ಸುವರ್ಣದಲ್ಲಿ ಎರಡು ಹೊಸ ಧಾರಾವಾಹಿ
Team Udayavani, Dec 3, 2017, 10:43 AM IST
ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಆರಂಭವಾಗುತ್ತಿವೆ. “ಜಾನಕಿ ರಾಘವ’ ಹಾಗೂ “ಪುಟ್ಮಲ್ಲಿ’. ಡಿಸೆಂಬರ್ 4 ರಿಂದ “ಜಾನಕಿ ರಾಘವ’ ರಾತ್ರಿ 9.30ಕ್ಕೆ ಪ್ರಸಾರ ಕಂಡರೆ, “ಪುಟ್ಮಲ್ಲಿ’ ಡಿಸೆಂಬರ್ ಸಂಜೆ 6.30ಕ್ಕೆ ಪ್ರಸಾರ ಕಾಣಲಿದೆ. ವಿನು ಬಳಂಜ “ಜಾನಕಿ ರಾಘವ’ ಧಾರಾವಾಹಿಯ ನಿರ್ದೇಶಕರು. ಇದು ಭಕ್ತಿ ಹಾಗೂ ಪ್ರೀತಿಯ ಕಥೆಯಂತೆ.
ಎರಡು ಕುಟುಂಬಗಳ ಕಲಹಕೆ ಬೇರೆಯಾದ ರಾಮನ ಮೂರ್ತಿಯನ್ನು ಒಂದು ಮಾಡಲು ಹೊರಟ ಜಾನಕಿ ಹಾಗೂ ರಾಘವರು ಮುಂದೆ ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬ ಅಂಶವೂ ಈ ಧಾರಾವಾಹಿಯಲ್ಲಿ ಪ್ರಮುಖವಾಗಿದೆಯಂತೆ. ಧಾರಾವಾಹಿ ಒಂದು ಊರಿನ ಆಚಾರ-ವಿಚಾರ, ನಂಬಿಕೆ, ಪರ-ವಿರೋಧಗಳ ಸುತ್ತ ಸಾಗುತ್ತದೆಯಂತೆ. ಮೂಡಿಗೆರೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ.
ಈ ಧಾರವಾಹಿಯಲ್ಲಿ ಪವನ್ ಹಾಗೂ ಜೀವಿತಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಬ್ಬರಿಗೂ ಇದು ಮೊದಲ ಧಾರಾವಾಹಿ. ಉಳಿದಂತೆ ಸುಂದರಶ್ರೀ, ರವಿಭಟ್, ಗುರು ಹೆಗ್ಗಡೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಮೂಲಕ ಪದ್ಮಜಾ ರಾವ್ ಮತ್ತೆ ಕಿರುತೆರೆಗೆ ವಾಪಾಸ್ ಬರುತ್ತಿದ್ದಾರೆ. ಸುಮಾರು ಏಳು ವರ್ಷಗಳಿಂದ ಕಿರುತೆರೆಯಿಂದ ದೂರವಿದ್ದು, ಸಿನಿಮಾಗಳಲ್ಲಿ ಬಿಝಿಯಾಗಿದ್ದ ಪದ್ಮಜಾ ರಾವ್‌ಗೆ ಕಿರುತೆರೆಗೆ ಬರಬೇಕೆಂಬ ಆಸೆ ಇತ್ತಂತೆ.
ಆದರೆ, ಒಳ್ಳೆಯ ಪಾತ್ರ ಹಾಗೂ ತಂಡಕ್ಕಾಗಿ ಕಾಯುತ್ತಿದ್ದರಂತೆ. ಅದು “ಜಾನಕಿ ರಾಘವ’ ಮೂಲಕ ಸಿಕ್ಕಿದೆ ಎನ್ನುವುದು ಅವರ ಮಾತು. ಧಾರಾವಾಹಿಯ ಶೀರ್ಷಿಕೆ ಗೀತೆಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ನವೀನ್ ಸಾಗರ್ ಸಂಭಾಷಣೆ ಧಾರಾವಾಹಿಗಿದೆ. ಲಿಂಗೇಗೌಡ ಹಾಗೂ ಸುಭಾಷ್ ಗೌಡ ಈ ಧಾರಾವಾಹಿಯ ನಿರ್ಮಾಪಕರು.
ಇನ್ನು, “ಪುಟ್ಮಲ್ಲಿ’ ಧಾರಾವಾಹಿ ಅನಾಥ ಹೆಣ್ಮುಮಗಳ ಕಥೆಯೊಂದಿಗೆ ಆರಂಭವಾಗುತ್ತದೆ. ಈ ಧಾರವಾಹಿಯನ್ನು ಸಂಜೀವ್ ತಗಡೂರು ನಿರ್ದೇಶಿಸುತ್ತಿದ್ದಾರೆ. ಅನಾಥ ಹೆಣ್ಣುಮಗಳೊಬ್ಬಳು ಅನಿವಾರ್ಯವಾಗಿ ತುಂಬು ಕುಟುಂಬ ಸೇರಿಕೊಂಡಾಗ ಆಕೆ ಅನುಭವಿಸುವ ಸುಖ-ದುಃಖ, ಯಾತನೆ ಸೇರಿದಂತೆ ಅನೇಕ ಏರಿಳಿತಗಳು ಈ ಧಾರಾವಾಹಿಯ ಪ್ರಧಾನ ಅಂಶಗಳು.
ಇದೊಂದು ಅವಿಭಕ್ತ ಕುಟುಂಬದ ಕಾನ್ಸೆಪ್ಟ್ನಡಿ ತಯಾರಾಗುತ್ತಿರುವ ಧಾರಾವಾಹಿಯಾಗಿದ್ದು, ಪ್ರತಿ ದಿನ 20ಕ್ಕೂ ಹೆಚ್ಚು ಕಲಾವಿದರು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಈ ಧಾರಾವಾಹಿಯಲ್ಲಿ ಶರತ್ ಹಾಗೂ ರಕ್ಷಾ ಗೌಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶ್ರೀಧರ್ ಹೆಗಡೆ ಈ ಧಾರಾವಾಹಿಯ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ತೆರೆಮೇಲೆ ʼಅನಾಥʼನ ಕನಸು
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.