ಇಂಗ್ಲೆಂಡಿಗೆ ಶರಣಾದ ಭಾರತ
Team Udayavani, Dec 3, 2017, 7:50 AM IST
ಭುವನೇಶ್ವರ: ಕೊನೆಯ ಕ್ಷಣದಲ್ಲಿ ಕಾವೇರಿಸಿಕೊಂಡ ಪಂದ್ಯದಲ್ಲಿ ಸಾಹಸಮಯ ಪ್ರದರ್ಶನ ನೀಡಿದರೂ ಶನಿವಾರ ನಡೆದ ವರ್ಲ್ಡ್ ಹಾಕಿ ಲೀಗ್ ಫೈನಲ್ಸ್ನ ತನ್ನ ದ್ವಿತೀಯ ಲೀಗ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಇಂಗ್ಲೆಂಡಿಗೆ 2 -3 ಗೋಲುಗಳಿಂದ ಶರಣಾಗಿದೆ. ಇದರಿಂದ ಭಾರತದ ನಾಕೌಟ್ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.
2-0 ಮುನ್ನಡೆಯಿಂದ ದಾಪುಗಾಲಿಕ್ಕುತ್ತಿದ್ದ ಇಂಗ್ಲೆಂಡ್ ಮೇಲೆ ಕೊನೆಯ ಕ್ವಾರ್ಟರ್ನಲ್ಲಿ ಭಾರತ ಒಂದೇ ಸಮನೆ ಆಕ್ರಮಣಗೈದಿತು. ಆಕಾಶ್ದೀಪ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಗೋಲುಗಳನ್ನು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಆಗ ಭಾರತ ಮತ್ತೂಂದು ಡ್ರಾ ಸಾಧಿಸಬಹುದೆಂಬ ನಿರೀಕ್ಷೆ ಮೂಡಿತ್ತು. ಆದರೆ 56ನೇ ನಿಮಿಷದಲ್ಲಿ ಸಾಮ್ಯುಯೆಲ್ ವಾರ್ಡ್ ಮತ್ತೂಂದು ಗೋಲು ಸಿಡಿಸಿ ಇಂಗ್ಲೆಂಡಿನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಭಾರತ ತನ್ನ ಕೊನೆಯ ಲೀಗ್ ಪಂದ್ಯವನ್ನು ಸೋಮವಾರ ಜರ್ಮನಿ ವಿರುದ್ಧ ಆಡಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.