ನಿಂತು ಭಕ್ತರು ಆಂಜನೇಯನ ದರ್ಶನ ಪಡೆದುದರು. ಸಂಜೆ ದೇವರ ನಾಮ ಮತ್ತು ಹರಿದಾಸರ ಕೀರ್ತನೆಗಳು ಕೂಡ ಜರುಗಿದವು.
ನವಕಳಶ ಸ್ಥಾಪನೆ: ಶಿವಾಜಿ ನಗರದ ಬಸ್ ನಿಲ್ದಾಣದ ಎದಿರುವ ರಾಮಾಂಜನೇಯ ದೇವಾಲಯದಲ್ಲೂ ವಿಶೇಷ ಪೂಜೆ ನಡೆದವು. ನೆರೆದಿದ್ದ ಹಲವು ಭಕ್ತರ ಸಮ್ಮುಖದಲ್ಲಿ ಬೆಳಗ್ಗೆ 7.15ಕ್ಕೆ ಸುಪ್ರಭಾತ, ವೇದಪಾರಾಯಣ, ಪಂಚಾಮೃತ ಅಭಿಷೇಕ, ನವಕಳಸ ಸ್ಥಾಪನೆ, ತೋಮಾಲೆ ಸೇವೆ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ಸಂಗೋಪವಾಗಿ ನಡೆದವು.
ಸಂಜೆ ಕಳಶಾರಾಧನೆ, ಲಕ್ಷಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ತೀರ್ಥ ಪ್ರಸಾದ ವಿನಿಯೋಗ ಕೂಡ ನಡೆಯಿತು. ಜಯ ನಗರದ 9ನೇ ಬಡಾವಣೆಯಲ್ಲಿರುವ ರಾಗಿಗುಡ್ಡ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಜ್ರಕವಚ ಧಾರಣೆ ಅಲಂಕಾರ ಭಕ್ತರ ಮನಸೆಳೆಯಿತು.
ಹೆಜ್ಜೆಗೊಂದು ಎಳನೀರು ಸೇವೆ: ಬನ್ನೇರು ಘಟ್ಟದ ಅರಕೆರೆ ವೀರಾಂಜನೇಯ ಸ್ವಾಮಿ ದೇವಸ್ಥಾನ ಮಂಡಳಿ 9ನೇ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ವೀರಾಂಜನೇಯ ಸ್ವಾಮಿ ರಥೋತ್ಸವ ನೆರದ ಭಕ್ತರ ಚಿತ್ತಾಕರ್ಷಿಸಿತು. ಗ್ರಾಮದ ರಾಜಬೀದಿಯಲ್ಲಿ ಸಾಗಿದ ರಥೋತ್ಸವದಲ್ಲಿ ಹೆಜ್ಜೆಗೊಂದು ಎಳನೀರು ಸೇವೆ ಕೂಡ ನಡೆಯಿತು.
ಯಲಹಂಕದ ಬಾಲಾಂಜನೇಯ ಸ್ವಾಮಿ ದೇವಸ್ಥಾನ, ಯಶವಂತಪುರದ ದಾರೀ ಆಂಜನೇಯ ಸ್ವಾಮಿ ದೇವಾಲಯ, ಪದ್ಮನಾಭ ನಗರದ ವರಪ್ರದ ಆಂಜನೇಯ ದೇವಸ್ಥಾನ, ಗಾಂಧೀ ನಗರದ ಓಣಿ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಲಕ್ಷ ಬತ್ತಿಗಳ ದೀಪೋತ್ಸವ: ಗಾಂಧಿನಗರದ ಓಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಅಂಲಕಾರ, ಮುತ್ತಿನ ಕವಚ ಧಾರಣೆ, ಸಂಜೆ ಹೂವಿನ ಅಲಂಕಾರ ಮತ್ತು ಲಕ್ಷ ಬತ್ತಿಗಳಿಂದ ದೀಪೋತ್ಸವ ಕೂಡ ನಡೆಯಿತು. ಪದ್ಮನಾಭ ನಗರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಕಲಶಸ್ಥಾಪನೆ, ಪಂಚಾಮೃತ ಅಭಿಷೇಕ, ಅನ್ನ ಸಂತರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ಶಿವಾಜಿನಗರದ ತಿಮ್ಮಯ್ಯ ರಸ್ತೆ ಕ್ರಾಸ್‌ನ ಶ್ರೀ ವೀರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಹೋಮ, ಅಭಿಷೇಕ ಹಾಗೂ ವಿಶೇಷ ಅಲಂಕಾರವಿತ್ತು. ಶಿವಾಜಿನಗರ, ಫ್ರೆàಜರ್‌ಟೌನ್, ಭಾರತಿನಗರ, ಸರ್ವಜ್ಞನಗರ ಸೇರಿದಂತೆ ನಗರದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಹೋಮದಲ್ಲಿ ಪಾಲ್ಗೊಂಡು ಸೀತಾರಾಮ ಸಮೇತ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದರು.
ಮಧ್ಯಾಹ್ನ ಅನ್ನದಾನ ಆಯೋಜಿಸಲಾಗಿತ್ತು. ಸಂಜೆ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು. ಹನುಮ ಜಯಂತಿಯ ಪ್ರಯುಕ್ತ ಎಲ್ಲಾ ದೇವಾಲಯಗಳಲ್ಲಿ ಭಕ್ತರ ಸುಗಮ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ವೇಳೆ ಸಂಗೀತ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.