ಹಸಿರ ಶಾಲೆ


Team Udayavani, Dec 2, 2017, 3:20 PM IST

18.jpg

ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇದೆ. ಇದು ಅಂತಿಂಥ ಶಾಲೆಯಲ್ಲ. ಶಾಲೆಯ ಸುತ್ತ ಹಸಿರ ಸಿರಿ. ನಿಸರ್ಗದ ಮಡಿಲಲ್ಲಿ ಪಾಠ ಕಲಿಯುವ ಅನುಭವವೇ ಬೇರೆ. ಇದರ ಜೊತೆಗೆ ಗುಣಮಟ್ಟದ ಶಿಕ್ಷಣ. ಖಾಸಗಿ ಶಾಲೆಯನ್ನು ಮೀರಿಸುವ ಶೈಕ್ಷಣಿಕ ವಾತಾರವಣ ಇಲ್ಲಿದೆ. 

 ಇದಕ್ಕೆಲ್ಲಾ ಕಾರಣ ಶಿಕ್ಷಕ ದಂಪತಿ ಎ. ಎಫ್. ಹೂಲಿ ಮತ್ತು ಡಿ.ಎಸ್‌.ಮಳಲಿ. ಶಾಲೆ ಹೊಗಳಿಕೆಯಲ್ಲಿ ಮುಕ್ಕಾಪಾಲು ಇವರೇ ವಾರಸದಾರರು. ಕಳೆದ 6 ವರ್ಷಗಳ ಸತತ ಪರಿಶ್ರಮದಿಂದ  ಇವತ್ತು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿದೆ. 

 ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ 49 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಈ ಶಿಕ್ಷಕ ದಂಪತಿ ಕೇವಲ ಶಿಕ್ಷಣ ದಾಸೋಹ ಮಾತ್ರ ನಡೆಸುತ್ತಿಲ್ಲ ಬದಲಾಗಿ ಸರ್ಕಾರದ ಎಲ್ಲ ಯೋಜನೆಗಳು ತಮ್ಮ ಶಾಲೆಯ ಮಕ್ಕಳಿಗೆ ದೊರಕುವಂತೆ ಶ್ರಮಿಸುತ್ತಿದ್ದಾರೆ.   ಸುಂದರ ಉದ್ಯಾನವನ ನಿರ್ಮಿಸಿದ್ದಾರೆ. ಪ್ರತಿ ತಿಂಗಳು ತಮ್ಮ ವೇತನದಲ್ಲಿ ಸ್ವಂತ ಹಣವನ್ನು ಕಾಯ್ದಿಟ್ಟು ಬೇವು, ಬದಾಮಿ, ಚೆರ್ರಿ, ಸಿಲ್ವರ್‌ ಓಕ್‌, ಹೊಂಗೆ, ನುಗ್ಗೆ, ಕರಿಬೇವು, ವಿವಿಧ ಹೂವುಗಳು, ತರಕಾರಿಗಳನ್ನೂ ಬೆಳೆಸುತ್ತಿದ್ದಾರೆ.

ಮರಗಳಿಗೆ ನೀರುಣಿಸಲು ಡ್ರಿಪ್‌, ಕಾರಂಜಿ, ಸ್ಪ್ಲಿಂಕ್ಲರ್‌,ಪೈಪ್‌ಲೇನ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಮಕ್ಕಳೆಲ್ಲ ಉದ್ಯಾನವನದ ನಿರ್ವಹಣೆ ಮಾಡುವ ಮೂಲಕ ಶ್ರಮದಾನದ ಮಹತ್ತತೆ ಕಲಿಯುತ್ತಿದ್ದಾರೆ. ಮಹಾಲಿಂಗಪುರ ಜೆಸಿಐ ಸಂಸ್ಥೆಯ ನೆರವಿನಲ್ಲಿ ಸಂಗ್ರಹಿಸಲಾಗಿರುವ 100 ವಿಧದ ಹೂವಿನ ಕುಂಡಲಿಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಯಲಾಗಿದೆ. ಒಬ್ಬ ವಿದ್ಯಾರ್ಥಿಗೆ ಎರಡು ಕುಂಡಗಳ ಹೊಣೆಗಾರಿಕೆ ನೀಡಲಾಗಿದ್ದು, ಅದರಲ್ಲಿರುವ ಸಸಿಯನ್ನು ಜೋಪಾನವಾಗಿ ಬೆಳೆಸುವತ್ತ ಪೋ› ನೀಡುತ್ತಿರುವುದರಿಂದ ವಿದ್ಯಾರ್ಥಿಗಳೂ ಅತ್ಯಂತ ಉತ್ಸಾಹದಲ್ಲೇ ಪಾಲ್ಗೊಳ್ಳುತ್ತಿದ್ದಾರೆ.

ದೇವನೊಬ್ಬ ನಾಮ ಹಲವು ತತ್ವದ ಅಡಿಯಲ್ಲಿ ಈ ಶಿಕ್ಷಕ ದಂಪತಿ ಶಾಲೆಯಲ್ಲೇ ಸರ್ವ ಧರ್ಮ ಸಮನ್ವಯ ಕೊಠಡಿಯನ್ನು ನಿರ್ಮಿಸಿರುವುದು ವಿಶೇಷ. ಪ್ರತಿ ಕೋಣೆಗಳಲ್ಲೂ ಡಿಜಿಟಲ್‌ ಪೀಠೊಪಕರಣಗಳನ್ನು ಅಳವಡಿಸಲಾಗಿದ್ದು, ಪರಿಸರ ಸ್ನೇಹಿ ಗ್ಲಾಸ್‌ ಬೋರ್ಡ್‌ಗಳನ್ನು ಬಳಸಲಾಗಿದೆ.

ಈ ಎಲ್ಲ ಕಾರ್ಯಗಳಲ್ಲಿ ಮಹಾಲಿಂಗಪುರದ ಜೆಸಿಐ ಸಂಸ್ಥೆ, ಚಿಮ್ಮಡ ಗ್ರಾಪಂ ಸದಸ್ಯರು, ಪಾಲಕರು, ದಾನಿಗಳು, ಚಿಮ್ಮಡ ಕ್ಲಸ್ಟರ್‌ ಮಟ್ಟದ ಶಾಲೆಗಳ ಮುಖ್ಯ ಗುರುಗಳು ಸಹಕಾರ ಜೊತೆಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ. 

ಯಾವುದೇ ಶಾಲೆ ಅಭಿವೃದ್ಧಿ ಹೊಂದಲು ಪಾಲಕರು ಮತ್ತು ಗ್ರಾಮದ ಜನತೆಯ ಸಹಕಾರವೂ ಅಗತ್ಯ. ಇಲ್ಲಿ ಆ ಕೊರತೆ ಇಲ್ಲ. ಶಿಕ್ಷಕರ ಅನುಪಸ್ಥಿತಿಯಲ್ಲಿ ಸಸ್ಯಕಾಶಿಗೆ ಧಕ್ಕೆಯಾಗದಂತೆ ಸ್ಥಳೀಯರಾದ ಮುತ್ತಪ್ಪ ಗೋಧಿ,ಉಮೇಶ ಹಳಮನಿ ಗಿಡ-ಮರಗಳ ನಿರ್ವಹಣೆ ಮಾಡುತ್ತಾರೆ.  ಕಳೆದ 3 ತಿಂಗಳ ಹಿಂದೆ ಶಿಕ್ಷಕ ದಂಪತಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರವೆಲ್‌ ಕೊರೆಯಿಸಿ ನೀರಿನ ಬವಣೆಯನ್ನು ನೀಗಿಸಿದ್ದಾರೆ.  ಈ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ನಿಸರ್ಗದ ಪಾಠ ಉಚಿತ. 

ಕಿರಣ ಶ್ರೀಶೈಲ ಆಳಗಿ 

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.