ಬಹುತ್ವದ ಸಂಬಂಧಗಳು ಅಂತರಂಗದ ಮೂಲದ್ರವ್ಯ: ನಾಗತಿಹಳ್ಳಿ
Team Udayavani, Dec 4, 2017, 11:47 AM IST
ಮೂಡಬಿದಿರೆ(ಆಳ್ವಾಸ್): ಬಹುತ್ವದ ಸಂಬಂಧಗಳು ಅಂತರಂಗದ ಜೀವದ್ರವ್ಯವಾಗು ವುದು ಇಂದಿನ ರಾಷ್ಟ್ರೀಯ ಅಗತ್ಯವಾಗಿದೆ ಎಂದು ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.
ಮೂರು ದಿನ ಜರಗಿದ ಈ ಸಮ್ಮೇಳನದಲ್ಲಿ ರವಿವಾರ ಅವರು ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಮಾತುಗಳನ್ನಾಡಿದರು. ಆಳ್ವಾಸ್ ನುಡಿಸಿರಿಯ ರೂವಾರಿ ಡಾ| ಎಂ.ಮೋಹನ್ ಆಳ್ವ ಅವರು ಹದಿಮೂರು ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಸಮ್ಮಾನಿಸಿದರು.
ಬದುಕಿನ ಬಹುತ್ವವನ್ನು ಈ ಮೂರು ದಿನಗಳ ಸಮ್ಮೇಳನ ಯಶಸ್ವಿಯಾಗಿ ಶೋಧಿಸಿದೆ ಎಂದು ನಾಗತಿಹಳ್ಳಿ ವಿವರಿಸಿದರು. ಸಂಬಂಧಗಳು ನಾಟಕೀಯವಾಗಬಾರದು. ಹೃದಯಂಗಮ ವಾಗಬೇಕು. ಈ ನುಡಿಸಿರಿಯಿಂದ ಪಡೆದ ಜ್ಞಾನವನ್ನು ಪ್ರತಿನಿಧಿಗಳು ತಮ್ಮ ನಡೆನುಡಿಯಲ್ಲಿ ಅಂತರ್ಗತಗೊಳಿಸಬೇಕು. ತಮ್ಮ ಹಳ್ಳಿಗಳಲ್ಲಿ ಪುಟ್ಟ ಸಾಂಸ್ಕೃತಿಕ ಸಮಾವೇಶ ನಡೆಸುತ್ತಾ ಗ್ರಹಿಕೆಗಳನ್ನು ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಜಾತಾಂತ್ರಿಕ ವ್ಯವಸ್ಥೆ
ಪ್ರಜಾಪ್ರಭುತ್ವವೇ ಶ್ರೇಷ್ಠವಾದ ಧರ್ಮ ಎಂದು ಸಮ್ಮೇಳನದ ಸರ್ವಾಧ್ಯಕ್ಷರು ಹೇಳಿದರು. ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ. ನಮ್ಮ ಪರಂಪರೆ ಮತ್ತು ಆಧುನಿಕ ವ್ಯವಸ್ಥೆಯ ಬಗ್ಗೆ ಜಿಜ್ಞಾಸೆ ನಡೆದಿದೆ. ವೈಯಕ್ತಿಕವಾಗಿ ನಾನು ಅನೇಕ ನೂತನ ಸಂಗತಿಗಳನ್ನು ಅರಿತುಕೊಂಡೆ. ಇಂತಹ ಅದ್ಭುತ ಸಮ್ಮೇಳನದ ರೂವಾರಿ ಡಾ| ಮೋಹನ್ ಆಳ್ವ ಮತ್ತು ಅವರ ತಂಡ ಅಭಿವಂದನೀಯರೆಂದರು.
ಸದಾಶಯಗಳು ಬದುಕಿಗೆ ಅತೀ ಮುಖ್ಯ. ಒಳ್ಳೆಯ ಚಿಂತನೆ ಪ್ರೇರೇಪಿಸುವುದೂ ಮುಖ್ಯ. ಈ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದರು.
ಶಾಸಕ ಅಭಯಚಂದ್ರ ಜೈನ್, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ನುಡಿಸಿರಿ ಪ್ರಶಸ್ತಿ ಪುರಸ್ಕೃತರು
ಅ|ವಂ| ಬಿಷಪ್ ಹೆನ್ರಿ ಡಿ’ಸೋಜಾ, ನಾಡೋಜ ಡಾ| ಎನ್.ಸಂತೋಷ್ ಹೆಗ್ಡೆ, ಡಾ| ತೇಜಸ್ವಿ ಕಟ್ಟಿàಮನಿ, ಡಾ| ಸಿದ್ಧಲಿಂಗ ಪಟ್ಟಣ ಶೆಟ್ಟಿ, ಪ್ರೊ| ಕೆ.ಬಿ.ಸಿದ್ದಯ್ಯ, ಪ್ರೊ| ಜಿ.ಎಚ್.ಹನ್ನೆರಡು ಮಠ, ಪ್ರೊ| ಬಿ.ಸುರೇಂದ್ರ ರಾವ್, ಡಾ| ಎಂ.ಪ್ರಭಾಕರ ಜೋಶಿ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಪದ್ಮರಾಜ ದಂಡಾವತಿ, ರತ್ನಮಾಲಾ ಪ್ರಕಾಶ್, ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಮತ್ತು ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ.
ಸಮ್ಮಾನಿತರನ್ನು ಗುರುಪ್ರಸಾದ್ ಭಟ್, ಚಂದ್ರಶೇಖರ್ ಗೌಡ, ಯೋಗೀಶ್ ಕೈರೋಡಿ, ರವಿಶಂಕರ್, ಡಾ| ಡಿ.ವಿ.ಪ್ರಕಾಶ್, ಡಾ| ಪ್ರವೀಣ್‌ಚಂದ್ರ, ದಿವ್ಯಶ್ರೀ ಡೆಂಬಳ, ರಜನೀಶ್, ಡಾ| ಪದ್ಮನಾಭ ಶೆಣೈ, ವಿಜಯಕುಮಾರ್, ಸುಧಾರಾಣಿ, ಡಾ| ಕೃಷ್ಣರಾಜ್ ಕರಬ, ಶಿವಪ್ರಸಾದ್ ಪರಿಚಯಿಸಿದರು.
ಪ್ರಶಸ್ತಿಯು ಶಾಲು, ಹಾರ, ಫಲವಸ್ತು, ಸ್ಮರಣಿಕೆ, ಸಮ್ಮಾನ ಪತ್ರ ಮತ್ತು 25 ಸಾವಿರ ರೂ.ನಗದನ್ನು ಒಳಗೊಂಡಿದೆ. ಸಮ್ಮೇಳನದ ಸರ್ವಾಧ್ಯಕ್ಷ ಡಾ| ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಡಾ| ಆಳ್ವರು ಶಾಲು, ಸ್ಮರಣಿಕೆ, ಸಮ್ಮಾನಪತ್ರ, ಬೆಳ್ಳಿ ದೀಪ 50 ಸಾವಿರ ರೂ. ಸಹಿತ ಸಮ್ಮಾನಿಸಿದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಅಂಡಾರು ಗುಣಪಾಲ ಹೆಗ್ಡೆ ವಂದಿಸಿದರು.
ಆಡಿ ತೋರಿಸುವುದಲ್ಲ ಮಾಡಿ ತೋರಿಸುವುದು
ಈ ಸಮ್ಮೇಳನ ಯಾವುದೇ ನಿರ್ಣಯ ಅಥವಾ ಠರಾವನ್ನು ಮಂಡಿಸದಿರುವುದೇ ವಿಶೇಷ ಎಂದರು ನಾಗತಿಹಳ್ಳಿ. ಎಷ್ಟೋ ಸಮ್ಮೇಳನಗಳು ಅದೆಷ್ಟೋ ನಿರ್ಣಯಗಳನ್ನು ಮಂಡಿಸಿ, ಸ್ವೀಕರಿಸಿವೆ. ಆದರೆ ಸಮ್ಮೇಳನದ ಚಪ್ಪರ ಬಿಚ್ಚುವ ಮೊದಲೇ ಈ ನಿರ್ಣಯಗಳು ಧೂಳೀಪಟವಾಗಿವೆ. ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ, ಆಡಳಿತದಲ್ಲಿ ಕನ್ನಡ ತಂತ್ರಾಂಶ ಬಳಕೆ ಇತ್ಯಾದಿ ಇನ್ನೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ನುಡಿಸಿರಿ ವಿಶೇಷವಾದ ಪರಂಪರೆ ಹೊಂದಿದೆ. ಇಲ್ಲಿ ಆಡಿದ್ದನ್ನು ಮಾಡಲಾಗುತ್ತದೆ ಎಂದು ಶ್ಲಾಘಿಸಿದರು.
ಪನ್ನೀರು, ಪುಷ್ಪ ಆರತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರನ್ನು ಪನ್ನೀರು ಸಿಂಪಡಿಸಿ, ಪುಷ್ಪವೃಷ್ಟಿಗೈದು, ಆರತಿ ಎತ್ತುವ ಮೂಲಕ ಗೌರವಿಸಲಾಯಿತು. ಎಲ್ಲಾ ಸಾಧಕರಿಂದ ಡಾ| ಆಳ್ವ ಅವರು ಆಶೀರ್ವಾದ ಪಡೆದರು.
ಆಳ್ವರು ದೇಶದ ಆಸ್ತಿ
ಡಾ| ಆಳ್ವರು ದೇಶದ ದೊಡ್ಡ ಆಸ್ತಿ. ಇಂತಹ ಸಾಧಕರ ಬಗ್ಗೆ ಪಠ್ಯಪುಸ್ತಕ ರಚನೆಯಾಗಬೇಕು –ಕಟ್ಟಿಮನಿ
ಪ್ರೀತಿ, ವಿಶ್ವಾಸ, ನಿಷ್ಕಲ್ಮಶ ಭಾವದಿಂದ ಈ ಗೌರವ ಸ್ವೀಕರಿಸಿದ್ದೇನೆ-ಸಿದ್ದಯ್ಯ
ಕನ್ನಡದ ಔದಾರ್ಯದ ಮನಸ್ಸು ಮಾತ್ರ ಇಂತಹ ಅಪೂರ್ವ ಸಮ್ಮಾನ ನೀಡಲು ಸಾಧ್ಯ-ದಂಡಾವತಿ.
ನನಗೆ ದೊರೆತಿರುವ ಎಲ್ಲಾ ಪ್ರಶಸ್ತಿಗಳಿಗಿಂತ ಇದು ಶ್ರೇಷ್ಠ ಪ್ರಶಸ್ತಿ-ರತ್ನಮಾಲ
ಯಕ್ಷಗಾನ ಸಮುದಾಯದ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ-ಜೋಶಿ
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.