ಸಿಂಗಾಪುರದ ಸ್ವತ್ಛತೆ ವಿವರಿಸಿದ ಪೌರಕಾರ್ಮಿಕರು
Team Udayavani, Dec 5, 2017, 11:14 AM IST
ವಾಡಿ: ಅಲ್ಲಿನ ರೋಡ್‌ಗಳು ಬಿಲ್ಡಿಂಗ್‌ಗಳು ಕನ್ನಡಿ ಹೊಳೆದಾಂಗ ಹೊಳಿತಾವ. ಸೊಳ್ಳೆ ಮತ್ತು ಕಸ ಹುಡುಕಿದರೂ ಸಿಗಲಿಲ್ಲ. ಬೀದಿ ದೀಪಗಳು ಹಗಲಿನಷ್ಟೇ ಬೆಳಕು ನೀಡುತ್ತವೆ. ಚರಂಡಿಗಳ ಗಬ್ಬು ವಾಸನೆ ಒಮ್ಮೆಯೂ ನಮ್ಮ ಮೂಗಿಗೆ ತಟ್ಟಲೇ ಇಲ್ಲ. ಬೀದಿಯ ಯಾವ ದಿಕ್ಕಿನಲ್ಲೂ ಕಸದ ರಾಶಿ ಕಾಣಸಿಗಲಿಲ್ಲ. ಬೇಕಾಬಿಟ್ಟಿ ಉಗುಳಿದರೆ ಸ್ಥಳದಲ್ಲಿಯೇ ದಂಡ ಕಟ್ಟಬೇಕು. ಅಲ್ಲಿ ಎಲ್ಲದ್ದಕ್ಕೂ ಕಾನೂನಿದೆ. ಆ ಜನರು ಅಲ್ಲಿನ ಕಾನೂನಿಗೆ ಬೆಲೆ ಕೊಟ್ಟು ಬದುಕುತ್ತಿದ್ದಾರೆ…
ಹೀಗೆ ಸಿಂಗಾಪುರ ನಗರದ ಸ್ವತ್ಛತೆ ಚಿತ್ರಣ ಬಣ್ಣಿಸಿದ್ದು, ಸಿಮೆಂಟ್ ನಗರಿ ವಾಡಿ ಪಟ್ಟಣದ ಪುರಸಭೆ ಪೌರಕಾರ್ಮಿಕರು. ಕರ್ನಾಟಕ ರಾಜ್ಯ ಪೌರಾಡಳಿತ ನಿರ್ದೇಶನಾಲಯ ವತಿಯಿಂದ ಕರೆದೊಯ್ಯಲಾಗಿದ್ದ ನಾಲ್ಕು ದಿನಗಳ ಸಿಂಗಾಪುರ ಅಧ್ಯಯನ ಪ್ರವಾಸದಿಂದ ತರಬೇತಿ ಪಡೆದು ಸೋಮವಾರ ಬೆಳಗ್ಗೆ ನಗರಕ್ಕೆ ಮರಳಿದ ಬಳಿಕ ಉದಯವಾಣಿಯೊಂದಿಗೆ ಮಾತನಾಡಿದ ಪೌರಕಾರ್ಮಿಕರಾದ ಗುಂಡಮ್ಮ ಬಿದರಚೆನ್ನಿ, ಸರಸ್ವತಿ ಮೇತ್ರೆ ಹಾಗೂ
ದೊಡ್ಡಯ್ಯ ನಾಲವಾರಕರ, ರೈಲಿನಲ್ಲಿ ಕುಳಿತು ಪ್ರಯಾಣಿಸಿದ ನಮಗೆ ಕಾರ್‌ನಲ್ಲಿ ಕೂಡುವುದು ಅಪರೂಪವಾಗಿತ್ತು. ಅಂತಹದ್ದರಲ್ಲಿ ಸರಕಾರ ನಮ್ಮನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಿದ್ದು, ಗಗನಯಾತ್ರೆ ಎಂಬುದು ಮರೆಯಲಾಗದ ಅನುಭವವಾಗಿದೆ. ಸ್ವತ್ಛ ಹಾಗೂ ಸುಂದರವಾಗಿರುವ ಸಿಂಗಾಪುರ ಮಾದರಿ ನಗರವಾಗಿದೆ. ವಿವಿಧ ಜಿಲ್ಲೆಗಳಿಂದ
ಆಗಮಿಸಿದ್ದ ನೂರಾರು ಜನ ಪೌರಕಾರ್ಮಿಕರ ಜತೆ ಸಿಂಗಾಪುರ ಸುತ್ತಿ ಅನೇಕ ವಿಚಾರ ತಿಳಿದುಕೊಳ್ಳುವಂತಾಯಿತು ಎಂದು ವಿವರಿಸಿದರು.
ಅಲ್ಲಿ ಚೂರು ಕಸ ಬೀದಿಗೆ ಬೀಳದಿದ್ದರೂ ಹೋಟೆಲ್‌ಗಳ ಸುತ್ತಲೂ ಹೆಜ್ಜೆಗೊಂದು ಕಸದ ತೊಟ್ಟಿ ಇಡಲಾಗಿದೆ. ಸಾರ್ವಜನಿಕರು ಕಸವನ್ನು ಬೀದಿಗೆ ಎಸೆಯದೆ ತೊಟ್ಟಿಗೆ ಹಾಕುವ ಪ್ರಜ್ಞಾವಂತರಿದ್ದಾರೆ. ಯಾರಾದರೂ ಕಸವನ್ನು
ರಸ್ತೆಗೆ ಎಸೆದರೆ ಬಾರ್ಕೋಲಿನಿಂದ ಮೂರು ಸಲ ಭಾರಿಸುವ ಮತ್ತು ದಂಡ ವಿಧಿಸುವ ಕಠಿಣ ಕಾನೂನಿದೆ. ಧೂಮಪಾನ ಮಾಡಿ ಸಿಗರೇಟ್ ತುಂಡು ರಸ್ತೆಗೆ ಬೀಸಾಡುವಂತಿಲ್ಲ. ಮರಗಳ ಕೆಳಗೆ ಉದುರಿ ಬಿದ್ದ ಎಲೆಗಳ ಕಸವನ್ನಷ್ಟೇ ಪೌರಕಾರ್ಮಿಕರು ವಿಲೇವಾರಿ ಮಾಡುವುದು ಕಂಡುಬರುತ್ತದೆ. ರಸ್ತೆಗಳ ಕೆಳಗೆ ಚರಂಡಿಗಳಿದ್ದು, ಸುರಕ್ಷಿತ ವೈಜ್ಞಾನಿಕ ಮ್ಯಾನ್‌ಹೋಲ್ ಗಳಿರುವುದರಿಂದ ದುರ್ಗಂಧ ಹೊರ ಸೂಸುವ ಮಾತಿಲ್ಲ. 50 ಅಡಿ ಎತ್ತರದ ಕಟ್ಟಡಗಳಿಂದ ಸಾರ್ವಜನಿಕರು ಕಸವನ್ನು ಪೈಪ್‌ಗ್ಳ ಮೂಲಕ ಕೆಳಗೆ ಕಳಿಸುವ ಅಲ್ಲಿನ ವ್ಯವಸ್ಥೆ ಕಂಡು ನಮಗೆ ಆಶ್ಚರ್ಯವಾಯಿತು ಎಂದು ವಿವರಿಸಿದರು.
ಮಳೆ ನೀರು ನೇರವಾಗಿ ಚರಂಡಿಗೆ ಜಾರುತ್ತವೆ. ಪ್ಲಾಸ್ಟಿಕ್ ಕಸದಿಂದ ವಿದ್ಯುತ್ ತಯಾರಿಸಲಾಗುತ್ತದೆ. ಪ್ರತಿಯೊಂದು ಕಸವನ್ನು ವಿಂಗಡಿಸಿ ಮರುಬಳಕೆ ಮಾಡಲಾಗುತ್ತದೆ. ಶೇ.99ರಷ್ಟು ಜನ ಹೋಟೆಲ್‌ಗಳಲ್ಲೇ ಊಟ ಮಾಡುತ್ತಾರೆ. ತಟ್ಟೆಯಲ್ಲಿ ಊಟ-ಉಪಹಾರ ಉಳಿಸಿದರೆ ಹೋಟೆಲ್ ಮಾಲೀಕ ಗದರುತ್ತಾನೆ.
ಸಮುದ್ರದ ಮಧ್ಯೆಯೇ ಈ ಸಿಂಗಾಪುರ ನಗರವಿದ್ದು, ಅಲ್ಲಿನ ನೀರು ಮಾತ್ರ ಕುಡಿಯಲು ಯೋಗ್ಯವಿಲ್ಲ. ಮಲೇಶಿಯಾದಿಂದ ನೀರು ತರಿಸಿಕೊಳ್ಳಲಾಗುತ್ತದೆ. ಅಲ್ಲಿನ ಉದ್ಯಾನವನ ಮತ್ತು ರಸ್ತೆಗಳು ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಸಿಂಗಾಪುರ ಅಧ್ಯಯನ ಪ್ರವಾಸ ನಮ್ಮಲ್ಲಿ ಸ್ವತ್ಛತೆ ಅರಿವು ಮೂಡಿಸಿದೆ ಎಂದು ಪೌರಕಾರ್ಮಿಕರು ಅನುಭವ ಹೇಳಿಕೊಂಡರು. ನಮ್ಮಲ್ಲೂ ಅಂತಹ ಕಾನೂನುಗಳು ಜಾರಿಗೆ ಬಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿದರೆ ಸ್ವತ್ಛ ನಗರವನ್ನಾಗಿ ಮಾಡುವುದು ಕಷ್ಟವಲ್ಲ. ಆದರೆ ಆಡಳಿತ ಮನಸ್ಸು ಮಾಡಬೇಕು ಎಂದು ಹೇಳಿದರು.
ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.