ಸ್ಟೈಲಿಷ್ ಅಪಾಚೆ
Team Udayavani, Dec 4, 2017, 2:11 PM IST
ಬೈಕ್‌ನಲ್ಲಿ ಸ್ಟೈಲಿಷ್ ಆಗಿ ಓಡಾಡುವ ಕ್ರೇಜ್ ಕಾಲೇಜು ಹುಡುಗರಿಗೆ ಮಾತ್ರ ಅಥವಾ ಯುವಕರಿಗೆ ಮಾತ್ರ ಎನ್ನುವ ಹಾಗೇನಿಲ್ಲ. ವಯಸ್ಸಿನ ಮಿತಿ ಇಲ್ಲವೇ ಇಲ್ಲ. ವಯಸ್ಸು ನಲವತ್ತು ದಾಟಿದವರೂ, ಐವತ್ತು ದಾಟಿದವರೂ ಹೊಸ ಹೊಸ ಬೈಕ್‌ಗಳ ಮೇಲೆ ಓಡಾಡುವುದನ್ನು ಕಾಣಬಹುದಾಗಿದೆ. ಇದನ್ನೇ ಗುರಿಯಾಗಿಸಿಕೊಂಡಿರುವ ಕಂಪನಿಗಳು ಇತ್ತೀಚೆಗೆ ಇದನ್ನು ಪರಿಗಣಿಸಿಯೇ ಹೊಸ ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಈ ಹಿಂದಿನ ಬೇಡಿಕೆಯ ಮಾಡೆಲ್‌ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿ ಪರಿಚಯಿಸಿದ್ದೂ ಇದೆ.
ಈ ಸಾಲಿಗೆ ಸೇರುವ ಎರಡು ಬೇಡಿಕೆಯ ಹಾಗೂ ತಕ್ಕಮಟ್ಟಿಗಿನ ಜನಪ್ರಿಯತೆಯನ್ನೂ ಗಳಿಸಿಕೊಂಡಿರುವ ಬೈಕ್‌ಗಳೆಂದರೆ ಟಿವಿಎಸ್‌ನ ಅಪಾಚೆ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180. ಈ ಎರಡೂ ಮಾಡೆಲ್‌ಗಳನ್ನು ಕಂಪನಿ ಇತ್ತೀಚೆಗೆ ಬಣ್ಣಗಳ ಕಾಂಬಿನೇಷನ್‌ನಲ್ಲಿ ಬದಲಾವಣೆ ತಂದು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಪರಿಚಯಿಸಲಾದ ಸಿರಾ ಮ್ಯಾಟ್ ರೆಡ್ ಸರಣಿಯಲ್ಲಿನ ಈ ಎರಡೂ ಮಾಡೆಲ್‌ನ ಬೈಕ್‌ಗಳು ಈಗ ಹುಡುಗರ ಆಕರ್ಷಣೆಗೆ ಕಾರಣವಾಗಿವೆ. ಟಿವಿಎಸ್ ಅಪಾಚಿ ಮಾಡೆಲ್ ಬೈಕ್‌ಗಳನ್ನು ಪರಿಚಯಿಸಿದ ಆರಂಭದ ದಿನಗಳಲ್ಲಿ ಸಿಕ್ಕ ಪ್ರಚಾರ, ಬೇಡಿಕೆಗಿಂತಲೂ ಈಗ ಹೆಚ್ಚಿಗೆ ಬೇಡಿಕೆ ಪಡೆದುಕೊಳ್ಳುತ್ತಿವೆ. ನಿಧಾನವಾಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಸಾಧ್ಯತೆಗಳಿವೆ ಎನ್ನಲಡ್ಡಿಯಿಲ್ಲ. ಈ ಹಿಂದೆ ಹಬ್ಬದ ವಿಶೇಷವಾಗಿ ಕೆಂಪು ಬಣ್ಣದ ಸರಣಿಯಲ್ಲಿ ಪರಿಚಯಿಸಿದ್ದಾಗಿ ಹೇಳಿಕೊಂಡಿದ್ದ ಕಂಪನಿ ಅದೇ ಬೇಡಿಕೆ ಉಳಿಸಿಕೊಳ್ಳಲು ಹೊರಟಿದೆ.
ಬಜಾಜ್ ಪಲ್ಸರ್, ವಿ15, ಹೋಂಡಾ ಸಿಬಿ ಶೈನ್, ಸುಜುಕಿ ಗಿಕ್ಸರ್ ಎಸ್‌ಎಫ್, ಹೀರೋ ಅಚೀವರ್, ಎಕ್ಸ್‌ಟ್ರೀಮ್ ಸ್ಫೋರ್ಟ್ಸ್ ಬೈಕ್‌ಗಳಿಗೆ ಪ್ರಬಲ ಸ್ಪರ್ಧಿಯಾಗಿರುವ ಆರ್‌ಟಿಆರ್ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಬೈಕ್‌ಗಳು ಟಿವಿಎಸ್ ಕಂಪನಿಯ ಬೈಕ್‌ಗಳನ್ನು ಇಷ್ಟಪಡುವ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆ ಆಗುವುದರಲ್ಲಿ ಸಂದೇಹ ಇಲ್ಲ.
ಏನೇನಿದೆ ಬದಲಾವಣೆ?
ಎಂಜಿನ್ ಕೌಲ್ ರಿಯರ್ ಪ್ರೈಮ್‌ಗಳು ಹಾಗೂ ಫುಯೆಲ್ ಟ್ಯಾಂಕ್‌ಗಳ ಬಣ್ಣಗಳನ್ನು ಬದಲಾಯಿಸುವುದರ ಜತೆಗೆ ಪರ್ಫಾರೆನ್ಸ್ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಒತ್ತು ನೀಡಿದೆ. ಈ ಹಿಂದಿನ ಹಳದಿ ಕಾಂಬಿನೇಷನ್ ಅಪಾಚೆ ಬೈಕ್‌ಗಳಿಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಪ್ರಜ್ವಲಿಸುವಂತೆ ವಿನ್ಯಾಸಗೊಂಡಿದೆ. ಬಣ್ಣಗಳ ವಿನ್ಯಾಸದಲ್ಲಿ ಒಂದು ಹೆಜ್ಜೆ ಮುಂದಿರುವ ಟಿವಿಎಸ್ ಈ ಬೈಕ್‌ಗಳಲ್ಲೂ ಇದನ್ನು ಕಾಯ್ದುಕೊಂಡಿದೆ.
ಎಂಜಿನ್ ಅಲ್ಟಿಮೇಟ್
ಎಂಜಿನ್ ಸಾಮರ್ಥ್ಯದಲ್ಲಿ ಟಿವಿಎಸ್ ತನ್ನ ಬ್ರಾಂಡ್ ಕಳೆದುಕೊಂಡಿರುವ ದಾಖಲೆಗಳು ವಿರಳ. ಹಾಗೇ ಈ ಬೈಕ್‌ಗಳಲ್ಲಿಯೂ ಇದನ್ನು ಕಾಯ್ದುಕೊಂಡಿದೆ. 150ರಿಂದ 200 ಸಿಸಿ ಸೆಗೆ¾ಂಟ್ ಬೈಕ್‌ಗಳ ಸಾಲಿನಲ್ಲಿ ಅಪಾಚಿಗೆ ಅಗ್ರ ಪಂಕ್ತಿಯಲ್ಲೇ ಸ್ಥಾನವಿದ್ದು, ಅದನ್ನು ಇನ್ನಷ್ಟು ಗಟ್ಟಿಯಾಗಿಸಿಕೊಂಡಿದೆ. ಆರ್‌ಟಿಆರ್ 160 ಬೈಕ್ ಸಿಂಗಲ್ ಸಿಲಿಂಡರ್ ಹಾಗೂ 15.2ಬಿಎಚ್‌ಪಿಯೊಂದಿಗೆ 159 ಸಿಸಿ ಸಾಮರ್ಥ್ಯ ಹೊಂದಿದೆ. 5ಸ್ಪೀಡ್ ಗೇರ್‌ಬಾಕ್ಸ್ ಇದರದ್ದಾಗಿದೆ. ಆರ್‌ಟಿಆರ್ 180 ಬೈಕ್ 17ಬಿಎಚ್‌ಪಿಯೊಂದಿಗೆ 177ಸಿಸಿ ಸಾಮರ್ಥ್ಯ ಹೊಂದಿದೆ.
ಶೋರೂಂ ಬೆಲೆ
78,000 ರೂ.ನಿಂದ 90,000 ರೂ.
ಹೈಲೈಟ್ಸ್
– ಪ್ರತಿ ಲೀಟರ್ ಪೆಟ್ರೋಲ್‌ಗೆ 45ರಿಂದ 60 ಕಿಲೋಮೀಟರ್ ಮೈಲೇಜ್
– ಇಂಧನ ಶೇಖರಣಾ ಸಾಮರ್ಥ್ಯ 14ರಿಂದ 16 ಲೀಟರ್
– ಗರಿಷ್ಠ ವೇಗ 118 ಕಿಲೋಮೀಟರ್
– ಮುಂದು ಮತ್ತು ಹಿಂದಕ್ಕೆ ಡಿಸ್ಕ್ ಬ್ರೇಕ್
– ಡಿಜಿಟಲ್ ಸ್ಪಿಡೋಮೀಟರ್, ಟ್ರಿಪ್‌ಮೀಟರ್, ಒಡೋಮೀಟರ್ ಅಳವಡಿಕೆ
– 2085ಮಿ.ಮೀ. ಉದ್ದ, 730ಮಿ.ಮೀ. ಅಗಲ, 1105ಮಿ.ಮೀ. ಎತ್ತರ
– 165ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್
– ಕರ್ಬ್ ಭಾರ 140 ಕೆಜಿ
ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.