ರಾಹುಲ್‌ ಮುಂದಿರುವ ಸವಾಲುಗಳು ಅನೇಕ…


Team Udayavani, Dec 5, 2017, 9:51 AM IST

05-20.jpg

ಪಕ್ಷದಲ್ಲಿನ ಯುವಕರಿಗಷ್ಟೇ ಭವಿಷ್ಯದ ಪ್ರಧಾನಿ ಎಂಬ ಕನಸು ಕಾಣುವಷ್ಟಕ್ಕೇ ಅವರ ವ್ಯಕ್ತಿತ್ವ ಸೀಮಿತಗೊಂಡದ್ದು ವಿಪರ್ಯಾಸ. ಅರವತ್ತಾರು ವರ್ಷದ ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನತೆಯ ಪ್ರತೀಕವಾಗಿ ಕಂಡುಬಂದರೂ 46 ವರ್ಷದ ರಾಹುಲ್‌, ಯುವಜನರ ಐಕಾನ್‌ ಆಗಿ ಭರವಸೆಯನ್ನು ಹುಟ್ಟುಹಾಕಲು ಸಾಧ್ಯವಾಗ‌ದೇ ಹೋಗಿರುವುದು ಅವರ ಹಲವು ವೈಫಲ್ಯಗಳಲ್ಲಿ ಒಂದು.

ರಾಹುಲ್‌ ಗಾಂಧಿ ಕೊನೆಗೂ ಅಮ್ಮನಿಂದ ಬೇಟನ್‌ (ಅಧಿಕಾರ ದಂಡ) ಪಡೆದುಕೊಳ್ಳಲಿದ್ದಾರೆ. ರಾಹುಲ್‌, ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಪರಿವಾರದ ಐದನೇ ಕುಡಿಯಾಗಿ 132 ವರ್ಷ ಹಳೆಯದಾದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಅಧಿಕಾರಕ್ಕೇರಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಒಟ್ಟು 132 ವರ್ಷದಲ್ಲಿ ಮೋತಿಲಾಲ್‌ ನೆಹರೂ, ಜವಾಹರ್‌ ಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ಈಗ ರಾಹುಲ್‌ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವವರೆಗೆ ಈ ಕುಟುಂಬ ಒಟ್ಟಾರೆಯಾಗಿ 42 ವರ್ಷ ತನ್ನ ಪಾರುಪತ್ಯವನ್ನು ಮುಂದುವರಿಸಿದೆ.

ಇಂದಿರಾ ಗಾಂಧಿ ಅವರು 1978ರಲ್ಲಿ ಪಕ್ಷದ ಚುಕ್ಕಾಣಿ ಹಿಡಿದರು. ಈವೊತ್ತಿನವರೆಗಿನ ಈ 39 ವರ್ಷಗಳಲ್ಲಿ ಆರು ವರ್ಷ ಈ ಕುಟುಂಬದ ಕೈತಪ್ಪಿದ ಅಧಿಕಾರಾವಧಿಯಲ್ಲಿ ಪಿ.ವಿ. ನರಸಿಂಹರಾವ್‌, ಸೀತಾರಾಂ ಕೇಸರಿ ಅವರು ಅಧ್ಯಕ್ಷರಾಗಿದ್ದರು ಎನ್ನುವುದನ್ನು ಬಿಟ್ಟರೆ ಈಗಲೂ ನೆಹರೂ ಕುಟುಂಬದ ಆಳ್ವಿಕೆಯೇ ನಡೆದಿದೆ. ಇಂದಿರಾ ಮತ್ತು ರಾಜೀವ್‌ ಅವರ ಹತ್ಯೆ ನಡೆದ ಹಿನ್ನೆಲೆ ಕೆಲವು ನಾಯಕರು ಕಾಂಗ್ರೆಸ್‌ ತೊರೆದು ಬೇರೆ ಪಕ್ಷ ಕಟ್ಟಿದರು. ಅವರಲ್ಲಿ ಮುಖ್ಯರೆಂದರೆ ಎನ್‌.ಡಿ ತಿವಾರಿ ಮತ್ತು ಪ್ರಣವ್‌ ಮುಖರ್ಜಿ; 1984ರಲ್ಲಿ ಸಮಾಜವಾದಿ ಕಾಂಗ್ರೆಸ್‌ ಕಟ್ಟಿದರು. 1996ರಲ್ಲಿ ಮಾಧವರಾವ್‌ ಸಿಂಧಿಯಾ  ಮಧ್ಯಪ್ರದೇಶ ವಿಕಾಸ ಪಕ್ಷ ಮತ್ತು ಅರ್ಜುನ್‌ ಸಿಂಗ್‌ ಅಖೀಲ ಭಾರತ ಇಂದಿರಾ ಕಾಂಗ್ರೆಸ್‌ ಆರಂಭಿಸಿದರು. 1996ರಲ್ಲಿ ಜಿ.ಕೆ. ಮೂಪನಾರ್‌ ಕಾಂಗ್ರೆಸ್‌ ತೊರೆದು ತಮಿಳ್‌ ಮಾನಿಲಾ ಕಾಂಗ್ರೆಸ್‌ ಕಟ್ಟಿದರು. 1997ರಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಬಿಟ್ಟು ತಮ್ಮದೇ ಆದ ತೃಣಮೂಲ ಕಾಂಗ್ರೆಸ್‌ ಸ್ಥಾಪಿಸಿದರು. 1999ರಲ್ಲಿ ಶರದ್‌ ಪವಾರ್‌ ಸಹ ಪಕ್ಷವನ್ನು ತೊರೆದು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ಆರಂಭಿಸಿದರು.

ನೆಹರೂ ಮತ್ತು ಇಂದಿರಾ ಗಾಂಧಿ ಅವರಿಂದ ಹಿಡಿದು ಇಂದಿನ ವರೆಗೂ ಈ ಕುಟುಂಬದ ಹೆಸರಿನ ನೆರಳು ಮತ್ತು ನಂಟಿಲ್ಲದೆ ಈ ಪಕ್ಷ ಉಳಿಯುವುದು ಕಷ್ಟ ಎನ್ನುವಂತಾಗಿದೆ. ಶರದ್‌ ಪವಾರ್‌ ಮತ್ತು ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿದರೆ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟಿದ ಉಳಿದ ನಾಯಕರೆಲ್ಲ ಮತ್ತೆ ಕಾಂಗ್ರೆಸ್ಸಿಗೆ ಮರಳಿದ ಇತಿಹಾಸವಿದೆ..ಚರಿತ್ರೆಯ ಈ ಪುಟಗಳನ್ನು ನೋಡಿದರೆ ಈ ಕುಟಂಬದ ನಾಯಕತ್ವ ಕಾಂಗ್ರೆಸ್ಸಿಗೆ ಅನಿವಾರ್ಯ ಎನಿಸಿರು ವುದು ಗಮನಾರ್ಹ.

ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಕಟ್ಟಿರುವ ಶರದ್‌ ಪವಾರ್‌ ಮತ್ತು ಮಮತಾ ತಮ್ಮ ರಾಜ್ಯಗಳಿಗಷ್ಟೇ ಸೀಮಿತಗೊಂಡಿದ್ದಾರೆ. ಅವರ ಪ್ರಭಾವಳಿ ದೇಶದ ಬೇರೆಡೆ ಗೌಣ. ಹೀಗಾಗಿ ರಾಷ್ಟ್ರೀಯ ವರ್ಚಸ್ಸು ಹೊಂದಿರುವ ನೆಹರೂ ಇಂದಿರಾ ಕುಟುಂಬಕ್ಕೇ ಕಾಂಗ್ರೆಸ್‌ ಜೋತುಬೀಳುವಂತಾಗಿರುವುದು ರಾಜಕೀಯ ವಿಪರ್ಯಾಸ.

ಈ ಮಧ್ಯೆ 1991ರಲ್ಲಿ ರಾಜೀವ್‌ ಗಾಂಧಿ ಅವರ ಹತ್ಯೆಯಾದ ಬಳಿಕ ಪಕ್ಷದ ನಾಯಕತ್ವವಹಿಸಿಕೊಳ್ಳುವವರಾರೂ ಈ ಕುಟುಂಬ ದಲ್ಲಿ ಕಾಣಲಿಲ್ಲ. ರಾಜೀವ್‌ ಆಪ್ತರು ಮತ್ತು ಪಕ್ಷದ ಹಲವು ಹಿರಿಯ ನಾಯಕರು ಸೋನಿಯಾ ಗಾಂಧಿ ಅವರನ್ನು ನಾಯಕತ್ವವಹಿಸಿ ಕೊಳ್ಳುವಂತೆ ದುಂಬಾಲು ಬಿದ್ದರೂ, ಅವರು ಪಕ್ಷದ ಚುಕ್ಕಾಣಿ ಹಿಡಿಯಲು ಮುಂದಾಗಲಿಲ್ಲ. ಅತ್ತೆ ಇಂದಿರಾ ಗಾಂಧಿ ಮತ್ತು ಪತಿ ರಾಜೀವ್‌ ಹತ್ಯೆಯಿಂದ ಸಾರ್ವಜನಿಕ ಜೀವನದ ಬಗ್ಗೆಯೇ ನೈತಿಕ ಸ್ಥೆçರ್ಯ ಕಳೆದುಕೊಂಡು ಕುಗ್ಗಿಹೋಗಿದ್ದ ಸೋನಿಯಾ ತಮ್ಮ ಇಬ್ಬರು ಎಳೆಯ ಮಕ್ಕಳೊಡನೆ ಮನೆಯೊಳಗೇ ಇದ್ದುಬಿಟ್ಟರು.

ಈ ಅವಧಿಯಲ್ಲಿ ಪಕ್ಷದ ಹಿರಿಯ ನಾಯಕರಾಗಿದ್ದ ಪಿ.ವಿ. ನರಸಿಂಹರಾವ್‌ ಪಕ್ಷದ ಚುಕ್ಕಾಣಿ ಹಿಡಿದು ಪ್ರಧಾನ ಮಂತ್ರಿಯೂ ಆದರು. ನರಸಿಂಹರಾವ್‌ ನೇತೃತ್ವದಲ್ಲಿ 1996ರಲ್ಲಿ ನಡೆದ ಚುನಾ ವಣೆಯಲ್ಲಿ ಕಾಂಗ್ರೆಸ್‌ ಕೇವಲ 140 ಸ್ಥಾನಗಳನ್ನು ಪಡೆದು ಅಧಿಕಾರ ಕಳೆದುಕೊಂಡಿತು. ನರಸಿಂಹರಾವ್‌ ವರ್ಚಸ್ಸು ಚುನಾವಣೆಯಲ್ಲಿ ಮತ ತಂದುಕೊಡಲಿಲ್ಲ. ಈ ವಾಸ್ತವವನ್ನು ಮನಗಂಡ ಇಂದಿರಾ ಕುಟುಂಬಕ್ಕೆ ಆಪ್ತರಾದವರು ಮತ್ತು ಭಟ್ಟಂಗಿಗಳ ಕೂಟ ನರಸಿಂಹರಾವ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿರಿಯ ಕಾಂಗ್ರೆಸ್ಸಿಗ ಸೀತಾರಾಂ ಕೇಸರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು. ಆದರೆ ಅವರು ಒಂದು ವರ್ಷ ಪೂರೈಸುವ ಹೊತ್ತಿಗೆ ಮತ್ತೆ ಇಂದಿರಾ ಪರಿವಾರದ ಭಟ್ಟಂಗಿಗಳ ಕೂಟ ಮನೆಯಲ್ಲಿ ಮೌನವಾಗಿ ತಮ್ಮಷ್ಟಕ್ಕೆ ತಾವಿದ್ದ ಸೋನಿಯಾ ಗಾಂಧಿ ಅವರಲ್ಲಿ ರಾಜಕೀಯ ಆಸಕ್ತಿ ತುಂಬುವಲ್ಲಿ ಯಶಸ್ವಿಯಾಯಿತು. ಪಕ್ಷದ ಕಾರ್ಯಕಾರಿಣಿಯಲ್ಲಿ ಕೇಸರಿಯವರ ಬದಲಿಗೆ ಸೋನಿಯಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ಮಾಡಿತು. 1998ರ ಮಾರ್ಚ್‌ನಲ್ಲಿ ಒಂದು ದಿನ ಕೇಸರಿಯವರನ್ನು ಪಕ್ಷದ ಕಚೇರಿಯಿಂದ ಹೊರಗಟ್ಟಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿತು.

ಆರು ವರ್ಷ ತಮ್ಮ ಪರಿವಾರದ ಕೈತಪ್ಪಿದ್ದ ಕಾಂಗ್ರೆಸ್ಸನ್ನು ಸೋನಿಯಾ ಕೈಗೆ ತೆಗೆದುಕೊಂಡರು. ಈ ಬದಲಾವಣೆಯಿಂದ ಇಂದಿರಾ ಕುಟುಂಬದ ನೆರಳಿನಲ್ಲಿ ಬೆಳೆದ ಹಲವು ಕಾಂಗ್ರೆಸ್ಸಿಗರು ಕುಣಿದು ಕುಪ್ಪಳಿಸಿದರು. ಸೋನಿಯಾ ನಾಯಕತ್ವ ಬಂದ ಮೇಲೆ 2004ರಿಂದ 2013ವರೆಗೆ ಕಾಂಗ್ರೆಸ್‌ ಮತ್ತೆ ಅಧಿಕಾರ ನಡೆಸಿತು. ಈ ಅವಧಿಯಲ್ಲಿ ಅವರು ಹುಟ್ಟಿನಿಂದ ಭಾರತೀಯರಲ್ಲ ಎನ್ನುವ ಬಿಜೆಪಿ ಮತ್ತು ಸಂಘಪರಿವಾರದ ವಿರೋಧದಿಂದ ಪ್ರಧಾನಿಯಾ ಗುವ ಅವಕಾಶ ತಪ್ಪಿತು. ತಾವು ಹೇಳಿದಂತೆ ಕೇಳುವ ವ್ಯಕ್ತಿಯನ್ನು ಸೋನಿಯಾ ಪ್ರಧಾನಿ ಪಟ್ಟಕ್ಕೆ ಕೂರಿಸಿದರು. ರಾಜಕೀಯದಲ್ಲಿ ನಿರುಪದ್ರವಿಯಾದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್‌ ಪ್ರಧಾನಿಯಾದರು, ಆದರೆ ವಾಸ್ತವವಾಗಿ ಆಡಳಿತದ ಸೂತ್ರವೆಲ್ಲ ಸೋನಿಯಾ ಅವರದ್ದೇ ಆಗಿತ್ತು ಎನ್ನುವುದು ಬೆಳಕಿನಷ್ಟು ಸತ್ಯ.

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರನ್ನು ಗದ್ದರ್‌ (ಮೋಸಗಾರ) ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಗ‌ುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮರ್ಚೆಂಟ್‌ ಆಫ್‌ ಕಿಲ್ಲಿಂಗ್‌ (ಸಾವಿನ ವ್ಯಾಪಾರಿ) ಎಂದು ಅವಹೇಳನಕಾರಿಯಾಗಿ ಟೀಕಿಸಿದ್ದನ್ನು ಬಿಟ್ಟರೆ ಸೋನಿಯಾ ತಮ್ಮ ಈ 19 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಕೀಳು ಮಟ್ಟದಲ್ಲಿ ನಡೆದುಕೊಂಡಿಲ್ಲ ಎನ್ನುವುದೇ ಅವರ ಬಗೆಗೆ ಪಕ್ಷದ ನಾಯಕರು ಇಟ್ಟಿರುವ ವಿಶ್ವಾಸಕ್ಕೆ ಕಾರಣ. 

ತಮ್ಮ ಅನಾರೋಗ್ಯದ ಕಾರಣ ಪಕ್ಷದ ನಾಯಕತ್ವವನ್ನು ಮಗನ ಹೆಗಲಿಗೆ ಹೊರಿಸಿರುವ ಸೋನಿಯಾ ಅವರು ರಾಹುಲ್‌ ಗಾಂಧಿಗೆ ಮಾರ್ಗದರ್ಶಕರಾಗಿಯೇ ಕೆಲಸ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಹುಲ್‌ ಗಾಂಧಿ ಅವರಿಗೆ ತಮ್ಮ ಕುಟುಂಬದ ಹಿಡಿತವಿರುವ ಕಾಂಗ್ರೆಸ್ಸಿನ ನಾಯಕತ್ವವೇನೋ ಅನಾಯಾಸವಾಗಿ ಸಿಕ್ಕಿದೆ. ಹದಿಮೂರು ವರ್ಷಗಳ ಹಿಂದೆಯೇ ರಾಜಕಾರಣಕ್ಕೆ ಬಂದ ರಾಹುಲ್‌ ಇಷ್ಟೊತ್ತಿಗಾಗಲೇ ಪ್ರಬುದ್ಧ ರಾಜಕಾರಣಿ ಆಗಬೇಕಿತ್ತು. ದೇಶದ ಯುವ ಜನತೆಯ ಭವಿಷ್ಯದ ಆಶೋತ್ತರಗಳನ್ನು ಈಡೇರಿಸುವ ನಾಯಕನಾಗಿ ಬೆಳೆಯಬೇಕಿತ್ತು. 

ರಾಹುಲ್‌ ಯುವಕರಾದರೂ ಇಡೀ ದೇಶದ ಯುವಜನತೆಯ ಪ್ರತಿನಿಧಿಯಾಗಿ ಬೆಳೆಯಲಾಗಿಲ್ಲ. ಬದಲಾಗಿ ಪಕ್ಷದಲ್ಲಿನ ಯುವಕರಿ ಗಷ್ಟೇ ಭವಿಷ್ಯದ ಪ್ರಧಾನಿ ಎಂಬ ಕನಸು ಕಾಣುವಷ್ಟಕ್ಕೇ ಅವರ ವ್ಯಕ್ತಿತ್ವ ಸೀಮಿತಗೊಂಡದ್ದು ವಿಪರ್ಯಾಸ. ಅರವತ್ತಾರು ವರ್ಷದ ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನತೆಯ ಪ್ರತೀಕ ವಾಗಿ ಕಂಡು ಬಂದರೂ 46 ವರ್ಷದ ರಾಹುಲ್‌, ಯುವಜನರ ಐಕಾನ್‌ ಆಗಿ ಭರವಸೆಯನ್ನು ಹುಟ್ಟುಹಾಕಲು ಸಾಧ್ಯವಾಗ‌ದೇ ಹೋಗಿರುವುದು ಅವರ ಹಲವು ವೈಫಲ್ಯಗಳಲ್ಲಿ ಒಂದು. 

ಇದೇನೇ ಇದ್ದರೂ ಅದಾಗಲೇ ಪಕ್ಷದ ಚುಕ್ಕಾಣಿ ಹಿಡಿದಿರುವ ರಾಹುಲ್‌ ಅವರಿಗಂತೂ ಇವು ಆರಾಮವಾಗಿ ಕಾಲಕಳೆಯುವ ದಿನಗಳಲ್ಲ. ದೇಶದಲ್ಲಿ ಸಾಕಷ್ಟು ನೆಲಕಚ್ಚಿರುವ ಪಕ್ಷವನ್ನು ಮೇಲೆತ್ತಿ ಬೆಳೆಸುವುದು ಅವರ ಮುಂದಿರುವ ಗುರುತರವಾದ ಹೊಣೆಗಾರಿಕೆ. ರಾಹುಲ್‌ ಗಾಂಧಿ ಎದುರಿಸಬೇಕಾಗಿರುವ ಸವಾಲುಗಳು ಮತ್ತು ಸಮಸ್ಯೆಗಳು ಬೆಟ್ಟದಷ್ಟಿವೆ. ಇನ್ನು ಒಂದೂವರೆ ವರ್ಷದಲ್ಲಿ ಹತ್ತು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಎದುರಿಸಬೇಕಿದೆ. ತತ್‌ಕ್ಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗುಜರಾತ್‌ ಮತ್ತು ತಮ್ಮದೇ ಆಡಳಿತವಿರುವ ಹಿಮಾಚಲ ಪ್ರದೇಶದ ವಿಧಾನ ಸಭೆಗಳ ಚುನಾವಣೆ ಎದುರಾಗಿದೆ. ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣೆ ಎದುರಾಗಲಿದೆ. ಈ ಚುನಾವಣೆ ಮುಗಿದು ಉಸಿರುಬಿಡುವಷ್ಟರಲ್ಲಿ ಲೋಕಸಭೆ ಚುನಾವಣೆ ಬರುತ್ತದೆ. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಈಗಿನ ಆಕ್ರಮಣಕಾರಿ ರಾಜಕೀಯದ ಮುಂದೆ ಕೇವಲ ಕಾಂಗ್ರೆಸ್‌ವೊಂದೇ ಹೋರಾಡಲು ಬರುವುದಿಲ್ಲ. ಜಾತ್ಯತೀತ ಮನೋಭಾವದ ಮತ್ತು ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಿ ಸಂಘಟಿತವಾಗಿ ಚುನಾವಣೆ ಎದುರಿಸಬೇಕಿರುವುದು ತುರ್ತು ಅವಶ್ಯ. ಬಿಜೆಪಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿರುವ ಎಡ ಪಕ್ಷಗಳು, ಬಿಹಾರದ ಲಾಲೂ ಪ್ರಸಾದ್‌ ನೇತೃತ್ವದ ಆರ್‌ಜೆಡಿ, ಉತ್ತರ ಪ್ರದೇಶದ ಮುಲಾಯಂ ಸಿಂಗ್‌, ಅಖೀಲೇಶ್‌ ಸಿಂಗ್‌ ಅವರ ಸಮಾಜವಾದಿ ಪಕ್ಷ, ಮಾಯಾವತಿ ಅವರ ಬಿಎಸ್‌ಪಿ, ಕೊನೆವರೆಗೂ ತನ್ನ ನಿಲುವನ್ನು ಬಿಟ್ಟುಕೊಡದ ಶರದ್‌ ಪವಾರ್‌, ತಮಿಳುನಾಡಿನ ಡಿಎಂಕೆ ಹೀಗೆ ಹಲವು ಪಕ್ಷಗಳ ಜೊತೆ ಮೈತ್ರಿ ಬೆಳೆಸುವುದು ನಿಜಕ್ಕೂ ದೊಡ್ಡ ಸವಾಲು. ಈ ಕಾರ್ಯವನ್ನು ನಡೆ ನುಡಿಯಲ್ಲಿ ಇನ್ನೂ ಎಳಸಾಗಿ ಕಾಣುವ ರಾಹುಲ್‌ ಅವರಿಂದ ನಿರೀಕ್ಷಿಸುವುದು ಕಷ್ಟವೇ ಸರಿ. ಈ ಸವಾಲನ್ನು ಸೋನಿಯಾ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್‌ರಂತಹ ರಾಜಕೀಯ ತಂತ್ರಗಾರಿಕೆ ಯಲ್ಲಿ ನಿಪುಣರಾದವರೇ ನಿರ್ವಹಿಸಬೇಕಿದೆ.  

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ನವೆಂಬರ್‌ 8ರಂದು ನೋಟು ಅಮಾನ್ಯ ಮಾಡಿದ್ದು, ತದನಂತರ ಸಾಮಾನ್ಯ ಜನರಿಗಾದ ಅನನುಕೂಲ, ಮತ್ತು ಜಿ. ಎಸ್‌. ಟಿಯ ಜಾರಿಯಿಂದಾದ ಪರಿಣಾಮವಾಗಿ ಕಳೆದ ಆರು ತಿಂಗಳಲ್ಲಿ ಕುಸಿದ ಆರ್ಥಿಕ ಪರಿಸ್ಥಿತಿ, ಕಪ್ಪು ಹಣವನ್ನು ಪತ್ತೆ ಹಚ್ಚಲಾಗದೆ ಇರುವುದು ಮತ್ತು ಎಲ್ಲರಿಗೂ 58  ದಿನಗಳಲ್ಲಿ ಅಚ್ಚೇ ದಿನ್‌ (ಒಳ್ಳೆಯ ದಿನಗಳು) ಬರಲಿವೆ ಎಂದು ನೀಡಿದ ಭರವಸೆಗಳು ಸುಳ್ಳಾಗಿರುವುದು ಕಾಂಗ್ರೆಸ್ಸಿಗೆ ಲಾಭ ತರಬಲ್ಲವು. ಆದರೆ ಈ ಪರಿಸ್ಥಿತಿಯನ್ನು ರಾಹುಲ್‌ ನಾಯಕತ್ವ ಸಮರ್ಥವಾಗಿ ಬಳಸಿಕೊಳ್ಳಬಲ್ಲದೇ? ತತ್ಪರಿಣಾಮ ವಾಗಿ ಅವರ ಪಕ್ಷ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆಲುವಿನ ನಗೆ ಬೀರಲಿದೆಯೇ ಎನ್ನುವುದು ಪ್ರಶ್ನಾರ್ಥಕವಾಗಿದೆ.

ಈ ಎಲ್ಲ ಏಳುಬೀಳುಗಳ ಮಧ್ಯೆ ರಾಹುಲ್‌ ಕಳೆದೊಂದು ವರ್ಷದಿಂದ ರಾಜಕಾರಣದಲ್ಲಿ ಸ್ವಲ್ಪಮಟ್ಟಿಗೆ ಪಕ್ವವಾಗುತ್ತಿರುವಂತೆ ಕಾಣುತ್ತಿದ್ದಾರೆ. ಅವರು ಮಾತನಾಡುವ ಧಾಟಿ, ಜನರೊಡನೆ ಬೆರೆ ಯುವ ರೀತಿ, ನಡೆ ನುಡಿ ಮತ್ತು ಹಲವು ವಿಷಯಗಳ ಅರಿವನ್ನು ಗಮನಿಸಿದಾಗ‌ ಅವರ ವ್ಯಕ್ತಿತ್ವವನ್ನು ಹಿಂದಿನಂತೆ ಸುಲಭವಾಗಿ ಗೇಲಿ ಮಾಡಲಾಗದು. ರಾಹುಲ್‌ ಗಾಂಧಿ,  ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕೆಲವೊಮ್ಮೆ ಎಡವಟ್ಟಾದರೂ, ಅವರ ಮುಗ್ಧತೆಯನ್ನು ಗಮನಿಸಿ ದಾಗ ರಾಜಕೀಯದಲ್ಲಿ ಅಪಾಯಕಾರಿ ವ್ಯಕ್ತಿ ಎಂದು ತೀರ್ಮಾನಕ್ಕೆ ಬರಲಾಗದು. ಅವಕಾಶ ಸಿಕ್ಕಂತೆ ಮೇಲೇಳುತ್ತಾ ಬರುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ಸಿಗರು ತಮ್ಮ ನಾಯಕನ ಬಗೆಗೆ ಅಷ್ಟೇನೂ ನಿರಾಶರಾಗಬೇಕಿಲ್ಲ ಎನಿಸುತ್ತದೆ.

ಎಸ್‌. ಗಣೇಶನ್‌

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.