ಡಿಸೆಂಬರ್‌ ಚಿತ್ರಗಳ ಕೊನೆಯ ಟಪ್ಪಾಲ್‌ 


Team Udayavani, Dec 3, 2017, 6:00 AM IST

tappal.jpg

ಈ ತಿಂಗಳನ್ನು ಕಾರ್ಗತ್ತಲೆಯ ಮತ್ತು ಕಡುಚಳಿಯ ಮಾಸ ಎಂದು ಕರೆದರೆ ಡಿಸೆಂಬರಿಗೂ ಆಕ್ಷೇಪ ಇರಲಿಕ್ಕಿಲ್ಲ. ಈ ಮಾಸ ಹೀಗಿರುವುದು ಬ್ರಿಟನ್ನಿನ ಹವಾಮಾನದ ಲಿಖೀತ ಸತ್ಯ ಮತ್ತು ಅಲಿಖೀತ ವಾಸ್ತವ ಎರಡೂ ಹೌದು. ಮನೆಯ ಹೊರ ನಡೆದರೆ ಚಳಿ ಎಂದು ಒಳಗೆ ಕುಳಿತರೂ ಕಿಟಕಿಯ ಹೊರಗೆ ಶಾಲು, ಸ್ವೆಟರ್‌, ದಪ್ಪ ಕೋಟು, ಟೊಪ್ಪಿ , ಕೈಗೆ ಗ್ಲೋವ್ಸ್‌, ಮೊಣಕಾಲಿನವರೆಗಿನ ಶೂ- ಹೀಗೆ ಹಲವು ಪದರಗಳ ಬಟ್ಟೆ ಹೊದ್ದು ಓಡಾಡುವ ಮನುಷ್ಯ-ಆಕೃತಿಗಳನ್ನು ಕಂಡರೆ ಚಳಿಯ ತೀವ್ರತೆಯ ಅನುಭವ ಸಿಗುತ್ತದೆ. ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿ ಈಗಷ್ಟೇ ಮರಳಿದ ಆಂಗ್ಲ ಸಹೋದ್ಯೋಗಿಗಳು, ಬೆಂಗಳೂರಿನವರು ನಸುಕಿಗೆ ಮತ್ತು ಮುಸ್ಸಂಜೆಗೆ ತಮ್ಮ ಕಣ್ಣು-ಮೂಗು ಮಾತ್ರ ತೋರುವ ಟೊಪ್ಪಿ ಧರಿಸಿ ತಿರುಗಾಡುವುದನ್ನು ನೋಡಿ ಭಾರತೀಯರು ಬೇಸಿಗೆಯಲ್ಲೂ ಚಳಿಯ ಬಟ್ಟೆ ಧರಿಸುತ್ತಾರೆ ಎಂದು ತೀರ್ಮಾನಿಸಿಕೊಂಡಿ¨ªಾರೆ. ತಮ್ಮ ದೇಶದಲ್ಲಿ ಚಳಿಯ ಅತಿರೇಕವನ್ನು ಕಂಡಿರುವ ಇವರು, ಭಾರತದಲ್ಲಿ  ಬೇಸಿಗೆ ಹೇಗೂ ಬೇಸಿಗೆ ಮತ್ತೆ ಚಳಿಗಾಲವೂ ಬೇಸಿಗೆಯೇ ಎಂದು ಆಡಿಕೊಂಡಿ¨ªಾರೆ. ಬ್ರಿಟನ್ನಿನಲ್ಲಿ ಚಳಿಗಾಲ ಆರಂಭ ಆದಾಗಿನಿಂದ ಪ್ರತಿದಿನವೂ ಎರಡೆರಡು ನಿಮಿಷ ರಾತ್ರಿಯ ಕಾಲದ ಗಾತ್ರ ಹೆಚ್ಚಾಗುತ್ತಲೂ ಅಥವಾ ದಿನದ ಅವಧಿ ಕಡಿಮೆ ಆಗತ್ತಲೂ ಬರುತ್ತಿದೆ. ಡಿಸೆಂಬರ್‌ 21ರ ರಾತ್ರಿ ವರ್ಷದ ಅತಿ ದೀರ್ಘ‌ ರಾತ್ರಿಯ ಕಾಲ ಎಂದೂ ಇಲ್ಲಿ ದಾಖಲಾಗುತ್ತದೆ. ಅಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಸೂರ್ಯೋದಯ, ಸಂಜೆ  4 ಗಂಟೆಗೆ ಸೂರ್ಯಾಸ್ತ. ಬರೇ  8 ಗಂಟೆಗಳ ಹಗಲು, ಆದರೆ 16 ಗಂಟೆಗಳ ರಾತ್ರಿ!

ದೇಹವನ್ನು ಮನಸ್ಸನ್ನು ಕುಗ್ಗಿಸುವ ಪ್ರಾಕೃತಿಕ ನಿಯಮ ನಿಬಂಧನೆಗಳಿಂದ ನಿರ್ಮಿತವಾದ ಡಿಸೆಂಬರ್‌ ತಿಂಗಳಿನಲ್ಲಿ ಆಂಗ್ಲರ ಸಾಂಪ್ರದಾಯಿಕ ಹಬ್ಬ ಆಶಾವಾದವನ್ನೂ ಪ್ರತೀಕ್ಷೆಯನ್ನೂ ಮೂಡಿಸುತ್ತದೆ. ಆಂಗ್ಲರ ಬಹುನಿರೀಕ್ಷೆಯ ಕ್ರಿಸ್‌ಮಸ್‌ ಹಬ್ಬ ಡಿಸೆಂಬರ್‌ನ‌ ನಿರಾಶಾದಾಯಕ ವಾತಾವರಣದÇÉೊಂದು ಉತ್ಸಾಹವನ್ನು ಮೂಡಿಸುತ್ತದೆ. ಇಲ್ಲಿನ ರಸ್ತೆಗಳಲ್ಲಿ ಕಟ್ಟಿದ ಬೆಳಕಿನ ತೋರಣ, ಅಂಗಡಿಗಳ ಅಲಂಕಾರ ಮತ್ತು ಆಂಗ್ಲರ ಸಂಭ್ರಮದ ಓಡಾಟ ಕತ್ತಲಿನೊಳಗೆ ಜೀವಂತಿಕೆಯ ಒಂದು ಹೋರಾಟವಾಗಿ ಕಾಣಿಸುತ್ತದೆ. ಕ್ರಿಸ್‌ಮಸ್‌ ಹಬ್ಬದ ಆಚರಣೆ ಡಿಸೆಂಬರ್‌ 25ಕ್ಕೆ ಆದರೂ ಅದರ ತಯಾರಿ ತಿಂಗಳುಗಳ ಹಿಂದೆಯೇ ಶುರು ಆಗಿರುತ್ತದೆ. ಸಂಸ್ಕೃತಿಯೊ, ಪರಂಪರೆಯೊ, ಅನುಕೂಲವೊ ಹೆಚ್ಚಾಗಿ ಬೇರೆ ಬೇರೆಯಾಗಿ ಸ್ವಾವಲಂಬಿಯಾಗಿ ಬದುಕುವ ಹೆತ್ತವರು, ಮಕ್ಕಳು, ಮೊಮ್ಮಕ್ಕಳು ಕ್ರಿಸ್‌ಮಸ್‌ ನೆಪದಲ್ಲಿ ಒಂದು ಕಡೆ ಭೇಟಿಯಾಗಿ ಉಡುಗೊರೆಗಳನ್ನು  ಬದಲಾಯಿಸಿಕೊಳ್ಳುತ್ತಾರೆ. ಕೆಲವು ಕೆಜಿ ತೂಕದ ಟರ್ಕಿಯ ಮಾಂಸವನ್ನು ಅಂಗಡಿಯಿಂದ ಕೊಂಡುತಂದು ಅದಕ್ಕೆ  ಎಣ್ಣೆ ಹಚ್ಚಿ , ಮಸಾಲೆಯ ರಸ ತುಂಬಿದ ಇಂಜೆಕ್ಷನ್‌ ಚುಚ್ಚಿ , ಒಲೆಯೊಳಗಿಟ್ಟು ಸುಟ್ಟು ಹುರಿದು ವಿಶೇಷ  ಊಟವನ್ನು  ಕುಟುಂಬದವರೆಲ್ಲ ಜೊತೆಯಾಗಿ ಮಾಡುತ್ತಾರೆ. ಯಾರಿಗೆ ಯಾವ ಉಡುಗೊರೆ ಕೊಡಬೇಕು, ಎಲ್ಲಿ , ಯಾವಾಗ ಕೊಳ್ಳಬೇಕು, ಕ್ರಿಸ್‌ಮಸ್‌ ದಿನದ ಊಟದ ತಯಾರಿ ಹೇಗೆ- ಎನ್ನುವ ಪೂರ್ವಯೋಜನೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ವೈದ್ಯರನ್ನು ಕಂಡು ಶುಶ್ರೂಷೆ ಪಡೆಯುವವರೂ ಇ¨ªಾರೆ.  

ಕ್ರಿಸ್‌ಮಸ್‌ ಹಬ್ಬಕ್ಕಿಂತ ಎಷ್ಟು ದಿನ ಮೊದಲು ರಜೆ ಹಾಕುವುದು, ಉಡುಗೊರೆಗಳನ್ನು ಅಂತರ್ಜಾಲ  ತಾಣದ ಅಂಗಡಿಗಳಲ್ಲಿ ಕೊಳ್ಳುವುದೋ ಅಥವಾ ಚಂದದ  ಅಲಂಕಾರ ಮಾಡಿಕೊಂಡು ಭಾರಿ ಬೆಲೆಕಡಿತದ ಫ‌ಲಕ ನಿಲ್ಲಿಸಿಕೊಂಡ ಅಂಗಡಿಗಳಲ್ಲಿ ಪಡೆಯುವುದೋ ಎನ್ನುವ ದ್ವಂದ್ವದಲ್ಲಿ ಕೆಲವರು ಇರುತ್ತಾರೆ. ಬೇರೆ ದಿನಗಳಾದರೆ ಆಸುಪಾಸಿನಲ್ಲಿರುವ ಅಪರಿಚಿತರ ನಡುವೆ ಮಾರು ಅಂತರ ಇಟ್ಟು ತಿರುಗಾಡುವವರು, ಹಬ್ಬಕ್ಕಿಂತ ಮೊದಲಿನ ಕೆಲವು ವಾರಾಂತ್ಯಗಳಲ್ಲಿ  ಬಹು ಮಹಡಿ ವ್ಯಾಪಾರೀ ಸಮುತ್ಛಯಗಳಲ್ಲಿ ಕಿಕ್ಕಿರಿದು ತುಂಬಿ, ಮೈಗೆ ಮೈಗೆ ತಿಕ್ಕಿಕೊಂಡು ಓಡಾಡುತ್ತ ಖರೀದಿ ಎಂಬ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಆಚರಣೆಯ ಪ್ರಮುಖ ಸಂಕೇತವಾಗಿ ಇಲ್ಲಿನ ಮನೆ ಮನೆಗಳಲ್ಲಿ ಕ್ರಿಸ್‌ಮಸ್‌ ಗಿಡಗಳನ್ನು ತರುತ್ತಾರೆ. ಅಂಗಡಿಗಳಿಂದ ಅಥವಾ ಅಮೆಝಾನ್‌, ಈಬೇಗಳಂತಹ ಜಾಲತಾಣಗಳಿಂದ ಗಿಡಗಳನ್ನು ಖರೀದಿಸಿ ಮನೆಯಲ್ಲಿ ಅಲಂಕರಿಸುವುದು ಸಾಮಾನ್ಯ. ಇದೇ ಹೊತ್ತಲ್ಲಿ  ನಿಜವಾದ ಗಿಡ ಕೊಳ್ಳಬೇಕೋ ಅಥವಾ ಕ್ರಿಸ್‌ಮಸ್‌ ಗಿಡದಂತೆ ಕಾಣುವ ಪ್ಲಾಸ್ಟಿಕ್‌ನ ಕೃತಕ ಗಿಡ ಖರೀದಿಸಬೇಕೋ ಎನ್ನುವ ಚರ್ಚೆ ಎಲ್ಲ ವರ್ಷಗಳಂತೆ ಮತ್ತೆ  ಜೀವ ಪಡೆಯುತ್ತದೆ. ನೈಜ ಗಿಡಗಳನ್ನು ಕೊಳ್ಳದೆ ಪ್ಲಾಸ್ಟಿಕ್‌ ಗಿಡಗಳನ್ನು ಕೊಂಡ ಮಾತ್ರಕ್ಕೆ ನಿಸರ್ಗ ಪ್ರೇಮಿ ಎನಿಸುವುದಿಲ್ಲ ಎನ್ನುವ ವಾದಗಳು ಕೇಳುತ್ತವೆ. ಎರಡು ಮೀಟರ್‌ ಉದ್ದದ ಪ್ಲಾಸ್ಟಿಕ್‌ ಗಿಡವನ್ನು ತಯಾರಿಸಲು ಬಳಕೆ ಆಗುವ ಎಣ್ಣೆಯಂತಹ ಪ್ರಾಕೃತಿಕ ವಸ್ತುಗಳು, ಮತ್ತೆ ಹಬ್ಬಕ್ಕೆ ಉಪಯೋಗಿಸಿ ನಂತರ ಎಸೆದ ಆ ಪ್ಲಾಸ್ಟಿಕ್‌ ಸುಲಭವಾಗಿ  ಮಣ್ಣಿನಲ್ಲಿ ಕರಗದೇ ಇರುವುದು ಇವು ನೈಜ ಗಿಡಗಳ ಬಳಕೆಗಿಂತ ಕಡಿಮೆ ಪರಿಸರ ಪ್ರೇಮಿ ಎಂದೂ ಹೇಳಿಸಿಕೊಳ್ಳುವುದಕ್ಕೆ ಕಾರಣ ಆಗುತ್ತವೆ. ನಿಜವಾದ ಗಿಡವನ್ನು ಕೊಂಡು ಹಬ್ಬ ಮುಗಿದ  ಕೂಡಲೇ ಮಣ್ಣಾಗಿಸುವ ಬದಲು ಪ್ಲಾಸ್ಟಿಕ್‌ ಗಿಡವನ್ನು ಕೊಂಡು ನಿಜ ನೈಸರ್ಗಿಕ ಪ್ರೀತಿಯನ್ನು ತೋರಬೇಕಾದರೆ ಒಮ್ಮೆ ಕೊಂಡ ಪ್ಲಾಸ್ಟಿಕ್‌ ಗಿಡವನ್ನು ಹತ್ತು ವರ್ಷಗಳ ಕಾಲವಾದರೂ ಮರು ಬಳಕೆ ಮಾಡಬೇಕೆಂದೂ  ತರ್ಕಿಸುತ್ತಾರೆ.

ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಬಿಬಿಸಿಯಂಥ‌ ಸುದ್ದಿ ಮಾಧ್ಯಮಗಳಲ್ಲಿ ಬಂದು ಹೋಗುವ ಪರಿಸರಸ್ನೇಹಿ ಕ್ರಿಸ್‌ಮಸ್‌ ಚರ್ಚೆಗಳು ದೂರದರ್ಶನದ ಪೆಟ್ಟಿಗೆಯ ಚೌಕದ ಒಳಗೇ ಉಳಿದು, ಜನಸಾಮಾನ್ಯರು ತಮ್ಮ ಇಷ್ಟದಂತೆ ತಮಗೆ ಕೊಳ್ಳಬೇಕೆನಿಸುವ ತರಹದ ಗಿಡವನ್ನು ಕೊಂಡು ಹಬ್ಬದ ಆಚರಣೆ ಮುಗಿಸುತ್ತಾರೆ.

ಹೀಗೆ ಆಂಗ್ಲರ  ಸಡಗರ ಸಂಭ್ರಮ, ಖರೀದಿಗಳ, ಉಡುಗೊರೆಗಳ, ಟರ್ಕಿ ಊಟದ ಘಮಲಿನ, ಕ್ರಿಸ್‌ಮಸ್‌ ತಯಾರಿಗಳ ಬಗ್ಗಿನ ಮಾತುಗಳು ನನ್ನನ್ನು ಸುತ್ತುವರಿಯುವ ಹೊತ್ತಿನಲ್ಲಿ ನಾನೂ ಒಂದು ತಯಾರಿಯಲ್ಲಿ ತೊಡಗಿದ್ದೇನೆ. ಪ್ರತಿವರ್ಷದ ಡಿಸೆಂಬರ್‌ ನನ್ನ ಮಟ್ಟಿಗೆ ಭಾರತದ ಭೇಟಿಯ ಸಮಯ ಮತ್ತು ಆ ಪ್ರಯಾಣದ ಹಿಂದಿನ ತಯಾರಿಯ ಕಾಲ. ಆಂಗ್ಲರು ತಮ್ಮ ಹಬ್ಬದ ಕತೆ ಹೇಳುವಾಗ ರಜೆಗೆ ಊರಿಗೆ ಮರಳುವಷ್ಟು  ದೊಡ್ಡ ಹಬ್ಬವೇ ಇನ್ನೊಂದಿಲ್ಲ ಎಂದು ನನ್ನ ಸಹೋದ್ಯೋಗಿಗಳಲ್ಲಿ ವಾದಿಸುತ್ತೇನೆ. ವರ್ಷವಿಡೀ ಆಗಾಗ ಸ್ವಲ್ಪ ಸ್ವಲ್ಪವೇ ರಜೆ ವಿನಿಯೋಗಿಸುವ ಸಂಪ್ರದಾಯದ ಆಂಗ್ಲ ಸಹೋದ್ಯೋಗಿಗಳು, ಹೀಗೆ ವರ್ಷದ ಕೊನೆಯಲ್ಲಿ ಇಡೀ ಒಂದು ತಿಂಗಳು ರಜೆಯನ್ನು ಚೀಲದಲ್ಲಿ ತುಂಬಿಸಿಕೊಂಡು ನಾನು ಊರಿಗೆ ಹೊರಟಾಗ ಕೆಲವೊಮ್ಮೆ ಆಶ್ಚರ್ಯವನ್ನೂ ಕೆಲವೊಮ್ಮೆ ಅಸೂಯೆಯನ್ನೂ ವ್ಯಕ್ತಪಡಿಸುತ್ತಾರೆ.  ಊರು ಬಿಟ್ಟು ಇಂಜಿನಿಯರಿಂಗ್‌ ಓದಿಗೆ ಬೆಂಗಳೂರಿಗೋ ಮತ್ತೆ ಕೆಲಸದ ನಿಮಿತ್ತ ಇಂಗ್ಲೆÉಂಡ್‌ಗೊà ಗಡಿಪಾರಾದ ಮೇಲೆ ನನ್ನ ಮಟ್ಟಿಗೆ ರಜೆ ಅಂದರೆ ಮರವಂತೆ, ಮರವಂತೆ ಅಂದರೆ ರಜೆ.

ವರ್ಷವಿಡೀ ಕೆಲಸ ಮಾಡಿದ್ದಕ್ಕೆ ನನಗೆ ಸಿಗಬೇಕಾದ ಐದು ವಾರಗಳ ರಜೆಯಲ್ಲಿ ಹೆಚ್ಚಿನ ಭಾಗವನ್ನು ಒಂದೇ ಸಲ ಹಾಕಿ ಖರ್ಚು ಮಾಡುವುದು ಕಚೇರಿಯ ವ್ಯವಸ್ಥಾಪಕರ ಸಹಕಾರದಿಂದ ಈಗಲೂ ಮುಂದುವರಿದಿದೆ. “ತಮ್ಮದೆನ್ನುವ ಊರು-ನೀರು-ಗಾಳಿ-ಬಿಸಿಲು  ಐದು ಸಾವಿರ ಮೈಲು ದೂರದಲ್ಲಿದ್ದರೆ ಹೀಗೆ ಮಾಡುವುದು  ಸಹಜವೇ’ ಎಂದು ಸಹೋದ್ಯೋಗಿಗಳಿಗೆ ವಿವರಿಸಿದ್ದೇನೆ. “ಇಷ್ಟುದ್ದ ರಜೆಯನ್ನು ಕಳೆಯಲು ನಿಮ್ಮೂರಿನÇÉೇನಿದೆ’ ಎಂದು ಕುತೂಹಲದಿಂದವರು ವಿಚಾರಿಸುತ್ತಾರೆ. ಹೀಗೆ ಕೇಳಿದವರನ್ನು ಹತ್ತಿರದಲ್ಲಿ ಕೂಡಿಸಿ ಗೂಗಲ್‌ ಮ್ಯಾಪ್‌ ತೆರೆದು ಇಗೋ ಭಾರತದ ನೈಋತ್ಯ ಕರಾವಳಿಯ ಊರು, ಅವರ ಪ್ರವಾಸಿ ಜ್ಞಾನದಲ್ಲಿ ಜನಪ್ರಿಯ ತಾಣಗಳಾದ ಗೋವಾದಿಂದ ಕೆಳಗೆ ಕೇರಳಕ್ಕಿಂತ ಮೇಲೆ ಎಂದು ಬೊಟ್ಟು ಮಾಡಿ ತೋರಿಸಿದ್ದೇನೆ, ಇನ್ನೂ  ಸುಲಭವಾಗಲಿ ಎಂದು ಇಂಗ್ಲೆಂಡ್‌ನ‌ ಮ್ಯಾಪಿನಲ್ಲಿ ಬ್ರಿಸ್ಟಲ್‌ ಎನ್ನುವ ಊರು  ಎಲ್ಲಿದೆಯೋ ಭಾರತ ಭೂಪಟದಲ್ಲಿ ಮರವಂತೆ ಸುಮಾರಿಗೆ ಅದೇ ಜಾಗದಲ್ಲಿದೆ ಎಂದಿದ್ದೇನೆ. ಇಂಗ್ಲಂಡ್‌ನ‌ ಯಾವ ಕರಾವಳಿಗೆ ಯಾವ ಕಾಲಕ್ಕೆ ಹೋದರೂ  ಕಾಲು ಕೊರೆಯುವ ತಣ್ಣನೆಯ ನೀರು, ಮರವಂತೆಯÇÉಾದರೆ ಸಮುದ್ರದಲ್ಲಿ ಬೆಚ್ಚಗಿನ ಬಿಸಿನೀರು, ನೀರಲ್ಲಿ ಕುಣಿದರೂ, ಆಡಿ ದಣಿದರೂ ಥಂಡಿ ಹತ್ತದು ಎಂದು ನೆನಪಿಸಿದ್ದೇನೆ. ನನ್ನ ಮನೆಯಿಂದ ಸಮುದ್ರಕ್ಕೆ  ಬರೇ ಒಂದು ಕಿಲೋಮೀಟರು, ಅಲ್ಲಿನ ಸುಡು ಬಿಸಿಲು, ಆ ಬಿಸಿಲಲ್ಲಿ ನೆರಳು ಕೊಡುವ ತೆಂಗಿನ  ತೋಪು, ತೆಂಗಿನ ತೋಪಿನ ಬದಿಯ ಪ್ರಶಾಂತ ನದಿ, ರಸ್ತೆ ದಾಟಿದರೆ ಮರಳ ರಾಶಿ, ಮರಳ ಮುಂದಿನ ಸಮುದ್ರ, ಅದರ ಬಿಳಿ ನೊರೆಯ ತೆರೆ, ತೆರೆಯೊಳಗೆ ಅಡಗಿರುವ ಮೀನು, ಏಡಿ-ಚಿಪ್ಪು-ಕವಡೆ ಹೀಗೆ ಅವರ ಕ್ರಿಸ್‌ಮಸ್‌ನ ಕಲ್ಪನೆಯ ಎದುರು ನನ್ನ ಮರವಂತೆ ರಜೆಯ ಚಿತ್ತಾರವನ್ನು ಬರೆದು ನಿಲ್ಲಿಸಿದ್ದೇನೆ. ಇಷ್ಟು ದಿನ ಬ್ರಿಸ್ಟಲ್‌ನಲ್ಲಿ ಕುಳಿತು ನಮ್ಮೂರಿಗೆ ಟಪ್ಪಾಲ್‌ ಕಳುಹಿಸುತ್ತಿದ್ದೆ. ರಜೆ ಮುಗಿಸಿ ಮರಳುವಾಗ ಊರಿನ ಹೊಸ ಸುದ್ದಿಗಳ ಟಪ್ಪಾಲ್‌ ತರುತ್ತೇನೆಂದು ಬ್ರಿಸ್ಟಲ್‌ನ ಗೆಳೆಯರಿಗೆ ಹೇಳಿ ತವರಿಗೆ ಹೊರಟುನಿಂತಿದ್ದೇನೆ.
(ಅಂಕಣ ಮುಕ್ತಾಯ)

– ಯೋಗೀಂದ್ರ ಮರವಂತೆ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.