ನಗರಸಭೆಯ ನಿರಾಸಕ್ತಿ: ಪಾದಚಾರಿಗಳಿಗೆ ಸಂಕಟ!
Team Udayavani, Dec 2, 2017, 5:10 PM IST
ನಗರ: ನಗರದ ಮುಖ್ಯ ರಸ್ತೆಯ ಬದಿಗಳಲ್ಲಿ ಚರಂಡಿಗೆ ಹಾಸಿದ ಸ್ಲ್ಯಾಬ್ ಗಳ ಮೇಲೆ ಓಡಾಡುವ ಪಾದಚಾರಿಗಳ ಭಯಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಯಾಕೆಂದರೆ ಬಹುತೇಕ ಸ್ಲ್ಯಾಬ್ ಗಳು ಉಪಯುಕ್ತ ಎನ್ನುವ ಬದಲು ಅಪಾಯ ತಂದೊಡ್ಡಲು ಹಾಸಿದಂತಿವೆ.
ಮೃತ್ಯುಕೂಪ
ಸಮರ್ಪಕವಾಗಿರದ ಸ್ಲ್ಯಾಬ್ ಹಾಸದ ಕಾರಣ, ಪಾದಚಾರಿಗಳಿಗೆ ಅಪಾಯಕಾರಿಯೆನಿಸಿದೆ. ಸಮತಟ್ಟಾಗಿರುವಂತೆ ಕಾಣುವ ಸ್ಲ್ಯಾಬ್ ಗಳಲ್ಲಿ ಕಾಲಿಟ್ಟಾಗ, ಅದು ತನ್ನ ನಿಜ ರೂಪ ತೋರಿಸುತ್ತದೆ. ಜತೆಗೆ ಮಧ್ಯೆ-ಮಧ್ಯೆ ಇರುವ ಅಪಾಯಕಾರಿ ಹೊಂಡ ಕೂಡ ಪಾದಚಾರಿಗಳ ಪಾಲಿಗೆ ಮೃತ್ಯುಕೂಪವೆನಿಸಿದೆ.
ಸಮಸ್ಯೆ ಹೆಚ್ಚಳ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ಧಾರಿಯ, ನಗರದ ಮುಖ್ಯ ರಸ್ತೆಯಲ್ಲೇ ಹಲವು ಸಮಯಗಳಿಂದ ಈ ಸಮಸ್ಯೆ ಹೆಚ್ಚಾಗಿದೆ. ನಗರಸಭೆಯ ವತಿಯಿಂದ ಮುಖ್ಯ ರಸ್ತೆಗಳ ಬದಿಗಳ ಚರಂಡಿ ಹೂಳೆತ್ತಲು ಸ್ಲ್ಯಾಬ್ ತೆಗೆದ ಅನಂತರ ಅದರ ಜೋಡಣೆ ಸರಿಯಾಗಿ ಮಾಡದ ಪರಿಣಾಮ, ಜತೆಗೆ ಅರ್ಧಂಬರ್ಧ ತುಂಡಾದ ಸ್ಲ್ಯಾಬ್ ಗಳನ್ನು ತೆರವು ಮಾಡದೆ ಅದನ್ನೇ ಮತ್ತೆ ಅಳವಡಿಸಿರುವುದು ಕೂಡ ಸಮಸ್ಯೆಗೆ ಮುಖ್ಯ ಕಾರಣವೆನಿಸಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ, ನಗರದ ಚರ್ಚ್ ಮುಂಭಾಗದ ರಸ್ತೆಯ ಎದುರು ಬದಿಯ ಚರಂಡಿಯಲ್ಲಿ ಇಂತಹ ಸ್ಲ್ಯಾಬ್ ಗಳಿವೆ. ಕಾಲಿಟ್ಟ ತತ್‌ಕ್ಷಣ ಬೀಳುವ, ಇನ್ನೊಂದು ತುದಿ ಎತ್ತರಕ್ಕೇರುವ, ಮುರಿದು ಹೊಂಡಕ್ಕೆ ಬೀಳುವ ಸ್ಲ್ಯಾಬ್ ಗಳು ಪಾದಚಾರಿಗಳಿಗೆ ಕಂಟಕವಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನ್ಕಕೆ ತಂದರೂ ಪ್ರಯೋಜನ ಆಗಿಲ್ಲ ಎಂಬುದು ಸಾರ್ವಜನಿಕರ ದೂರು.
ಸರಿಪಡಿಸುವಂತೆ ಆಗ್ರಹ
ಮುಖ್ಯ ರಸ್ತೆಯ ಚರಂಡಿಗೆ ಅಳವಡಿಸಿರುವ ಸ್ಲ್ಯಾಬ್ ಅನ್ನು ಬದಲಾಯಿಸಿ, ಅದಕ್ಕೆ ಫಿಕ್ಸ್ ಆದ ಸ್ಲ್ಯಾಬ್ ಹಾಕಬೇಕಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಕಾಮಗಾರಿ ಮಾಡಿದಲ್ಲಿ ಇಂತಹ ಸಮಸ್ಯೆಗಳಾಗುತ್ತಿರಲಿಲ್ಲ. ವಯೋ ವೃದ್ಧರು ಚರಂಡಿಯಲ್ಲಿ ಸ್ಲ್ಯಾಬ್ ಅವ್ಯವಸ್ಥೆ ಪರಿವೆ ಇಲ್ಲದೆ ಬಿದ್ದಂತಹ ಘಟನೆಗಳೂ ಇದ್ದು, ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಪರಿಶೀಲಿಸಿ ಕ್ರಮ
ಚರಂಡಿ ದುರಸ್ತಿಯ ಸಂದರ್ಭದಲ್ಲಿ ಕೆಲವೆಡೆ ಸ್ಲ್ಯಾಬ್ ಅನ್ನು ತೆರವುಗೊಳಿಸಿ, ಮತ್ತೆ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಸಮರ್ಪಕವಾಗಿ ಜೋಡಣೆ ಆಗದೆ ಇದ್ದ ಕಡೆಗಳಲ್ಲಿ ಸಮಸ್ಯೆ ಇರಬಹುದು. ಈ ಬಗ್ಗೆ ಅಧಿಕಾರಿಗಳಿಂದ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ರೂಪಾ ಶೆಟ್ಟಿ
ಪೌರಾಯುಕ್ತೆ, ನಗರಸಭೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.