ಒಖೀ ಪ್ರಭಾವ: ಉಪ್ಪಳದಲ್ಲಿ ಕಡಲ್ಕೊರೆತಕ್ಕೆ ಮನೆಗಳು ಸಮುದ್ರ ಪಾಲು
Team Udayavani, Dec 3, 2017, 5:07 PM IST
ಉಪ್ಪಳ: ಒಖೀ ಚಂಡಮಾರುತದ ಪ್ರಭಾವದಿಂದಾಗಿ ಮೂಸೋಡಿ ಅದಿಕದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ನಾಲ್ಕು ಮನೆಗಳು ಪೂರ್ಣವಾಗಿ ಸಮುದ್ರಪಾಲಾಗಿವೆ. ಶುಕ್ರವಾರ ಸಂಜೆಯಿಂದ ತೀವ್ರಗೊಂಡಿದ್ದ ಕಡಲ್ಕೊರೆತ ರಾತ್ರಿ 10 ಗಂಟೆ ವೇಳೆಗೆ ಮತ್ತಷ್ಟು ತೀವ್ರಗೊಂಡಿದೆ.
ಈ ವೇಳೆ ಅಬ್ದುಲ್ ಖಾದರ್ ಅವರ ಮನೆ ಪೂರ್ಣವಾಗಿ ಸಮುದ್ರ ಪಾಲಾಯಿತು. ಅಪಾಯ ಮನಗಂಡು ಮನೆಯಿಂದ ಹೊರಗೋಡಿದ ಕುಟುಂಬ ಪಾರಾಗಿದೆ. ಸ್ಥಳಕ್ಕೆ ಕೂಡಲೇ ತಲುಪಿದ ಪೊಲೀಸ್, ಅಗ್ನಿಶಾಮಕದಳ ಹಾಗೂ ಕಂದಾಯ ಅಧಿಕಾರಿಗಳು ಅಬ್ದುಲ್ ಖಾದರ್ ಅವರ ಕುಟುಂಬ ವನ್ನು ಬೇರೆಡೆಗೆ ಸ್ಥಳಾಂತರಿಸಲು ನೆರವು ನೀಡಿದರು. ಇದೇ ವೇಳೆ ಈ ಹಿಂದೆ ಉಂಟಾದ ಕಡಲ್ಕೊರೆತಕ್ಕೆ ಸಿಲುಕಿ ಭಾಗಶಃ ನಾಶಗೊಂಡಿದ್ದ ಮೂರು ಮನೆಗಳೂ ಶುಕ್ರವಾರ ಪೂರ್ಣ
ವಾಗಿ ಸಮುದ್ರ ಪಾಲಾಯಿತು. ಸಮುದ್ರ ಪಾಲಾದ ಮನೆಗಳು ಖದೀಜಮ್ಮ, ಇಬ್ರಾಹಿಂ, ಅಶ್ರಫ್ ಅವರ ಮನೆಗಳಾಗಿವೆ. ಈ ಹಿಂದೆ ಮನೆಗಳು ಭಾಗಶಃ ನಾಶಗೊಂಡಾಗ ಈ ಮೂರು ಕುಟುಂಬಗಳನ್ನು ಅಂದೇ ಸ್ಥಳಾಂತರಿಸಲಾಗಿತ್ತು. ಕಡಲ್ಕೊರೆತ ಮುಂದುವರಿ ದಿದ್ದು ಸುಮಾರು 200 ಮೀಟರ್ ಪ್ರದೇಶ ಸಮುದ್ರ ಪಾಲಾಗಿದೆ.
ಒಖೀ ಪ್ರಭಾವ ಕೇರಳದ ಕರಾವಳಿಯಾದ್ಯಂತ ಒಖೀ ಚಂಡ ಮಾರುತ ಪ್ರಭಾವ ವ್ಯಾಪಕವಾಗಿ ಕಂಡು ಬಂದಿದ್ದು, ಗುರುವಾರದಿಂದಲೇ ಸಮುದ್ರ ಪ್ರಕ್ಷುಬ್ಧವಾಗಿತ್ತು. ಕುಂಬಳೆ, ಮೊಗ್ರಾಲ್, ಉಪ್ಪಳ ಕಡಲ ಕಿನಾರೆಯಲ್ಲೂ ಸಮುದ್ರ ಪ್ರಕ್ಷುಬ್ಧವಾದ್ದ ರಿಂದ ಉಪ್ಪಳದಲ್ಲಿ ಜನರು ಸಂಜೆವೇಳೆ ಮನೆ ಯಿಂದ ಹೊರಬಂದು ಮಧ್ಯರಾತ್ರಿಯ ತನಕ ಹೊರಗುಳಿದರು.
ಮರ ಬಿದ್ದು ಸಂಚಾರಕ್ಕೆ ತಡೆ ಕಾಸರಗೋಡಿನಲ್ಲಿ ಶನಿವಾರ ಬೀಸಿದ ಭಾರೀಗಾಳಿಗೆ ನಗರದ ನೆಲ್ಲಿಕುಂಜೆ ಗೀತಾ ಚಿತ್ರ
ಮಂದಿರದ ಬಳಿ ಬೀಚ್ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಅದನ್ನು ತೆರವುಗೊಳಿಸಿತು. ಚಂಡ ಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರ ಗೋಡು ಮತ್ತು ಚೇರಂಗೈ ಕಡಪ್ಪುರದಲ್ಲಿ ಪೊಲೀಸರು ಧ್ವನಿ ವರ್ಧಕ ಮೂಲಕ ಜಾಗ್ರತಾ ನಿರ್ದೇಶ ನೀಡಿದ್ದಾರೆ. ಬೆಸ್ತರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.