ಆಳ್ವಾಸ್ ನುಡಿಸಿರಿಗೆ ಇಂದು ತೆರೆ
Team Udayavani, Dec 3, 2017, 10:20 AM IST
ಮೂಡಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ಹಬ್ಬ “ಆಳ್ವಾಸ್ ನುಡಿಸಿರಿ -2017′ ರವಿವಾರ ಸಮಾಪನಗೊಳ್ಳಲಿದೆ.
ನುಡಿಸಿರಿಯ ಮುಂಚಿತವಾಗಿ ನ.30ರಂದು ನಡೆದ ಆಳ್ವಾಸ್ ವಿದ್ಯಾರ್ಥಿ ಸಿರಿ- ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನುಡಿಸಿರಿಗೆ ಉತ್ತಮ ಮುನ್ನುಡಿ ಬರೆಯಿತು. ಅದರೊಂದಿಗೆ ಸಂಯೋಜಿಸಲಾದ ವಿಜ್ಞಾನ ಸಿರಿ ಭವಿಷ್ಯದ ವಿಜ್ಞಾನಿಗಳಿಗೆ ಒಂದಿಷ್ಟು ಸ್ಫೂರ್ತಿ, ಪ್ರೇರಣೆ ನೀಡಿತು. ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ವಿಜ್ಞಾನ ಸಿರಿಯ ಪ್ರಾತ್ಯಕ್ಷಿಕೆ, ಪ್ರದರ್ಶನಗಳನ್ನು ವೀಕ್ಷಿಸಿದರು.
ಆರಂಭದ ದಿನ ಲಕ್ಷದಷ್ಟು ಜನ ಆಗಮನ
ನುಡಿಸಿರಿಯ ಮೊದಲ ದಿನ ಲಕ್ಷ ದಷ್ಟು ಜನ ಆಗಮಿಸಿದ್ದರು. ಶನಿವಾರ ಮಧ್ಯಾಹ್ನ ಕೊಂಚ ನಿರಾಳತೆ ಕಂಡುಬಂದಿತು. ಸಂಜೆಯಾಗುತ್ತಿದ್ದಂತೆ ವಿಪರೀತ ಜನಸಂದಣಿ ಇತ್ತು.
ತುಂಬಿ ತುಳುಕಿದ ಪ್ರದರ್ಶನಾಂಗಣ
ಕೃಷಿ ಸಿರಿಯ ಪ್ರದರ್ಶನ ಕೇಂದ್ರಗಳು ವೀಕ್ಷಕರಿಂದ ತುಂಬಿ ತುಳುಕಿವೆ. ವಿವಿಧ ಮಾರಾಟ ಮಳಿಗೆಗಳಲ್ಲೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ವಿದ್ಯಾಗಿರಿಗೆ ಹೊಂದಿಕೊಂಡಿರುವ ಹೆದ್ದಾರಿಯಲ್ಲೂ ವ್ಯಾಪಾರ ಜೋರಾಗಿ ನಡೆದಿದೆ.
ಇಂದು ಉದ್ಯೋಗ ಸಿರಿ
ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ ಮತ್ತು ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿಗಾಗಿ ಇದೇ ಮೊದಲ ಬಾರಿಗೆ ಡಿ.3ರಂದು ಆಳ್ವಾಸ್ ಉದ್ಯೋಗ ಸಿರಿ- ಉದ್ಯೋಗ ಮೇಳ ಏರ್ಪಡಿಸಲಾಗಿದೆ. ರವಿವಾರ ಬೆಳಗ್ಗೆ 9.30ಕ್ಕೆ ಸ್ಥಳಕ್ಕೆ ಬಂದು ನೋಂದಾಯಿಸಿ 100 ಕಂಪೆನಿಗಳು ನಡೆಸುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.