ಮಾಸಾಂತ್ಯಕ್ಕೆ ಮತ್ತೆ ಏರಲಿದೆ ಮೊಟ್ಟೆ ಬೆಲೆ?
Team Udayavani, Dec 2, 2017, 3:07 PM IST
ಬೆಂಗಳೂರು: ಕಳೆದ ತಿಂಗಳು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದ ಮೊಟ್ಟೆ ದರದಲ್ಲಿ ತಾತ್ಕಾಲಿಕವಾಗಿ ಇಳಿಕೆಯಾಗಿದೆ. ಆದರೆ, ಮುಂದಿನ 15-20 ದಿನಗಳಲ್ಲಿ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳ ಮತ್ತು ಚಳಿಗಾಲವಾಗಿದ್ದರಿಂದ ಮೊಟ್ಟೆ ಉತ್ಪಾದನೆ ಪ್ರಮಾಣ ಕಡಿಮೆಯಾಗಿ ಕುಕ್ಕುಟೋದ್ಯಮದಲ್ಲಿ ಮೊಟ್ಟೆ ಬೆಲೆ 6.50 ರೂ.ನಿಂದ 7 ರೂ.ಗೆ ಮುಟ್ಟಿತ್ತು. ಇದೀಗ ಎನ್ಇಸಿಸಿ ಸಂಸ್ಥೆ ಪ್ರಕಾರ ಹೋಲ್ಸೇಲ್ನಲ್ಲಿ ನೂರು ಮೊಟ್ಟೆಗೆ 435 ರೂ. ನಿಗದಿಪಡಿಸಲಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ 500ರಿಂದ 550 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರು ಮಾಂಸಾಹಾರ ಮತ್ತು ಮೊಟ್ಟೆ ಸೇವನೆಗೆ ಒಲವು ತೋರಿದ್ದರು. ಇದರಿಂದ ಮೊಟ್ಟೆ ಖರೀದಿಯಲ್ಲಿ ಶೇ.30ರಿಂದ 35ರಷ್ಟು ದರ ಏರಿತ್ತು. ಬೆಂಗಳೂರಿನಲ್ಲಿ ನ.12ರಿಂದ 22ರವರೆಗೆ ಹೋಲ್ಸೇಲ್ನಲ್ಲಿ 100 ಮೊಟ್ಟೆಗೆ 500ರಿಂದ 550 ರೂ.ವರೆಗೂ ಇತ್ತು. ಆದರೆ ನವೆಂಬರ್ ಅಂತ್ಯದವರೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ನೂರು ಮೊಟ್ಟೆಗೆ 650ರಿಂದ 700 ರೂ.ಗಳವರೆಗೆ ಮಾರಾಟ ಮಾಡಲಾಗಿತ್ತು.
ಮೊಟ್ಟೆ ಬೆಲೆ ಇಳಿಕೆ: ರಾಷ್ಟ್ರೀಯ ಮೊಟ್ಟೆ ಸಹಕಾರ ಸಮಿತಿ (ಎನ್ಇಸಿಸಿ) ಪ್ರಕಾರವಾಗಿ ನವೆಂಬರ್ನಲ್ಲಿ ನೂರು ಮೊಟ್ಟೆಗಳಿಗೆ ವಾರಣಾಸಿಯಲ್ಲಿ 587 ರೂ.ಗಳು, ಲಕ್ನೋದಲ್ಲಿ 590 ರೂ.ಗಳು, ಹೈದರಾಬಾದ್ನಲ್ಲಿ 535 ರೂ., ಬೆಂಗಳೂರಿನಲ್ಲಿ 550 ರೂ.ಗಳು, ಚೆನ್ನೈನಲ್ಲಿ 565 ರೂ., ಮುಂಬೈನಲ್ಲಿ 582 ರೂ., ದೆಹಲಿಯಲ್ಲಿ 567 ರೂ. ಅಧಿಕ ದರದಲ್ಲಿ ಮಾರಾಟ ಮಾಡಲಾಗಿತ್ತು.
ಇದು ಹೋಲ್ಸೇಲ್ ದರವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ 6.50ರಿಂದ 7.50 ರೂ.ಗಳವರೆಗೆ ಮಾರಾಟ ಮಾಡಿದ್ದು, ಡಜನ್ಗೆ ಕೆಲವೆಡೆ 80ರಿಂದ 90 ರೂ. ಇತ್ತು. ಪ್ರಸ್ತುತ ಲಕ್ನೋದಲ್ಲಿ ನೂರು ಮೊಟ್ಟೆಗೆ 520 ರೂ. ಇರುವುದು ಹೊರತು ಪಡಿಸಿದರೆ, ಉಳಿದ ಎಲ್ಲ ಕಡೆಗಳಲ್ಲಿ 400ರಿಂದ 470 ರೂ. ಮಾತ್ರ ಇದೆ.
ದರ ಏರಿಕೆ ನಿರೀಕ್ಷೆ: ಮೊಟ್ಟೆ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು ಖರೀದಿ ಕಡಿಮೆ ಮಾಡಿದ್ದರು. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವ ಕಾರಣ ಎನ್ಇಸಿಸಿ ಬೆಲೆ ಕಡಿಮೆ ಮಾಡಿದೆ. ಮುಂದಿನ ದಿನಗಳಲ್ಲಿ ಈದ್ ಮಿಲಾದ್, ಕ್ರಿಸ್ಮಸ್, ಹೊಸವರ್ಷ ಇತ್ಯಾದಿ ಹಬ್ಬಗಳು ಬರುವುದರಿಂದ 15-20 ದಿನಗಳಲ್ಲಿ ಮತ್ತೆ ಮೊಟ್ಟೆ ಬೆಲೆ ಏರುವ ನಿರೀಕ್ಷೆ ಇದೆ. ಪ್ರಸ್ತುತ ನೂರು ಮೊಟ್ಟೆಗೆ 435 ರೂ.ಇದ್ದು, ಮೊಟ್ಟೆಯೊಂದಕ್ಕೆ 4.30 ರೂ. ಮತ್ತು ಡಜನ್ಗೆ 52 ರೂ.ಇದೆ ಎನ್ನುತ್ತಾರೆ ಬೆಂಗಳೂರು ಎಗ್ ಸೆಂಟರ್ ಮಾಲೀಕರಾದ ಹೇಮಾ ಪ್ರಕಾಶ್.
ಬೇಡಿಕೆ ಕುಸಿದಿಲ್ಲ: ಪ್ರತಿದಿನಕ್ಕೆ ಬೆಂಗಳೂರಿನಲ್ಲಿ ಸುಮಾರು 75ರಿಂದ 80 ಲಕ್ಷ ಮೊಟ್ಟೆಗಳನ್ನು ಮಾರಾಟವಾಗುತ್ತವೆ. ಚಳಿಗಾಲದಲ್ಲಿ ಮೊಟ್ಟೆ ಬಳಕೆ ಸ್ವಲ್ಪ ಹೆಚ್ಚೇ ಇರುತ್ತದೆ. ಕೇವಲ ಬೆಂಗಳೂರು ಮಾತ್ರವಲ್ಲ ದೇಶದ ಅನೇಕ ಕಡೆಗಳಲ್ಲಿ ಮೊಟ್ಟೆ ಬಳಸುವವರ ಸಂಖ್ಯೆ ಈ ಅವಧಿಯಲ್ಲಿ ಹೆಚ್ಚಾಗಿಯೇ ಇದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇನ್ನೂ ಇಳಿದಿಲ್ಲ. ಹೀಗಾಗಿ ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿಲ್ಲ. ಇನ್ನೊಂದೆರಡು ವಾರಗಳಲ್ಲಿ ಮತ್ತೆ ಮೊಟ್ಟೆ ಬೆಲೆ ಹಿಂದಿನಂತೆ ಏರಿಕೆಯಾಗಲಿದೆ ಎಂಬುದು ಲಕ್ಷ್ಮೀ ಪ್ರಾವಿಜ‚ನ್ ಸ್ಟೋರ್ ಮಾಲೀಕ ರಮಾಕಾಂತ್ಶೆಟ್ಟಿ ಅವರ ಅಭಿಪ್ರಾಯ.
ಮೊಟ್ಟೆಯಲ್ಲಿ ವಿಟಮಿನ್, ಪ್ರೋಟೀನ್, ಖನಿಜಾಂಶ ಇದ್ದು, ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ಕೊಡುವ ನಿರ್ಧಾರ ಮಾಡಿದ್ದೆ. ಆದರೆ, ಏಕಾಏಕಿ ಮೊಟ್ಟೆ ಬೆಲೆ ಏರಿಕೆ ಮಾಡಿದ್ದರಿಂದ ತನ್ನ ನಿರ್ಧಾರ ಬದಲಿಸುವ ಮನಸ್ಸು ಮಾಡಿದ್ದೆ. ಆದರೆ, ಬೆಲೆ ಕಡಿಮೆಯಾಗಿದ್ದು ಈಗ ಸ್ವಲ್ಪ ನಿರಾಳ.
-ಅಂಜಲಿ ಸುರೇಶ್, ಗೃಹಿಣಿ.
ಡಿ.1ರಂದು ಎನ್ಇಸಿಸಿ ದರ ಪಟ್ಟಿಯಲ್ಲಿ 100 ಮೊಟ್ಟೆಗೆ 435 ರೂ.ಇದೆ. ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಕ್ ತಯಾರಿಕೆಗೆ ಮತ್ತು ಮೊಟ್ಟೆ ಸೇವಿಸುವವರು ಹೆಚ್ಚಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಮೊಟ್ಟೆ ಬೆಲೆ ಏರಿಕೆಯಾಗಲಿದೆ.
-ಹೇಮಾ ಪ್ರಕಾಶ್, ಮಾಲೀಕರು, ಬೆಂಗಳೂರು ಎಗ್ ಸೆಂಟರ್.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.